ಮಂಗಳೂರು: ನಾಪತ್ತೆಯಾಗಿದ್ದ ಯುವಕನ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆ.

ಮಂಗಳೂರು: ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಬಂಟ್ವಾಳ ತಾಲೂಕಿನ ಕಡೇಶಿವಾಲಯ ನಿವಾಸಿ ಹೇಮಂತ್ ಆಚಾರ್ಯ (21) ಮೃತದೇಹ ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಬಜಾಲ್ ಮುಗೇರು ಎಂಬಲ್ಲಿ ನೇತ್ರಾವತಿ ನದಿ ಮಧ್ಯ ಭಾಗದಲ್ಲಿ ತೇಲಾಡುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತರು ತಂದೆ ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ. ಜುಲೈ 27ರಂದು ಹೇಮಂತ್ ಮನೆಯಿಂದ ನಾಪತ್ತೆಯಾಗಿದ್ದ, ಈ ಬಗ್ಗೆ ಜುಲೈ 28 ರಂದು ಸೋಮವಾರ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜುಲೈ 29 ರಂದು ಮಂಗಳವಾರ ಮಧ್ಯಾಹ್ನದ ವೇಳೆ […]
ಶೀಘ್ರದಲ್ಲಿ ಡೀಮ್ಡ್ ಫಾರೆಸ್ಟ್ ಸಮಸ್ಯೆ ಇತ್ಯರ್ಥಗೊಳಿಸಿ: ಸಚಿವ ಕೃಷ್ಣ ಬೈರೇಗೌಡ

ಭೂ ಸುರಕ್ಷ ಆನ್‌ಲೈನ್ ಪೋರ್ಟಲ್‌ನಲ್ಲಿ ಲಭ್ಯ:ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಕಂದಾಯ ಇಲಾಖೆಯ ವಿವಿಧ ಯೋಜನೆಗಳ ಕುರಿತು ಅಧಿಕಾರಿಗಳೊಂದಿಗೆ ಪ್ರಗತಿಪರಿಶೀಲನೆ ನಡೆಸಿದ ಅವರು, ಸರಕಾರ ಭೂ ದಾಖಲೆಗಳನ್ನು ಗಣಕೀಕರಣಗೊಳಿಸುತ್ತಿದೆ. ಮೊಬೈಲ್, ಕಂಪ್ಯೂಟರ್ ಮೂಲಕ ಮನೆಯಲ್ಲೇ ಕುಳಿತು ಭೂ ದಾಖಲೆಯನ್ನು ಭೂ ಸುರಕ್ಷ ಆನ್‌ಲೈನ್ ಪೋರ್ಟಲ್‌ನಲ್ಲಿ ಪಡೆಯಬಹುದು. ನಾಡ ಕಚೇರಿಯಲ್ಲೂ ಪಡೆಯಬಹುದು. ಒಂದಿಷ್ಟು ಮುತುವರ್ಜಿ ವಹಿಸಿ ಕಾರ್ಯ ನಿರ್ವಹಿಸಬೇಕು. ಡಿಜಿಟಲ್ ಮೂಲಕ ದೃಢೀಕೃತ ದಾಖಲೆ ನೀಡಬೇಕು. ಇದರಲ್ಲಿ ಕಣ್ಣಾಮುಚ್ಚಾಲೆ ಆಟ ಆಡಬಾರದು ಮತ್ತು ಜನರನ್ನು […]
ಕಿನ್ನಿಗೋಳಿಯಲ್ಲಿರುವ ಆಹಾರ ಉತ್ಪಾದನಾ ಕಂಪನಿಯಲ್ಲಿ ‘DISPATCH HEAD’ ಹುದ್ದೆಗೆ ನೇಮಕಾತಿ

ಮಂಗಳೂರು: ಕಿನ್ನಿಗೋಳಿ ಬಳಿ ಇರುವ ಪ್ರಖ್ಯಾತ ಆಹಾರ ಉತ್ಪಾದನಾ ಕಂಪನಿಯಲ್ಲಿ ‘DISPATCH HEAD’ ಹುದ್ದೆಗೆ ಪದವಿ ಮತ್ತು ಸ್ನಾತಕೋತ್ತರ ವ್ಯಾಸಂಗ ಮಾಡಿರುವ 25-45 ವರ್ಷ ವಯೋಮಿತಿಯ ಅನುಭವವುಳ್ಳ ಪುರುಷರು ಬೇಕಾಗಿದ್ದಾರೆ. PF, ESI ವಸತಿ ಊಟದೊಂದಿಗೆ ಉತ್ತಮ ವೇತನ ನೀಡಲಾಗುವುದು. ಆಸಕ್ತರು ಸಂಪರ್ಕಿಸಿ: 9035032064
ಬ್ರಹ್ಮಾವರ: ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಓರಿಯೆಂಟೆಷನ್ ಕಾರ್ಯಕ್ರಮ

