ಧರ್ಮಸ್ಥಳ ಅರಣ್ಯದಲ್ಲಿ ಅಕ್ರಮವಾಗಿ ಶವ ಹೂತಿರುವುದು ದೃಢಪಟ್ಟರೆ ತಪ್ಪಿತಸ್ಥರ ವಿರುದ್ಧ ಕ್ರಮ; ಸಚಿವ ಈಶ್ವರ ಖಂಡ್ರೆ

ಬೀದರ್: ಧರ್ಮಸ್ಥಳ ಸುತ್ತಮುತ್ತ ಮೀಸಲು ಅರಣ್ಯದೊಳಗೆ ಸಮಾಧಿ ಅಗೆಯುತ್ತಿರುವ ಎಸ್‌ಐಟಿಗೆ ಕೆಲವೆಡೆ ಮಾನವನ ಅಸ್ಥಿಸಿಕ್ಕಿದ್ದು, ತನಿಖೆ ಮುಗಿದ ಬಳಿಕ ಅಕ್ರಮವಾಗಿ ಶವ ಹೂತಿರುವುದು ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ. ವರದಿಗಾರರ ಜತೆ ಮಾತನಾಡಿದ ಅವರು, ಅರಣ್ಯದಲ್ಲಿ ಅಕ್ರಮವಾಗಿ ಶವ ಹೂತಿರುವುದು ದೃಢಪಟ್ಟರೆ ಬೇಜವಾಬ್ದಾರಿತನ, ನಿರ್ಲಕ್ಷ್ಯ ತೋರಿದ ಅರಣ್ಯ ಅಧಿಕಾರಿ, ಸಿಬ್ಬಂದಿ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.
ಅಗಸ್ಟ್ 18 ರಂದು ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ “ಎಂಬ್ರಾಯ್ಡರಿ” ಪ್ರಮಾಣಪತ್ರ ಕೋರ್ಸ್.

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ.ಟಿಎಂಎ ಪೈ ಫೌಂಡೇಶನ್‌ನ ಒಂದು ಘಟಕ) ದಲ್ಲಿ “ಎಂಬ್ರಾಯ್ಡರಿ” ಪ್ರಮಾಣಪತ್ರ ಕೋರ್ಸ್ ಆಗಸ್ಟ್ 18 ರಂದು ನಡೆಯಲಿದೆ. ಮಧ್ಯಾಹ್ನದ ಬ್ಯಾಚ್‌ಗಳು 18/08/2015 ರಂದು ಪ್ರಾರಂಭವಾಗಲಿದೆ. ಏನೆಲ್ಲ ಕಲಿಯಬಹುದು: ಸೀಮಿತ ಸೀಟುಗಳು ಮಾತ್ರ ಲಭ್ಯವಿದ್ದು, ಆಸಕ್ತರು ನಮ್ಮನ್ನು ಸಂಪರ್ಕಿಸಿ. ಈ ಕೋರ್ಸ್ ಗೆ ಮುಂಚಿತವಾಗಿ ನೋಂದಾಯಿಸಿ ಮತ್ತು ಶೇ.5 ಉಳಿಸಿಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :81231639322ನೇ ಮಹಡಿ, MSDC ಕಟ್ಟಡ ಈಶ್ವರ್ ನಗರ ಮಣಿಪಾಲ 576104
ಧರ್ಮಸ್ಥಳದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ; ತನಿಖೆ ಮಾಡಿ ವರದಿ ಕೊಡಲು ಸೂಚಿಸಿದ ಗೃಹ ಸಚಿವ ಪರಮೇಶ್ವರ್.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ವಿಚಾರದಲ್ಲಿ ನಿನ್ನೆ ದಿನ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿದೆ, ಅದು ಯಾಕಾಗಿದೆ ಯಾರು ಕಾರಣಕರ್ತರು ಅವರ ಉದ್ದೇಶ ಏನಿದೆ..? ಅನ್ನೋದನ್ನ ತನಿಖೆ ಮಾಡಿ ವರದಿ ಕೊಡಲು ಹೇಳಿದ್ದೇನೆ. ಇದು ಒಂದು ರೀತಿಯಲ್ಲಿ ಸಂಘರ್ಷ ಆಗ್ತಾ ಇದೆ ಅಂತ ಕಾಣಿಸ್ತಾ ಇದೆ, ಯಾಕೆ ಆಗ್ತಾ ಇದೆ ಗೊತ್ತಿಲ್ಲ. ಅಲ್ಲಿನ ಜನ ಸಮುದಾಯ ಎಸ್ಐಟಿ ಮಾಡಬೇಕು ಅಂತ ಒತ್ತಾಯ ಮಾಡಿದ್ರು ನಾವು ಅದನ್ನ ಬಹಳ ಎಚ್ಚರಿಕೆಯಿಂದ ಪರಿಶೀಲನೆ ಮಾಡಿ ಎಸ್ಐಟಿ ಮಾಡಿದ್ದೇವೆ. ಯಾವ ವ್ಯಕ್ತಿ […]
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಗಮ ಸಂಚಾರ ಕಲ್ಪಿಸಿ, ಇಲ್ಲದಿದ್ದರೆ ಟೋಲ್ ಕೇಳಬೇಡಿ: ಕೇರಳ ಹೈಕೋರ್ಟ್!

