ಉಡುಪಿ: ಶ್ರೀ ಪುತ್ತಿಗೆ ಮಠದ ಕಿರಿಯ ಶ್ರೀಗಳಿಗೆ 37ನೇ ಜನ್ಮ ನಕ್ಷತ್ರ ಸಂಭ್ರಮ: ಕೃಷ್ಣ ದೇವರಿಗೆ ಮುತ್ತಿನ ಕವಚ ಸಮರ್ಪಣೆ

ಉಡುಪಿ: ಸಾಲಂಕೃತ ಪಲ್ಲಕ್ಕಿಯಲ್ಲಿ ಮುತ್ತಿನ ಕವಚವನ್ನು ಮೆರವಣಿಗೆಯಲ್ಲಿ ವೈಭವದಿಂದ ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಕಿರಿಯ ಸುಶೀಂಧ್ರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಶ್ರೀ ಕೃಷ್ಣಮಠಕ್ಕೆ ತರಲಾಯಿತು. ಪುತ್ತಿಗೆ ಮಠದ ಕಿರಿಯ ಶ್ರೀಪಾದರು ಬೆಳಿಗ್ಗೆ ಶ್ರೀ ಕೃಷ್ಣನಿಗೆ ಉಷಾಕಾಲದ ಪೂಜೆಯನ್ನು ಮಾಡಿದರು. ಉತ್ಸವ ಪ್ರಿಯನಾದ ಶ್ರೀ ಕೃಷ್ಣ ದೇವರಿಗೆ ಪರ್ಯಾಯದ ಮೊದಲ ದಿನದಿಂದಲೂ ಭಕ್ತವೃಂದವು ಕಾತರದಿಂದ ನಿರೀಕ್ಷಿಸುವಂತೆ ಮಾಡಿ, ಅಲಂಕಾರಪ್ರಿಯನನ್ನು ದಿನಕ್ಕೊಂದು ವಿಶೇಷವಾಗಿ ಅಲಂಕಾರದಿಂದ ಪೂಜಿಸುತ್ತಿರುವ ಅಲಂಕಾರ ತಜ್ಞ ಎಂದು ಎಲ್ಲರಿಂದಲೂ ಕೀರ್ತಿ ಪಡೆದಿರುವ ಕಿರಿಯ ಶ್ರೀಗಳು […]
ಕಾಂಗ್ರೆಸ್ ನ ಸೈದ್ಧಾಂತಿಕ ನಿಲುವನ್ನು ಜನರಿಗೆ ತಲುಪಿಸಿ- ಕಿಮ್ಮನೆ ರತ್ನಾಕರ್ ಕರೆ

ಉಡುಪಿ: ಕಾಂಗ್ರೆಸ್ ನ ಸೈದ್ಧಾಂತಿಕ ನಿಲುವು, ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ರಾಜ್ಯ ಕಾಂಗ್ರೆಸ್ ಪ್ರಚಾರ ಸಮಿತಿಯ ಉಪಾಧ್ಯಕ್ಷ ಕಿಮ್ಮನೆ ರತ್ನಾಕರ ಹೇಳಿದರು. ನಗರದ ಪುರಭವನದಲ್ಲಿ ನಡೆದ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಸಭೆಯಲ್ಲಿ ಅವರು ಮಾತನಾಡಿದರು.ಕಾಂಗ್ರೆಸ್ ಸಿದ್ಧಾಂತ ಜನರಿಗೆ ಸಂಪೂರ್ಣವಾಗಿ ತಲುಪಿಲ್ಲ. ಬಿಜೆಪಿಯ ಆಡಳಿತ ವೈಫಲ್ಯದಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಯಶಸ್ಸು ಕಂಡಿದೆ. ಆದರೆ, ಅದನ್ನು ಕಾಯಂ ಸ್ಥಿತಿ ಅಂದುಕೊಳ್ಳುವ ಹಾಗಿಲ್ಲ. ಆದ್ದರಿಂದ ಕಾಂಗ್ರೆಸ್ ಹಾಗೂ ಬಿಜೆಪಿಗೆ ಇರುವ ಭಿನ್ನಾಭಿಪ್ರಾಯ ಮತ್ತು ಸೈದ್ಧಾಂತಿಕ […]
ಲೊಟ್ಟೆಯಲ್ಲ, ಮೊಟ್ಟೆಯ ಈ ಪ್ರಯೋಜನಗಳು: ದಿನಕ್ಕೊಂದು ಮೊಟ್ಟೆ ತಿಂದ್ರೆ ಏನಾಗುತ್ತೆ?

