ಬೆಳ್ತಂಗಡಿ: ವಿಷ ಸೇವಿಸಿ ವಿವಾಹಿತೆ ಆತ್ಮಹತ್ಯೆ.

ಬೆಳ್ತಂಗಡಿ: ತಾಲೂಕಿನ ಮರೋಡಿ ಗ್ರಾಮದ ಪಚ್ಚಡಿ ನಿವಾಸಿ ವಿವಾಹಿತೆ ವಾಣಿಶ್ರೀ (26) ಎಂಬವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ನಡೆದಿದೆ. ಇವರಿಗೆ ಒಂದು ವರ್ಷ ಮೂರು ತಿಂಗಳ ಹಿಂದೆ ಮದುವೆಯಾಗಿದ್ದು, ಮನೆಯಲ್ಲಿ ಯಾರು ಇಲ್ಲದ ವೇಳೆ ವಿಷ ಸೇವಿಸಿದ್ದರು. ಮನೆಯವರು ಬಂದಾಗ ಜೀವನ್ಮರಣ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಡೆಕಾರು ಶ್ರೀ ಲಕ್ಷ್ಮೀ ನಾರಾಯಣ ಮಠದಲ್ಲಿ ನಾಗದೇವರಿಗೆ ಪಂಚಾಮೃತ ಅಭಿಷೇಕ

ಉಡುಪಿ: ಉಡುಪಿಯ ಕಡೆಕಾರು ಶ್ರೀ ಲಕ್ಷ್ಮೀ ನಾರಾಯಣ ಮಠದಲ್ಲಿ ನಾಗದೇವರಿಗೆ ಪಂಚಾಮೃತ ಸಹಿತ ಸೀಯಾಳ ಅಭಿಷೇಕವನ್ನು ಮಾಡಲಾಯಿತು. ನಂತರ ಅರ್ಚನೆ ಸಹಿತ ವಿಶೇಷ ಹೂವಿನ ಅಲಂಕಾರವನ್ನು ಮಾಡಿ ಕಡೆಕಾರು ಮಠದ ವೇದಮೂರ್ತಿ ಶ್ರೀಶ ಆಚಾರ್ಯ ಅವರು ಮಹಾ ಪೂಜೆಯನ್ನು ಮಾಡಿದರು. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

ಅಂಗನವಾಡಿ ಕಾರ್ಯಕರ್ತೆಯರಿಗೆ ಚುನಾವಣೆ ಕೆಲಸಗಳಿಂದ ವಿನಾಯಿತಿ

ಬೆಂಗಳೂರು : ಅಂಗನವಾಡಿ ಕಾರ್ಯಕರ್ತೆಯರಿಗೆ ಚುನಾವಣೆ ಕೆಲಸಗಳಿಂದ ವಿನಾಯಿತಿ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು. ಇದರೊಂದಿಗೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಎಲ್ಲಾ ಸಂಘಟನೆಗಳ ಹಲವು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ. ಮುಂದಿನ ಅಕ್ಟೋಬರ್‌ನಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ (ಗೌರ್ವನ್ಮೆಂಟ್‌ ಮಾಂಟೆಸ್ಸರಿ) ತರಗತಿಗಳು ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್‌ ಅವರೊಂದಿಗೆ ಚರ್ಚೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದರು. ಈ […]

ರಮ್ಯಾ ಗೆ ದರ್ಶನ್ ಅಭಿಮಾನಿಗಳಿಂದ ಅಶ್ಲೀಲ ಕಮೆಂಟ್ ವಿಚಾರ: ರಮ್ಯಾ ಬೆಂಬಲಕ್ಕೆ ನಿಂತ ಶಿವಣ್ಣ

ತನ್ನನ್ನು ಅಶ್ಲೀಲ ಕಮೆಂಟ್ ಗಳ ಮೂಲಕ ನಿಂದಿಸಿರೋ ದರ್ಶನ್ ಅಭಿಮಾನಿಗಳಿಂದ ತನ್ನ ವ್ಯಕ್ತಿತ್ವಕ್ಕೆ ನೋವಾಗಿದೆ ಮಾನಸಿಕವಾಗಿ ಕಿರುಕುಳ ಅನುಭವಿಸುತ್ತಿದ್ದೇನೆ ಎಂದು ರಮ್ಯಾ ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದಾರೆ. ಈ ಕುರಿತು ಇದೀಗ ದೊಡ್ಡ ಮಟ್ಟದ ಚರ್ಚೆ ಟೀಕೆಗಳು ದರ್ಶನ್ ಅಭಿಮಾನಿಗಳ ವಿರುದ್ದವಾಗಿ ಕೇಳಿಬರುತ್ತಿರುವ ಬೆನ್ನಲ್ಲೇ  ನಟ ಶಿವರಾಜ್​ ಕುಮಾರ್ ಕೂಡಾ ರಮ್ಯಾಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ರಮ್ಯಾ- ದರ್ಶನ್ ಫ್ಯಾನ್ಸ್ ಕಮೆಂಟ್ ಜಟಾಪಟಿಯಲ್ಲಿ ರಮ್ಯಾ ಪರ  ಶಿವರಾಜ್ ಕುಮಾರ್ ದಂಪತಿ ಬಹಿರಂಗವಾಗಿ ಬೆಂಬಲ ಸೂಚಿಸಿದ್ದಾರೆ. ರಮ್ಯಾ ವಿರುದ್ದ ಬಳಸಿರುವ […]