ಮಹಿಳಾ ಸಮಾಜ ಮಣಿಪಾಲ: 63ನೇ ಸ್ಥಾಪಕ ದಿನಾಚರಣೆ, ಸಾಧಕರಿಗೆ ಸನ್ಮಾನ

ಮಣಿಪಾಲ: ಮಹಿಳಾ ಸಮಾಜ ಮಣಿಪಾಲ ಇದರ 63ನೇ ಸ್ಥಾಪಕ ದಿನಾಚರಣೆ ರೋಟರಿ ಹಾಲ್ ಮಣಿಪಾಲ ಇತ್ತೀಚಿಗೆ ನೆಡೆಯಿತು. ಮುಖ್ಯ ಅತಿಥಿಯಾಗಿ ಮಣಿಪಾಲ ಮಾಹೆಯ ಶ್ರೀಮತಿ ವಸಂತಿ ರಾಮದಾಸ್ ಪೈ ದೀಪ ಬೆಳಗಿಸಿ ಕಾರ್ಯ ಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಮಹಿಳಾ ಸಮಾಜ ಮಣಿಪಾಲ ಇದರ ಸ್ಥಾಪಕರಾದ ದಿವಂಗತ ಶಾರದ ಪೈ, ಡಾ ಪದ್ಮ ರಾವ್ ಇವರ ಭಾವ ಚಿತ್ರಕ್ಕೆ ಪುಷ್ಪಾ ನಮನ ಸಲ್ಲಿಸಿದರು.ಮುಖ್ಯ ಅತಿಥಿಯಾದ ಡಾ.ರಾಜಶ್ರೀ ಎಸ್ ಕಿಣಿಯವರು ಸಮಾಜದ ವಿವಿಧ ಕ್ಷೇತ್ರ ಗಳಲ್ಲಿ ಸಾಧನೆ ಮಾಡಿದ ಮಹಿಳೆಯರಾದ […]

ಮಣಿಪಾಲದ MSDC ಯಲ್ಲಿದೆ ಹ್ಯಾಂಡ್ಸ್-ಆನ್ ತರಬೇತಿ, ಉದ್ಯೋಗ ಕ್ಷೇತ್ರಕ್ಕೂ ಇದು ದಾರಿ.!

ಮಣಿಪಾಲ: MSDC ಓರೇನ್ ಇಂಟರ್ನ್ಯಾಷನಲ್ ನಲ್ಲಿ ಪಾಲಿಜೆಲ್ ನೇಲ್ಸ್ನಲ್ಲಿ ಪ್ರಮಾಣಪತ್ರ ಕೋರ್ಸ್ ಆರಂಭಗೊಂಡಿದೆ. ಇಲ್ಲಿ ಹ್ಯಾಂಡ್ಸ್-ಆನ್ ತರಬೇತಿ ಪಡೆಯಿರಿ ಮತ್ತು ಪ್ರಮಾಣೀಕೃತ ಉಗುರು ಕಲಾವಿದರಾಗಿ. ಇದು MSDC ನಿಮಗೆ ನೀಡುತ್ತಿರುವ ಒಂದೊಳ್ಳೆ ಅವಕಾಶ. ಅವಧಿ: 5 ದಿನಗಳು ಕೋರ್ಸ್ ಬಗ್ಗೆ ಒಂದಷ್ಟು:✨ ಉಗುರು ತಯಾರಿಕೆ ಮತ್ತು ಹೊರಪೊರೆ ಆರೈಕೆ✨ ಪಾಲಿಜೆಲ್ ಉಗುರು ವಿಸ್ತರಣೆ ಅಪ್ಲಿಕೇಶನ್✨ ಆಕಾರ ಮತ್ತು ಫೈಲಿಂಗ್ ತಂತ್ರಗಳು✨ಅಂತರ್ನಿರ್ಮಿತ ಕಲೆ✨ಸುರಕ್ಷಿತ ತೆಗೆಯುವ ತಂತ್ರಗಳು✨ನೈರ್ಮಲ್ಯ ಮತ್ತು ಕ್ಲೈಂಟ್ ಆರೈಕೆ✨ ಪೂರ್ಣಗೊಂಡ ನಂತರ MSDC ಪ್ರಮಾಣಪತ್ರ. ಶುಲ್ಕ: ರೂ. […]

ಉಡುಪಿ: ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಟಿ.ಟಿ ವಾಹನದ ಚಾಲಕ ಹೃದಯಾಘಾತದಿಂದ ಮೃತ್ಯು