ಬ್ರಹ್ಮಾವರ: ವಿದ್ಯಾಲಕ್ಷ್ಮೀ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಪ್ರಥಮ ವರುಷದ ವಿದ್ಯಾರ್ಥಿಗಳಿಗೆ ಓರಿಯೆಂಟೆಷನ್ ಕಾರ್ಯಕ್ರಮವನ್ನು ಜುಲೈ 30 ರಂದು ಹಮ್ಮಿಕೊಂಡಿದ್ದರು. ಸಂಸ್ಥೆಯ ಸಂಸ್ಥಾಪಕ ರಾದ ಸುಬ್ರಹ್ಮಣ್ಯರವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಉತ್ತಮ ವಿದ್ಯಾರ್ಥಿ ಆಗುವವರಲ್ಲಿ ಇರಬೇಕಾದ ಶಿಸ್ತು, ಸಂಯಮ, ಆತ್ಮವಿಶ್ವಾಸದ ಬಗ್ಗೆ ಮಾಹಿತಿ ನೀಡಿದರು ಹಾಗೂ ವಿದ್ಯೆ ಪಡೆಯುವ ವಿದ್ಯಾರ್ಥಿಯಲ್ಲಿ, ಗುರುವಿನ ಬಗ್ಗೆ ಗೌರವ ಇದ್ದಾಗ ಮಾತ್ರ. ವಿದ್ಯೆ ಒಲಿಯುತ್ತದೆ ಎಂದರು. ನೆರೆದಿದ್ದ ಪೋಷಕರಿಗೆ ಅವರ ಜವಾಬ್ದಾರಿಗಳ ಬಗ್ಗೆ, ಹಾಗೂ ಕಾಲೇಜಿನಲ್ಲಿರುವ ಎಲ್ಲಾ ಸೌಲಭ್ಯಗಳ ಮಾಹಿತಿ ನೀಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ […]
ಹೆದ್ದಾರಿಯಲ್ಲಿ ಯಾವುದೇ ಮುನ್ಸೂಚನೆ ಕೊಡದೇ ವಾಹನ ದಿಢೀರ್ ನಿಲ್ಲಿಸುವುದು ಕಾರು ಚಾಲಕನ ನಿರ್ಲಕ್ಷತನ: ಸುಪ್ರೀಂ ಕೋರ್ಟ್

ನವದೆಹಲಿ: ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಆದೇಶ ನೀಡಿರುವ ಸುಪ್ರೀಂ ಕೋರ್ಟ್, ‘ಹೆದ್ದಾರಿಯಲ್ಲಿ ಯಾವುದೇ ಮುನ್ಸೂಚನೆ ಕೊಡದೇ ದಿಢೀರ್ ಬ್ರೇಕ್ ಹಾಕಿದರೆ ಅದು ಕಾರು ಚಾಲಕನ ನಿರ್ಲಕ್ಷ್ಯತನ’ ಎಂದು ಹೇಳಿದೆ.ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಅರವಿಂದ ಕುಮಾರ್ ಅವರು ಇದ್ದ ಪೀಠವು ತಮಿಳುನಾಡಿನ ಕೊಯಮತ್ತೂರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಆದೇಶ ನೀಡಿದೆ. ‘ಹೆದ್ದಾರಿಗಳಲ್ಲಿ ಅತಿ ವೇಗ ನಿರೀಕ್ಷಿತ. ಚಾಲಕ ವಾಹನವನ್ನು ನಿಲ್ಲಿಸುವಾಗ ಹಿಂಬದಿಯ ವಾಹನಗಳಿಗೆ ಮುನ್ಸೂಚನೆ ನೀಡಬೇಕಾದುದು ಅವನ ಹೊಣೆಗಾರಿಕೆ ಆಗಿರುತ್ತದೆ’ ಎಂದು ಹೇಳಿದೆ. […]