ರಿಜಿಸ್ಟರ್ಡ್ ಪೋಸ್ಟ್ ಸೇವೆಗೆ ಬೈ ಬೈ ಹೇಳಿದ ಅಂಚೆ ಇಲಾಖೆ: ಸ್ಪೀಡ್ ಪೋಸ್ಟ್ ಜೊತೆ ವಿಲೀನ, ನಿರೀಕ್ಷಿತ ಸೇವೆ ಕೊಟ್ಟಿತೇ ಸ್ಪೀಡ್ ಪೋಸ್ಟ್?

ನವದೆಹಲಿ: ವಿಶ್ವದಲ್ಲಿಯೇ ನಂಬುಗೆಯ ಅಂಚೆ ಸೇವೆಯನ್ನು ನೀಡುತ್ತ ಬಂದಿರುವ ಭಾರತೀಯ ಅಂಚೆ ಇಲಾಖೆಯು ರಿಜಿಸ್ಟರ್ಡ್ ಪೋಸ್ಟ್ ಸೇವೆಯನ್ನು ನಿಲ್ಲಿಸುವ ನಿರ್ಧಾರ ತೆಗೆದುಕೊಂಡಿದ್ದು ಇನ್ಮುಂದೆ ರಿಜಿಸ್ಟರ್ಡ್ ಪೋಸ್ಟ್ ಸೇವೆ ಸ್ಪೀಡ್ ಪೋಸ್ಟ್ ಸೇವೆ ಜೊತೆಗೆ ವಿಲೀನಗೊಳ್ಳಲಿದೆ. ಸೆಪ್ಟೆಂಬರ್ 1 ಕ್ಕೆ ರಿಜಿಸ್ಟರ್ಡ್ ಪೋಸ್ಟ್ಗೆ ಅಂತಿಮ ವಿದಾಯ ಹೇಳಲಾಗುತ್ತಿದೆ. ಹಾಗಾಗಿ ರಿಜಿಸ್ಟರ್ಡ್ ಪೋಸ್ಟ್ ಮಾಡಿ ಎಂದು ಅಂಚೆಇಲಾಖೆಯಲ್ಲಿ ಗ್ರಾಹಕರು ಹೇಳುವ ದಿನಗಳು ಇನ್ನಿಲ್ಲ. ಈ ಮೂಲಕ ರಿಜಿಸ್ಟರ್ಡ್ ಪೋಸ್ಟ್ ನ ಕಾಲ ಮುಕ್ತಾಯಗೊಂಡಿದೆ. ಕೊರಿಯರ್ಗಳಿಗಿಂತಲೂ ಪೂರ್ವದಲ್ಲಿ ರಿಜಿಸ್ಟರ್ಡ್ ಪೋಸ್ಟ್ ಬಳಕೆ […]
40 ವರ್ಷದ ಮನೆ ಮಾಲಿಕನಿಗೆ ತನ್ನ ಅಪ್ರಾಪ್ತ ಮಗಳನ್ನೇ ಮದ್ವೆ ಮಾಡಿಸಿಕೊಟ್ಟ ಮಹಾತಾಯಿ!

ಹೈದರಾಬಾದ್: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣವೊಂದು ದೇಶವನ್ನೇ ಬೆಚ್ಚಿ ಬೀಳಿಸಿದೆ. 40 ವರ್ಷದ ವ್ಯಕ್ತಿಯೋರ್ವ ತನಗಿಂತ 27 ವರ್ಷ ಪ್ರಾಯ ಸಣ್ಣವಳಾದ ಬಾಲಕಿಯ ಜೊತೆ ಮೇ.28 ಹಸೆಮಣೆ ಏರಿದ್ದಾನೆ. ಬಾಲಕಿಯ ಜೊತೆ ವಿವಾಹವಾದ ವ್ಯಕ್ತಿಯನ್ನು ಕಂಡಿವಾಡ ನಿವಾಸಿ ಶ್ರೀನಿವಾಸ ಗೌಡ್ ಎಂದು ಗುರುತಿಸಲಾಗಿದೆ. ಈತನಿಗೆ ಈಗಾಗಲೇ ಮದುವೆಯೂ ಆಗಿತ್ತು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆ ವಿವಾಹಿತ ವ್ಯಕ್ತಿ, ಆತನ ಮೊದಲ ಪತ್ನಿ ಹಾಗೂ ಈ ಮದುವೆಯನ್ನು ನಡೆಸಿಕೊಟ್ಟ ಪುರೋಹಿತರು ಹಾಗೂ ಈ ಮದುವೆಯನ್ನು […]
ಭಾರತದ ಮೇಲೆ ಟ್ರಂಪ್ ಶೇ.25 ಸುಂಕ; ವಿವಿಧ ದೇಶಗಳಿಗೆ ವಿಧಿಸಿದ ಸುಂಕಗಳ ಪಟ್ಟಿ ಹೀಗಿದೆ.!

ಸುಮಾರು 70ಕ್ಕೂ ಹೆಚ್ಚು ದೇಶಗಳ ಮೇಲೆ ಶೇ.10 ರಿಂದ ಶೇ.41 ರವರೆಗಿನ ಪಾರಸ್ಪರಿಕ ತೆರಿಗೆ (ರೆಸಿಪ್ರೋಕಲ್ ಟ್ಯಾಕ್ಸ್) ಗಳನ್ನು ವಿಧಿಸುವ ಹೊಸ ಕಾರ್ಯಕಾರಿ ಆದೇಶಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ (ಜುಲೈ 31) ಸಹಿ ಹಾಕಿದರು. ಇದರಲ್ಲಿ ಭಾರತೀಯ ಆಮದುಗಳು 25% ಸುಂಕವನ್ನು ಎದುರಿಸಬೇಕಾಗುತ್ತದೆ. ಅಕ್ರಮ ಮಾದಕವಸ್ತು ಬಿಕ್ಕಟ್ಟಿನ ಮೇಲೆ ಕ್ರಮ ಕೈಗೊಳ್ಳಲು ಕೆನಡಾ ಸಂಪೂರ್ಣ ವಿಫಲವಾಗಿದೆ ಮತ್ತು ಯುನೈಟೆಡ್ ಸ್ಟೇಟ್ಸ್ ವಿರುದ್ಧ ಪ್ರತೀಕಾರವಾಗಿ ಅಲ್ಲಿನ ಆಡಳಿತವು ನಡೆದುಕೊಳ್ಳುತ್ತಿರುವುದರಿಂದ ಅದಕ್ಕೆ ಪ್ರತಿಯಾಗಿ ಕೆನಡಾದ ಮೇಲಿನ ಸುಂಕವನ್ನು […]
ಅತ್ಯಾಚಾರ ಪ್ರಕರಣ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ದೋಷಿ ಎಂದ ನ್ಯಾಯಾಲಯ; ನಾಳೆ ಶಿಕ್ಷೆ ಪ್ರಕಟ.!

ಅಶ್ಲೀಲ ವಿಡಿಯೋ ಹಾಗೂ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ದಾಖಲಾಗಿರುವ ನಾಲ್ಕು ಕೇಸ್ಗಳ ಪೈಕಿ, ಮೈಸೂರಿನ ಕೆಆರ್ ನಗರದ ಮಹಿಳೆಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಕೋರ್ಟ್ ಶುಕ್ರವಾರ ಹೇಳಿದೆ. ಪ್ರಕರಣದ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಜಡ್ಜ್ ಸಂತೋಷ್ ಗಜಾನನ ಭಟ್ ಇದ್ದ ಪೀಠ ಜುಲೈ 29 ರಂದು ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದರು. ಇದೀಗ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿ ಎಂದು ಹೇಳಿದ್ದು, ನಾಳೆ(ಆ.02) […]
ಉಡುಪಿ: ಹೆದ್ದಾರಿಯ ಹೊಂಡ ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ಟ್ರಾಫಿಕ್ ಪೊಲೀಸರು; ಸಾರ್ವಜನಿಕರಿಂದ ಭಾರೀ ಮೆಚ್ಚುಗೆ

ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರ ಅಂಬಲಪಾಡಿ ಜಂಕ್ಷನ್‌ನಲ್ಲಿ ಅಂಡರ್ ಪಾಸ್ ಕಾಮಗಾರಿ ಪ್ರಗತಿಯಲ್ಲಿದ್ದು, ಇದರಿಂದ ವಾಹನಗಳು ಸರ್ವಿಸ್ ರಸ್ತೆ ಸಂಚರಿಸುತ್ತಿವೆ. ಆದರೆ ನಿರಂತರ ಸುರಿದ ಧಾರಾಕಾರ ಮಳೆಗೆ ಸರ್ವಿಸ್ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು, ಇದರಿಂದ ವಾಹನ ಸಂಚಾರಕ್ಕೆ ಸಾಕಷ್ಟು ಅಡಚಣೆಯಾಗುತ್ತಿದೆ. ಪ್ರತಿದಿನ ಈ ರಸ್ತೆಯ ಮೂಲಕ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ವಾಹನ ದಟ್ಟನೆ ಹೆಚ್ಚಾಗಿರುವುದರಿಂದ ನಿತ್ಯ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಟ್ರಾಫಿಕ್ ಜಾಮ್ ನಿಂದ ವಾಹನ ಸವಾರರು ಬಹಳಷ್ಟು ಸಮಸ್ಯೆ ಎದುರಿಸುವಂತಾಗಿದೆ. ಹೊಂಡ ಮುಚ್ಚುವಂತೆ […]