ಕಾಸರಗೋಡು: ನಾಳೆ (ಆ.6) ಶಾಲಾ-ಕಾಲೇಜುಗಳಿಗೆ ರಜೆ; ರೆಡ್‌ ಅಲರ್ಟ್‌ ಘೋಷಣೆ

ಕಾಸರಗೋಡು: ಕೇಂದ್ರ ಹವಾಮಾನ ಇಲಾಖೆ ಆ.6 ರಂದು ಬುಧವಾರ ರೆಡ್‌ ಅಲರ್ಟ್‌ ಘೋಷಿಸಿದ ಹಿನ್ನೆಲೆಯಲ್ಲಿ ಮುಂಜಾಗ್ರತೆ ಅಂಗವಾಗಿ ಕಾಸರಗೋಡು ಜಿಲ್ಲೆಯ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಜಿಲ್ಲಾಧಿಕಾರಿ ಇಂಬುಶೇಖರ್‌ ರಜೆ ಪ್ರಕಟಿಸಿದ್ದಾರೆ.

ಉಡುಪಿ: ಪಿ.ಎಂ.ಇ.ಜಿ.ಪಿ (PMEGP) ಯೋಜನೆಯ ಕುರಿತು ಸುಳ್ಳು ಮಾಹಿತಿಯ ಬಗ್ಗೆ ಎಚ್ಚರವಹಿಸಿ.!

ಉಡುಪಿ, ಆಗಸ್ಟ್ 05: ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿಗಳ ಉದ್ಯೋಗ ಸೃಜನಾ ಯೋಜನೆ (ಪಿ.ಎಂ.ಇ.ಜಿ.ಪಿ) ಯನ್ನು ಜಿಲ್ಲಾ ಕೈಗಾರಿಕಾ ಕೇಂದ್ರ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಹಾಗೂ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಮುಖಾಂತರ ಅನುಷ್ಟಾನಗೊಳಿಸಲಾಗುತ್ತಿದೆ. ಆದರೆ ಸ್ವಂತ ಉದ್ಯೋಗ ನಡೆಸುವವರಿಗೆ ಕೇಂದ್ರ ಸರಕಾರದಿಂದ ಶೇ. 35 ಸಬ್ಸಿಡಿಯೊಂದಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ದೊರಕಿಸಿಕೊಡುವುದಾಗಿ ಮೊಬೈಲ್ ಸಂಖ್ಯೆ: 7338492769 / 7411795969 ಅನ್ನು ಕರಪತ್ರದಲ್ಲಿ ಮುದ್ರಿಸಿ ಜಿಲ್ಲೆಯಲ್ಲಿ ಪ್ರಚಾರ ಪಡಿಸುತ್ತಿರುವುದು ಕಂಡು ಬಂದಿರುತ್ತದೆ. ಪಿಎಂಇಜಿಪಿ ಯೋಜನೆಯ […]

ಧರ್ಮಸ್ಥಳ ಪ್ರಕರಣ: ಸೋಮವಾರದ ಕಾರ್ಯಾಚರಣೆಯಲ್ಲಿ ಮೂರು ಕಳೇಬರ ಪತ್ತೆ; ಸುಜಾತಾ ಭಟ್ ಪರ ವಕೀಲರ ಹೇಳಿಕೆ

ಮಂಗಳೂರು: ಸೋಮವಾರ (ಆ.4) ಎಸ್ ಐ ಟಿ ಕಾರ್ಯಾಚರಣೆಯ ವೇಳೆ ಕನಿಷ್ಠ ಮೂರು ಕಳೇಬರ ಪತ್ತೆಯಾಗಿದೆ ಅದರಲ್ಲಿ ಒಂದು ಕಳೇಬರ ಮಹಿಳೆಯದ್ದಾಗಿದೆ ಎಂದು, ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾರೆ ಎನ್ನಲಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಅವರ ತಾಯಿ ಸುಜಾತಾ ಭಟ್ ಅವರ ಪರ ವಕೀಲ ಮಂಜುನಾಥ್ ಎನ್ ಅವರು ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಿನ್ನೆಯ ದಿನ ದೂರುದಾರ ಸಾಕ್ಷಿ ಗುರುತಿಸಿರುವ ಸ್ಥಳ ಸಂಖ್ಯೆ 11 ರ ಪ್ರದೇಶದಿಂದ ಸುಮಾರು 100 ಮೀಟರ್ ದೂರದ […]

ಉಡುಪಿ: ಉಚಿತ ಸೆಟ್ ಟಾಪ್ ಬಾಕ್ಸ್ ಹೆಸರಿನಲ್ಲಿ‌ ವಂಚನೆ: ಗ್ರಾಹಕರೇ ಎಚ್ಚರ!

ಉಡುಪಿ: ಇತ್ತೀಚೆಗೆ ಕೇಬಲ್ ಅಪರೇಟರ್ ಗಳು 2 ವರ್ಷಕೊಮ್ಮೆ ತಮ್ಮ ಸೆಟ್ ಆಫ್ ಬಾಕ್ಸ್ ಗಳನ್ನು ಬದಲಾವಣೆ ಮಾಡುತ್ತಿದ್ದು, ಇದರಿಂದ ಗ್ರಾಹಕರು ಬಹಳಷ್ಟು ತೊಂದರೆ ಅನುಭವಿಸುವಂತಾಗಿದೆ. ಕೆಲವೊಂದು ಕೇಬಲ್ ಅಪರೇಟರ್ ಮುಖ್ಯಸ್ಥರು ಸ್ವಂತ ಲಾಭಕ್ಕಾಗಿ ಇತರ ಕೇಬಲ್ ಅಪರೇಟರ್ ಗಳ ಮೂಲಕ ಹೊಸ ಸೆಟ್ ಟಾಪ್ ಬಾಕ್ಸ್ ಅಳವಡಿಸಲು ಒತ್ತಾಯಿಸುತ್ತಿರುವ ಬಗ್ಗೆಯೂ ದೂರು ಕೇಳಿಬಂದಿದೆ. ಅಲ್ಲದೆ, ಹೊಸ ಹೊಸ ಕಂಪೆನಿಗಳು ಕೇಬಲ್ ಉದ್ಯಮಕ್ಕೆ ಕಾಲಿಟ್ಟಿದ್ದು, ಇವರು ಗ್ರಾಹಕರಿಗೆ ಹೊಸ ಪ್ಲ್ಯಾನ್ ಗಳನ್ನು ನೀಡಿದರೆ ಅದನ್ನು ಗ್ರಾಹಕರಿಗೆ ಅಪರೇಟರ್ […]

ಕಾಪು ಮಾರಿಯಮ್ಮನ ದೇವಸ್ಥಾನಕ್ಕೆ ನಟಿ ದೀಪಿಕಾ ದಾಸ್ ಭೇಟಿ; ನವದುರ್ಗಾ ಲೇಖನ ಯಜ್ಞ ಸಂಕಲ್ಪ ಸ್ವೀಕಾರ

ಉಡುಪಿ: ಖ್ಯಾತ ನಟಿ ದೀಪಿಕಾ ದಾಸ್ ಅವರು ಪ್ರಸಿದ್ಧ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನ ದರ್ಶನ ಪಡೆದರು. ಬಳಿಕ‌ ಅವರನ್ನು ದೇವಳದ ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿಯಿಂದ ಗೌರವಿಸಲಾಯಿತು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಅವರು ಅಮ್ಮನ ಅನುಗ್ರಹ ಪ್ರಸಾದ ನೀಡಿದರು. ಈ ವೇಳೆ ದೇವಳದ ಅಭಿವೃದ್ಧಿ, ಘಂಟಾನಾದ ಸೇವೆ ಮತ್ತು ನವದುರ್ಗಾ ಲೇಖನ ಯಜ್ಞದ ಬಗ್ಗೆ ಮಾಹಿತಿ ಪಡೆದುಕೊಂಡು, ನವದುರ್ಗಾ […]