ಹೃದಯಾಘಾತದ ಬಗ್ಗೆ ಮೊದಲೇ ಸಿಗುತ್ತೆ ಸುಳಿವು: ಆಗ ನೀವು ಈ ಮುನ್ನೆಚ್ಚರಿಕೆ ಪಾಲಿಸಲೇಬೇಕು

ಹೃದಯಾಘಾತದಿಂದ ಸಾವನ್ನಪ್ಪುವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಆದರೆ ಹೃದಯಾಘಾತ ಸಡನ್ನಾಗಿ ಕಾಣಿಸಿಕೊಂಡರೂ, ಹೃದಯಾಘಾತದ ಲಕ್ಷಣಗಳು ತಿಂಗಳ ಮೊದಲೇ ಅಥವಾ ಕೆಲವು ವಾರಗಳ ಮೊದಲೇ ಸಣ್ಣದ್ದಾಗಿ ಗೋಚರಿಸಲು ಶುರುವಾಗುತ್ತದಂತೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ನಿರ್ಲಕ್ಷ ಬೇಡ: ಈ ಮುನ್ನೆಚ್ಚರಿಕೆ ಇರಲಿ ಹೃದಯಾಘಾತಕ್ಕೆ ಕಾರಣವಾಗುವವರ ಹಲವಾರು ದೈಹಿಕ, ಭಾವನಾತ್ಮಕ ಲಕ್ಷಣಗಳು ನಮಗೆ ತಿಂಗಳು ಅಥವಾ ಕೆಲವು ವಾರಗಳ ಮುಂಚೆಯೇ ಸಂಕೇತಗಳನ್ನು ಕಳುಹಿಸುತ್ತದೆ ಎಂದು ಅಧ್ಯಯನಕಾರರು ಹೇಳಿದ್ದಾರೆ. ಇಂಡಿಯನ್ ಕಾಲೇಜ್ ಆಫ್ ಕಾರ್ಡಿಯಾಲಜಿಯ ಪ್ರಧಾನ ಕಾರ್ಯದರ್ಶಿ ಡಾ. ಸಿ.ಎಂ. ನಾಗೇಶ್ ಅವರ […]
ರೂ.38 ಕೋಟಿ ವೆಚ್ಚದಲ್ಲಿ ತೊಕ್ಕೊಟ್ಟು ಓವರ್ ಬ್ರಿಡ್ಜ್‌ನಿಂದ ಉಳ್ಳಾಲ ಬೈಲ್‌ವರೆಗೆ ಶೀಘ್ರ ರಸ್ತೆ ವಿಸ್ತರಣೆ ಕಾಮಗಾರಿ: ಯು.ಟಿ.ಖಾದರ್

ಉಳ್ಳಾಲ: ತೊಕ್ಕೊಟ್ಟು ಓವರ್ ಬ್ರಿಡ್ಜ್‌ನಿಂದ ಉಳ್ಳಾಲ ಬೈಲ್‌ವರೆಗಿನ ರಸ್ತೆ ವಿಸ್ತರಣೆ ಕಾಮಗಾರಿ ರೂ.38 ಕೋಟಿ ವೆಚ್ಚದಲ್ಲಿ ಶೀಘ್ರದಲ್ಲೇ ನಡೆಯಲಿದೆ. 75 ವರ್ಷಗಳಿಂದ ಬೇಡಿಕೆಯಲ್ಲಿದ್ದ ಒಳಪೇಟೆ ಸಂಪರ್ಕಿಸುವ ರೈಲ್ವೆ ಅಂಡರ್‌ಪಾಸ್ ಕಾಮಗಾರಿ ನಡೆಸಲು ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ರೂ. 2 ಕೋಟಿ ವೆಚ್ಚದಲ್ಲಿ ಅಂಡರ್‌ಪಾಸ್ ಕಾಮಗಾರಿ ನಡೆಯಲಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು. ತೊಕ್ಕೊಟ್ಟು ಒಳಪೇಟೆಯಲ್ಲಿ ರೈಲು ಹಳಿಗೆ ಅಂಡರ್‌ಪಾಸ್ ನಿರ್ಮಾಣ ಮತ್ತು ರೈಲ್ವೇ ಓವರ್‌ಬ್ರಿಡ್ಜ್ ವಿಸ್ತರಣೆಗೆ ಸಂಬಂಧಿಸಿ ರೈಲ್ವೇ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ […]
ಉಡುಪಿ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ; ಆರೋಪಿಗೆ 20 ವರ್ಷ ಜೈಲು ಶಿಕ್ಷೆ.!

