ರಾಜ್ಯದಲ್ಲಿ ವರ್ಷಕ್ಕೆ 2 ಸಾವಿರ ಸರಕಾರಿ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿವೆ- ಸಂಸದ ಕೋಟ ಆತಂಕ

ಉಡುಪಿ : ರಾಜ್ಯದಲ್ಲಿ ವರ್ಷಕ್ಕೆ 2000 ಸಾವಿರ ಸರಕಾರಿ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿದೆ ಅನ್ನೋದು ಬೇಸರದ ಸಂಗತಿ. ಅನುದಾನಿತ ಶಾಲೆಗಳು ಮಲತಾಯಿ ಧೋರಣೆಗೆ ಸಿಲುಕಿರುವ ಬಡ ಮಕ್ಕಳ ಶಾಲೆ. ನಮ್ಮೂರಿಗೆ ಶಿಕ್ಷಣ ನೀಡುವ ಉದ್ಧೇಶಕ್ಕೆ ಅನುದಾನಿತ ಶಾಲೆಗಳು ಪ್ರಾರಂಭವಾಗಿದೆ. 48000 ಸರಕಾರ ಶಾಲೆಗಳ ಜೊತೆ 2400 ಅನುದಾನಿತ ಶಾಲೆಗಳನ್ನು ಸರಕಾರವೇ ನಡೆಸಲಿ ಎನ್ನುವುದು ನಮ್ಮ ಬಹುಕಾಲದ ಬೇಡಿಕೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಉಡುಪಿ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಆಯೋಜಿಸಲಾದ ಹೆಗ್ಗುಂಜೆ […]
ಕುಂದಾಪುರ: ದನ ಕಳವು ಪ್ರಕರಣ; ನಾಲ್ವರು ಆರೋಪಿಗಳ ಬಂಧನ

ಉಡುಪಿ: ಕುಂದಾಪುರ ತಾಲೂಕಿನ ಕಾಳಾವರ ಜಂಕ್ಷನ್‌ನಲ್ಲಿ ಮೂರು ದಿನಗಳ ಹಿಂದೆ ದನ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ಕು ಮಂದಿ ಆರೋಪಿಗಳನ್ನು ಕುಂದಾಪುರ ಪೊಲೀಸರು ಆ.1ರಂದು ಬಂಧಿಸಿದ್ದಾರೆ. ಗುಲ್ವಾಡಿಯ ಅಬೂಬಕರ್(39), ಮಹಮ್ಮದ್ ರಫೀಕ್(36), ಯಾಕೂಬ್(24), ತಲ್ಲೂರು ಕೋಟೆ ಬಾಗಿಲಿನ ಸುನಿಲ್(33) ಬಂಧಿತ ಆರೋಪಿಗಳು. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಗೂಡ್ಸ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ಸುಮಾರು 5,00,000ರೂ. ಎಂದು ಅಂದಾಜಿಸಲಾಗಿದೆ. ಎಲ್ಲ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ತಾಮ್ರದ ಬಾಟಲಿಯಲ್ಲಿ ನೀರು ಕುಡಿದು ನೋಡಿ, ಕೆಲವೇ ಸಮಯದಲ್ಲಿ ಗೊತ್ತಾಗುತ್ತೆ ಆರೋಗ್ಯದಲ್ಲಾಗೋ ಈ ಪಾಸಿಟಿವ್ ಬದಲಾವಣೆಗಳು!

ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದು ಪ್ರಾಚೀನ ಜೀವನಶೈಲಿಯ ಒಂದು ಭಾಗವಾಗಿತ್ತು.ಇದೊಂದು ಆರೋಗ್ಯಕರ ಮಾರ್ಗ ಎಂದು ಹಿರಿಯರು ನಂಬಿದ್ದರು. ತಾಮ್ರದಲ್ಲಿಆಂಟಿಮೈಕ್ರೊಬಿಯಲ್ ಗುಣವು ದೇಹದ ಶಕ್ತಿಯನ್ನು ಸಮತೋಲನಗೊಳಿಸುತ್ತದೆ ಎನ್ನುವ ನಂಬಿಕೆ ಇಂದು ನಿನ್ನೆಯದ್ದಲ್ಲ. ಆದರೆ ಕ್ರಮೇಣ ತಾಮ್ರದ ಪಾತ್ರೆಗಳು ಕಾಣೆಯಾದವು, ಮೂಲೆಗುಂಪಾದವು. ಆದರೆ ಈಗ ತಾಮ್ರದ ಟ್ರೆಂಡ್ ಮತ್ತೆ ಶುರುವಾಗಿದೆ. ತಾಮ್ರದ ಬಾಟಲಿಗಳು ಅಥವಾ ಪಾತ್ರೆಗಳಲ್ಲಿ ಸಂಗ್ರಹಿಸಿದ ನೀರನ್ನು ಕುಡಿಯುವ ಬಳಕೆ ಅಲ್ಲಲ್ಲಿ ಶುರುವಾಗಿದೆ. ಹಾಗಾದ್ರೆ ಬನ್ನಿ ತಾಮ್ರದ ಬಾಟಲಿ ಅಥವಾ ಪಾತ್ರೆಯಲ್ಲಿ ನೀರನ್ನು ಸೇವಿಸುದರಿಂದ ಆಗುವ ಉಪಯೋಗಗಳೇನು ತಿಳಿದುಕೊಳ್ಳೋಣ. […]
ಉಡುಪಿ:ಆ.15 ರಂದು ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಇಂಚರ ಸರ್ಜಿಕಲ್ ಕ್ಲಿನಿಕ್ ನಲ್ಲಿ ಡಯಾಬಿಟಿಸ್ ಪಾದಗಳ ರಕ್ಷಣೆ ಬಗ್ಗೆ ಮಾಹಿತಿ ಶಿಬಿರ ಹಾಗೂ ಉಚಿತ ಡಯಾಬಿಟಿಸ್ ಪಾದರಕ್ಷೆಗಳ ವಿತರಣೆ

ಉಡುಪಿ:ಇಂಚರ ಸರ್ಜಿಕಲ್ ಕ್ಲಿನಿಕ್ ಶ್ರೀ ವೈ ಎಲ್ ಎನ್ ಜ್ಯೋತಿಷ್ಕ ಸ್ಮಾರಕ ಚಾರಿಟೇಬಲ್ ಟ್ರಸ್ಟ್ ಎ ಜೆ ಆಲ್ಸೆ ರಸ್ತೆ, ಉಡುಪಿ ಇವರ ವತಿಯಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಡಯಾಬಿಟಿಸ್ ಪಾದಗಳ ರಕ್ಷಣೆ ಬಗ್ಗೆ ಮಾಹಿತಿ ಶಿಬಿರ ಹಾಗೂ ಉಚಿತ ಡಯಾಬಿಟಿಸ್ ಪಾದರಕ್ಷೆಗಳ ವಿತರಣೆಯನ್ನು 15.08.25 ರ ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಇಂದಿರ ಚಂದಿರ ಸಭಾಭವನ, ಇಂಚರ ಸರ್ಜಕಲ್ ಕ್ಲಿನಿಕ್ ಉಡುಪಿ ಇಲ್ಲಿ ನಡೆಸಲಾಗುವುದು. ಪಾದರಕ್ಷೆ ಪಡೆಯಲು ನೊಂದಾವಣೆ ಕಡ್ಡಾಯವಾಗಿರಬೇಕು. ನೋಂದಾಯಿಸಲು ಸಂಪರ್ಕಿಸಿ:📞 7676799859
ಉಡುಪಿ:ಶ್ರೀ ಕೃಷ್ಣ ಮಠದಲ್ಲಿ ಆ.1 ರಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವದ ಅದ್ದೂರಿ ಪ್ರಾರಂಭ

ಉಡುಪಿ:ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಮಂಡಲೋತ್ಸವದ ಪ್ರಯುಕ್ತ ಸೂರ್ಯೋದಯ ಕಾಲದಲ್ಲಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕೋಟಿ ಜಪ ಯಜ್ಞದ ಅಂಗವಾಗಿ ವಿಶ್ವಾದ್ಯಂತ ಇರುವ ಶ್ರೀಕೃಷ್ಣ ಭಕ್ತರಿಗೆ ಸಾಮೂಹಿಕ ಶ್ರೀ ಕೃಷ್ಣ ಮಂತ್ರೋಪದೇಶ ನೀಡಿದರು. ಶ್ರೀಪಾದರ ಉಪದೇಶದ ನಂತರ ನೆರೆದಿದ್ದ ಭಕ್ತರು 108 ಬಾರಿ ಶ್ರೀ ಕೃಷ್ಣ ಮಂತ್ರ ಪಠಣ ಮಾಡಿದರು. ಇದಕ್ಕೂ ಮುನ್ನ ಶ್ರೀ ಪುತ್ತಿಗೆ ಮಠದ ದಿವಾನರಾದ ನಾಗರಾಜ ಆಚಾರ್ಯ, ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ […]