ಧರ್ಮಸ್ಥಳ ಪ್ರಕರಣ: ಮಂಗಳೂರಿನಲ್ಲಿ ಎಸ್‌ಐಟಿ ಕಚೇರಿ ಕಾರ್ಯಾರಂಭ: ಮಾಹಿತಿ ನೀಡುವವರಿಗೆ ಸಹಾಯವಾಣಿ

ಮಂಗಳೂರು: ರಾಷ್ಟ್ರಾದ್ಯಂತ ಸುದ್ದಿಯಲ್ಲಿರುವ ಧರ್ಮಸ್ಥಳದಲ್ಲಿ ಹೆಣ ಹೂಳಲಾಗಿದೆ ಎನ್ನಲಾಗಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎಸ್ ಐಟಿ ತಂಡ  ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಅಪರಾಧ ಸಂಖ್ಯೆ 39/2025ಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರದಲ್ಲಿ ಕಚೇರಿ ಆರಂಭಿಸಿದೆ. ಈ ಪ್ರಕರಣದ ಬಗ್ಗೆ ಎಸ್‌ಐಟಿಯನ್ನು ಸಂಪರ್ಕಿಸಲು ಅಥವಾ ಮಾಹಿತಿ ನೀಡಲು ಸಹಾಯವಾಣಿಯನ್ನೂ ಆರಂಭಿಸಲಾಗಿದೆ. ಎಸ್‌ಐಟಿ ಕಚೇರಿ ವಿಳಾಸ: ನಿರೀಕ್ಷಣಾ ಮಂದಿರ, ಮಲ್ಲಿಕಟ್ಟೆ, ಕದ್ರಿ, ಮಂಗಳೂರು ನಗರ, ದಕ್ಷಿಣ ಕನ್ನಡ ಜಿಲ್ಲೆ (ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ). ದೂರವಾಣಿ ಸಂಖ್ಯೆ: 0824–2005301 […]

ಧರ್ಮಸ್ಥಳದ ಬುರುಡೆ ಕೇಸ್ ಗೆ ಸಿಕ್ಕಿತು ಮಹತ್ವದ ತಿರುವು: ಸ್ಥಳದಲ್ಲಿ ಸಿಕ್ತು ಕೆಂಪು ರವಿಕೆ, ಪ್ಯಾನ್ ಕಾರ್ಡ್

ಧರ್ಮಸ್ಥಳ: ಇಲ್ಲಿ ಎಸ್ ಐ ಟಿ ನಡೆಸುತ್ತಿರುವ ಉತ್ಖನನದ ವೇಳೆ ಅಗೆಯಲಾಗಿದ್ದ ಗುಂಡಿಯಲ್ಲಿ ಮಹತ್ವದ ವಸ್ತು ಸಿಕ್ಕಿದೆ. ಎಸ್ಐಟಿ ಅಧಿಕಾರಿಗಳಿಗೆ ಮಣ್ಣು ಅಗೆಯುವಾಗ ಕೆಂಪು ರವಿಕೆ, ಒಂದು ಪ್ಯಾನ್ ಕಾರ್ಡ್, ಡೆಬಿಟ್ ಕಾರ್ಡ್ ಸಿಕ್ಕಿದೆ. ಈ ವಸ್ತುಗಳು ತನಿಖೆಯ ಕುತೂಹಲಕ್ಕೆ ಕಾರಣವಾಗಿದ್ದು ಇದೀಗ ಎಸ್ ಐಟಿ ತಂಡ ಹೆಚ್ಚಿನ ತನಿಖೆಗಾಗಿ ವಶಕ್ಕೆ ಪಡೆದುಕೊಂಡಿದೆ. ಧರ್ಮಸ್ಥಳದ ನೇತ್ರಾವತಿ ತಟದಲ್ಲಿ 1, 2,3 ನೇ ಪಾಯಿಂಟ್‌ನಲ್ಲಿ ಮಣ್ಣು ಅಗೆಯಲಾಗಿತ್ತು. 1, 2,3ನೇ ಪಾಯಿಂಟ್‌ನಲ್ಲಿ ಏನೂ ಸಿಕ್ಕಿರಲಿಲ್ಲ. ಆದ್ರೆ, ಇದೀಗ ಮಣ್ಣು […]

ಐಎಎಸ್, ಐಪಿಎಸ್, ಐಎಫ್ಎಸ್ ಸೇರಿ ಒಟ್ಟು 11 ಅಧಿಕಾರಿಗಳ ವರ್ಗಾವಣೆ; ರಾಜ್ಯ ಸರ್ಕಾರ ಮಹತ್ವದ ಆದೇಶ

