ಉಡುಪಿ: ಏಕ ವಿನ್ಯಾಸ ನಕ್ಷೆಯ ಅವ್ಯವಸ್ಥೆ ಖಂಡಿಸಿ ಬಿಜೆಪಿ ಪ್ರತಿಭಟನೆ

ಉಡುಪಿ: ‘ಏಕ ವಿನ್ಯಾಸ ನಕ್ಷೆ’ (9/11) ಯ ಅವ್ಯವಸ್ಥೆ ಖಂಡಿಸಿ ಉಡುಪಿ ಜಿಲ್ಲಾ ಬಿಜೆಪಿ ಹಾಗೂ ಜಿಲ್ಲಾ ಒಬಿಸಿ ಮೋರ್ಚಾ ಜಂಟಿ ನೇತೃತ್ವದಲ್ಲಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ‌ ಇಂದು‌ ಪ್ರತಿಭಟನೆ‌ ನಡೆಸಲಾಯಿತು. ಜಿಲ್ಲೆಯಾದ್ಯಂತ ‘ಏಕ ವಿನ್ಯಾಸ ನಕ್ಷೆ’ ಅನುಮೋದನೆಗೆ ರಾಜ್ಯ ಸರಕಾರ ವಿಳಂಬ ಧೋರಣೆ ಅನುಸರಿಸುತ್ತಿದ್ದು, ಇದರಿಂದ ಜನಸಾಮಾನ್ಯರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಈ ಜ್ವಲಂತ ಸಮಸ್ಯೆಯ ಕೂಡಲೇ ಪರಿಹರಿಸಬೇಕು‌ ಎಂದು ಬಿಜೆಪಿ‌ ಕಾರ್ಯಕರ್ತರು ಆಗ್ರಹಿಸಿದರು. ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ […]

‘ಯುಪಿಐ’ ವಹಿವಾಟಿನಲ್ಲಿ ಹಲವು ಬದಲಾವಣೆ; ಹೊಸ ನಿಯಮ ಜಾರಿ.!

ಬೆಂಗಳೂರು: ಡಿಜಿಟಲ್‌ ಹಣ ಪಾವತಿ ವ್ಯವಸ್ಥೆ ಯುಪಿಐನ ದಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಹಲವು ಬದಲಾವಣೆಗಳನ್ನು ಜಾರಿಗೆ ತರುತ್ತಿದೆ. ಈ ಬದಲಾವಣೆಗಳು ಆಗಸ್ಟ್‌ 1 ರಿಂದ ಬಳಕೆದಾರರಿಗೆ ಅನ್ವಯವಾಗಲಿದೆ. ದಿನನಿತ್ಯ ಮಾಡುವ ಸಣ್ಣ ಪ್ರಮಾಣದ ಪಾವತಿಯ ಮೇಲೆ ಯಾವುದೇ ಪರಿಣಾಮ ಬೀರದು ಎಂದಿರುವ ನಿಗಮ, ಕೆಲವು ಮಿತಿಗಳು, ಹಣ ಪಾವತಿಯ ಸಮಯಗಳಲ್ಲಿ ಬದಲಾವಣೆ ತಂದಿದೆ. ಅವುಗಳೆಂದರೆ… ಹೊಸ ನಿಯಮದ ಪ್ರಕಾರ, ಒಂದು ದಿನದಲ್ಲಿ ಬಳಕೆದಾರರು 50 ಬಾರಿ ಮಾತ್ರ ಯುಪಿಐ ಅಪ್ಲಿಕೇಷನ್‌ ಮೂಲಕ […]

ಭರ್ಜರಿ ಕಲೆಕ್ಷನ್ ಮಾಡಿದ “ಸು ಫ್ರಂ ಸೋ”: ಮೂರು ದಿನದಲ್ಲೇ 6 ಕೋಟಿ ಗಳಿಕೆ!

