ಧರ್ಮಸ್ಥಳ ಪ್ರಕರಣ: ಅನಾಮಿಕ ದೂರುದಾರನಿಗೆ ಪೊಲೀಸ್ ಅಧಿಕಾರಿಯಿಂದ ದೂರು ವಾಪಾಸ್ ಪಡೆಯುವಂತೆ ಬೆದರಿಕೆ; ವಕೀಲರ ಆರೋಪ

ಧರ್ಮಸ್ಥಳ: ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣದ ಎಸ್ಐಟಿ ತನಿಖೆ ವೇಗದಲ್ಲಿ ನಡೆಯುತ್ತಿದ್ದಂತೆ ಎಸ್ಐಟಿಯಲ್ಲಿರುವ ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರು ದೂರುದಾರನಿಗೆ ಕೇಸ್ ವಾಪಸ್ ಪಡೆಯುವಂತೆ ಬೆದರಿಕೆಯೊಡ್ಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.ಪೊಲೀಸ್ ಇನ್ಸ್‍ಪೆಕ್ಟರ್ ಮಂಜುನಾಥ ಗೌಡ ಎಂಬವರು ದೂರುದಾರನಿಗೆ ದೂರು ವಾಪಸ್ ಪಡೆಯಬೇಕು. ಇಲ್ಲದಿದ್ದರೆ, ನಿನಗೇ ಶಿಕ್ಷೆಯಾಗುತ್ತದೆ ಎಂದು ಬೆದರಿಸಿದ್ದಾರೆ ಎಂದು ತಿಳಿದು ಬಂದಿದೆ. ನಿನ್ನ ದೂರಿನಿಂದ ನಿನಗೇ ಶಿಕ್ಷೆಯಾಗುತ್ತೆ, ಜೀವಮಾನವಿಡೀ ಜೈಲಿನಲ್ಲಿರಬೇಕಾಗುತ್ತೆ. ಪೊಲೀಸರು ನಿನ್ನನ್ನೇ ಅರೆಸ್ಟ್ ಮಾಡ್ತಾರೆ. ಇತ್ಯಾದಿ ಹೆದರಿಸಿ, ದೂರು ವಾಪಸ್ ಪಡೆಯುವಂತೆ ಇನ್ಸ್ […]

ಅತ್ಯಾಚಾರ ಪ್ರಕರಣ: ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ; ನ್ಯಾಯಾಲಯ ಮಹತ್ವದ ತೀರ್ಪು.

ಬೆಂಗಳೂರು: ಕೆ.ಆರ್. ನಗರ ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಹತ್ವದ ತೀರ್ಪು ನೀಡಿದೆ. ಕೆ.ಆ‌ರ್. ನಗರ (ತೋಟದ ಮನೆಯಲ್ಲಿ ಕೆಲಸ ಮಾಡುತ್ತಿದ್ದ) ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಶುಕ್ರವಾರ ಮಹತ್ವದ ತೀರ್ಪು ನೀಡಿ, ಶಿಕ್ಷೆಯ ಪ್ರಮಾಣವನ್ನು ಇಂದಿಗೆ ಕಾಯ್ದಿಸಿತ್ತು. ಅದರಂತೆ ಇದೀಗ ನ್ಯಾಯಾಲಯವು ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ. ಶಿಕ್ಷೆ ಪ್ರಮಾಣ ನಿಗದಿಪಡಿಸುವ ಕುರಿತು ನ್ಯಾಯಾಧೀಶ ಸಂತೋಷ […]

ಪುಣೆ: ಜಿಮ್ ನಲ್ಲಿ ವರ್ಕೌಟ್ ಮಾಡಿದ ಬಳಿಕ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ 37 ವರ್ಷದ ವ್ಯಕ್ತಿ ಸಾವು.!

ಪುಣೆ: ಪುಣೆಯ ಪಿಂಪ್ರಿ-ಚಿಂಚ್‌ವಾಡ್‌ನಲ್ಲಿರುವ ಜಿಮ್‌ನಲ್ಲಿ ಶುಕ್ರವಾರ ಬೆಳಿಗ್ಗೆ ವರ್ಕೌಟ್ ನಂತರ ವ್ಯಕ್ತಿಯೊಬ್ಬರು ತಮ್ಮ ಬಾಟಲಿಯಿಂದ ನೀರು ಕುಡಿದಿದ್ದಾರೆ. ಬಳಿಕ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಜಿಮ್‌ನಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಘಟನೆಯು ಸೆರೆಯಾಗಿದೆ. ಜಿಮ್‌ನಲ್ಲಿದ್ದ ಇತರರು ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, 37 ವರ್ಷದ ಮಿಲಿಂದ್ ಕುಲಕರ್ಣಿ ಅವರು ಆಸ್ಪತ್ರೆಗೆ ಬರುವಷ್ಟರಲ್ಲಿ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ್ದಾರೆ. ವರದಿಗಳ ಪ್ರಕಾರ, ಕುಲಕರ್ಣಿ ಅವರ ಪತ್ನಿಯೂ ಈ ಹಿಂದೆ ಹೃದಯಾಘಾತದಿಂದ ನಿಧನರಾದರು. ಅವರು ವೈದ್ಯೆಯಾಗಿದ್ದರು.

ಶ್ರೀ ಶಿರೂರು ಮಠದ ಕೀರ್ತಿಶೇಷ ಶ್ರೀ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಆರಾಧನೆ.

ಉಡುಪಿಯ-ಶ್ರೀಮಧ್ವಾಚಾರ್ಯ ಕರಾರ್ಚಿತ ಶ್ರೀಕೃಷ್ಣದೇವರಿಗೆ, ಶ್ರೀವಾದಿರಾಜ ಗುರುಸಾರ್ವಭೌಮ ಪ್ರತಿಷ್ಠಾಪಿತ ಶ್ರೀಮುಖ್ಯ ಪ್ರಾಣದೇವರಿಗೆ 47 ವರ್ಷಗಳ ಕಾಲ ವಿಧಿವತ್ತಾಗಿ ಪೂಜೆಗಳನ್ನು ಸಲ್ಲಿಸಿ ಪೊಡವಿಗೊಡೆಯನಿಗೆ ನಿರಂತರ ಮುನ್ನೂರು ವೈವಿದ್ಯಮಯ ಅಲಂಕಾರ ಸೇವೆಯ ಮುಖಾಂತರ ಮೂರು ವೈಭವದ ಪರ್ಯಾಯ ಮಹೋತ್ಸವವನ್ನು ಭಗವಂತನ ಪಾದಕಮಲಗಳಿಗೆ ಸಮರ್ಪಿಸಿದ ಶ್ರೀ ಶಿರೂರು ಮಠದ ಕೀರ್ತಿಶೇಷ ಪರಮಪೂಜ್ಯ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಏಳನೇವರ್ಷದ ಆರಾಧನೆಯು ವಿಶ್ವಾವಸು ಸಂ!ರದ ಕರ್ಕಾಟಕಮಾಸ ದಿನ15 ಸಲುವ ಶ್ರಾವಣಶುದ್ಧ ಸಪ್ತಮೀ ಗುರುವಾರ ಜುಲೈ 31ರಂದು ಉಡುಪಿ ರಥಬೀದಿಯಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದಲ್ಲಿ ವಿಧಿವತ್ತಾಗಿ […]

ಕುಂದಾಪುರ: ಆಫೀಸರ್ಸ್ ಹುದ್ದೆಗಳಿಗೆ ನೇಮಕಾತಿ.

ಉಡುಪಿ: ಕುಂದಾಪುರದಲ್ಲಿರುವ ವೆಂಕಟೇಶ್ ಪ್ರಭು & ಎಸೋಸಿಯೆಟ್ಸ್ ನಲ್ಲಿ 2 ಆಫೀಸರ್ಸ್ (Audit/Accountants) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಯಲ್ಲಿ ಎರಡು ವರ್ಷ ಅನುಭವ ಹೊಂದಿರಬೇಕು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:Venkatesh PrabhuB.Com., FCA, VENKATESH PRABHU & ASSOCIATESCHARTERED ACCOUNTANTSNo.18P/1X, 3rd Floor, Janapriya Complex, Basrur Murkai, Kundapura – 576201 [email protected] [email protected] 08254459188 / +91 9886741562 / +91 9341231562