ಬೆಂಗಳೂರು: ಆರು ಮಂದಿ ಐಎಎಸ್‌ ಅಧಿಕಾರಿಗಳನ್ನು ಅವರ ಹೆಸರಿನ ಮುಂದೆ ಸೂಚಿಸಿದ ಹುದ್ದೆ ಮತ್ತು ಸ್ಥಳಗಳಿಗೆ ವರ್ಗಾವಣೆ ಮಾಡಿ ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಜತೆಗೆ 4 ಐಎಫ್‌ಎಸ್‌ ಅಧಿಕಾರಿಗಳು ಹಾಗೂ 1 ಐಪಿಎಸ್‌ ಅಧಿಕಾರಿಗಳ ವರ್ಗಾವಣೆಯಾಗಿದೆ. ವರ್ಗಾವಣೆಯಾದ 6 ಐಎಎಸ್‌ ಅಧಿಕಾರಿಗಳು- ನಿಯೋಜನೆಗೊಂಡ ಹುದ್ದೆ: 4 ಐಎಫ್‌ಎಸ್ ಅಧಿಕಾರಿಗಳ ವರ್ಗಾವಣೆ:

ಕೋಲಾರ ಮಹಿಳೆಯ ದೇಹದಲ್ಲಿ ವಿಶ್ವದಲ್ಲೇ ಎಲ್ಲೂ ಕಾಣಸಿಗದ ಅತಿ ಅಪರೂಪದ ರಕ್ತದ ಗುಂಪು ಪತ್ತೆ; CRIB ಗುಂಪು ಪತ್ತೆಯಾಗಿದ್ದು ಹೇಗೆ?

ಬೆಂಗಳೂರು: ವಿಶ್ವದಲ್ಲೇ ಎಲ್ಲಿಯೂ ಗುರುತಿಸಲಾಗದ ಅತಿ ಅಪರೂಪದ ರಕ್ತದ ಗುಂಪೊಂದು ಕೋಲಾರ ಮೂಲದ ಮಹಿಳೆಯೊಬ್ಬರಲ್ಲಿ ಪತ್ತೆಯಾಗಿದೆ. ಕೋಲಾರದ ಆಸ್ಪತ್ರೆಯಲ್ಲಿ 38 ವರ್ಷದ ಮಹಿಳೆಯೊಬ್ಬರು ಹೃದಯ ಶಸ್ತ್ರಚಿಕಿತ್ಸೆಗೆ ದಾಖಲಾಗಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆಯಲ್ಲಿ ಅತ್ಯಂತ ಅಪರೂಪದ O Rh+ ರಕ್ತದ ಗುಂಪು ಪತ್ತೆಯಾಗಿದೆ. ಶಸ್ತ್ರಚಿಕಿತ್ಸೆಗಾಗ ವೈದ್ಯರು ಆಕೆಯ ರಕ್ತಕ್ಕೆ ಹೊಂದಿಕೆಯಾಗುವ ರಕ್ತಕ್ಕಾಗಿ ಹುಡುಕಾಟ ಆರಂಭಿಸಿದ್ದರು. O-ಪಾಸಿಟಿವ್ ರಕ್ತ ಸೇರಿದಂತೆ ಯಾವುದೇ ರಕ್ತದ ಗುಂಪಿಗೂ ಈಕೆಯ ರಕ್ತ ಹೊಂದಿಕೆಯಾಗಿಲ್ಲ. ಬಳಿಕ ಆಸ್ಪತ್ರೆಯು ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ರೋಟರಿ […]

ಉಡುಪಿ: ಆ.3ರಂದು ಬನ್ನಂಜೆ 90 ಉಡುಪಿ ನಮನ ಕಾರ್ಯಕ್ರಮ

ಉಡುಪಿ: ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ ನೆನಪಿನ “ಬನ್ನಂಜೆ 90 ಉಡುಪಿ ನಮನ ಕಾರ್ಯಕ್ರಮ” ಆ.3ರಂದು ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಉಡುಪಿಯ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ ಎಂದು ಸಮಿತಿಯ ಪ್ರಧಾನ ಸಂಚಾಲಕರಾದ ರವಿರಾಜ್ ಎಚ್.ಪಿ. ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬನ್ನಂಜೆ ಗೋವಿಂದ ಆಚಾರ್ಯ ಪ್ರತಿಷ್ಠಾನ ರಿಜಿಸ್ಟರ್ ಬೆಂಗಳೂರು, ಪರ್ಯಾಯ ಪುತ್ತಿಗೆ ಮಠ ಹಾಗೂ ಎಂಜಿಎಂ ಕಾಲೇಜಿನ ಸಹಯೋಗದಲ್ಲಿ ಈ ಒಂದು ದಿನದ ಕಾರ್ಯಕ್ರಮ ನಡೆಯಲಿದೆ. […]