ಧರ್ಮಸ್ಥಳದಲ್ಲಿ ಯೂಟ್ಯೂಬರ್ ಗಳ ಮೇಲೆ ವ್ಯಕ್ತಿಗಳಿಂದ ಹಲ್ಲೆ: ಗಂಭೀರ ಗಾಯಗೊಂಡ ಯೂಟ್ಯೂಬರ್ ಗಳು ಆಸ್ಪತ್ರೆಗೆ ದಾಖಲು!

ಧರ್ಮಸ್ಥಳ: ಧರ್ಮಸ್ಥಳದ ಪಾಂಗಳ ಎನ್ನುವ ಪ್ರದೇಶದಲ್ಲಿ ಯೂಟ್ಯೂಬರ್ ಗಳ ಮೇಲೆ ಸ್ಥಳೀಯ ವ್ಯಕ್ತಿಗಳು ಹಲ್ಲೆ ನಡೆಸಿದ್ದು ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.ಒಂದಷ್ಟು ವ್ಯಕ್ತಿಗಳು ಯುಟ್ಯೂಬರ್ ಗಳಿಗೆ ಧಮ್ಕಿ ಹಾಕಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯುಟ್ಯೂಬರ್ ಗಳು ವಿಡಿಯೋ ತೆಗೆಯುವ ಕರ್ತವ್ಯ ನಿರ್ವಹಿಸುತ್ತಿದ್ದಾಗ,ಸ್ಥಳಕ್ಕೆ ಆಗಮಿಸಿದ ಒಂದಷ್ಟು ವ್ಯಕ್ತಿಗಳು ಯುಟ್ಯೂಬರ್ ಗಳನ್ನು ನಿಂದಿಸಿದ್ದಾರೆ.ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ. ಒಂದಷ್ಟು ವ್ಯಕ್ತಿಗಳು ಯುಟ್ಯೂಬರ್ ಗಳ ವಿಡಿಯೋ ಕ್ಯಾಮರಾಗಳನ್ನು […]

ಕಾರ್ಕಳದ ಅಭಿವೃದ್ಧಿಗೆ ನಕಲಿ‌ ಕಾಂಗ್ರೆಸ್ ಮುಖಂಡರಿಂದ ಅಡ್ಡಿ: ಮುನಿಯಾಲು ಉದಯಕುಮಾರ್ ಶೆಟ್ಟಿಗೆ ಶಾಸಕ ಸುನಿಲ್ ಕುಮಾರ್ ಟಾಂಗ್

ಉಡುಪಿ: ಬೈಲೂರಿನ ಉಮ್ಮಿಕಲ್ ಬೆಟ್ಟದಲ್ಲಿ ಪರಶುರಾಮ ಮೂರ್ತಿಯನ್ನು ಮರು ನಿರ್ಮಿಸಲು ಕಾಂಗ್ರೆಸ್ ನವರೇ ತೊಂದರೆ ಮಾಡುತ್ತಿದ್ದಾರೆ. ಕಾರ್ಕಳದ ಪ್ರಸೋದ್ಯಮವನ್ನು‌ ನಿರಂತರವಾಗಿ ಹಾಳು ಮಾಡುವ ಕೆಲಸವನ್ನು ಕಾರ್ಕಳದ ನಕಲಿ ಕಾಂಗ್ರೆಸಿಗರು ಮಾಡುತ್ತಿದ್ದಾರೆ ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕಾರ್ಕಳದ ಪರಶುರಾಮ ಥೀಂ ಪಾರ್ಕ್‌ ಕಾಮಗಾರಿ ಶೀಘ್ರವೇ ಆರಂಭಿಸಿ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತಗೊಳಿಸುವಂತೆ ಒತ್ತಾಯಿಸಿ ಕಾರ್ಕಳದಿಂದ ಉಡುಪಿ ಜಿಲ್ಲಾಧಿಕಾರಿ ಕಚೇರಿಯರೆಗೆ ಬೃಹತ್ ವಾಹನ ಜಾಥವನ್ನು ಹಮ್ಮಿಕೊಳ್ಳಲಾಯಿತು. ಬಳಿಕ ಜಿಲ್ಲಾಧಿಕಾರಿ ಕಚೇರಿ‌ ಮುಂಭಾಗದಲ್ಲಿ ನಡೆದ […]