ಕೊಚ್ಚಿ:ಹೆದ್ದಾರಿಗಳಲ್ಲಿ ತಡೆರಹಿತ, ಸುರಕ್ಷಿತ, ಸುಗಮ ಸಂಚಾರ ಕಲ್ಪಿಸುವಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಅಥವಾ ಅದರ ಏಜೆಂಟ್‌ಗಳು ವಿಫಲವಾದರೆ ಅಂತಹ ರಸ್ತೆಗಳಲ್ಲಿ ಸಾರ್ವಜನಿಕರಿಂದ ಬಳಕೆದಾರರ ಶುಲ್ಕ ಅಥವಾ ಟೋಲ್ ಸಂಗ್ರಹಿಸುವಂತಿಲ್ಲ ಎಂದು ಕೇರಳ ಹೈಕೋರ್ಟ್ ಬುಧವಾರ ಹೇಳಿದೆ. ಈ ಕುರಿತು ಸಲ್ಲಿಕೆಯಾಗಿರುವ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ. ಮುಹಮ್ಮದ್ ಮುಸ್ತಾಕ್ ಮತ್ತು ಹರಿಶಂಕರ್ ವಿ. ಮೆನಾನ್ ಅವರನ್ನು ಒಳಗೊಂಡ ವಿಭಾಗೀಯ ಪೀಠವು, ಎಡಪಲ್ಲಿ– ಮನ್ನುತಿ ನಡುವಿನ ರಾಷ್ಟ್ರೀಯ ಹೆದ್ದಾರಿ–544 ಅಲ್ಲಿ ಟೋಲ್ ಸಂಗ್ರಹವನ್ನು ಅಮಾನತಿನಲ್ಲಿಟ್ಟು […]
ಉಡುಪಿ: ಆ. 9ರಂದು “ವಿದ್ಯಾವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚಾರ್ಯರ ನವತಿ ಜನ್ಮವರ್ಧಂತಿ ಉತ್ಸವ”

ಉಡುಪಿ: ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಪುತ್ತಿಗೆ ಮಠ ಮತ್ತು ಡಾ. ಬನ್ನಂಜೆ ಗೋವಿಂದ ಪಂಡಿತಾಚಾರ್ಯರ ನವತಿ ಜನ್ಮವರ್ಧಂತ್ಯುತ್ಸವ ಸಮಿತಿ ಉಡುಪಿ ಇದರ ಆಶ್ರಯದಲ್ಲಿ ಈಶಾವಾಸ್ಯ ಪ್ರತಿಷ್ಠಾನ ಅಂಬಲಪಾಡಿ ಇವರ ಸಹಯೋಗದಲ್ಲಿ “ವಿದ್ಯಾವಾಚಸ್ಪತಿ ಡಾ. ಬನ್ನಂಜೆ ಗೋವಿಂದಾಚಾರ್ಯರ ನವತಿ ಜನ್ಮವರ್ಧಂತಿ ಉತ್ಸವ ಕಾರ್ಯಕ್ರಮ”ವನ್ನು ಇದೇ ಆ.9ರಂದು ಸಂಜೆ 5.30ಕ್ಕೆ ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಕೆ. ರಘುಪತಿ ಭಟ್ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು […]