ಅಂಕೋಲಾ: ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿಬಿದ್ದ ಬಸ್; ಓರ್ವ ಮೃತ್ಯು, ಐವರು ಗಂಭೀರ

ಅಂಕೋಲಾ: ಚಾಲಕನ ನಿಯಂತ್ರಣ ತಪ್ಪಿದ ಬಸ್ ವೊಂದು ಕಿರುಸೇತುವೆಗೆ ಡಿಕ್ಕಿ ಹೊಡೆದು ಹಳ್ಳಕ್ಕೆ ಉರುಳಿಬಿದ್ದ ಪರಿಣಾಮ ಓರ್ವ ಸ್ಥಳದಲ್ಲಿಯೇ ಮೃತಪಟ್ಟು, 18 ಜನ ಪ್ರಯಾಣಿಕರು ಗಾಯಗೊಂಡ ಘಟನೆ ಅಂಕೋಲಾ ತಾಲೂಕಿನ ಅಗಸೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೋಮವಾರ ನಸುಕಿನ 3 ಗಂಟೆ ಸುಮಾರಿಗೆ ಸಂಭವಿಸಿದೆ. ಗಾಯಗೊಂಡವರ ಪೈಕಿ ಐವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಬೆಳಗಾವಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ವೀಪ‌ರ್ ಬಸ್ ಅಗಸೂರು ಬಳಿ ಇರುವ ಜಗದೀಶ ಡಾಬಾ ಎದುರು ಚಾಲಕನ ನಿಯಂತ್ರಣ ತಪ್ಪಿ […]

ಕಾಪು ಹೊಸ ಮಾರಿಗುಡಿಗೆ ನಟ- ನಿರ್ದೇಶಕ ರಾಜ್ ಬಿ. ಶೆಟ್ಟಿ ಭೇಟಿ

ಉಡುಪಿ: ಜನಪ್ರಿಯ ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರು ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಹೊಸ ಮಾರಿಗುಡಿಗೆ ಭೇಟಿ ನೀಡಿದ್ದಾರೆ. ನೂತನವಾಗಿ ನಿರ್ಮಾಣಗೊಂಡಿರುವ ಮಾರಿಗುಡಿ ದೇಗುಲ ದರ್ಶನ ಮಾಡಿ, ಪೂಜೆ ಸಲ್ಲಿಸಿದ್ದಾರೆ. ದೇವಾಲಯದ ವತಿಯಿಂದ ರಾಜ್ ಬಿ ಶೆಟ್ಟಿಯವರನ್ನು ಗೌರವಿಸಲಾಯಿತು. ಸದ್ಯ ತಮ್ಮ ಲಾಫಿಂಗ್ ಬುದ್ಧ ಸಂಸ್ಥೆಯಿಂದ ನಿರ್ಮಾಣಗೊಂಡಿರುವ “ಸು ಫ್ರಂ ಸೋ” ಸಿನಿಮಾ ಬಿಡುಗಡೆಯ ನಿರೀಕ್ಷೆಯಲ್ಲಿರುವ ರಾಜ್ ಶೆಟ್ಟಿ, ಸಿನಿಮಾ ಪ್ರಚಾರ ಸಲುವಾಗಿ ಕರಾವಳಿ ಪ್ರವಾಸದಲ್ಲಿದ್ದಾರೆ. ಅಭಿಮಾನಿಗಳೇ ಸಿನಿಮಾ ನೋಡಿ ರಿವ್ಯೂ ನೀಡುವಂತೆ, ಚಿತ್ರ […]

ಇನ್ನು ಶಾಲೆಗಳಲ್ಲೇ ಮಕ್ಕಳ ಆಧಾರ್ ಕಾರ್ಡ್ ಅಪ್ಡೇಡ್.!

ನವದಹೆಲಿ: ದೇಶದ 7 ಕೋಟಿ ಮಕ್ಕಳ ಆಧಾರ್‌ ಕಾರ್ಡ್‌ ಅಪ್‌ಡೇಟ್‌ ಆಗದಿರುವ ಕಾರಣ ಶಾಲೆಗಳಲ್ಲಿಯೇ ಬಯೋಮೆಟ್ರಿಕ್‌ ಅಪ್‌ಡೇಟ್‌ ಮಾಡಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಚಿಂತನೆ ನಡೆಸಿದೆ. ಈ ನಿಟ್ಟಿನಲ್ಲಿ ಯೋಜನೆಯೊಂದನ್ನು ರೂಪಿಸಲಾಗುತ್ತಿದ್ದು, 40ರಿಂದ 60 ದಿನಗಳ ಒಳಗೆ ಯೋಜನೆ ಸಿದ್ದಗೊಳ್ಳಲಿದೆ ಎಂದು ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ್‌ ಕುಮಾರ್‌ ತಿಳಿಸಿದ್ದಾರೆ. 5 ವರ್ಷದ ದಾಟಿದ ಪ್ರತಿ ಮಗುವಿನ ಬಯೋಮೆಟ್ರಿಕ್‌ ಅಪ್‌ಡೇಟ್‌ ಮಾಡುವುದು ಕಡ್ಡಾಯವಾಗಿದೆ. 7 ವರ್ಷ ದಾಟಿದ ಬಳಿಕವೂ ಅಪ್‌ಡೇಟ್‌ ಆಗದಿದ್ದರೆ ಆ […]

ಉಡುಪಿ:ಶ್ರೀ ನಿಕೇತನ ಪ್ರೌಢ ಶಾಲೆ ಇಂಟರಾಕ್ಟ್ ಕ್ಲಬ್ ಪದಗ್ರಹಣ ಕಾರ್ಯಕ್ರಮ

ಮಟಪಾಡಿ:ಇಂಟರಾಕ್ಟ್ ಕ್ಲಬ್ ಶ್ರೀನಿಕೇತನ ಪ್ರೌಢ ಶಾಲೆ ಮಟಪಾಡಿ ಇದರ 2025-260 ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು.18ರಂದು ಶಾಲಾ ಸಭಾಂಗಣದಲ್ಲಿ ಜರುಗಿತು. ಪದಪ್ರದಾನ ಅಧಿಕಾರಿ ಬ್ರಹ್ಮಾವರ ರೋಟರಿಯ ಅಧ್ಯಕ್ಷರಾದ ಸತೀಶ್ ಶೆಟ್ಟಿಯವರು ಇಂಟರಾಕ್ಟ್ ಅಧ್ಯಕ್ಷೆ ಪ್ರೇರಣಾರವರಿಗೆ ಪದಗ್ರಹಣ ನೆರವೇರಿಸಿದರು. ಮುಖ್ಯ ಅತಿಥಿ ಶ್ರೀನಿಕೇತನ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ, ಶ್ಯಾಮಲರವರು ಶಾಲೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಟರಿ ಪೂರ್ವಾಧ್ಯಕ್ಷರಾದ ಕಾರ್ಯಚಟುವಟಿಕೆಯ ಅರುಣ್‌ ಕುಮಾರ್ ಶೆಟ್ಟಿಯವರು ಇಂಟರಾಕ್ಟ್ ಕ್ಲಬ್‌ನ ಉದ್ದೇಶಗಳನ್ನು ತಿಳಿಸಿದರು. ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್‌ನ ಸಂಯೋಜಕರಾದ ರಘುಪತಿ ಬ್ರಹ್ಮಾವರ, […]

ಉಡುಪಿ:ಬೀದಿನಾಟಕ ಮತ್ತು ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ

ಉಡುಪಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಉಡುಪಿ ಜಿಲ್ಲೆ ಇವರ ವತಿಯಿಂದ ಸರ್ಕಾರದ ಯೋಜನೆಗಳನ್ನು ಪ್ರಚುರ ಪಡಿಸುವ ಉದ್ದೇಶಕ್ಕಾಗಿ ಬೀದಿನಾಟಕ ಮತ್ತು ಜಾನಪದ ಸಂಗೀತ ಕಲಾ ತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಅಧೀನ ಕಚೇರಿಗಳ ಮೂಲಕ ಪ್ರಸಕ್ತ ಸಾಲಿನಲ್ಲಿ ಬೀದಿನಾಟಕ ಮತ್ತು ಜಾನಪದ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಲು ಅನುಕೂಲವಾಗುವಂತೆ ಜಿಲ್ಲೆಯ 3 ಬೀದಿನಾಟಕ ಹಾಗೂ 3 ಜಾನಪದ ಸಂಗೀತ ಕಲಾತಂಡಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಆಸಕ್ತ ಅರ್ಹ ಬೀದಿ ನಾಟಕ ತಂಡಗಳು ಮತ್ತು ಜಾನಪದ ಸಂಗೀತ […]