ಕೋಚಿಂಗ್ ಕೇಂದ್ರದಲ್ಲಿ 10ನೇ ತರಗತಿಯ ವಿದ್ಯಾರ್ಥಿಯನ್ನು ಹೊಡೆದು‌ ಕೊಂದ‌ ಸಹಪಾಠಿಗಳು; ಇಬ್ಬರು ಬಾಲಕರು ಪೊಲೀಸರ ವಶಕ್ಕೆ.!

ನಾಸಿಕ್: ನಗರದ ಕೋಚಿಂಗ್‌ ಕೇಂದ್ರವೊಂದರಲ್ಲಿ 10ನೇ ತರಗತಿ ವಿದ್ಯಾರ್ಥಿಯೊಬ್ಬನನ್ನು ಆತನ ಇಬ್ಬರು ಸಹಪಾಠಿಗಳೇ ಹೊಡೆದು ಕೊಲೆ ಮಾಡಿದ್ದಾರೆ. ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಲಾಗಿದ್ದು, ಕಾನೂನು ಸಂಘರ್ಷಕ್ಕೆ ಒಳಗಾಗಿರುವ ಇಬ್ಬರು ಬಾಲಕರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ನಗರದ ಸತ್‌ಪುರದಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಮೃತ ಬಾಲಕನನ್ನು ಅಶೋಕನಗರ ನಿವಾಸಿ ಯಶರಾಜ್‌ ತುಕಾರಾಂ ಗಂಗುರ್ದೆ ಎಂಬುದಾಗಿ ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ. ‘ಸೀಟುಗಳ ವ್ಯವಸ್ಥೆಗೆ ಸಂಬಂಧಿಸಿ ಶಾಲೆಯಲ್ಲಿ ಜುಲೈ 31ರಂದು ಈ ಇಬ್ಬರು ಸಹಪಾಠಿಗಳು […]

ಕಾಪು: ಮೀನುಗಾರಿಕೆಗೆ ತೆರಳಿದ್ದ ನಾಡದೋಣಿ ಪಲ್ಟಿ; ಏಳು‌ ಮೀನುಗಾರರ ರಕ್ಷಣೆ

ಉಡುಪಿ: ಮೀನುಗಾರಿಕೆಗೆ ತೆರಳಿದ್ದ ನಾಡದೋಣಿಯೊಂದು ಸಮುದ್ರದ ಅಲೆಯ ಹೊಡೆತಕ್ಕೆ ಸಿಲುಕಿ ಪಲ್ಟಿಯಾದ ಘಟನೆ ಕಾಪು ತಾಲೂಕಿನ ಲೈಟ್ ಹೌಸ್ ನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ದೋಣಿಯಲ್ಲಿದ್ದ 7 ಜನ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಟ್ರಾಲ್ ದೋಣಿ ಅಲೆಗಳ ಹೊಡೆತಕ್ಕೆ ಸಿಲುಕಿ ಮಗುಚಿ ಬಿದ್ದಿದೆ. ದೋಣಿಯಲ್ಲಿದ್ದ ಮೀನುಗಾರರನ್ನು ಸ್ಥಳೀಯ ಮೀನುಗಾರರಾದ ಪ್ರಶಾಂತ್ ಮತ್ತು ವಿನೋದ್ ರಕ್ಷಣೆ ಮಾಡಿದ್ದಾರೆ. ಆ ಮೂಲಕ ಜಿಲ್ಲೆಯಲ್ಲಿ ಮತ್ತೊಂದು ದುರಂತ ತಪ್ಪಿದಂತಾಗಿದೆ.

