ಕಟಪಾಡಿಯ ತ್ರಿಶಾ ವಿದ್ಯಾ ಪದವಿ ಪೂರ್ವಕಾಲೇಜಿನಲ್ಲಿ ಗೊಬ್ಬುದ ಕಲಾ ಕಾರ್ಯಕ್ರಮ

ಉಡುಪಿ:ವಿದ್ಯಾರ್ಥಿಗಳಲ್ಲಿ ಕೃಷಿ ಚಟುವಟಿಕೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಟಪಾಡಿಯ ತ್ರಿಶಾ ವಿದ್ಯಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಇತ್ತೀಚಿಗೆ ಗೊಬ್ಬುದ ಕಲಾ ಎನ್ನುವ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಇದರಲ್ಲಿ ವಿದ್ಯಾರ್ಥಿಗಳಿಗೆ ಕೇಸರಿನ ಒಂದಷ್ಟು ಕ್ರೀಡಾಕೂಟಗಳ ಜೊತೆಗೆ ನೇಜಿ ನೀಡುವ ಕಾರ್ಯಕ್ರಮ ನಡೆದಿತ್ತು. ಏಣಗುಡ್ಡೆ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಮುಂಭಾಗದ ಗದ್ದೆಯಲ್ಲಿ ವಿದ್ಯಾರ್ಥಿಗಳು ಕೆಸರಿನೊಂದಿಗೆ ಆಟವಾಡಿ ತದನಂತರ ಅದೇ ಗದ್ದೆಯಲ್ಲಿ ನೇಜಿ ನೆಡುವ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕಾರ್ಯಕ್ರಮವನ್ನು ಗದ್ದೆಗೆ ಹಾಲು ಹಾಕುವುದರ ಮೂಲಕ ತ್ರಿಶಾ ವಿದ್ಯಾ […]
ಉಡುಪಿ:ಜು.29 ರಂದು ಶ್ರೀ ಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದಲ್ಲಿ ನಾಗರ ಪಂಚಮಿ ಆಚರಣೆ

ಉಡುಪಿ:ಉಡುಪಿ ದೊಡ್ಡಣ್ಣ ಗುಡ್ಡೆಯ ಶ್ರೀ ಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕಾರಣಿಕ ಕ್ಷೇತ್ರದ ನಾಗಾಲಯದಲ್ಲಿ ನಾಗರ ಪಂಚಮಿ ಆಚರಣೆಯು ಇದೆ ತಿಂಗಳ ತಾರೀಕು 29ರ ಮಂಗಳವಾರದಂದು ಕ್ಷೇತ್ರದ ಧರ್ಮದರ್ಶಿ ಶ್ರೀಯುತ ಶ್ರೀ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಪ್ರಧಾನ ಅರ್ಚಕ ಅನೀಶ್ ಆಚಾರ್ಯ ಅವರ ನೇತ್ರತ್ವದಲ್ಲಿ ನೆರವೇರಲಿದೆ. ಸಾಮೂಹಿಕವಾಗಿ ನೆರವೇರಲಿರುವ ಈ ನಾಗರ ಪಂಚಮಿಯ ಆಚರಣೆಯ ಪ್ರಯುಕ್ತ ಕ್ಷೇತ್ರದಲ್ಲಿ ವಿಶೇಷವಾದ ತನು ತಂಬಿಲ ಸೇವೆ ಪಂಚಾಮೃತ ಸೇವೆ ಪ್ರಸನ್ನ ಪೂಜೆಗಳು ಪ್ರಾತಃಕಾಲದಿಂದ ಆರಂಭಗೊಂಡು ಮಧ್ಯಾಹ್ನದ […]
ಯೂಟ್ಯೂಬ್’ನಲ್ಲಿ ಡಯಟ್ ವಿಡಿಯೋ ನೋಡಿ ಮೂರು ತಿಂಗಳಿಂದ ಊಟ ಮಾಡದೇ ಬರೀ ಜ್ಯೂಸ್ ಕುಡಿದು ವಿದ್ಯಾರ್ಥಿ ಮೃತ್ಯು.

ಕನ್ಯಾಕುಮಾರಿ: ವಿದ್ಯಾರ್ಥಿಯೊರ್ವ ಯೂಟ್ಯೂಬ್’ನಲ್ಲಿ ಡಯಟ್ ವಿಡಿಯೋ ನೋಡಿ ಮೂರು ತಿಂಗಳಿಂದ ಊಟ ಮಾಡದೇ ಬರೀ ಜ್ಯೂಸ್ ಕುಡಿದು ಉಸಿರಾಟ ತೊಂದರೆಯಿಂದ ಮೃತಪಟ್ಟ ಘಟನೆ ಕನ್ಯಾಕುಮಾರಿ ಜಿಲ್ಲೆಯ ಕುಳಚಲ್ ಬಳಿಯ ಪರ್ಣಟ್ಟಿವಿಳೈನಲ್ಲಿ ನಡೆದಿದೆ. ಮೃತಪಟ್ಟ ವಿದ್ಯಾರ್ಥಿ ಪರ್ಣಟ್ಟಿವಿಳೈ ನಿವಾಸಿ ನಾಗರಾಜನ್ ಅವರ ಮಗ ಶಕ್ತೀಶ್ವರ್ (17). ಶಕ್ತೀಶ್ವರ್ 12ನೇ ತರಗತಿ ಪಾಸಾಗಿ ಇಂಜಿನಿಯರಿಂಗ್ ಕಾಲೇಜಿಗೆ ಸೇರಲು ತಯಾರಾಗಿದ್ದ. ನಿನ್ನೆ ಬೆಳಿಗ್ಗೆ ಮನೆಯಲ್ಲಿದ್ದ ಶಕ್ತೀಶ್ವರ್ ಉಸಿರಾಟದ ತೊಂದರೆಯಿಂದ ಕುಸಿದು ಬಿದ್ದಿದರು. ಆತಂಕಗೊಂಡ ಪೋಷಕರು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು […]
ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನ; ಮೂರ್ಛೆ ಹೋಗಿ ಸಿಕ್ಕಿಬಿದ್ದ ಕಳ್ಳರು..!!

