ಉಡುಪಿ: ಸಹಕಾರಿ ಲೆಕ್ಕಪರಿಶೋಧನ ಇಲಾಖೆಯ ಉಪನಿರ್ದೇಶಕಿ ರೇಣುಕಾ, ಸಹಾಯಕ ಜಯರಾಮ್ ಲೋಕಾಯುಕ್ತ ಬಲೆಗೆ.

ಉಡುಪಿ: ಉಡುಪಿ ಜಿಲ್ಲಾ ಸಹಕಾರಿ ಸಂಘದ ಲೆಕ್ಕ ಪರಿಶೋಧನ ಇಲಾಖೆಯ ಉಪ ನಿರ್ದೇಶಕಿ ರೇಣುಕಾ ಹಾಗೂ ಪ್ರಥಮ ದರ್ಜೆ ಸಹಾಯಕ ಜಯರಾಮ್ ಅವರು ಉಡುಪಿ ಲೋಕಾಯುಕ್ತ ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಈ ಇಬ್ಬರು ಆರೋಪಿಗಳು ಸೌಹಾರ್ದ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆ ಮಾಡಿ ಕೊಡಲು ತಲಾ 5000 ರಂತೆ ಒಟ್ಟು 10,000ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಲಂಚ ನೀಡಲು ಒಪ್ಪದ ಶಾಂತಿನಿಕೇತನ ಸೌಹರ್ದ ಸಹಕಾರಿ ಮುಖ್ಯ ಕಾರ್ಯನಿರ್ವಾಹಕ ನರೇಂದ್ರ […]
ನಾಳೆ (ಜು.25) ದಕ್ಷಿಣ ಕನ್ನಡ ಜಿಲ್ಲೆಯ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ.

ಮಂಗಳೂರು: ಮಳೆಯ ತೀವ್ರತೆ ಹೆಚ್ಚಾಗಿರುವುದರಿಂದ ಹಾಗೂ ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜು.25 ರಂದು ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ, ಪ್ರೌಢ ಶಾಲೆ, ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಿ ತಹಶೀಲ್ದಾರ್ ಅವರು ಆದೇಶ ಹೊರಡಿಸಿದ್ದಾರೆ.
ಕಾಪು: ಇಂದಿನಿಂದ (ಜುಲೈ 25) ಹಲಸು ಮೇಳ

ಕಾಪು: ಸಂಸ್ಕೃತಿ ಈವೆಂಟ್ಸ್ ಪ್ರಸ್ತುತಿಯ ಅನಿಲ್ ಕುಮಾರ್ ಕಾಪು ಅವರ ನೇತೃತ್ವದಲ್ಲಿ ಹಲಸು ಮೇಳವು ಜುಲೈ 25, 26 ಮತ್ತು 27ರಂದು ಕಾಪು ಹಳೆ ಮಾರಿಯಮ್ಮ ಸಭಾಗೃಹದಲ್ಲಿ ನಡೆಯಲಿದೆ. ಹಲಸು, ಮಾವು ಮತ್ತು ಇತರ ಹಣ್ಣು, ಆಹಾರ, ಕೃಷಿ ಕೌಶಲಗಳ ಪ್ರದರ್ಶನ ಮತ್ತು ಮಾರಾಟವನ್ನು ಹಮ್ಮಿಕೊಳ್ಳಲಾಗಿದೆ.
ಸು ಫ್ರಮ್ ಸೋ’ ಚಿತ್ರದ ಹಾರರ್-ಕಾಮಿಡಿ ಸಿನಿಮಾ ಪ್ರೀಮಿಯರ್ ಶೋ ನೋಡಿ ಹಾಡಿ ಹೊಗಳಿದ ಪ್ರೇಕ್ಷಕರು;ಅಂಥದ್ದೇನಿದೆ ಈ ಸಿನಿಮಾದಲ್ಲಿ?..

ಮಂಗಳೂರು: ‘ಸು ಫ್ರಮ್ ಸೋ’ ಚಿತ್ರದ ಹಾರರ್-ಕಾಮಿಡಿ ಸಿನಿಮಾ ಜುಲೈ 25ರಂದು ಪ್ರೇಕ್ಷಕರ ಎದುರು ಬರಲಿದೆ. ಮಂಗಳೂರಿನಲ್ಲಿ ನಡೆದ ಪ್ರೀಮಿಯರ್ ಶೋ ನಂತರ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೊಸ ಕಲಾವಿದರು ಹಾಗೂ ಯುವ ನಿರ್ದೇಶಕನ ಸಿನಿಮಾಗೆ ರಾಜ್ ಬಿ ಶೆಟ್ಟಿ ಬಂಡವಾಳ ಹೂಡಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ಈಗ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗುತ್ತಿವೆ. ಅದರಲ್ಲೂ ಜುಲೈ ತಿಂಗಳಲ್ಲಿ ಒಳ್ಳೊಳ್ಳೆಯ ಚಿತ್ರಗಳು ಥಿಯೇಟರ್ಗೆ ಬರುತ್ತಿವೆ. ಈಗಾಗಲೇ ‘ಎಕ್ಕ’ (Ekka Movie) ಹಾಗೂ ‘ಜೂನಿಯರ್’ ಸಿನಿಮಾಗಳು ರಿಲೀಸ್ ಆಗಿ […]
ಕುಂದಾಪುರ:ಡಾ.ಬಿ.ಬಿ.ಹೆಗ್ಡೆ ಕಾಲೇಜಿನಲ್ಲಿ ಪ್ರೇರಣಾ ಕಾರ್ಯಕ್ರಮ ಉದ್ಘಾಟನೆ.

ಕುಂದಾಪುರ: “ಸತ್ತ್ವಾತ್ ಸಂಜಾಯತೆ ಜ್ಞಾನಂ”ಅಂತಯ೯ ಶಕ್ತಿಯನ್ನು ಉದ್ದೀಪನಗೊಳಿಸುವುದೇ ನಿಜವಾದ ನಿಜವಾದ ಶಿಕ್ಷಣ.ಇಂತಹ ಪರಿಪೂರ್ಣವಾದ ಶಿಕ್ಷಣ ಕೇವಲ ತರಗತಿಯ ನಾಲ್ಕು ಗೇೂಡೆಗಳೊಳಗೆ ಪಡೆಯಲು ಸಾಧ್ಯವಿಲ್ಲ. ವಿದ್ಯಾರ್ಥಿಗಳಿಗೆ ವಾಸ್ತವಿಕ ಪ್ರಪಂಚದ ಅರಿವು ಮುಾಡಿಸುವಲ್ಲಿ ವಿದ್ಯಾರ್ಥಿಗಳನ್ನು ಪಠ್ಯೇತರ ಚಟುವಟಿಕೆಗಳಲ್ಲಿ ಕೂಡಾ ಸಕ್ರಿಯವಾಗಿ ಭಾಗಿಸುವಂತೆ ಪ್ರೇರಣೆ ನೀಡಬೇಕಾದ ಜವಾಬ್ದಾರಿ ಶಿಕ್ಷಕರಿಗೂ ಹೆತ್ತವರಿಗೂ ಇದೆ. ಅನುಭವ ಕಲಿಕಾ ಪದ್ದತಿಯನ್ನು ಪದವಿಹಂತದಲ್ಲಿ ವಿದ್ಯಾರ್ಥಿಗಳಿಗೆ ಅಳವಡಿಕೆ ಇಂದಿನ ಅಗತ್ಯತೆಯೂ ಹೌದು.ಈ ನಿಟ್ಟಿನಲ್ಲಿ ಕುಂದಾಪುರ ಡಾ.ಬಿ.ಬಿ.ಹೆಗ್ಡೆ ಕಾಲೇಜು ಮುಂಚೂಣಿಯಲ್ಲಿರುವ ವಿದ್ಯಾ ಸಂಸ್ಥೆ” ಎಂದು ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿಯವರು ನಿವೃತ್ತ […]