ಉಡುಪಿ: ಯಕ್ಷಶಿಕ್ಷಣ ಅಧ್ಯಯನಕ್ಕೆ ಪೂರಕ; ಯಶಪಾಲ್ ಸುವರ್ಣ

ಉಡುಪಿ: ಯಕ್ಷಗಾನದಲ್ಲಿರುವ ಭಾವಾಭಿನಯ, ಮಾತುಗಾರಿಕೆ, ಬಣ್ಣ, ವೇಷಭೂಷಣ ಇತ್ಯಾದಿಗಳು ವಿದ್ಯಾರ್ಥಿಗಳಲ್ಲಿ ಸಭಾ ಕಂಪನವನ್ನು ದೂರ ಮಾಡಿ ಅವಧಾನ ಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ ಶಾಲಾ ದಿನಗಳಲ್ಲಿ ಯಕ್ಷಗಾನದಂತಹ ಕಲಾಶಿಕ್ಷಣವನ್ನು ಪಡೆಯುವುದು ಹೆಚ್ಚು ಸೂಕ್ತ. ಅದು ಶಿಕ್ಷಣಕ್ಕೆ ಪೂರಕ ಹೊರತು ಮಾರಕವಲ್ಲ ಎಂದು ಉಡುಪಿ ವಿಧಾನಸಭಾ ಸದಸ್ಯ ಹಾಗೂ ಯಕ್ಷಶಿಕ್ಷಣ ಟ್ರಸ್ಟ್ ನ ಅಧ್ಯಕ್ಷರೂ ಆದ ಯಶ್ ಪಾಲ್ ಸುವರ್ಣ ಅಭಿಪ್ರಾಯಪಟ್ಟರು. ಅವರು ಉಡುಪಿ ಯಕ್ಷಗಾನ ಕಲಾರಂಗದ ಸಹಯೋಗದೊಂದಿಗೆ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ನಡೆಯಲಿರುವ […]

ಏಳು ದಿನ ನಿರಂತರ ನೃತ್ಯ –ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಾಧನೆ ಮಾಡಿದ ಮಂಗಳೂರಿನ ಯುವತಿಗೆ, ರೋಹನ್ ಕಾರ್ಪೋರೇಶನ್ ಸಂಸ್ಥೆಯಿಂದ ಗೌರವ ಸನ್ಮಾನ.

ಮಂಗಳೂರು: ಮಂಗಳೂರಿನ ಭರತನಾಟ್ಯ ಕಲಾವಿದೆಯಾದ ರೆಮೋನಾ ಎವೆಟ್ ಪಿರೇರಾ ಅವರು 7 ದಿನಗಳ ಕಾಲ ನಿರಂತರ ಭರತನಾಟ್ಯ ಪ್ರದರ್ಶನ ನೀಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲಿಸಿದ ಹಿನ್ನೆಲೆಯಲ್ಲಿ, ರೋಹನ್ ಕಾರ್ಪೋರೇಶನ್ ಸಂಸ್ಥೆ ಅವರ ಸಾಧನೆಯನ್ನು ಗುರುತಿಸಿ ಶುಕ್ರವಾರ ವಿಶೇಷವಾಗಿ ಸನ್ಮಾನಿಸಿದೆ. ಈ ಸನ್ಮಾನ ಕಾರ್ಯಕ್ರಮವು ಮಂಗಳೂರಿನ ಬಿಜೈ ಮುಖ್ಯ ರಸ್ತೆಯ ರೋಹನ್ ಸಿಟಿಯಲ್ಲಿರುವ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸ್ಥಾಪಕರಾದ ಡಾ.ರೋಹನ್ ಮೊಂತೇರೊರವರು ರೆಮೋನಾ ಪಿರೇರಾ ಅವರಿಗೆ ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ […]

ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿದ “ಮಹಾವತಾರ ನರಸಿಂಹ” 91 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದ ಅನಿಮೇಷನ್ ಸಿನಿಮಾ !

ಕನ್ನಡದ ಸು ಫ್ರಂ ಸೋ ಥಿಯೇಟರ್ ಗಳಲ್ಲಿ ಅದ್ಬುತ ಯಶಸ್ಸು ಗಳಿಸುತ್ತಿರುವ ಬೆನ್ನಲ್ಲೇ ಇನ್ನೊಂದು ಸಿನಿಮಾ 91 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದ ಸುದ್ದಿ ಬಂದಿದೆ. ಹೌದು ಮಹಾವತಾರ ನರಸಿಂಹ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಅಭೂತಪೂರ್ವ ಯಶಸ್ಸನ್ನು ಕಂಡಿದೆ. ಕೇವಲ 10 ದಿನಗಳಲ್ಲಿ 91 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಸಿನಿಮಾ ಕಡಿಮೆ ಬಜೆಟ್‌ನಲ್ಲಿ ಸಿದ್ಧವಾಗಿದೆ.  ಪೌರಾಣಿಕ ಕಥೆ ಮತ್ತು ಅತ್ಯುತ್ತಮ ಅನಿಮೇಷನ್ ಪ್ರೇಕ್ಷಕರನ್ನು ಆಕರ್ಷಿಸಿದೆ. ಹೊಂಬಾಳೆ ಫಿಲ್ಮ್ಸ್  ಈ ಚಿತ್ರನ್ನು ಅರ್ಪಿಸಿದೆ. […]