ಕರ್ನಾಟಕದಲ್ಲಿ 125 ಪ್ರಾಥಮಿಕ ಕೃಷಿ ಸಹಕಾರ ಸಂಘಗಳು ದಿವಾಳಿ ಹಂತದಲ್ಲಿವೆ: ಸಚಿವ ಅಮಿತ್ ಶಾ

ಹೊಸದಿಲ್ಲಿ : ಕರ್ನಾಟಕದ ಒಟ್ಟು 6,291 ಪ್ರಾಥಮಿಕ ಕೃಷಿ ಸಹಕಾರ ಸಂಘಗಳಲ್ಲಿ (ಪಿಎಸಿಎಸ್) 125 ಸಂಘಗಳು ದಿವಾಳಿ ಹಂತದಲ್ಲಿವೆ ಎಂದು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಮಂಗಳವಾರ ಸಂಸತ್ತಿಗೆ ಮಾಹಿತಿ ನೀಡಿದರು. ಲೋಕಸಭೆಯ ಮುಂದಿಟ್ಟ ದತ್ತಾಂಶದ ಪ್ರಕಾರ, ದಿವಾಳಿ ಹಂತದಲ್ಲಿರುವ 125 ಪ್ರಾಥಮಿಕ ಕೃಷಿ ಸಹಕಾರ ಸಂಘಗಳಲ್ಲಿ 28 ಸಹಕಾರಿ ಸಂಘಗಳು ಚಿಕ್ಕಬಳ್ಳಾಪುರದಲ್ಲಿವೆ. ನಂತರ 13 ಹಾಸನದಲ್ಲಿ ಮತ್ತು 12 ಬೆಳಗಾವಿಯಲ್ಲಿವೆ.ಅಮಿತ್ ಶಾ ಅವರ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 6,291 ಪ್ರಾಥಮಿಕ ಕೃಷಿ ಸಹಕಾರ ಸಂಘಗಳಿದ್ದು, […]
ಅಲ್ಪಸಂಖ್ಯಾತ ಸಮುದಾಯದವರ ಸರಳ ವಿವಾಹಕ್ಕೆ 50 ಸಾವಿರ ಪ್ರೋತ್ಸಾಹ ಧನ: ಆರ್ಥಿಕವಾಗಿ ಹಿಂದುಳಿದವರಿಗೆ ಮಾತ್ರ ಈ ಸೌಲಭ್ಯ.!

ಬೆಂಗಳೂರು: ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತ ಸಮುದಾಯದವರ ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡಲು ಪ್ರತಿ ಜೋಡಿಗೆ 50 ಸಾವಿರ ರೂ. ಕೊಡುವ ಕಾರ್ಯಕ್ರಮಕ್ಕೆ ಸರ್ಕಾರದ ಮಂಜೂರಾತಿ ದೊರೆತಿದೆ. ಪ್ರತಿ ಜೋಡಿಗೆ 50 ಸಾವಿರ ರೂಪಾಯಿ:ರಾಜ್ಯ ಬಜೆಟ್‌ನಲ್ಲಿ ಈ ಕುರಿತು ಘೋಷಿಸಲಾಗಿತ್ತು. ಇದೀಗ ಸರ್ಕಾರಿ ಆದೇಶ ಹೊರಬಿದ್ದಿದೆ. ಈ ಯೋಜನೆಯಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತ ಸಮುದಾಯದವರ ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡಲು ಸ್ವಯಂಸೇವಾ ಸಂಸ್ಥೆಗಳ ಮೂಲಕ ನಡೆಯುವ ಸಾಮೂಹಿಕ ವಿವಾಹ ವೆಚ್ಚಗಳಿಗಾಗಿ ಪ್ರತಿ ಜೋಡಿಗೆ 50 ಸಾವಿರ ರೂ. ಮತ್ತು […]
ಮಣಿಪಾಲ: MSDC ಓರೇನ್ ಇಂಟರ್ನ್ಯಾಷನಲ್ ನಲ್ಲಿ ‘ಪಾಲಿಜೆಲ್ ನೇಲ್ಸ್’ ಹೊಸ ಸರ್ಟಿಫಿಕೇಟ್ ಕೋರ್ಸ್ ಶುರು: ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.!