ಮೊಟ್ಟೆ ಅಂದ್ರೆ ಪೌಷ್ಟಿಕಾಂಶಗಳ ಆಗರ. ಇದರಲ್ಲಿರುವ ಜೀವಸತ್ವಗಳಲ್ಲಿ ಆರೋಗ್ಯಕ್ಕೆ ಪೂರಕವಾಗುವ ಅಂಶಗಳಿವೆ. ಪ್ರೋಟೀನ್, ಆರೋಗ್ಯಕರ ಕೊಬ್ಬು ಎಲ್ಲವೂ ಮೊಟ್ಟೆಯಲ್ಲಿದೆ. ಮೊಟ್ಟೆಯ ನಿಯಮಿತ ಸೇವನೆ ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವ ಮೂಲಕ ಹೃದಯದ ಆರೋಗ್ಯವನ್ನು ಬೆಂಬಲಿಸುತ್ತದೆ, ಕೋಲೀನ್‌ನೊಂದಿಗೆ ಮೆದುಳಿನ ಕಾರ್ಯವನ್ನು ಹೆಚ್ಚಿಸುತ್ತದೆ ಮತ್ತು ಉತ್ಕರ್ಷಣ ನಿರೋಧಕಗಳೊಂದಿಗೆ ಕಣ್ಣಿನ ಆರೋಗ್ಯವನ್ನು ಉತ್ತೇಜಿಸುತ್ತದೆ. ದಿನಕ್ಕೊಂದು ಮೊಟ್ಟೆ ತಿನ್ನುವುದರಿಂದ ಆರೋಗ್ಯಕ್ಕಾಗುವ ಪೂರಕ ಬದಲಾವಣೆಗಳೇನು ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ. ಕಣ್ಣಿನ ಆರೋಗ್ಯಕ್ಕೆ ಮೊಟ್ಟೆ ಬೆಸ್ಟ್: ಕಣ್ಣಿನ ಆರೋಗ್ಯಕ್ಕೆ ಮೊಟ್ಟೆ ಬೆಸ್ಟ್ ಎನ್ನುತ್ತದೆ ಅಧ್ಯಯನ. ಮೊಟ್ಟೆಗಳು ಲುಟೀನ್ ಮತ್ತು ಜಿಯಾಕ್ಸಾಂಥಿನ್ ನಂತಹ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ, ಇದು ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್ ಮತ್ತು ಕಣ್ಣಿನ ಪೊರೆಗಳಿಂದ ರಕ್ಷಿಸುತ್ತದೆ. ನಿಯಮಿತ ಮೊಟ್ಟೆ ಸೇವನೆಯು ಉತ್ತಮ […]
ಉಡುಪಿ:ಆಗಸ್ಟ್ 8 ರಂದು ದೊಡ್ಡಣ್ಣ ಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ವರಮಹಾಲಕ್ಷ್ಮಿ ವ್ರತ ಕಲ್ಪೋಕ್ತ ಪೂಜೆ.

ಉಡುಪಿ:ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದಲ್ಲಿ ಶ್ರೀ ವರಮಹಾಲಕ್ಷ್ಮಿ ವ್ರತ ಕಲ್ಪೋಕ್ತ ಪೂಜೆಯು ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಮಹಾ ಅನ್ನಸಂತರ್ಪಣೆಯೊಂದಿಗೆ ನೆರವೇರಲಿದೆ. ಆಗಸ್ಟ್ ತಿಂಗಳ 8ನೇ ತಾರೀಖಿನ ಶುಕ್ರವಾರದಂದು ಸಂಜೆ ಗಂಟೆ 5 ರಿಂದ ಪೂಜೆ ಆರಂಭಗೊಳ್ಳಲಿದೆ.ಕುಬೇರ ಚಿತ್ರಲೇಖ ಸಹಿತವಾದ ಮಹಾಲಕ್ಷ್ಮಿಯ ವಿಶೇಷ ಸನ್ನಿಧಾನದಲ್ಲಿ ಈ ಪೂಜೆ ನೆರವೇರಲಿದೆ.ಸಾಮೂಹಿಕವಾಗಿ ನೆರವೇರಲಿರುವ ಈ ವ್ರತ ಕಲ್ಪೋಕ್ತ ಪೂಜೆಯಲ್ಲಿ ಸರ್ವರಿಗೂ ಸೇವೆ ನೀಡಲು […]
‘ಕರಿಯ-2’ ಚಿತ್ರದ ನಟ ಸಂತೋಷ್ ಬಾಲರಾಜ್ ನಿಧನ.

ಬೆಂಗಳೂರು: ಚಂದನವನದ ಯುವ ನಟ ಸಂತೋಷ್ ಬಾಲರಾಜ್ (34) ನಿಧನ ಹೊಂದಿದ್ದಾರೆ. ಮಂಗಳವಾರ (ಆ.5) ಖಾಸಗಿ ಆಸ್ಪತ್ರೆಯಲ್ಲಿ ಸಂತೋಷ್ 5 (Santhosh Balaraj) ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಬೆಳಗ್ಗೆ 9.45ರ ಸುಮಾರಿಗೆ ನಿಧನ ಹೊಂದಿದ್ದಾರೆ ಎಂದು ವರದಿಯಾಗಿದೆ. ‘ಕರಿಯ’ ಸಿನಿಮಾ ನಿರ್ಮಾಪಕ ಆನೇಕಲ್ ಬಾಲರಾಜ್ ಅವರ ಪುತ್ರನಾಗಿದ್ದ ಅವರು ಕಳೆದ ಕೆಲ ಸಮಯದಿಂದ ಜಾಂಡೀಸ್ ಕಾಯಿಲೆಯಿಂದ ಬಳಲುತ್ತಿದ್ದರು. ಜಾಂಡೀಸ್ ಮೈಗೆಲ್ಲ ಹರಡಿದ ಕಾರಣ ಅವರ ಪರಿಸ್ಥಿತಿ ಗಂಭೀರ ಆಗಿತ್ತು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ […]