ಉಡುಪಿ ತುಳುಕೂಟದಿಂದ ಆಟಿದ ತಿರ್ಲ್-2025″ ವಿನೂತನ ಕಾರ್ಯಕ್ರಮ

ಉಡುಪಿ: ತುಳುಕೂಟ ಉಡುಪಿ ಇದರ ಆಶ್ರಯದಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ “ಆಟಿದ ತಿರ್ಲ್-2025” ಎಂಬ ವಿನೂತನ ಕಾರ್ಯಕ್ರಮವನ್ನು ಉಡುಪಿ ಬಡಗುಬೆಟ್ಟು ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಇಂದು ಆಯೋಜಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಬಿ. ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ತುಳುನಾಡಿನ ಆಚಾರ- ವಿಚಾರ, ಸಂಸ್ಕೃತಿ, ಸಂಪ್ರದಾಯಗಳನ್ನು ಇಂದಿನ ಯುವಪೀಳಿಗೆಗೆ ತಿಳಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ಬಹಳ ಅಗತ್ಯ ಎಂದರು. ಹಿಂದಿನ ಕಾಲದಲ್ಲಿ ಆಟಿ ತಿಂಗಳು ಎಂದರೆ ಬಹಳ ಕಷ್ಟದ […]
ರಾಯಚೂರು: ಹಾವು ಕಡಿತದಿಂದ 4 ವರ್ಷದ ಬಾಲಕಿ ಮೃತ್ಯು

ರಾಯಚೂರು:ಮನೆಯಲ್ಲಿ ಮಲಗಿದ್ದಾಗ ಹಾವು ಕಡಿತದಿಂದ 4 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಗಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯ ದೇವದುರ್ಗ ತಾಲ್ಲೂಕಿನ ಹೊನ್ನಟಗಿ ಗ್ರಾಮದಲ್ಲಿ ನಡೆದಿದೆ. ಸಿರಿಯಮ್ಮ ರಮೇಶ್ (4) ಮೃತಪಟ್ಟ ಬಾಲಕಿ ಎಂದು ಗುರುತಿಸಲಾಗಿದೆ. ರಾತ್ರಿ ಮನೆಯಲ್ಲಿ ಮಲಗಿದಾಗ ಹಾವು ಕಚ್ಚಿದೆ ತಕ್ಷಣವೇ ಪೋಷಕರು ರಿಮ್ಸ್ ಆಸ್ಪತ್ರೆಗೆ ದಾಖಲಿಸಿದರು. ಹಾವು ಕಡಿತದಿಂದ ಬಾಲಕಿಯು ಸ್ಥಿತಿ ಗಂಭೀರವಾಗಿತ್ತು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.
ಜು.20 ರಂದು ಬೆಂಗಳೂರಿನಲ್ಲಿ ಆಟಿಡೊಂಜಿ ದಿನ- 2025 ಕಾರ್ಯಕ್ರಮ

ಬೆಂಗಳೂರು:ಜು.20 ರಂದು ಬಿಲ್ಲವ ಅಸೋಸಿಯೇಶನ್, ಬೆಂಗಳೂರು ಇವರ ವತಿಯಿಂದ ಆಟಿಡೊಂಜಿ ದಿನ- 2025 ಕಾರ್ಯಕ್ರಮವು ದೇವಕಿ ಆನಂದ ಸುವರ್ಣ ಕನ್ವೆನ್‌ಷನ್ ಹಾಲ್, ಬಿಲ್ಲವ ಭವನದಲ್ಲಿ ನಡೆಯಲಿದೆ. 50ನೇ ಸುವರ್ಣ ಸಂಭ್ರಮದ ಪ್ರಯುಕ್ತ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಬೆಳಗ್ಗೆ 9.30 ಗಂಟೆಗೆ ಖ್ಯಾತ ಹಿನ್ನಲೆ ಗಾಯಕಿ ಶ್ರೀಮತಿ ಕಲಾವತಿ ದಯಾನಂದ್ ರವರಿಂದ “ಜಾನಪದ ಝೇಂಕಾರ” ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 10.30 ಗಂಟೆಗೆ ಡಾ|| ರಕ್ಷಾ ನಿರ್ದೇಶನದ ಮಹಿಳಾ ಘಟಕದ ಭಜನಾ ತಂಡದವರಿಂದ ನೃತ್ಯ ರೂಪಕ ಸ್ವಾಗತ ಕುಣಿತ […]
ಹಿರಿಯ ಯಕ್ಷಗಾನ ಕಲಾವಿದ ಪಾತಾಳ ವೆಂಕಟರಮಣ ಭಟ್ ನಿಧನ

