ಉಡುಪಿ: ಆ.10ರಂದು “ಟೈಲರ್ಸ್ ವೃತ್ತಿ‌ ಬಾಂಧವರ ಬೃಹತ್ ಸಮಾವೇಶ”

ಉಡುಪಿ: ಕರ್ನಾಟಕ ಸ್ಟೇಟ್ ಟೈಲರ‌್ಸ್ ಅಸೋಸಿಯೇಷನ್ ಉಡುಪಿ ಜಿಲ್ಲಾ ಸಮಿತಿಯ “ರಜತ ಸಂಭ್ರಮ”-25, ಟೈಲರ್ಸ್ ವೃತ್ತಿ‌ ಬಾಂಧವರ ಬೃಹತ್ ಸಮಾವೇಶ ಹಾಗೂ ಮಹಾಸಭೆ ಇದೇ ಆ.10ರಂದು ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಡೆಯಲಿದೆ ಎಂದು ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ರಾಜ್ಯ ಕೋಶಾಧಿಕಾರಿ ಕೆ. ರಾಮಚಂದ್ರ ಮತ್ತು ಉಡುಪಿ ಜಿಲ್ಲಾಧ್ಯಕ್ಷ ಗುರುರಾಜ ಎಂ. ಶೆಟ್ಟಿ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಂದು ಬೆಳಿಗ್ಗೆ 9.30ಕ್ಕೆ ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ಸಮಾವೇಶವನ್ನು ಉದ್ಘಾಟಿಸುವರು. […]

ಬ್ರಹ್ಮಾಕುಮಾರೀಸ್ ಸಂಸ್ಥೆ: ಉಡುಪಿ ಮತ್ತು ಮಣಿಪಾಲ ಶಾಖೆಯಲ್ಲಿ ಆ.9ರಂದು ಸಾರ್ವಜನಿಕರಿಗಾಗಿ “ವಿಶೇಷ ರಕ್ಷಾಬಂಧನ ಕಾರ್ಯಕ್ರಮ”

ಉಡುಪಿ: ಬ್ರಹ್ಮಾಕುಮಾರೀಸ್ ಸಂಸ್ಥೆಯ ಉಡುಪಿ ಮತ್ತು ಮಣಿಪಾಲ ಶಾಖೆಯಲ್ಲಿ ಇದೇ ಬರುವ ಆ.9ರಂದು ಸಂಜೆ 6ಗಂಟೆಗೆ ಸಾರ್ವಜನಿಕರಿಗಾಗಿ ವಿಶೇಷ ರಕ್ಷಾಬಂಧನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಬ್ರಹ್ಮಾಕುಮಾರೀಸ್ ಸಂಸ್ಥೆಯ ಮಣಿಪಾಲ ಶಾಖೆಯ ಸಂಚಾಲಕಿ ಬಿಕೆ ಸೌರಭ ತಿಳಿಸಿದರು. ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಕ್ಷಾಬಂಧನವು ವಿಶ್ವ ಭ್ರಾತೃತ್ವ ಮತ್ತು ಕೋಮು ಸೌಹಾರ್ದತೆಯ ಪವಿತ್ರ ಹಬ್ಬ. ರಾಖಿ ಕೇವಲ ಸಹೋದರ-ಸಹೋದರಿಯ ನಡುವಿನ ಹಬ್ಬವಲ್ಲ. ಇದು ಆತ್ಮ ಶುದ್ಧತೆಯ ಬಾಂಧವ್ಯವನ್ನು ಪರಮಾತ್ಮನ ಜೊತೆ ಬಿಗಿಯಾಗಿಸುವ ಪವಿತ್ರ ಸಂಕೇತವಾಗಿದೆ. ಇಂದಿನ […]

ಮೂಡುಬಿದಿರೆ:ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಜೆಕ್ಟ್ ಗೆ ‘ವರ್ಷದ ಅತ್ಯುತ್ತಮ ಪ್ರಾಜೆಕ್ಟ್’ ಪ್ರಶಸ್ತಿ

ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕೃಷಿ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಚಂದನ್ ಬಿ.ಎಂ, ಉಸ್ಮಾ, ಪ್ರೇಕ್ಷಾ ಹಾಗೂ ಸಾವನ್ ಶೆಟ್ಟಿ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ತು ಶಿವಮೊಗ್ಗದ ಜವಾಹರಲಾಲ್ ನೆಹರು ನ್ಯಾಷನಲ್ ಕಾಲೇಜ್ ಆಫ್ ಎಂಜಿನಿಯರಿಂಗ್‌ ನಲ್ಲಿ ಆಯೋಜಿಸಿದ್ದ 48ನೇ ಸರಣಿಯ ರಾಜ್ಯ ಮಟ್ಟದ ವಿದ್ಯಾರ್ಥಿ ಪ್ರಾಜೆಕ್ಟ್ ಪ್ರದರ್ಶನದಲ್ಲಿ ಅವರು ತಯಾರಿಸಿದ ಪ್ರಾಜೆಕ್ಟ್ಗೆ ‘ವರ್ಷದ ಅತ್ಯುತ್ತಮ ಪ್ರಾಜೆಕ್ಟ್’ ಪ್ರಶಸ್ತಿ ಲಭಿಸಿತು. ಒಟ್ಟು ಈ ವಿಭಾಗದಲ್ಲಿ 496 ಪ್ರಾಜೆಕ್ಟ್ಗಳು ಸ್ಪರ್ಧೆಗೆ ಆಗಮಿಸಿದ್ದವು.ಮೆಕ್ಕುಜೋಳದ ಒಣಗಿದ ಸಿಪ್ಪೆಯಿಂದ ಕಪ್ […]

ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಹ್ಯಾಕ್‌ಸ್ಕೈ: ಪ್ಯಾನ್ ಇಂಡಿಯಾ ಸೈಬರ್ ಸೆಕ್ಯುರಿಟಿ 48 ಗಂಟೆಗಳ ಹ್ಯಾಕಥಾನ್‌ ನಲ್ಲಿ ಬಹುಮಾನ

ಉಡುಪಿ, ಬಂಟಕಲ್: ಬಂಟಕಲ್ ಶ್ರೀ ಮಧ್ವ ವಾದಿರಾಜತಾಂತ್ರಿಕ ಮಹಾವಿದ್ಯಾಲಯದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ಮತ್ತು ಡಾಟಾ ಸೈನ್ಸ್ ವಿಭಾಗದ ಎರಡನೇ ವರ್ಷದವಿದ್ಯಾರ್ಥಿಗಳಾದ ಹಿತೇಶ್ ಎ, ಯತಿಕಾ ಪಿ ಅಮೀನ್, ಶಮಾಪಟವರ್ಧನ್ ಇವರು ಎಮ್ ಐ ಟಿ, ಮಾಹೆ, ಬೆಂಗಳೂರು ಇಲ್ಲಿದಿನಾಂಕ 29 ಮತ್ತು 30 ಜುಲೈ 2025 ರಂದು ನಡೆದಹ್ಯಾಕ್‌ಸ್ಕೈ ಪ್ಯಾನ್ ಇಂಡಿಯಾ ಸೈಬರ್ ಸೆಕ್ಯುರಿಟಿ ಹ್ಯಾಕಥಾನ್ ನಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಸೈಬರ್ ಬೆದರಿಕೆ, ತಪ್ಪು ಮಾಹಿತಿ ಮತ್ತು ಆಳವಾದ ಪತ್ತೆಸೇರಿದಂತೆ ಸಮಕಾಲೀನ ಡಿಜಿಟಲ್ ಭದ್ರತಾ ಸವಾಲುಗಳಿಗೆಅತ್ಯಾಧುನಿಕ ಪರಿಹಾರಗಳನ್ನು […]

ಮೂಡುಬಿದಿರೆ: ದಕ್ಷಿಣ ವಲಯ ಅರ್ಚರಿ ಚಾಂಪಿಯನ್‌ಶಿಪ್’ನಲ್ಲಿ ಆಳ್ವಾಸ್ ಸೆಂಟ್ರಲ್ ಶಾಲೆಗೆ ಪ್ರಶಸ್ತಿ

ಮೂಡುಬಿದಿರೆ: ಪುಣೆಯ ತ್ರಿನಿಟಿ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ನಡೆದ ಸೆಂಟ್ರಲ್ ಶಾಲೆಗಳ ದಕ್ಷಿಣ ವಲಯ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಆಳ್ವಾಸ್ ಸೆಂಟ್ರಲ್ ಶಾಲೆಯ 17 ವಯೋಮಾನದ ಬಾಲಕ ಮತ್ತು ಬಾಲಕಿಯ ತಂಡ 3ನೇ ಸ್ಥಾನವನ್ನು ಪಡೆಯಿತು. ಇಂಡಿಯನ್ ರೌಂಡ್ ಟೀಮ್ ಅಂಡರ್ 17 ಬಾಲಕರ ವಿಭಾಗದಲ್ಲಿ ಆದಿತ್ಯ, ಶ್ರೀರಾಮ ಶಿವಾನಂದ, ಅಕ್ಷಯ್ ಪ್ರಕಾಶ್, ಬಸಯ್ಯ ವಿ ಸ್ವಾಮಿಯನ್ನು ಒಳಗೊಂಡ ತಂಡ 3ನೇ ಸ್ಥಾನ ಪಡೆದರೆ, ಬಾಲಕಿಯ ವಿಭಾಗದಲ್ಲಿ ಅಪೂರ್ವ ಪಿ, ಚೈತ್ರಾ ಕೆ, ಜೋನ್ನಾ ಪಾಟೀಲ್ ತಂಡವು 3ನೇ ಸ್ಥಾನ […]