ಬ್ರಹ್ಮಾವರ: ಜಾತಿನಿಂದನೆ ಆರೋಪ; ಚೇರ್ಕಾಡಿ ಗ್ರಾಮ ಪಂಚಾಯತ್ ಪಿಡಿಒ ವಿರುದ್ಧ ಪ್ರಕರಣ ದಾಖಲು.

ಬ್ರಹ್ಮಾವರ: ಅರ್ಜಿಯ ಬಗ್ಗೆ ವಿಚಾರಿಸಲು ಹೋದ ದಲಿತ ಮಹಿಳೆಗೆ ಜಾತಿ ನಿಂದನೆಗೈದ ಆರೋಪದಲ್ಲಿ ಚೇರ್ಕಾಡಿ ಗ್ರಾಪಂ ಪಿಡಿಓ ಸುಭಾಸ್ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾರು 2 ವರ್ಷಗಳ ಹಿಂದೆ ಅವೈಜ್ಞಾನಿಕವಾಗಿ ನಿರ್ಮಿಸಿದ ಕಾಂಕ್ರೀಟ್ ರಸ್ತೆಯ ಪರಿಣಾಮ ಮಳೆಗಾಲ ದಲ್ಲಿ ಮೇಲ್ಭಾಗದ ಚರಂಡಿ ಹಾಗೂ ರಸ್ತೆ ನೀರು ಚೇರ್ಕಾಡಿಯ ವನಿತಾ ಎಂಬವರ ಹೈನುಗಾರಿಕ ಘಟಕಕ್ಕೆ ನುಗ್ಗಿ ಅಪಾರ ನಷ್ಟ ಉಂಟಾಗಿತ್ತು. ಈ ಬಗ್ಗೆ ವನಿತಾ ಚೇರ್ಕಾಡಿ ಗ್ರಾಪಂ ಪಿಡಿಓ ಸುಭಾಸ್ ಅವರಿಗೆ ಅರ್ಜಿ ಸಲ್ಲಿಸಿದ್ದರು. […]

ಶಂಕರಪುರ ಸೈಂಟ್ ಜಾನ್ಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ರೋವರ್ ರೇಂಜರ್ ಘಟಕ ಪ್ರಾರಂಭ.

ಉಡುಪಿ: ಶಂಕರಪುರ ಸೈಂಟ್ ಜಾನ್ಸ್ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ಉಡುಪಿ, ಸ್ಥಳೀಯ ಸಂಸ್ಥೆ ಕಾಪು ನೇತೃತ್ವದಲ್ಲಿ ರೋವರ್ ರೇಂಜರ್ ಘಟಕವನ್ನು ಪ್ರಾರಂಭಿಸಲಾಯಿತು. ಅತಿಥಿಯಾಗಿ ಆಗಮಿಸಿದ ಜಿಲ್ಲಾ ಸ್ಕೌಟ್ ಆಯುಕ್ತ ಜನಾರ್ದನ್ ಕೊಡವೂರು ಮಾತನಾಡಿ ಜಿಲ್ಲೆಯಲ್ಲಿ ಸುಮಾರು 45 ಸಾವಿರ ವಿದ್ಯಾರ್ಥಿಗಳು ಈ ಸ್ಕೌಟಿಂಗ್ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದು, ರಾಜ್ಯ ಮುಖ್ಯ ಆಯುಕ್ತ ಪಿ ಜಿ ಆರ್ ಸಿಂಧ್ಯಾರವರ ಆದೇಶದಂತೆ 10 ಸಾವಿರ ಹೊಸ ವಿದ್ಯಾರ್ಥಿಗಳನ್ನು ಸೇರಿಸುವ ಮಹತ್ತರ […]

ಪ್ರಾಧ್ಯಾಪಕಿ ಡಾ. ಚೇತನಾ ಎಂ. ಅವರಿಗೆ “ವಿದ್ಯಾ ವರ್ಧಿನಿ” ಪ್ರಶಸ್ತಿ.