ಉಡುಪಿ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಗೆ 20 ವರ್ಷ ಕಠಿಣ ಜೈಲುಶಿಕ್ಷೆ ವಿಧಿಸಿ ಉಡುಪಿ ಪೋಕ್ಸೊ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿದೆ. ಶಿಕ್ಷೆಗೆ ಗುರಿಯಾದ ಆರೋಪಿ ಬಾಗಲಕೋಟೆ ಜಿಲ್ಲೆಯ ಮಂಜುನಾಥ್ ಎನ್. ಆರೋಪಿಗೆ 20 ವರ್ಷ ಜೈಲುಶಿಕ್ಷೆ:ಮಂಜುನಾಥ್ ಪರಿಶಿಷ್ಟ ಜಾತಿಗೆ ಸೇರಿದ ಸಂತ್ರಸ್ತ ಬಾಲಕಿಯನ್ನು ಬಲವಂತದಿಂದ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ದೈಹಿಕ ಸಂಪರ್ಕ ಬೆಳೆಸಿದ್ದನು. ಈ ವಿಚಾರವನ್ನು ಯಾರಿಗಾದರೂ ಹೇಳಿದ್ದಲ್ಲಿ, ತಾನು ವಿಡಿಯೋ ಮಾಡಿದ್ದು, ಮನೆಯವರಿಗೆ ಕಳುಹಿಸುವುದಾಗಿ […]
ಕರಾವಳಿಯ ಜಿಲ್ಲೆಗಳಿಗೆ ಭಾರೀ ಮಳೆ; ರೆಡ್ ಅಲರ್ಟ್ ಘೋಷಣೆ.

ಉಡುಪಿ: ರಾಜ್ಯ ಕರಾವಳಿಯ ಜಿಲ್ಲೆಗಳಿಗೆ ಭಾರೀ ಮಳೆಯ ಸಾದ್ಯತೆಯಿದ್ದು, ಜು.20, ಮತ್ತು 21ರಂದು ರೆಡ್ ಅಲರ್ಟ್ ಹಾಗೂ ನಂತರದ ಐದು ದಿನಗಳಲ್ಲಿ ಆರೆಂಜ್ ಅಲರ್ಟ್‌ನ್ನು ಹವಾಮಾನ ಇಲಾಖೆ ಘೋಷಿಸಿದೆ. ಈ ಸಂದರ್ಭದಲ್ಲಿ ಭಾರೀ ಮಳೆಯ ಸಾದ್ಯತೆಯನ್ನು ಅದು ನೀಡಿದೆ. ಜು.20, 21 ರಂದು ಗಂಟೆಗೆ 30ರಿಂದ 40ಕಿ.ಮೀ. ವೇಗದ ಗಾಳಿಯೊಂದಿಗೆ ಭಾರೀ ಮಳೆ ಸುರಿಯಲಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಅದು ಎಚ್ಚರಿಸಿದೆ. ಉಡುಪಿ ಜಿಲ್ಲೆಯಲ್ಲಿ ಇಂದು ಸರಾಸರಿ 28.4ಮಿ.ಮೀ. ಮಳೆ ದಾಖಲಾಗಿದೆ. ಕಾಪುವಿನಲ್ಲಿ ಅತ್ಯಧಿಕ 56.5ಮಿ.ಮೀ. […]
ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ: ಹೈದರಾಬಾದ್‌ಗೆ ಮರಳಿದ ವಿಮಾನ

ಹೈದರಾಬಾದ್: ಥಾಯ್ಲೆಂಡ್ ಫುಕೆಟ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಹಾರಾಟ ಆರಂಭಿಸಿದ ಕೆಲ ಸಮಯದಲ್ಲೇ ಹೈದರಾಬಾದ್‌ಗೆ ಮರಳಿತು. ಬೋಯಿಂಗ್ 737 ಮ್ಯಾಕ್ಸ್ 8 ವಿಮಾನದಲ್ಲಿ 98 ಪ್ರಯಾಣಿಕರಿದ್ದರು. ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತು. ಹೀಗಾಗಿ, ಅದು ಮುಂಜಾನೆ 6.57ರ ಸುಮಾರಿಗೆ ಹೈದರಾಬಾದ್‌ಗೆ ಮರಳಿ ಸುರಕ್ಷಿತವಾಗಿ ಇಳಿಯಿತು. ಪ್ರಯಾಣಿಕರಿಗಾಗಿ ಬೇರೊಂದು ವಿಮಾನದ ವ್ಯವಸ್ಥೆ ಮಾಡಲಾಯಿತು. ಸುರಕ್ಷತೆಯು ನಮ್ಮ ಆದ್ಯತೆಯಾಗಿದೆ ಎಂದು ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ. […]