ಮಣಿಪಾಲ: MSDC ಓರೇನ್ ಇಂಟರ್ನ್ಯಾಷನಲ್ ನಲ್ಲಿ ಪಾಲಿಜೆಲ್ ನೇಲ್ಸ್’ನಲ್ಲಿ ಪ್ರಮಾಣಪತ್ರ ಕೋರ್ಸ್ ಪ್ರಾರಂಭಗೊಳ್ಳಲಿದೆ. ಇಲ್ಲಿ ಹ್ಯಾಂಡ್ಸ್-ಆನ್ ತರಬೇತಿ ಪಡೆಯಿರಿ ಮತ್ತು ಪ್ರಮಾಣೀಕೃತ ಉಗುರು ಕಲಾವಿದರಾಗಿ. ಇದು MSDC ನಿಮಗೆ ನೀಡುತ್ತಿರುವ ಒಂದೊಳ್ಳೆ ಅವಕಾಶ. ಅವಧಿ: 5 ದಿನಗಳು ಕೋರ್ಸ್ ಬಗ್ಗೆ ಒಂದಷ್ಟು:✨ ಉಗುರು ತಯಾರಿಕೆ ಮತ್ತು ಹೊರಪೊರೆ ಆರೈಕೆ✨ ಪಾಲಿಜೆಲ್ ಉಗುರು ವಿಸ್ತರಣೆ ಅಪ್ಲಿಕೇಶನ್✨ ಆಕಾರ ಮತ್ತು ಫೈಲಿಂಗ್ ತಂತ್ರಗಳು✨ಅಂತರ್ನಿರ್ಮಿತ ಕಲೆ✨ಸುರಕ್ಷಿತ ತೆಗೆಯುವ ತಂತ್ರಗಳು✨ನೈರ್ಮಲ್ಯ ಮತ್ತು ಕ್ಲೈಂಟ್ ಆರೈಕೆ✨ ಪೂರ್ಣಗೊಂಡ ನಂತರ MSDC ಪ್ರಮಾಣಪತ್ರ. ಶುಲ್ಕ: ರೂ. […]
ಬಾಗಲಕೋಟೆಯ ಬಡ ವಿದ್ಯಾರ್ಥಿನಿಯ ಶಿಕ್ಷಣಕ್ಕೆ ನೆರವಾದ ರಿಷಬ್ ಪಂತ್; ಸಾರ್ವಜನಿಕರಿಂದ ಅಪಾರ ಮೆಚ್ಚುಗೆ.!

ಬಾಗಲಕೋಟೆ: ಪದವಿ ಪ್ರವೇಶಾತಿಗೆ ಹಣವಿಲ್ಲದೇ ಪರದಾಡುತ್ತಿದ್ದ ಪಿಯುಸಿ ವಿದ್ಯಾರ್ಥಿನಿಗೆ ಟೀಂ ಇಂಡಿಯಾ ಆಟಗಾರ ರಿಷಭ್ ಪಂತ್ ಆರ್ಥಿಕ ನೆರವು ನೀಡುವ ಮೂಲಕ ಸಮಾಜಕ್ಕೆ ಮಾದರಿ ಆಗಿದ್ದಾರೆ. ಬಾಗಲಕೋಟೆ ತಾಲೂಕಿನ ಬೀಳಗಿ ತಾಲೂಕಿನ ರಬಕವಿ ಗ್ರಾಮದ ಜ್ಯೋತಿ ಕಣಬೂರಮಠ್ ಎಂಬ ವಿದ್ಯಾರ್ಥಿನಿ ಪಿಯುಸಿಯಲ್ಲಿ 83% ಅಂಕ ಗಳಿಸಿದ್ದಳು. ಉನ್ನತ ಶಿಕ್ಷಣ ಪಡೆಯಬೇಕು ಎಂದು ಕನಸು ಕಂಡಿದ್ದ ಆಕೆಗೆ ಬಡತನ ಹಾಗೂ ಆರ್ಥಿಕ ತೊಂದರೆ ಕಾಡ ತೊಡಗಿತ್ತು. ತಂದೆ ತೀರ್ಥಯ್ಯ ಗ್ರಾಮದಲ್ಲಿ ಚಿಕ್ಕದಾದ ಚಹಾದ ಅಂಗಡಿ ನಡೆಸುತ್ತಿದ್ದು, ಬಂದ ಹಣದಲ್ಲಿ […]
ಕಾರ್ಕಳ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜು: ಮಕ್ಕಳ ಹಕ್ಕುಗಳು ಹಾಗೂ ವೈಯಕ್ತಿಕ ಸುರಕ್ಷತಾ ಮಾಹಿತಿ ಕಾರ್ಯಕ್ರಮ.

ಕಾರ್ಕಳ: ಇಲ್ಲಿನ ಕ್ರೈಸ್ಟ್‍ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ಸಂಸ್ಥೆಯ ಮಕ್ಕಳ ರಕ್ಷಣಾ ಸಮಿತಿಯ ಆಶ್ರಯದಲ್ಲಿ ಪ್ರೌಢಶಾಲಾ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ಆರೋಗ್ಯ ರಕ್ಷಣೆ, ಮಕ್ಕಳ ಹಕ್ಕುಗಳು ಮತ್ತು ವೈಯಕ್ತಿಕ ಸುರಕ್ಷತೆಗಳ ಕುರಿತಾಗಿ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಶ್ರೀಮತಿ ನಾಗರತ್ನಾ ನಾಯಕ್ ಅವರು ಸಾಮಾಜಿಕ ಜಾಲತಾಣಗಳಿಂದ ಹಾಗೂ ಅಪರಿಚಿತರೊಂದಿಗಿನ ಸಂಬಂಧಗಳಿಂದ ಒದಗಬಹುದಾದ ಅಪಾಯ, ಪಾಕ್ಸೊ ಕಾಯಿದೆ ಮತ್ತು ಮಕ್ಕಳಿಗೆ ಸಂವಿಧಾನದತ್ತವಾಗಿ ಮತ್ತು ಕಾನೂನುಬದ್ಧವಾಗಿ ದೊರೆಯುವ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು. ಹಿರಿಯ […]