ಉಡುಪಿ ಜಿಲ್ಲೆಯಾದ್ಯಂತ ಭಾರೀ ಗಾಳಿಮಳೆ: ಹಲವೆಡೆ ಅವಾಂತರ ಸೃಷ್ಟಿ

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಭಾರೀ ಗಾಳಿಮಳೆ ಸುರಿಯುತ್ತಿದ್ದು, ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ಜೋರು ಬೀಸಿದ ಬಿರುಗಾಳಿಯ ಹೊಡೆತಕ್ಕೆ ಕುಕ್ಕಿಕಟ್ಟೆಯ ಗ್ರಾಮ ಆಡಳಿತ ಕಚೇರಿಗೆ ಬೃಹತ್ ಮರ ಉರುಳಿ ಬಿದ್ದಿದೆ. ಮಾತ್ರವಲ್ಲದೆ ಇಂದಿರಾನಗರದಲ್ಲಿ ತೆಂಗಿನಮರ ಬಿದ್ದು ಆಟೋ ರಿಕ್ಷಾ ಹಲವು ವಿದ್ಯುತ್ ಕಂಬ ಮತ್ತು ಮನೆಗೆ ಹಾನಿ ಆಗಿದೆ. ಜಿಲ್ಲೆಯಲ್ಲಿ 30ಕ್ಕೂ ಅಧಿಕ ಮನೆಗಳು ಗಾಳಿ-ಮಳೆಯಿಂದ ಹಾನಿ ಗೊಳಗಾಗಿವೆ. ಬ್ರಹ್ಮಾವರ ತಾಲೂಕು ಗಿಳಿಯಾರಿನ ಸೀತಾರಾಮ ದೇವಾಡಿಗ ಎಂಬವರ ಮನೆ ಸಂಪೂರ್ಣ ಹಾನಿಗೊಂಡಿದ್ದು 2.50 ಲಕ್ಷ ರೂ.ಗಳಿಗೂ ಅಧಿಕ ನಷ್ಟದ […]

ಉಡುಪಿ: ಭಾರೀ ಗಾಳಿ ಮಳೆಗೆ ಮನೆ ಕುಸಿತ- ಶಾಸಕ ಯಶ್ ಪಾಲ್ ಸುವರ್ಣ ಭೇಟಿ, ಪರಿಶೀಲನೆ

ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ ಕೆಂಜೂರು ಮತ್ತು ವಾರಂಬಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿನ್ನೆ ಸುರಿದ ಭಾರೀ ಗಾಳಿ ಮಳೆಗೆ ಹಾಗೂ ಮರ ಬಿದ್ದು ಮನೆ ಕುಸಿತವಾಗಿರುವ ಸ್ಥಳಗಳಿಗೆ ಉಡುಪಿ ಶಾಸಕರಾದ ಯಶ್ ಪಾಲ್ ಸುವರ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆಂಜೂರು ಗ್ರಾಮದ ಗೋಪಾಲ ನಾಯ್ಕ, ದಾಮೋದರ ನಾಯ್ಕ್ ಹಾಗೂ ವಾರಂಬಳ್ಳಿ ಗ್ರಾಮದ ಕಿಣಿಯರಬೆಟ್ಟುವಿನಲ್ಲಿ ಮರಬಿದ್ದು ಹಾನಿಗೀಡಾದ ಗಿರಿಜಾ ಮತ್ತು ಯಶೋಧ ಅವರ ಮನೆಗೆ ಭೇಟಿ ನೀಡಿ ಘಟನೆಯಿಂದ ಗಾಯಗೊಂಡವರ ಆರೋಗ್ಯ ವಿಚಾರಿಸಿ ವೈಯುಕ್ತಿಕ ನೆಲೆಯಲ್ಲಿ […]

ಮೂಡುಬಿದಿರೆ:ಆಳ್ವಾಸ್ ಪ.ಪೂ. ಕಾಲೇಜಿನಲ್ಲಿ ಎನ್‌ಎಸ್‌ಎಸ್ ಉದ್ಘಾಟನೆ

ಮೂಡುಬಿದಿರೆ: ಆಳ್ವಾಸ್ ಪದವಿಪೂರ್ವ ಕಾಲೇಜಿನ 2025–26 ನೇ ಶೈಕ್ಷಣಿಕ ವರ್ಷದ ರಾಷ್ಟ್ರೀಯ ಸೇವಾ ಯೋಜನೆಯ (ಎನ್‌ಎಸ್‌ಎಸ್) ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಶುಕ್ರವಾರ ಕಾಲೇಜಿನ ಆವರಣದಲ್ಲಿ ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾರ್ಕಳದ ಮಂಜುನಾಥ ಪೈ ಮೆಮೋರಿಯಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಸುದರ್ಶನ್ ಪಿ. ಅವರು ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡುತ್ತಾ, “ಎನ್‌ಎಸ್‌ಎಸ್ ನಮ್ಮ ಜೀವನದ ಪಥವನ್ನೇ ಬದಲಾಯಿಸಬಲ್ಲ ಶಕ್ತಿ ಹೊಂದಿದೆ. ವಿದ್ಯಾರ್ಥಿಗಳು ತಮ್ಮೊಳಗಿನ ಅಧಮ್ಯ ಶಕ್ತಿಯನ್ನು ಗುರುತಿಸಿ, ಸದುಪಯೋಗಪಡಿಸಿಕೊಳ್ಳಬೇಕು. ದೈಹಿಕ ಸ್ವಚ್ಛತೆ ಜೊತೆಗೆ ಮಾನಸಿಕ […]

ಹಾಲಿನ ಉತ್ಪಾದನೆ 6 ಲಕ್ಷ ಲೀಟರ್ ಗೆ ಹೆಚ್ಚಿಸಿ- ಡಾ. ಎಂ.ಎನ್. ರಾಜೇಂದ್ರ ಕುಮಾರ್

ಉಡುಪಿ: ಹೈನುಗಾರರ ಪರಿವಾರ ಒಕ್ಕೂಟ ಉಡುಪಿ ಜಿಲ್ಲೆ ಇದರ ಆಶ್ರಯದಲ್ಲಿ ಸಂವಾದ ಹಾಗೂ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕರುಗಳಿಗೆ ಅಭಿನಂದನಾ ಸಮಾರಂಭ ನಗರ ಪುರಭವನದಲ್ಲಿ ಇಂದು ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು, ಹಾಲು ಉತ್ಪಾದಿಸುವ ವೆಚ್ಚ ಜಾಸ್ತಿ ಇರುವುದರಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ವಿಶೇಷ ಅನುದಾನ ಕೊಡಬೇಕೆಂದು ಸಹಕಾರಿ ಸಚಿವರಲ್ಲಿ ಮನವಿ ಮಾಡಲಾಗಿತ್ತು. ಮತ್ತೊಮ್ಮೆ ಒಕ್ಕೂಟದ ಅಧ್ಯಕ್ಷರ ಜೊತೆಗೂಡಿ ಸಚಿವರನ್ನು […]

ರಾಜ್ಯದ ಯಾವುದೇ ಜಿಲ್ಲೆಗಳಲ್ಲೂ ರಸಗೊಬ್ಬರ ಪೂರೈಕೆಯಲ್ಲಿ ಕೊರತೆಯಿಲ್ಲ; ಕೃಷಿ ಸಚಿವ

ಬೆಂಗಳೂರು: ಈ ವರ್ಷ ಮುಂಗಾರು ನಿಗದಿತ ಅವಧಿಗಿಂತ ಮುಂಚಿತವಾಗಿ ಆರಂಭವಾದ ಕಾರಣ ಮತ್ತು ಮುಸಕಿನ ಜೋಳ ಪ್ರದೇಶ 2 ಲಕ್ಷ ಹೆಕ್ಟೇರ್‌ ವಿಸ್ತರಣೆಯಾದ ಹಿನ್ನೆಲೆಯಲ್ಲಿ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಿದೆ. ಕೆಲ ರೈತರು ಆತಂಕದಿಂದ ಆಗಸ್ಟ್‌-ಸೆಪ್ಟೆಂಬರ್‌ಗೆ ಅಗತ್ಯವಿರುವ ಗೊಬ್ಬರವನ್ನು ಈಗಲೇ ಖರೀದಿಸಲು ಮುಂದಾಗಿದ್ದು, ಸಹ ತಕ್ಷಣ ಬೇಡಿಕೆ ಹೆಚ್ಚಲು ಕಾರಣವಾಗಿರಬಹುದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ. ರೈತರಿಗೆ ಆತಂಕ ಬೇಡ:ವಿಕಾಸಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದ ಯಾವುದೇ ಜಿಲ್ಲೆಗಳಲ್ಲೂ ರಸಗೊಬ್ಬರ ಪೂರೈಕೆಯಲ್ಲಿ ಕೊರತೆಯಿಲ್ಲ. ಆದರೂ, […]