ಸಣ್ಣ ವ್ಯಾಪಾರಿಗಳು ಮತ್ತೆ ನಗದು ಆಧರಿತ ಆರ್ಥಿಕತೆಗೆ ಹಿಂತಿರುಗುವ ಆತಂಕವಿದೆ: ಎಸ್ ಬಿಐ ಎಚ್ಚರಿಕೆ

ನವದೆಹಲಿ: ಯುಪಿಐ ವಹಿವಾಟಿನ ಮೊತ್ತ ಆಧರಿಸಿ ಕರ್ನಾಟಕದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯು, ಸಾವಿರಾರು ಸಣ್ಣ ವರ್ತಕರಿಗೆ ಜಿಎಸ್ಟಿ ನೋಟಿಸ್ ಜಾರಿ ಮಾಡಿರುವ ಹೊತ್ತಿನಲ್ಲೇ, ಇಂಥ ತೀವ್ರತರ ನಿಷ್ಕರ್ಷಾ ಕ್ರಮವು ಆರ್ಥಿಕತೆಯು ಮತ್ತೆ ನಗದು ವಹಿವಾಟಿಗೆ ಮುಖಮಾಡಲು ಕಾರಣವಾಗಬಹುದು ಎಂದು ‘ಎಸ್‌ಬಿಐ ರಿಸರ್ಚ್’ ತನ್ನ ವರದಿಯಲ್ಲಿ ಎಚ್ಚರಿಸಿದೆ. ಜಿಎಸ್ಟಿ ನೋಟಿಸ್ ವಿರೋಧಿಸಿ ಕರ್ನಾಟಕದಲ್ಲಿ ಸಣ್ಣ ವ್ಯಾಪಾರಿಗಳು ಯುಪಿಐ ಮೂಲಕ ಹಣ ಸ್ವೀಕರಿಸಲು ನಿರಾಕರಿಸುತ್ತಿರುವ ಹೊತ್ತಿನಲ್ಲೇ ‘ಎಸ್‌ಬಿಐ ರಿಸರ್ಚ್’ ವರದಿಯೊಂದನ್ನು ಬಿಡುಗಡೆ ಮಾಡಿದೆ. ವರದಿಯಲ್ಲಿ ‘ಸರಕು ಮತ್ತು ಸೇವಾ ತೆರಿಗೆ […]
ಡಾ. ಎವ್ಜಿನ್ ಡಿ’ಸೋಜಾ ಮೂಡುಬೆಳ್ಳೆ ಅವರ “ಮೋಗ್ ಆನಿಂ ಬಲಿದಾನ್” ಪುಸ್ತಕ ಲೋಕಾರ್ಪಣೆ

ಉಡುಪಿ: ಸಮಾಜದಲ್ಲಿ ಹೆಚ್ಚು ಹೆಚ್ಚು ಯುವ ಕೊಂಕಣಿ ಸಾಹಿತಿಗಳು ಹುಟ್ಟಿ ಬರಬೇಕಾದ ಅಗತ್ಯವಿದ್ದು ಇದರಿಂದ ಭಾಷೆಯ ಬೆಳವಣಿಗೆಗೆ ಪೂರಕವಾಗಲಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ. ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು. ಕಕ್ಕುಂಜೆ ಅನುಗ್ರಹ ಪಾಲನಾ ಕೇಂದ್ರದಲ್ಲಿ ಉಡುಪಿ ಧರ್ಮಪ್ರಾಂತ್ಯದ ಸಾಮಾಜಿಕ ಸಂಪರ್ಕ ಸಾಧನಗಳ ಆಯೋಗ ಮತ್ತು ಬೆಳ್ಳೆ ವಿಶನ್ ಡೊಟ್ ಕೊಮ್ ಇವರ ಸಹಯೋಗದೊಂದಿಗೆ ಡಾ| ಎವ್ಜಿನ್ ಡಿ’ಸೋಜಾ ಮೂಡುಬೆಳ್ಳೆ ಇವರ ‘ಮೋಗ್ ಆನಿಂ ಬಲಿದಾನ್’ (ಪ್ರೀತಿ ಮತ್ತು ಬಲಿದಾನ) ಪುಸ್ತಕದ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ […]
ಉಡುಪಿ: ಮಹಿಳೆಯರಿಗೆ ಉದ್ಯೋಗಾವಕಾಶ.

ಉಡುಪಿ: ಮಹಿಳೆಯರಿಗೆ ಉಡುಪಿಯಲ್ಲಿ ಕೆಲಸ ಮಾಡಲು ಒಂದು ಸುವರ್ಣ ಅವಕಾಶವನ್ನು ಕಲ್ಪಿಸಿದೆ. ಉಡುಪಿ MNC ಗೆ ಡಿಗ್ರಿ ಆಗಿರುವ 30 ವರ್ಷ ಮೇಲ್ಪಟ್ಟ ಮಹಿಳೆಯರು ಬೇಕಾಗಿದ್ದಾರೆ. ವೇತನ: ತಿಂಗಳಿಗೆ 22,000 ದಿಂದ 30,000 ಜೊತೆಗೆ ಪಿಎಫ್, ಇಎಸ್ಐ ಹಾಗೂ ಫ್ಯಾಮಿಲಿ ಇನ್ಸೂರೆನ್ಸ್ ಸೌಲಭ್ಯವನ್ನು ಕಲ್ಪಿಸಲಾಗಿದೆ. ಕಚೇರಿ ಸಮಯ: ಬೆಳಗ್ಗೆ 9:30ರಿಂದ ಸಂಜೆ 5:30ರವರೆಗೆ.ಆಸಕ್ತರು ಕೂಡಲೆ ಸಂಪರ್ಕಿಸಿ:93433 49670
ನಿರಂತರ್ ಉದ್ಯಾವರ : ಸಿನಿಮಾ ಉತ್ಸವದ ಪೋಸ್ಟರ್ ಬಿಡುಗಡೆ

ಉಡುಪಿ: ನಿರಂತರ್ ಉದ್ಯಾವರ ಸಂಘಟನೆಯ ಎಂಟನೇ ವರ್ಷದ ಸಂಸ್ಥಾಪನ ಸಂಭ್ರಮದ ಪ್ರಯುಕ್ತ ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೊ. ಆಪರೇಟಿವ್ ಸೊಸೈಟಿ ಲಿಮಿಟೆಡ್ ಉಡುಪಿ ಇದರ ಸಹಾಯದೊಂದಿಗೆ ಪ್ರದರ್ಶನವಾಗಲಿರುವ ಸಾಮಾಜಿಕ ಕಳಕಳಿಯ ಆಯ್ಧ ಮೂರು ಪ್ರಶಸ್ತಿ ವಿಜೇತ ಕನ್ನಡ ಸಿನಿಮಾಗಳ ನಿರಂತರ್ ಸಿನಿಮ ಉತ್ಸವ 2025 ಇದರ ಪೋಸ್ಟರ್ ಬಿಡುಗಡೆಯು ಅನುಗ್ರಹ ಪಾಲನ ಕೇಂದ್ರದಲ್ಲಿ ನಡೆಯಿತು. ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ|ವಂ|ಡಾ|ಜೆರಾಲ್ಡ್ ಐಸಾಕ್ ಲೋಬೊ ಪೋಸ್ಟರ್ ಬಿಡುಗಡೆ ನೆರವೇರಿಸಿ, ನಿರಂತರ್ ಸಂಘಟನೆಯೂ ಕಳೆದ ಹಲವಾರು ವರ್ಷಗಳಿಂದ ಉಡುಪಿ […]
ಉಡುಪಿ:ಹೊಸ ಯಾಂತ್ರೀಕೃತ ಮೀನುಗಾರಿಕೆ ದೋಣಿ ನಿರ್ಮಾಣಕ್ಕೆ ಸಾಧ್ಯತಾ ಪತ್ರ ಪಡೆಯಲು ಅರ್ಜಿ ಆಹ್ವಾನ

ಉಡುಪಿ: ಜಿಲ್ಲೆಯ ಮೀನುಗಾರರು ಹೊಸದಾಗಿ ಯಾಂತ್ರೀಕೃತ ಮೀನುಗಾರಿಕಾ ದೋಣಿ ನಿರ್ಮಾಣ ಮಾಡಿ ಮೀನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಅನುವಾಗುವಂತೆ ಸಾಧ್ಯತಾ / ಅನುಮತಿ ಪತ್ರ ನೀಡಲು ಸರ್ಕಾರಿ ಆದೇಶದನ್ವಯ ಅನುಮೋದನೆ ನೀಡಲಾಗಿದ್ದು, ಆಸಕ್ತರು ವೆಬ್‌ಸೈಟ್ URL:frims.karnataka.gov.in/BCC ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.ಪ್ರೂಟ್ಸ್ ಐಡಿ ಕಡ್ಡಾಯವಾಗಿ ಹೊಂದಿರುವ, ಮೀನುಗಾರಿಕೆ ವೃತ್ತಿಯಲ್ಲಿ ತೊಡಗಿರುವ ಹಾಗೂ ಮೀನುಗಾರಿಕೆ ಸಹಕಾರಿ ಸಂಘದ ಸದಸ್ಯರಾಗಿರುವ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿದಾರರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ ಅರ್ಜಿಯ ಒಂದು ಪ್ರತಿಯನ್ನು ಎಲ್ಲಾ […]