ಉಡುಪಿ: ಕಡಿಯಾಳಿ ಮಹಿಷಮರ್ಧಿನಿ ದೇವಾಸ್ಥನದ ಹೆಬ್ಬಾಗಿಲಿನ ಬೀಗ ಮುರಿದು ಕಳ್ಳತನಗೈಯುಲು ನಡೆಸಿದ ಯತ್ನವು ಶುಕ್ರವಾರ ತಡರಾತ್ರಿ 3 ಗಂಟೆಗೆ ನಡೆದಿದೆ. ಕಳ್ಳರ ಕೃತ್ಯಗಮನಿಸಿದ ದೇವಸ್ಥಾನದ ಕಾವಲುಗಾರ ಬೊಬ್ಬಿಟ್ಟಾಗ ಕಳ್ಳರು ಕಾವಲುಗಾರನಿಗೆ ಚಾಕು ತೋರಿಸಿ ಜೀವಬೆದರಿಕೆಯೊಡ್ಡಿ ಪಲಾಯನಗೈದಿದ್ದಾರೆ. ತಕ್ಷಣ ಕಾವಲುಗಾರ ಸ್ಥಳೀಯ ಭಕ್ತರಿಗೆ ತಿಳಿಸಿದ್ದು, ತಕ್ಷಣ ದೇವಸ್ಥಾನದ ವಠಾರದಲ್ಲಿ ಸ್ಥಳೀಯರು ಒಟ್ಟಾಗಿದ್ದಾರೆ. ಸಿಸಿ ಟಿವಿ ಪರಿಶೀಲಿಸಿದಾಗ ಇರ್ವರು ಕಳ್ಳರು ಬಂದಿರುವುದು, ಪಲಾಯನದ ಹಾದಿ ತಿಳಿದುಬಂದಿದೆ. ತಕ್ಷಣ ಸ್ಥಳೀಯರು ಹುಡುಕಾಟ ನಡೆಸಿ ಕಡಿಯಾಳಿ ಪೆಟ್ರೋಲ್ ಬಂಕ್ ಬಳಿ ಇರ್ವರನ್ನು ವಶಕ್ಕೆ […]
ಉಡುಪಿ:ಡಯಾನ ಹೋಟೆಲ್ ನಲ್ಲಿ “ಫ್ಯಾಷನ್ ಮೇಳ-2025”-ಆಷಾಢ ಸೇಲ್ ಉದ್ಘಾಟನೆ

ಉಡುಪಿ:ಇಂದು ಜುಲೈ 26 ರಂದು ಡಯಾನ ಹೋಟೆಲ್ ನಲ್ಲಿ “ಫ್ಯಾಷನ್ ಮೇಳ-2025” ನ ಉದ್ಘಾಟನೆ ಉಡುಪಿಯ ಗಣ್ಯ ಅತಿಥಿಗಳಿಂದ ನಡೆಯಿತು. ಮುಖ್ಯ ಅತಿಥಿಗಳಾಗಿ ಡಾ. ಶಕೀಲಾ ಸಚಿನ್ – ಮಂಜುನಾಥ ಕಣ್ಣಿನ ಆಸ್ಪತ್ರೆ, ಉಡುಪಿ,ಲಯನ್ಸ್ ಕ್ಲಬ್ ಅಧ್ಯಕ್ಷರು, ಮಣಿಪಾಲ,ಸಪ್ನಾ ಸುರೇಶ್ – ಜಿಲ್ಲಾ ಗವರ್ನರ್ 317 ಸಿ ,ಉಡುಪಿ,ರಜನಿ ಹೆಬ್ಬಾರ್ – ಪುರಸಭೆ ಉಪಾಧ್ಯಕ್ಷೆ, ಉಡುಪಿ, ಸುಗುಣ ಶಂಕರ್ ಸುವರ್ಣ-ಸುಗುಣ ಇಂಡಸ್ಟ್ರೀಸ್ ಮತ್ತು ಹಾರ್ಡ್‌ವೇರ್, ಮಾಲೀಕರು, ಉಡುಪಿ ಇವರು ಪಾಲ್ಗೊಂಡಿದ್ದರು. ಇಲ್ಲಿ ವಿವಿಧ ರೀತಿಯ ಸೀರೆಗಳು, ಹೊಲಿದ […]