ರಾಜ್ ಬಿ ಶೆಟ್ಟಿ ನಿರ್ಮಾಣದ ‘ಸು ಫ್ರಮ್ ಸೋ’ ಸಿನಿಮಾ ಬ್ಲಾಕ್​ಬಸ್ಟರ್ ಹಿಟ್ ಎನಿಸಿಕೊಂಡಿದೆ. ಈ ಸಿನಿಮಾ ಮೂರೇ ದಿನಕ್ಕೆ ‘ಎಕ್ಕ’ ಹಾಗೂ ‘ಜೂನಿಯರ್’ ಸಿನಿಮಾ ದಾಖಲೆಯನ್ನು ಉಡೀಸ್ ಮಾಡಿದೆ. ಭಾನುವಾರ ಬಹುತೇಕ ಎಲ್ಲ ಕಡೆಗಳಲ್ಲಿ ಸಿನಿಮಾ ಹೌಸ್​ಫುಲ್ ಪ್ರದರ್ಶನ ಕಂಡಿದೆ. ಸ್ಯಾಂಡಲ್​ವುಡ್​ನಲ್ಲಿ ಬಹು ಸಮಯದ ಬಳಿಕ ಒಂದೊಳ್ಳೆಯ ಸಿನಿಮಾ ಬಂದಿದ್ದು, ಸಿಂಗಲ್ ಸ್ಕ್ರೀನ್ ಥಿಯೇಟರ್​ಗಳು ಕೂಡ ಫುಲ್ ಆಗಿದ್ದವು ಅನ್ನೋದು ವಿಶೇಷ. ರಾಜ್ ಬಿ. ಶೆಟ್ಟಿ ಈ ಚಿತ್ರದಿಂದ ದೊಡ್ಡ ಲಾಭ ಕಂಡಿದ್ದಾರೆ. ‘ಸು ಫ್ರಮ್ […]

ಧರ್ಮಸ್ಥಳ ಪ್ರಕರಣ: ಸ್ಥಳ ಮಹಜರು ಪ್ರಕ್ರಿಯೆ ಆರಂಭ

ಬೆಳ್ತಂಗಡಿ : ಧರ್ಮಸ್ಥಳ ದೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ಅಧಿಕಾರಿಗಳು ಸಾಕ್ಷಿ ದೂರುದಾರನನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಧರ್ಮಸ್ಥಳ ಗ್ರಾಮ ನೇತ್ರಾವತಿ ಸ್ನಾನ ಘಟ್ಟಕ್ಕೆ ಕರೆತಂದು (ಜುಲೈ 28) ರಂದು ಮಧ್ಯಾಹ್ನ 1 ಗಂಟೆಗೆ ಸ್ಥಳದ ಮಹಜರು ಆರಂಭಿಸಿದ್ದಾರೆ. ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿದ್ದು ವಿವಿಧ ಇಲಾಖೆಯ ಅಧಿಕಾರಿಗಳ ತಂಡ ಬೀಡು ಬಿಟ್ಟಿದೆ. ನೇತ್ರಾವತಿ ಸ್ನಾನಘಟ್ಟದ ಸಮೀಪವೇ ಸ್ಥಳವನ್ನು ಸಾಕ್ಷಿ ದೂರುದಾರ ಗುರುತಿಸಿದ್ದು, ಈ ಸ್ಥಳದಲ್ಲಿ ಭದ್ರತೆಯ ವ್ಯವಸ್ಥೆ ಮಾಡಲಾಗಿದೆ.ಹಿರಿಯ ಅಧಿಕಾರಿ ಜಿತೇಂದ್ರಕುಮಾರ್ ದಯಾಮ, ಸಿ.ಎ […]

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಆತ್ರಾಡಿ ವಿವೇಕಾನಂದ ಯೋಗ ಶಾಖೆ; ವಾರ್ಷಿಕೋತ್ಸವ ಕಾರ್ಯಕ್ರಮ

ಉಡುಪಿ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ ) ನೇತ್ರಾವತಿ ವಲಯ ಕರ್ನಾಟಕ. ವಿವೇಕಾನಂದ ಯೋಗ ಶಾಖೆ ಆತ್ರಾಡಿ ಇದರ ವಾರ್ಷಿಕೋತ್ಸವ ಕಾರ್ಯಕ್ರಮವು ಸವ್ಯಸಾಚಿ ಶಿಶು ಮಂದಿರದ ಸಭಾಂಗಣದಲ್ಲಿ ಪಾದೆಕಲ್ ವಿಷ್ಣು ಭಟ್ ರವರ ಅದ್ಯಕ್ಷತೆಯಲ್ಲಿ ಜರಗಿತು. ಮುಖ್ಯ ಅತಿಥಿ ಯೋಗ ಗುರು ಶ್ರೀ ಸುದರ್ಶನ್ ರವರು ಶ್ರೀ ರಾಮಸ್ವಾಮಿ ಯವರಿಂದ 45 ವರ್ಷಗಳ ಹಿಂದೆ ಸ್ಥಾಪನೆ ಗೊಂಡ ಪತಂಜಲಿ ಯೋಗ ಸಂಸ್ಥೆಯು “ಸಂಸ್ಕಾರ ಸಂಘಟನೆ ಸೇವೆ ” ಎಂಬ ದ್ಯೇಯ ವಾಕ್ಯದಡಿಯಲ್ಲಿ ಮಾಡುತ್ತಿರುವ ಉಚಿತ […]