ಕೊಲ್ಲೂರು: ಸೌಪರ್ಣಿಕಾ ನದಿಯಲ್ಲಿ ಕೊಚ್ಚಿಕೊಂಡು ಹೋಗಿ ಯುವಕ ಮೃತ್ಯು

ಕೊಲ್ಲೂರು: ಕೊಲ್ಲೂರು ಸೌಪರ್ಣಿಕಾ ನದಿಯಲ್ಲಿ ಸ್ನಾನ ಮಾಡುತ್ತಿದ್ದ ಯುವಕನೋರ್ವ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ ನಡೆದಿದೆ. ಮೃತರನ್ನು ಕೊಲ್ಲೂರು ನಿವಾಸಿ ನಟೇಶ್ ಬಾಳಿಗ (36) ಎಂದು ಗುರುತಿಸಲಾಗಿದೆ. ಇವರು ನದಿಯಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಕಾಲು ಜಾರಿ ಬಿದ್ದಿದ್ದು, ಭಾರೀ ಮಳೆಯ ಕಾರಣ ರಭಸದಿಂದ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿಕೊಂಡು ಹೋದರೆನ್ನಲಾಗಿದೆ. ಅಮೇಲೆ ಹುಡುಕಾಡಿದಾಗ ನಟೇಶ್ ಮೃತದೇಹವು ಕೊಲ್ಲೂರಿನ ಮಾವಿನ ಕಾರು ಸೇತುವೆ ಬಳಿ ಇಂದು ಬೆಳಿಗ್ಗೆ 9 ಗಂಟೆ ಸುಮಾರಿಗೆ ಪತ್ತೆಯಾಗಿದೆ. ಈ […]

ಹೆಬ್ರಿ: ವಿಷದ ಹಾವು ಕಚ್ಚಿ ಬಾಲಕಿ ಮೃತ್ಯು

ಅಮಾಸೆಬೈಲು: ವಿಷದ ಹಾವು ಕಚ್ಚಿದ ಪರಿಣಾಮ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಆ.3ರಂದು ಬೆಳಗ್ಗೆ ನಡೆದಿದೆ. ಮೃತರನ್ನು ಹೆಬ್ರಿ ಶೇಡಿಮನೆ ಗ್ರಾಮದ ಶ್ರೀಧರ ಎಂಬವರ ಮಗಳು ಸನ್ನಿಧಿ (8) ಎಂದು ಗುರುತಿಸಲಾಗಿದೆ. ಶಾಲೆಗೆ ರಜೆ ಇದ್ದ ಕಾರಣ ತಂದೆಯ ಜೊತೆ ತೋಟದಲ್ಲಿದ್ದ ಸನ್ನಿಧಿಗೆ ವಿಷಕಾರಿ ಹಾವು ಕಚ್ಚಿತ್ತೆನ್ನಲಾಗಿದೆ. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಆಕೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟರೆಂದು ತಿಳಿದುಬಂದಿದೆ.

ಕಂಬಳ ಕೋಣಗಳೇ ಇಲ್ಲಿ ರಿಯಲ್ ಹೀರೋಗಳು! “ಕರಾವಳಿ” ಸಿನಿಮಾದ ಟೀಸರ್ ನೋಡಿ ಖುಷಿಯಿಂದ ದಂಗಾದ್ರು ಪ್ರೇಕ್ಷಕರು ! ಅಂತದ್ದೇನಿದೆ ಟೀಸರ್ ನಲ್ಲಿ?

ಕಳೆದ ಕೆಲವು ಸಮಯದಿಂದ “ಕರಾವಳಿ ” ಎನ್ನುವ ಸಿನಿಮಾ ಸದ್ದು ಮಾಡ್ತಿದೆ. ಇನ್ನೂ ರಿಲೀಸ್ ಆಗಿರದ ಈ ಸಿನಿಮಾ ಪೋಸ್ಟರ್ ಮತ್ತು ಫಸ್ಟ್ ಲುಕ್ ಮೂಲಕ ಸದ್ದು ಮಾಡುತ್ತಿದೆ. ಈ ಸದ್ದಿಗೆ ಕಾರಣ ಈ ಸಿನಿಮಾ “ಕರಾವಳಿ”ಯ ಜನಪದ ಕ್ರೀಡೆಯಾದ ಕಂಬಳದ ಕತೆಯನ್ನೊಳಗೊಂಡ ಚಿತ್ರವಾಗಿರೋದು. ಈಗ “ಕರಾವಳಿ” ಚಿತ್ರದ ಟೀಸರ್ ಎಲ್ಲೆಲ್ಲೂ ಅಬ್ಬರಿಸುತ್ತಿದ್ದು  ಟೀಸರ್ ನೋಡಿದ ಪ್ರೇಕ್ಷಕರು ಖುಷಿಯಿಂದ ದಂಗಾಗಿದ್ದಾರೆ.  ನಟ ಪ್ರಜ್ವಲ್ ದೇವರಾಜ್ (Prajwal Devaraj) ನಟಿಸಿ ಗುರುದತ್ ಗಾಣಿಗ Gurudath Ganiga ನಿರ್ದೇಶನ ಮಾಡುತ್ತಿರುವ […]

ಉಡುಪಿ: ಧರ್ಮಸ್ಥಳ ಕ್ಷೇತ್ರದ ತೇಜೋವಧೆಗೆ ಯತ್ನಿಸುತ್ತಿರುವ ಹಿಂದೂ ವಿರೋಧಿ ಶಕ್ತಿಗಳ ಬಗ್ಗೆಯೂ ತನಿಖೆ ನಡೆಸುವಂತೆ ಯಶ್ ಪಾಲ್ ಸುವರ್ಣ ಆಗ್ರಹ

ಉಡುಪಿ: ರಾಜ್ಯ ಸರಕಾರದ ರಚಿಸಿದ ಎಸ್ಐಟಿ ತಂಡ ನಡೆಸುತ್ತಿರುವ ತನಿಖೆ ಇನ್ನೂ ಪ್ರಗತಿಯಲ್ಲಿದ್ದು, ಈವರೆಗೂ ಯಾವುದೇ ಅಧಿಕೃತ ಮಾಹಿತಿಯನ್ನು ಎಸ್ಐಟಿ ತಂಡ ನೀಡದಿದ್ದರೂ ಧರ್ಮಸ್ಥಳ ಕ್ಷೇತ್ರದ ಬಗ್ಗೆ ತೀರ ಅವಹೇಳನಕಾರಿ ಹೇಳಿಕೆ ಮೂಲಕ ತೇಜೋವಧೆಗೆ ಯತ್ನಿಸುತ್ತಿರುವ ಹಿಂದೂ ವಿರೋಧಿ ಶಕ್ತಿಗಳ ಬಗ್ಗೆಯೂ ತನಿಖೆ ನಡೆಸುವಂತೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಗ್ರಹಿಸಿದ್ದಾರೆ. ರಾಜ್ಯ ಸರ್ಕಾರ ಎಸ್ಐಟಿ ಮೂಲಕ ತನಿಖೆ ನಡೆಸಿ ಸತ್ಯಾಸತ್ಯತೆ ಜನರ ಮುಂದಿಡಲು ಮುಂದಾಗಿದ್ದು ಸ್ವಾಗತಾರ್ಹ. ಆದರೆ ಈ ಸಂದರ್ಭದಲ್ಲಿ ಕಮ್ಯೂನಿಸ್ಟ್ ಮನಸ್ಥಿತಿಯ ಜಾಲಗಳು […]