ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಪರ್ಕಳ: ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ.

ಉಡುಪಿ: ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಪರ್ಕಳ, ಇದರ 25ನೇ ವರ್ಷದ ರಜತ ಮಹೋತ್ಸವದ ಕಾರ್ಯಕ್ರಮ “ಬೆಳ್ಳಿ ಬೆಡಗು”ಇದರ ಮೂರನೇ ಕಾರ್ಯಕ್ರಮವುಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ ಮಾಹೆ ಮಣಿಪಾಲ್ ಇವರ ಸಹಯೋಗದೊಂದಿಗೆ ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ ರಿ. ಕುಕ್ಕೆಹಳ್ಳಿ ಮತ್ತು ಶ್ರೀ ವಿಶ್ವಕರ್ಮ ಸಮಾಜೋದ್ಧಾರಕ ಸಂಘ ರಿ. ಬೆಳ್ಳಂಪಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಹಿರಿಯ ನಾಗರಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು ಈ ಕಾರ್ಯಕ್ರಮ ಬೆಳ್ಳಂಪಳ್ಳಿ ಕುಕ್ಕೆಹಳ್ಳಿ ಶ್ರೀ […]

ಆಗಸ್ಟ್1 ರಿಂದ ಉಡುಪಿ ಸಿಂಡಿಕೇಟ್ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಯುನಿಗ್ಸ್ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಪ್ರಾರಂಭ

ಉಡುಪಿ: ಡಿಜಿಟಲ್ ಪರಿವರ್ತನೆಯತ್ತ ಇನ್ನೊಂದು ಹೆಜ್ಜೆ ಇಟ್ಟಿರುವ ಉಡುಪಿ ಸಿಂಡಿಕೇಟ್ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ತನ್ನ ನೂತನ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಯುನಿಗ್ಸ್ (UNIGS) ಅನ್ನು ಆಗಸ್ಟ್ 1, 2025 ರಂದು ಅಧಿಕೃತವಾಗಿ ಬಿಡುಗಡೆ ಮಾಡಿತು. ಇದರ ಮೂಲಕ ಸದಸ್ಯರಿಗೆ ಸುಲಭ, ಸುರಕ್ಷಿತ ಹಾಗೂ ಬಳಕೆದಾರ ಸ್ನೇಹಿ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವಲ್ಲಿ ಮಹತ್ವದ ಮೈಲುಗಲ್ಲು ಇಟ್ಟಂತಾಗಿದೆ. ಈ ಹೊಸ ಯುನಿಗ್ಸ್ ಆಪ್‌ನ ಮೂಲಕ ಸದಸ್ಯರು ತಮ್ಮ ಖಾತಾ ವಿವರಗಳನ್ನು ನೇರವಾಗಿ ತಮ್ಮ ಮೊಬೈಲ್‌ನಲ್ಲಿ ನೋಡಬಹುದಾಗಿದೆ. […]

ಅಬ್ಬರಿಸಿದ “ಕೂಲಿ” ಟ್ರೈಲರ್‌: ರಜನಿಕಾಂತ್ ಜೊತೆಗೆ ಉಪೇಂದ್ರ ಕೂಡ ನಟಿಸಿರೋ “ಕೂಲಿ” ಹೆಚ್ಚಿಸಿತು ಸಿನಿ ಜ್ವರ!

ರಜನಿಕಾಂತ್ ನಟನೆಯ “ಕೂಲಿ” ಟ್ರೈಲರ್‌ ಎಲ್ಲೆಡೆ ಅಬ್ಬರಿಸುತ್ತಿದೆ. ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ “ಕೂಲಿ”ಚಿತ್ರದ ಟ್ರೈಲರ್ ಗೆ ಎಲ್ಲಡೆ ಭಾರೀ ಸ್ಪಂದನೆ ವ್ಯಕ್ತವಾಗಿದೆ. “ಕೂಲಿ” ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು ಲೋಕೇಶ್ ಕನಕರಾಜ್ ನಿರ್ದೇಶನದ ಚಿತ್ರವಿದು. “ಕೂಲಿ” ನಾಯಕ ನಟನಾಗಿ ರಜನಿಕಾಂತ್ ಅವರ 171 ನೇ ಚಿತ್ರವಾಗಿದ್ದು ಈ ವರ್ಷದಲ್ಲಿ ದಾಖಲೆ ಬರೆಯುವ ಚಿತ್ರವೆಂದು ಹೇಳಲಾಗ್ತಿದೆ. ಕನ್ನಡಕ್ಕೂ ಈ ಚಿತ್ರಕ್ಕೆ ಮಹತ್ವವಿದೆ ಯಾಕೆಂದರೆ ರಜನಿಕಾಂತ್ ಜೊತೆಗೆ, ಕೂಲಿ ಚಿತ್ರದಲ್ಲಿ ನಟ ಉಪೇಂದ್ರ ಕೂಡ ನಟಿಸಿದ್ದಾರೆ. ಅಲ್ಲದೇ ನಾಗಾರ್ಜುನ, ಸೌಬಿನ್ […]

ಉಡುಪಿ ಶ್ರೀಕೃಷ್ಣಮಠಕ್ಕೆ ನಟ ವಿಜಯರಾಘವೇಂದ್ರ ಭೇಟಿ

ಉಡುಪಿ: ಉಡುಪಿ ಶ್ರೀಕೃಷ್ಣಮಠಕ್ಕೆ ಖ್ಯಾತ ಸ್ಯಾಂಡಲ್ ವುಡ್ ನಟ ವಿಜಯರಾಘವೇಂದ್ರ ಅವರು ಇಂದು ಭೇಟಿ ನೀಡಿ ದೇವರ ದರ್ಶನ ಮಾಡಿದರು.ಬಳಿಕ ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಭೇಟಿಯಾಗಿ ಕೋಟಿಗೀತಾಲೇಖನಯಜ್ಞ ದೀಕ್ಷೆ ಸ್ವೀಕರಿಸಿ ಕಿರಿಯ ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.