ಮಂಗಳೂರು: ಹಿರಿಯ ಯಕ್ಷಗಾನ ಕಲಾವಿದ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಾತಾಳ ವೆಂಕಟರಮಣ ಭಟ್ (92) ಉಪ್ಪಿನಂಗಡಿಯ ತಮ್ಮ ಸ್ವ ಗೃಹದಲ್ಲಿ ಶನಿವಾರ (ಜು.19) ಹೃದಯಾಘಾತದಿಂದ ನಿಧನರಾದರು. ಇವರು ತೆಂಕು ಮತ್ತು ಬಡಗು ಎರಡೂ ತಿಟ್ಟುಗಳಲ್ಲಿ ವೇಷಗಳನ್ನು ಮಾಡಿ ಭಾವಾಭಿನಯ ಮತ್ತು ನೃತ್ಯ ಲಾಲಿತ್ಯಗಳಿಂದ ವೈವಿಧ್ಯಮಯ ವೇಷಗಳಲ್ಲಿ ಕಾಣಿಸಿಕೊಂಡಿದ್ದರು. ಪುತ್ತೂರು ಕೃಷ್ಣಭಟ್ಟರಿಂದ ತೆಂಕುತಿಟ್ಟಿನ ಅಭ್ಯಾಸ ಮಾಡಿದ್ದ ವೆಂಕಟರಮಣ ಭಟ್ಟರು, ಬಳಿಕ ಮೂಲ್ಕಿ ಮೇಳ, ಸುರತ್ಕಲ್ ಮೇಳ, ಸೌಕೂರು ಮೇಳ, ಧರ್ಮಸ್ಥಳದ ಮಂಜುನಾಥೇಶ್ವರ ಯಕ್ಷಗಾನ ಮಂಡಳಿಗಳಲ್ಲಿ ತಿರುಗಾಟ ನಡೆಸಿದ್ದರು. ರಂಭೆ, […]
ಉಡುಪಿ:ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿನಿ ನೇಣಿಗೆ ಶರಣು

ಬ್ರಹ್ಮಾವರ: ಅನುತ್ತೀಣರಾದ ಚಿಂತೆಯಲ್ಲಿ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜು.17ರಂದು ಮಧ್ಯಾಹ್ನ ವೇಳೆ ನಡೆದಿದೆ. ಮೃತರನ್ನು ರಾಮ ಎಂಬವರ ಮಗಳು ರಶ್ಮಿತಾ(20) ಎಂದು ಗುರುತಿಸ ಲಾಗಿದೆ. ರಶ್ಮಿತಾ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿ ಸುಮಾರು 6 ತಿಂಗಳಿಂದ ಕಾಲೇಜಿಗೆ ಹೋಗದೆ ಮನೆಯಲ್ಲಿಯೇ ಇದ್ದು, ಕಳೆದ ಎರಡೂವರೆ ತಿಂಗಳಿಂದ ಮಾನಸಿಕ ಖಾಯಿಲೆಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇದೇ ಕಾರಣದಿಂದ ಮಾನಸಿಕವಾಗಿ ನೊಂದ ಆಕೆ ಜೀವನದಲ್ಲಿ ಜಿಗುಪ್ಸೆ ಗೊಂಡು ಮನೆಯ ಕೋಣೆಯ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ […]