ಮಲ್ಪೆ; ದ್ವಿತೀಯ ಪಿಯುಸಿ ವಿದ್ಯಾರ್ಥಿ ನೇಣಿಗೆ ಶರಣು

ಉಡುಪಿ: ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನೇಜಾರು ಸಮೀಪದ ಕೆಳಾರ್ಕಳಬೆಟ್ಟು ಎಂಬಲ್ಲಿ ಸಂಭವಿಸಿದೆ. ಕೆಳಾರ್ಕಳಬೆಟ್ಟು ನಿವಾಸಿ ಜಯಂತಿ ಎಸ್ ಅವರ ಮಗ ಸ್ವಸ್ತಿಕ್ (16) ಮೃತ ವಿದ್ಯಾರ್ಥಿ. ಸ್ವಸ್ತಿಕ್ ಉಡುಪಿಯ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದನು. ಜುಲೈ 27ರಂದು ಜಯಂತಿ ಅವರು ತನ್ನ ಮಗಳ ಮೆಡಿಕಲ್ ಸರ್ಟಿಫಿಕಟ್ ತರಲು ನೇಜಾರಿಗೆ ಹೋಗಿ ವಾಪಾಸ್ಸು ಮನೆಗೆ ಬಂದು ನೋಡಿದಾಗ ಸ್ವಸ್ತಿಕ್ ಮನೆಯ ಹಾಲ್ ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದನು. ಈ ಬಗ್ಗೆ ಮಲ್ಪೆ […]

ಮೂಡುಬಿದಿರೆ:ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ-‘ಪ್ರೇರಣಾ ದಿವಸ್ 2025’

ಮೂಡುಬಿದಿರೆ: ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗದ ವತಿಯಿಂದ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಶನಿವಾರ 2025ನೇ ಸಾಲಿನ ಅಧ್ಯಾಪಕ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ-‘ಪ್ರೇರಣಾ ದಿವಸ್ 2025’ ನಡೆಯಿತು. ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕರ್ನಾಟಕದ ರಾಜ್ಯಪಾಲ ಥಾವರ್‌ಚಾಂದ್ ಗೆಹ್ಲೋಟ್, ಶಿಕ್ಷಣ ಕ್ಷೇತ್ರಕ್ಕೆ ಉತ್ಕೃಷ್ಟ ಸೇವೆಯನ್ನು ನೀಡುತ್ತಾ ದೇಶದ ಏಳಿಗೆಗೆ ಕೊಡುಗೆ ನೀಡುತ್ತಿರುವ ಶಿಕ್ಷಕರೆಲ್ಲರೂ ಸದಾ ಸ್ಮರಣಿಯರು ಹಾಗೂ ಅನುಕರಣನೀಯರು. ಜ್ಞಾನ, ಸಂಸ್ಕಾರ ಹಾಗೂ ನೈತಿಕ ಮೌಲ್ಯವನ್ನು ನೀಡುವವರು […]

ಮಣಿಪಾಲ-ಉಡುಪಿ ಜ್ಞಾನಸುಧಾ : ಕಾರ್ಗಿಲ್ ವಿಜಯ ದಿವಸ ಆಚರಣೆ

ಉಡುಪಿ:ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜು, ನಾಗಬನ ಕ್ಯಾಂಪಸ್ ಹಾಗೂ ಮಣಿಪಾಲ್ ಜ್ಞಾನಸುಧಾ ಪದವಿ ಪೂರ್ವ ಕಾಲೇಜು, ವಿದ್ಯಾನಗರ ಈ ಉಭಯ ಸಂಸ್ಥೆಗಳ ಜಂಟಿಆಶ್ರಯದಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಿಸಲಾಯಿತು.ಮುಖ್ಯ ಅತಿಥಿಯಾಗಿ ಸಂವೇದನಾ ಫೌಂಡೇಶನ್ ಸಂಸ್ಥಾಪಕಶ್ರೀ ಪ್ರಕಾಶ್ ಮಲ್ಪೆ ಅವರು ಭಾಗವಹಿಸಿ ಕಾರ್ಗಿಲ್ ಕಥನಗಳನ್ನು ಹೇಳುವುದರೊಂದಿಗೆ ಇಂದಿನ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಜೊತೆಗೆ ದೇಶಭಕ್ತಿಯನ್ನು ರೂಢಿಸಿಕೊಳ್ಳಬೇಕು ಜೊತೆಗೆ ದೇಶ ಕಾಯುವ ಸೈನಿಕರನ್ನು ಗೌರವಿಸುವಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಭಾರತೀಯ ನೌಕಾ ಸೇನೆಯ ನಿವೃತ್ತಪೆಟ್ಟಿ ಆಫೀಸರ್ ಕೆ […]

ಉಡುಪಿ: ಆದ್ಯಾ ಲಕ್ಕಿ ಡ್ರಾ ಬಂಪರ್ ಸ್ಕೀಮ್ ಸೀಸನ್-2 ಸೆಪ್ಟೆಂಬರ್ ನಿಂದ ಪ್ರಾರಂಭ; ಗ್ರಾಹಕರಿಗೆ ಬಂಪರ್ ಸ್ಕೀಮಿನಲ್ಲಿ ಚಿನ್ನ ಗೆಲ್ಲುವ ಅವಕಾಶ.!

ಉಡುಪಿ: ಆತ್ರಾಡಿ ಮುಖ್ಯರಸ್ತೆಯ, ಶ್ರೀ ಗುರು ಹೋಟೆಲ್ ಎದುರುಗಡೆ ಇರುವ ಆದ್ಯಾ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್’ನಲ್ಲಿ ಲಕ್ಕಿ ಡ್ರಾ ಬಂಪರ್ ಸ್ಕೀಮ್ ಸೀಸನ್-2 ಪ್ರಾರಂಭಗೊಂಡಿದೆ. ಲಕ್ಕಿ ಡ್ರಾ ಬಂಪರ್ ಸ್ಕೀಮ್ ಸೀಸನ್-2 ಸೆಪ್ಟೆಂಬರ್ 2025 ರಿಂದ ಆಗಸ್ಟ್ 2026 ರವರೆಗೆ ನಡೆಯಲಿದೆ. ಈ ಬಂಪರ್ ಸ್ಕೀಮಿನಲ್ಲಿ ಪ್ರತಿ ತಿಂಗಳು 2 ಆಕರ್ಷಕ ಡ್ರಾಗಳು ನಡೆಯಲಿವೆ. ಗ್ರಾಹಕರಿಗೆ ಸುಲಭ ಕಂತಿನ ಮೂಲಕ ತಿಂಗಳಿಗೆ ಕೇವಲ 500 ರೂಪಾಯಿ ಪಾವತಿಸಿ, ಆಕರ್ಷಕ ಬಹುಮಾನ ಗೆಲ್ಲುವ ಸುವರ್ಣವಕಾಶ ಇದಾಗಿದೆ. ಮೊದಲ ತಿಂಗಳ […]

ಬಾಹ್ಯಾಕಾಶ ಕ್ಷೇತ್ರದಲ್ಲಿ ಶುರುವಾಗಲಿದೆ ನವ್ಯೋದ್ಯಮ: ಪ್ರಧಾನಿ ಮೋದಿ

ನವದೆಹಲಿ: ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶದಿಂದ ಹಿಂತಿರುಗಿ ಬಂದಿರುವುದನ್ನು ಶ್ಲಾಘಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ದೇಶದಾದ್ಯಂತ ಮಕ್ಕಳಲ್ಲಿ ಬಾಹ್ಯಾಕಾಶ ಕುರಿತಂತೆ ಕುತೂಹಲ ಹೆಚ್ಚಿಸಿದೆ. ಬಾಹ್ಯಾಕಾಶ ಕ್ಷೇತ್ರವೊಂದರಲ್ಲೇ 200ಕ್ಕೂ ಅಧಿಕ ನವೋದ್ಯಮಗಳು ಆರಂಭಗೊಳ್ಳುತ್ತಿವೆ’ ಎಂದು ತಿಳಿಸಿದರು. 124ನೇ ‘ಮನದ ಮಾತು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ವಿಕಸಿತ ಭಾರತವು ಸ್ವಾವಲಂಬನೆಯ ಮೂಲಕ ಹಾದು ಹೋಗುತ್ತದೆ. ಆತ್ಮನಿರ್ಭರ ಭಾರತಕ್ಕೆ ‘ವೋಕಲ್‌ ಫಾರ್ ಲೋಕಲ್‌’ (ದೇಸಿ ಅಭಿವೃದ್ಧಿಗೆ ಉತ್ತೇಜನ) ಅತ್ಯಂತ ಬಲವಾದ ಅಡಿಪಾಯವಾಗಿದೆ’ ಎಂದು ತಿಳಿಸಿದರು. ‘ಶುಭಾಂಶು ಶುಕ್ಲಾ ಅವರು ಬಾಹ್ಯಾಕಾಶದಿಂದ […]