ಉಡುಪಿ: ವ್ಯಕ್ತಿ ನಾಪತ್ತೆ.

ಉಡುಪಿ, ಜುಲೈ 19: ಉಡುಪಿಯಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಬಸಪ್ಪ ಛಲವಾದಿ (50) ಎಂಬ ವ್ಯಕ್ತಿಯು ಜುಲೈ 6 ರಂದು ಮನೆಯಿಂದ ಹೊರಗೆ ಹೋದವರು ವಾಪಾಸ್ಸು ಬಾರದೇ, ಸಂಬ೦ಧಿಕರ ಮನೆಗೂ ಹೋಗದೇ ನಾಪತ್ತೆಯಾಗಿರುತ್ತಾರೆ. 5 ಅಡಿ 5 ಇಂಚು ಎತ್ತರ, ಅಗಲ ಮುಖ, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಣಿಪಾಲ ಪೊಲೀಸ್ ಠಾಣೆಯ ಪಿ.ಐ ಮೊ.ನಂ: 9480805448, ಪಿ.ಎಸ್.ಐ ಮೊ.ನಂ: 9480805475 […]
ಉಡುಪಿ: ಆಸ್ಪತ್ರೆಗೆ ಕರೆದೊಯ್ಯುವಾಗ ಡಿವೈಡರ್ ಗೆ ಡಿಕ್ಕಿ ಹೊಡೆದ ಆ್ಯಂಬುಲೆನ್; ರೋಗಿ ಸಾವು.

ಉಡುಪಿ : ಮಣಿಪಾಲದ ಆಸ್ಪತ್ರೆಗೆ ರೋಗಿಯೊಬ್ಬರನ್ನು ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ರಸ್ತೆ ಡಿವೈಡರ್‌ಗೆ ಡಿಕ್ಕಿಯಾದ ಪರಿಣಾಮ ರೋಗಿ ಸಾವನ್ನಪ್ಪಿದ ಘಟನೆ ಎಂಜಿಎಂ ಕಾಲೇಜಿನ ಮುಂಭಾಗದಲ್ಲಿ ಶನಿವಾರ ನಡೆದಿದೆ. ಕೋಟೇಶ್ವರದಿಂದ ಮಣಿಪಾಲ ಆಸ್ಪತ್ರೆಗೆ ಆ್ಯಂಬುಲೆನ್ಸ್‌ನಲ್ಲಿ ರೋಗಿಯೊಬ್ಬರನ್ನು ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಕಾಲೇಜಿನ ಸಮೀಪ ರಸ್ತೆ ಡಿವೈಡರ್ ಬಳಿ ನಿಯಂತ್ರಣ ಕಳೆದುಕೊಂಡು ಬ್ಯಾರಿಕೇಡ್‌ಗಳಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗುತ್ತಿದೆ. ಅಪಘಾತದ ನಂತರ ತಕ್ಷಣ ರೋಗಿಯನ್ನು ಮತ್ತೊಂದು ಆ್ಯಂಬುಲೆನ್ಸ್‌ಗೆ ಸ್ಥಳಾಂತರಿಸಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಉಡುಪಿ: ಆಸ್ಪತ್ರೆಗೆ ಕರೆದೊಯ್ಯುವಾಗ ಡಿವೈಡರ್ ಗೆ ಡಿಕ್ಕಿ ಹೊಡೆದ ಆ್ಯಂಬುಲೆನ್ಸ್; ರೋಗಿ ಸಾವು

ಉಡುಪಿ : ಮಣಿಪಾಲದ ಆಸ್ಪತ್ರೆಗೆ ರೋಗಿಯೊಬ್ಬರನ್ನು ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ರಸ್ತೆ ಡಿವೈಡರ್‌ಗೆ ಡಿಕ್ಕಿಯಾದ ಪರಿಣಾಮ ರೋಗಿ ಸಾವನ್ನಪ್ಪಿದ ಘಟನೆ ಎಂಜಿಎಂ ಕಾಲೇಜಿನ ಮುಂಭಾಗದಲ್ಲಿ ಶನಿವಾರ ನಡೆದಿದೆ. ಕೋಟೇಶ್ವರದಿಂದ ಮಣಿಪಾಲ ಆಸ್ಪತ್ರೆಗೆ ಆ್ಯಂಬುಲೆನ್ಸ್‌ನಲ್ಲಿ ರೋಗಿಯೊಬ್ಬರನ್ನು ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಕಾಲೇಜಿನ ಸಮೀಪ ರಸ್ತೆ ಡಿವೈಡರ್ ಬಳಿ ನಿಯಂತ್ರಣ ಕಳೆದುಕೊಂಡು ಬ್ಯಾರಿಕೇಡ್‌ಗಳಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗುತ್ತಿದೆ. ಅಪಘಾತದ ನಂತರ ತಕ್ಷಣ ರೋಗಿಯನ್ನು ಮತ್ತೊಂದು ಆ್ಯಂಬುಲೆನ್ಸ್‌ಗೆ ಸ್ಥಳಾಂತರಿಸಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಉಡುಪಿ: ಮಹಿಳೆ ನಾಪತ್ತೆ

ಉಡುಪಿ, ಜುಲೈ 19: ಕೋಟೇಶ್ವರದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಉತ್ತರ ಪ್ರದೇಶ ಮೂಲದ ಅಂಜಲಿ (24) ಎಂಬ ಮಹಿಳೆಯು ಜುಲೈ 7 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೆ ನಾಪತ್ತೆಯಾಗಿರುತ್ತಾರೆ. 5 ಅಡಿ 5 ಇಂಚು ಎತ್ತರ, ಗೋಧಿ ಮೈಬಣ್ಣ ಹೊಂದಿದ್ದು, ಹಿಂದಿ, ಓರಿಯಾ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕುಂದಾಪುರ ಪೊಲೀಸ್ ಠಾಣೆ ದೂ.ಸಂಖ್ಯೆ: 08254-230338 ಹಾಗು ಕುಂದಾಪುರ ಠಾಣೆಯ ಪಿ.ಐ ಮೊ.ನಂ: 9480805455 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕುಂದಾಪುರ ಪೊಲೀಸ್ […]
ಬೈಂದೂರು: ಸೈನ್ ಇನ್ ಸೆಕ್ಯೂರಿಟಿ ಸಿಬ್ಬಂದಿ ಸಮಯಪ್ರಜ್ಞೆಯಿಂದ ಸೊಸೈಟಿಗೆ ಕನ್ನ ಹಾಕಿದ್ದ ಕಳ್ಳರ ಸಂಚು ವಿಫಲ

ಉಡುಪಿ: ಸೈನ್ ಇನ್ ಸೆಕ್ಯೂರಿಟಿ ಸಂಸ್ಥೆಯ ಲೈವ್ ಮಾನಿಟರಿಂಗ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ಸೊಸೈಟಿ ಕಳ್ಳತನಕ್ಕೆ ಯತ್ನಿಸಿದ್ದ ದುಷ್ಕರ್ಮಿಗಳ ಸಂಚು ವಿಫಲಗೊಂಡಿರುವ ಘಟನೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಅರೆಶಿರೂರಿನಲ್ಲಿ ಶನಿವಾರ ನಸುಕಿನ ಜಾವ ನಡೆದಿದೆ. ಕೊಲ್ಲೂರು ವ್ಯವಸಾಯ ಸೇವಾ ಸಹಕಾರಿ ಸಂಘ ಅರೆಶಿರೂರು ಶಾಖೆಗೆ ಶನಿವಾರ 2:42 ರ ಸುಮಾರಿಗೆ ಆಗಮಿಸಿದ ಕಳ್ಳರು ಹೊರಗಡೆ ಗೋಡೆಗೆ ಅಳವಡಿಸಲಾಗಿದ್ದ ಬಲ್ಬ್ ಅನ್ನು ಕಿತ್ತು ಕಿಟಕಿಯ ಗ್ರಿಲ್ ಮುರಿಯಲಾರಂಭಿಸಿದ್ದಾರೆ. ಈ ವೇಳೆ ಸೈನ್ ಇನ್ ಸೆಕ್ಯೂರಿಟಿ […]