ಆರ್. ಎಸ್. ಬಿ. ಮಹಿಳಾ ವೇದಿಕೆ (ರಿ) ಮಣಿಪಾಲ ವಾರ್ಷಿಕ ಮಹಾಸಭೆ; ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ವಿದ್ಯಾರ್ಥಿಗಳಿಗೆ ಸನ್ಮಾನ.

ಮಣಿಪಾಲ: ಆರ್. ಎಸ್. ಬಿ. ಮಹಿಳಾ ವೇದಿಕೆ (ರಿ) ಮಣಿಪಾಲ ಇದರ ವಾರ್ಷಿಕ ಮಹಾಸಭೆಯು ಅಗಸ್ಟ್ 3 ರಂದು ಆರ್.ಎಸ್ ಬಿ ಸಭಾಭವನ ಮಣಿಪಾಲದಲ್ಲಿ ಮಹಿಳಾ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ರೂಪಾ ನಾಯಕ್ ರವರ ಅಧ್ಯಕ್ಷತೆಯಲ್ಲಿ ಜರಗಿತು. ಭಾರತಿ ನಾಯಕ್ ಮತ್ತು ಪ್ರೀತಿ ಕಾಮತ್ ರವರ ಪ್ರಾರ್ಥನೆಯೊಂದಿಗೆ ಸಭೆ ಆರಂಭಿಸಲಾಯಿತು. ಉಪಾಧ್ಯಕ್ಷೆ ಉಜ್ವಲಾ ನಾಯಕ್ ಸ್ವಾಗತಿಸಿದರು. ಕಾರ್ಯದರ್ಶಿ ಚಂದ್ರಿಕಾ ನಾಯಕ್ ವರದಿ ಮಂಡಿಸಿದರು. ಕೋಶಾಧಿಕಾರಿ ಪುಷ್ಪ ಪ್ರಭು ಆಯ ವ್ಯಯ ಮಂಡಿಸಿದರು. ಎಸ್ ಎಸ್ ಎಲ್ ಸಿ […]

ಹೆಬ್ರಿ: ಕ್ರೇನ್ ಹರಿದು ವ್ಯಕ್ತಿ ಮೃತ್ಯು

ಉಡುಪಿ: ಎಸ್. ಎನ್.ಸಿ ಗುತ್ತಿಗೆ ಸಂಸ್ಥೆಯ ಕ್ರೇನ್ ವೊಂದು ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿ ದಾರುಣವಾಗಿ ಮೃತಪಟ್ಟ ಘಟನೆ ಹೆಬ್ರಿ ತಾಲೂಕಿನ ಮುದ್ರಾಡಿ ಕೆಳಪೇಟೆಯಲ್ಲಿ ಸಂಭವಿಸಿದೆ. ಸ್ಥಳೀಯ ನಿವಾಸಿ ಚಣಿಲ(65) ಮೃತದುರ್ದೈವಿ. ಇವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ. ಅಪಘಾತ ನಡೆದ ನಂತರ ಚಾಲಕ ಕ್ರೇನ್ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದಾಗ, ಸ್ಥಳೀಯರೆಲ್ಲ ಸೇರಿ ಅವನನ್ನು ತರಾಟೆಗೆ ತೆಗೆದುಕೊಂಡಾಗ ಬಳಿಕ ಸ್ವಲ್ಪ ದೂರದಲ್ಲಿ ಮುಂದೆ ಹೋಗಿ ಕ್ರೇನ್ ನಿಲ್ಲಿಸಿರುತ್ತಾನೆ. ಈ […]

ಮದುವೆಯ ರಾತ್ರಿಯೇ ಆತ್ಮಹತ್ಯೆಗೆ ಶರಣಾದಳು ನವವಧು!

ಹೈದರಾಬಾದ್: ಸತ್ಯ ಸಾಯಿ ಜಿಲ್ಲೆಯ ಪೆನುಕೊಂಡದ ಸೋಮಂಡೆಪಲ್ಲಿ ಮಂಡಲದ ಕುಟುಂಬವೊಂದರಲ್ಲಿ ಅದ್ಧೂರಿಯಾಗಿ ವಿವಾಹ ಸಮಾರಂಭ ನಡೆದು, ಕೆಲವೇ ಗಂಟೆಗಳಲ್ಲಿ ವಧು ತನ್ನ ಮದುವೆಯ ರಾತ್ರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆಗೆ ಶರಣಾದ ವಧು 22 ವರ್ಷದ ಹರ್ಷಿತಾ. ದಂಪತಿಗಳು ವಧುವಿನ ಮನೆಯಲ್ಲಿದ್ದರು, ಅಲ್ಲಿ “ಮೊದಲ ರಾತ್ರಿ” ಸಮಾರಂಭದ ವ್ಯವಸ್ಥೆಗಳು ನಡೆಯುತ್ತಿದ್ದವು. ನಾಗೇಂದ್ರ ಸಿಹಿತಿಂಡಿಗಳನ್ನು ತರಲು ಹೊರಗೆ ಹೋಗಿದ್ದರು ಎಂದು ವರದಿಯಾಗಿದೆ, ಮತ್ತು ಅವರು ಹಿಂತಿರುಗಿದಾಗ, ಕೋಣೆ ಲಾಕ್ ಆಗಿರುವುದನ್ನು ಕಂಡರು. ಪದೇ ಪದೇ ಬಾಗಿಲು ಬಡಿದಾಗ […]

ಶಿರಿಯಾರ ಜಿ.ಎಸ್.ಬಿ ಸಮಾಜ: ಚೂಡಿಪೂಜೆ

ಕೋಟ: ಜಿ.ಎಸ್‌.ಬಿ. ಸಮಾಜದ ಮುತೈದೆಯರ ಶ್ರೇಷ್ಠ ಆಚರಣೆಗಳಲ್ಲಿ ಒಂದಾಗಿರುವ ಶ್ರಾವಣ ಮಾಸದ ಚೂಡಿ ಪೂಜೆ ಕಾರ್ಯಕ್ರಮ ಆ.3 ರಂದು ಶಿರಿಯಾರ ಪರಿಸರದ ಜಿ.ಎಸ್.ಬಿ. ಮಹಿಳೆಯರಿಂದ ಶಿರಿಯಾರ ರಾಮ ಮಂದಿರದಲ್ಲಿ ಜರಗಿತು. ಸಿಂಹ ಮಾಸದ ಶ್ರಾವಣದಲ್ಲಿ ಸೂರ್ಯದೇವನು ಸಿಂಹ ರಾಶಿಗೆ ಪ್ರವೇಶಿಸುವ ಸಂದರ್ಭದಲ್ಲಿ ಸೂರ್ಯ ದೇವನ ಬಿಂಬವನ್ನು ರಂಗೋಲಿಯಲ್ಲಿ ಬರೆದು ಗರಿಕೆ, ಲಕ್ಷ್ಮಿ ಸಾನಿಧ್ಯವುಳ್ಳ ಹೂಗಳನ್ನು ಅರ್ಪಿಸಿ ಸೂರ್ಯನಿಗೆ ವಂದನೆ ಸಲ್ಲಿಸುವುದು ಈ ಪೂಜೆಯ ವಾಡಿಕೆಯಾಗಿದ್ದು ಅದೇ ಮಾದರಿಯಲ್ಲಿ ಪೂಜೆ ಜರುಗಿತು. ಹಾಗೂ ಗರಿಕೆ ಹುಲ್ಲಿನೊಂದಿಗೆ ರಥ ಪುಷ್ಪ, […]

ಸೀಲಿಂಗ್ ಫ್ಯಾನ್ ಬಳಸಿ ಆತ್ಮಹತ್ಯೆ: ಫ್ಯಾನ್ ಗೆ “ಆ್ಯಂಟಿ ಸುಸೈಡ್ ಡಿವೈಸ್” ಅಳವಡಿಸಿ ಆತ್ಮಹತ್ಯೆ ತಡೆಗೆ ರಾಜೀವ್ ಗಾಂಧಿ ವಿವಿ ಪ್ಲಾನ್!

ಮೈಸೂರು: ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಯಾಗಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು ತನ್ನ ವ್ಯಾಪ್ತಿಯಲ್ಲಿರುವ ಎಲ್ಲಾ ವೈದ್ಯಕೀಯ ಸಂಸ್ಥೆಗಳ ಹಾಸ್ಟೆಲ್‌ಗಳಲ್ಲಿ ಸೀಲಿಂಗ್ ಫ್ಯಾನ್‌ಗಳಲ್ಲಿ ‘ಆತ್ಮಹತ್ಯೆ ವಿರೋಧಿ’ ಸಾಧನಗಳನ್ನು ಅಳವಡಿಸಲು ನಿರ್ಧರಿಸಿದೆ. ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ತಮ್ಮ ಹಾಸ್ಟೆಲ್ ಕೊಠಡಿಗಳಲ್ಲಿ ಎರಡು ವಾರಗಳಲ್ಲಿ ಇಬ್ಬರು ವಿದ್ಯಾರ್ಥಿಗಳು ನೇಣು ಬಿಗಿದುಕೊಂಡ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆತ್ಮಹತ್ಯೆ ತಡೆಯುವ ಕ್ರಮಗಳ ಬಗ್ಗೆ ಚರ್ಚಿಸಲು RGUHS ನ ಪಠ್ಯಕ್ರಮ ಅಭಿವೃದ್ಧಿ ಕೋಶ ಡಾ.ಸಂಜೀವ್ ನೇತೃತ್ವದ ತಂಡವು ಜುಲೈ ಕೊನೆಯ […]