‌‌ಉಡುಪಿ: ಪ್ರಗತಿನಗರದ ಕೇಂದ್ರ ವಿದ್ಯಾಲಯಕ್ಕೆ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಟಿ.ಟಿ ವಾಹನದ ಚಾಲಕ ಹೃದಯಾಘಾತದಿಂದ ಮೃತಪಟ್ಟ ಘಟನೆ ಉಡುಪಿ ಮಾರುಥಿ ವೀಥಿಕಾದಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ. ಮೃತಚಾಲಕನನ್ನು ಕಾರ್ಕಳ ನೀರೆ ಬೈಲೂರಿನ ಮೊಯ್ದಿನ್ ಬಾವ (65ವ) ಎಂದು ಗುರುತಿಸಲಾಗಿದೆ.‌ ಟಿಟಿ ವಾಹನದಲ್ಲಿ ವಿದ್ಯಾರ್ಥಿಗಳನ್ನು ಶಾಲೆಗೆ ಕರೆದೊಯ್ಯುತ್ತಿದ್ದ ಮೊಯ್ದಿನ್ ಅವರಿಗೆ ಏಕಾಏಕಿಯಾಗಿ ಎದೆ ನೋವು ಕಾಣಿಸಿಕೊಂಡಿದೆ. ಮಾರುಥಿ ವೀಥಿಕಾದಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಮಾಜಸೇವಕ ನಿತ್ಯಾನಂದ‌ ಒಳಕಾಡು ಅವರನ್ನು ಕಂಡು ವಾಹನ ನಿಲ್ಲಿಸಿ ಎದೆ‌ನೋವಿನ ವಿಚಾರವನ್ನು ಒಳಕಾಡುವರಲ್ಲಿ ಹೇಳಿಕೊಂಡಿದ್ದಾನೆ. ತಕ್ಷಣ ಒಳಕಾಡುವರು […]

ಆಗಸ್ಟ್ 3 ರಂದು ಪದ್ಮಶ್ರೀ ಶ್ರೀ ಬನ್ನಂಜೆ ಗೋವಿಂದಾಚಾರ್ಯ ನೆನಪಿನ ‘ಬನ್ನಂಜೆ 90 ಉಡುಪಿ ನಮನ’ ಕಾರ್ಯಕ್ರಮ

ಉಡುಪಿ: ವಿದ್ಯಾವಾಚಸ್ಪತಿ ಪದ್ಮಶ್ರೀ ಶ್ರೀ ಬನ್ನಂಜೆ ಗೋವಿಂದಾಚಾರ್ಯ ನೆನಪಿನ ಬನ್ನಂಜೆ 90 ಉಡುಪಿ ನಮನ ಕಾರ್ಯ ಕ್ರಮವು ಇದೇ ಬರುವ ಆಗಸ್ಟ್ ಮೂರರಂದು ಭಾನುವಾರ ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬಹಳ ಅರ್ಥಪೂರ್ಣವಾಗಿ ನಡೆಯಲಿದೆ ಎಂದು ಸಮಿತಿಯ ಪ್ರಧಾನ ಸಂಚಾಲಕರಾದ ರವಿರಾಜ್ ಎಚ್ .ಪಿ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಬನ್ನಂಜೆ ಗೋವಿಂದ ಆಚಾರ್ಯ ಪ್ರತಿಷ್ಠಾನ ರಿಜಿಸ್ಟರ್ ಬೆಂಗಳೂರು ಇದರ ಬೆಳಕಿನ ಅಡಿಯಲ್ಲಿ ಪರ್ಯಾಯ ಶ್ರೀ ಪುತ್ತಿಗೆ […]

ಡಾ. ಎಂ.ಮೋಹನ ಆಳ್ವ ಅವರಿಗೆ ಸುವರ್ಣ ಸಂಭ್ರಮ ಗೌರವ ಪ್ರಶಸ್ತಿ.

ಮಂಗಳೂರು: ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಮಹೋತ್ಸವದ ಅಂಗವಾಗಿ ನೀಡಲಾಗುತ್ತಿರುವ ಸುವರ್ಣ ಸಂಭ್ರಮ ಗೌರವ ಪ್ರಶಸ್ತಿಗೆ ಮೂಡುಬಿದಿರೆಯ ಆಳ್ವಾಸ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಆಯ್ಕೆಯಾಗಿದ್ದಾರೆ. ಶಿಕ್ಷಣ, ಕಲೆ, ಸಾಂಸ್ಕೃತಿಕ, ಆರೋಗ್ಯ ಕ್ಷೇತ್ರದಲ್ಲಿ ನಾಡಿಗೆ ನೀಡಿದ ಅತ್ಯಪೂರ್ವ ಕೊಡುಗೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಆ.6ರಂದು ನಗರದ ಕುದ್ಮುಲ್ ರಂಗ ರಾವ್ ಪುರಭವನದಲ್ಲಿ ನಡೆಯುವ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಸಂಭ್ರಮ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಉಪ ಮುಖ್ಯಮಂತ್ರಿ […]