ಕಾರ್ಕಳ ಕ್ರೈಸ್ಟ್ ಕಿಂಗ್: ತಾಲೂಕು ಮಟ್ಟದ ಕುಸ್ತಿ ಪಂದ್ಯಾಟದಲ್ಲಿ ವಿದ್ಯಾರ್ಥಿಗಳ ಉತ್ತಮ ಸಾಧನೆ

ಕಾರ್ಕಳ: ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿ ಕಾರ್ಕಳ, ಕ್ರೈಸ್ಟ್ಕಿಂಗ್ ಶಿಕ್ಷಣಸಂಸ್ಥೆಗಳು, ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ನಡೆದಕಾರ್ಕಳ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾವಿಭಾಗದ ಕುಸ್ತಿ ಪಂದ್ಯಾಟದಲ್ಲಿ ಕಾರ್ಕಳದ ಕ್ರೈಸ್ಟ್ಕಿಂಗ್ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ ಹಾಗೂ ಆಂಗ್ಲಮಾಧ್ಯಮಪ್ರೌಢಶಾಲೆಯ ಒಟ್ಟು ಹದಿನಾಲ್ಕು ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರಾಥಮಿಕ ವಿಭಾಗದಿಂದ ಆರನೇ ತರಗತಿಯ ಮೊಹಮ್ಮದ್ ಅತಿಫ್, ಏಳನೇ ತರಗತಿಯ ಮಹಮ್ಮದ್ಅಪ್ರಾಝ್,ಮೊಹಮ್ಮದ್ ಶಬಿತ್, ಮಾನಸ್, ಮೊಹಮ್ಮದ್ ಹಿಶಾಮ್ ಖಾನ್, ಎಂಟನೇ ತರಗತಿಯ ಸಾಕ್ಷಿತ್ ಪಿ. ಜೈನ್, ದೃವೀತ್ […]

ಕೃಷಿ ಇಲಾಖೆಯಿಂದ ಲಭ್ಯವಿರುವ ಈ ಯೋಜನೆಗಳ ಬಗ್ಗೆ ತಿಳ್ಕೊಳ್ಳಿ: ಯಾವುದಕ್ಕೆಲ್ಲಾ ಇದೆ ಸಹಾಯಧನ?

ನಮ್ಮ ರಾಜ್ಯದಲ್ಲಿ ಕೃಷಿಕರಿಗೆ ವಿವಿಧ ಸಹಾಯಧನ ಮತ್ತು ಯೋಜನೆಗಳು ಲಭ್ಯವಿದೆ. ನೀವೂ ಕೃಷಿಕರಾಗಿದ್ದರೆ ಅಥವಾ ಮುಂದೆ ಕೃಷಿ ಮಾಡುವ ಯೋಚನೆ ನಿಮಗಿದ್ದರೆ ಈ ಎಲ್ಲಾ ಯೋಜನೆಗಳ ಬಗ್ಗೆ ತಿಳಿದುಕೊಳ್ಳಿ ನಿಮಗೆ ಖಂಡಿತಾ ಪ್ರಯೋಜನವಾಗುತ್ತದೆ. ಕೃಷಿ ಯಾಂತ್ರೀಕರಣ ಯೋಜನೆಕೃಷಿ ಯಾಂತ್ರೀಕರಣವು ಕೃಷಿಯ ಆಧುನಿಕರಣ ಪ್ರಮುಖ ಅಂಗವಾಗಿದೆ. ಕೃಷಿ ಕ್ಷೇತ್ರದಲ್ಲಿ ಕಾರ್ಮಿಕರ ಕೊರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಾರ್ಮಿಕರ ಮೇಲಿನ ಹೊರೆಯನ್ನು ಕಡಿಮೆ ಮಾಡಲು ರೈತರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಲು ಒತ್ತು ನೀಡುತ್ತಿದ್ದಾರೆ. ಕೃಷಿ ಯಂತ್ರೋಪಕರಣಗಳು ದುಬಾರಿಯಾಗುತ್ತಿರುವ ಕಾರಣ […]

ರೆಪೊ ದರದಲ್ಲಿ ಬದಲಾವಣೆ ಇಲ್ಲ, ಶೇ.5.5 ಬಡ್ಡಿದರ ಮುಂದುವರಿಕೆ; ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ

ಈ ಬಗ್ಗೆ ಇಂದು(ಆ.06) ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು, ಸುಂಕದ ಪರಿಸ್ಥಿತಿ ವಿಕಸನಗೊಳ್ಳುತ್ತಿದ್ದರೂ ‘ತಟಸ್ಥ’ ನೀತಿ ನಿಲುವು ಮುಂದುವರೆದಿದೆ ಎಂದು ಹೇಳಿದ್ದಾರೆ. ರೆಪೋ ದರದ ಯಥಾಸ್ಥಿತಿ ಮುಂದುವರಿಸುವುದರ ಜೊತೆಗೆ ತನ್ನ ನೀತಿ ನಿಲುವನ್ನು ತಟಸ್ಥ ಅಥವಾ ನ್ಯೂಟ್ರಲ್​ನಲ್ಲೇ ಮುಂದುವರಿಸುವ ನಿರ್ಣಯವನ್ನು ಅವರು ಘೋಷಿಸಿದ್ದಾರೆ. ಸಂಜಯ್ ಮಲ್ಹೋತ್ರಾ ಅವರು ಈ ವರ್ಷದ ಆರಂಭದಲ್ಲಿ ಆರ್​ಬಿಐ ಗವರ್ನರ್ ಆಗಿ ಆಯ್ಕೆಗೊಂಡಿದ್ದಾರೆ. ಅವರ ನೇತೃತ್ವದಲ್ಲಿ ನಡೆದ ನಾಲ್ಕನೇ ಎಂಪಿಸಿ ಸಭೆ ಇದಾಗಿದೆ. ಹಿಂದಿನ ಮೂರು ಸಭೆಯಲ್ಲಿ […]