ದಾವಣಗೆರೆ: ಶಿಕ್ಷಣ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿರುವ, ಪ್ರಸ್ತುತ ಕೋಟೇಶ್ವರದ ಶ್ರೀ ಕಾಳವರ ವರದರಾಜ ಎಂ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಿರ್ವಹಣಾ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಚೇತನಾ ಎಂ. ಅವರಿಗೆ ಜುಲೈ 20 ರಂದು ಪ್ರತಿಷ್ಠಿತ “ವಿದ್ಯಾವರ್ಧಿನಿ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ದಾವಣಗೆರೆ ಜಿಲ್ಲಾ ಪಂಚಮಸಾಲಿ ಸಮುದಾಯ ಮತ್ತು ಹರ ಸೇವಾ ಸಂಸ್ಥೆ (ರಿ.), ದಾವಣಗೆರೆಯ ಪಂಚಮಸಾಲಿ ಸಮಾಜದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಯವರು ಈ ಪ್ರಶಸ್ತಿಯನ್ನು ಪ್ರದಾನ […]

ಉಡುಪಿ ಜಿಲ್ಲೆಯಾದ್ಯಂತ ಶ್ರದ್ಧಾಭಕ್ತಿಯಿಂದ ನಾಗರಪಂಚಮಿ ಆಚರಣೆ

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಇಂದು ನಾಗರಪಂಚಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.ತುಳುನಾಡಿನ ದ್ರಾವಿಡ ಜನಾಂಗದ ಬಹುತೇಕ ವರ್ಗಗಳು ಆರಾಧಿಸಿಕೊಂಡು ಬಂದಿರುವ ನಾಗರ ಪಂಚಮಿ ಶ್ರದ್ಧೆ , ಭಕ್ತಿಯಿಂದ ಸಂಪನ್ನಗೊಳ್ಳುತ್ತಿದೆ.ಕರಾವಳಿಯ ನಾಗಸ್ಥಾನ, ಮೂಲನಾಗಸ್ಥಾನ, ದೇಗುಲಗಳಿಗೆ ತೆರಳಿದ ಭಕ್ತರು ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವರಿಗೆ ಹಿಂಗಾರ, ಅರಶಿನ, ಕೇದಗೆ, ಕೆಂದಾಳಿ ಸೀಯಾಳ ಅಭಿಷೇಕ ಅರ್ಪಿಸಿದರು. ಕೆಲವು ಕಡೆ ಮಳೆ ಇದ್ದರೂ ಭಕ್ತರು ಮಳೆಯಲ್ಲೇ ನಿಂತು ದೇವರಿಗೆ ಸೇವೆ ಸಲ್ಲಿಸಿದರು. ಹೆಚ್ಚಿನ ಮೂಲನಾಗನ ಸನ್ನಿಧಿಯಲ್ಲಿ ಬೆಳಗ್ಗೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು, ನಾಗದೇವರಿಗೆ […]

ಉಡುಪಿಯಲ್ಲಿ ಸಂಸ್ಕೃತಿ ಸಂಭ್ರಮ ಸಮಾರೋಪ

ಉಡುಪಿ: ಒಬ್ಬ ವ್ಯಕ್ತಿಗೆ ಬಂಗಾರ, ವಜ್ರ ಇವೆಲ್ಲಾ ಎಷ್ಟು ಭೂಷಣವೋ ಹಾಗೆಯೇ ನಮ್ಮ ಸಂಸ್ಕೃತಿ, ಸಂಸ್ಕಾರ, ಪದ್ಧತಿಗಳು ಕೂಡಾ ಭೂಷಣವಾಗಿರುತ್ತದೆ. ಕರಾವಳಿ ಪ್ರದೇಶ ಅತ್ಯುನ್ನತ ಸಂಸ್ಕೃತಿ, ಸಂಸ್ಕಾರಕ್ಕೆ ಹೆಸರುವಾಸಿಯಾಗಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು. ಅವರು ಶನಿವಾರ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಯಕ್ಷಗಾನ ಅಕಾಡೆಮಿ, ಜಾನಪದ ಅಕಾಡೆಮಿ, ನಾಟಕ ಅಕಾಡೆಮಿ ಹಾಗೂ ರಂಗಭೂಮಿ ಉಡುಪಿ ಇವರ ಸಹಯೋಗದಲ್ಲಿ ಗೊಂಬೆಯಾಟ, ಜಾನಪದ ಕಲೆ, ಸಂಗೀತ, […]