ಉಡುಪಿ:ಆಧಾರ್ ಕಾರ್ಡ್ ಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ಪ್ರತಿಯೊಬ್ಬರೂ ನೋಂದಾಯಿಸಿಕೊಳ್ಳಿ : ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

ಉಡುಪಿ: ಜಿಲ್ಲೆಯಲ್ಲಿ ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರೂ ತಮ್ಮ ಮೊಬೈಲ್ ಸಂಖ್ಯೆಯನ್ನುಆಧಾರ್‌ಗೆ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ತಪ್ಪದೇ ಆಧಾರ್ ಲಿಂಗ್ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಎಂದರು. ಅವರು ಗುರುವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ವಿಡಿಯೋ ಕಾರ್ನ್ಪರೆನ್ಸ್ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಆಧಾರ್ ಮಾನಿಟರಿಂಗ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಯಲ್ಲಿ ಈವರೆಗೆ 14,11,209 ಜನರು ಆಧಾರ್ ಕಾರ್ಡ್ ಅನ್ನು ಹೊಂದಿದ್ದು, ಅವರಲ್ಲಿ 13,42,275 ಜನರು ತಮ್ಮ ಮೊಬೈಲ್ ಸಂಖ್ಯೆಯನ್ನು ನೋಂದಾಯಿಸಿಕೊಂಡು ಶೇ. […]
ಉಡುಪಿ:ಸಂತ್ರಸ್ತ ಮಕ್ಕಳಿಗೆ ಬೆಂಬಲ ವ್ಯಕ್ತಿಗಳಾಗಿ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ

ಉಡುಪಿ: ಪೋಕ್ಸೋ ಕಾಯಿದೆಯಡಿ ಸಂತ್ರಸ್ತ ಮಕ್ಕಳಿಗೆ ಬೆಂಬಲ ವ್ಯಕ್ತಿಗಳಿಗಾಗಿ ಸೇವೆ ಸಲ್ಲಿಸಲು ಮಕ್ಕಳೊಂದಿಗೆಕೆಲಸ ಮಾಡುವ ಮೂಲಕ ಮಕ್ಕಳ ಶಿಕ್ಷಣ, ಅಭಿವೃದ್ಧಿ ಅಥವಾ ರಕ್ಷಣಾ ವಿಷಯದಲ್ಲಿ ಕನಿಷ್ಟ 3 ವರ್ಷಗಳ ಅನುಭವದೊಂದಿಗೆ ಪದವಿ ಅಥವಾ ಸಮಾಜ ಕಾರ್ಯ/ಸೋಷಿಯೋಲಾಜಿ/ಸೈಕೋಲಾಜಿ/ಚೈಲ್ಡ್ ಡೆವಲಪ್‌ಮೆಂಟ್ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರುವ ಅಥವಾ ಮಕ್ಕಳ ಆರೈಕೆ ಕೇಂದ್ರದಲ್ಲಿ ಮಕ್ಕಳೊಂದಿಗೆ ಕೆಲಸ ಮಾಡುವ ಅಧಿಕಾರಿಗಳು ಮತ್ತು ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿಕೆಲಸ ಮಾಡುವ ಯಾವುದೇ ಸಂಸ್ಥೆ ಕೂಡ ಅರ್ಜಿ ಸಲ್ಲಿಸಬಹುದಾಗಿದೆ. ಪ್ರತಿ ಪ್ರಕರಣಕ್ಕೆ 3000 ರೂ. ಸಂಭಾವನೆ ನೀಡಲಾಗುವುದು. […]
ಶ್ರವಣ ದೋಷಗಳಿಗಿನ್ನು ಗುಡ್ ಬೈ ಅನ್ನಿ: ಉಡುಪಿಯ ಸ್ಪೀಚ್ & ಹೇರಿಂಗ್ ಕೇರ್ ಸೆಂಟರ್ ನಲ್ಲಿದೆ ನಿಮ್ಮೆಲ್ಲಾ ಶ್ರವಣ ದೋಷಗಳಿಗೆ ಪರಿಹಾರ

ಶ್ರವಣ ಸಮಸ್ಯೆಗಳು ಈ ಆಧುನಿಕ ಕಾಲದಲ್ಲಿ ಜಾಸ್ತಿಯಾಗುತ್ತಿದೆ. ಮಂದವಾಗಿ ಕಿವಿ ಕೇಳುವುದು, ಯಾರೋ ಮಾತಾಡುವಾಗ ಸರಿಯಾಗಿ ಕೇಳದೇ ಇರುವುದು ಇಂತಹ ಸಣ್ಣಪುಟ್ಟ ಸಮಸ್ಯೆಗಳೇ ಕೊನೆಗೆ ದೊಡ್ಡದ್ದಾಗಿ ಬೆಳೆದು ಮಾನಸಿಕ ಖಿನ್ನತೆಗೆ ಕಾರಣವಾಗುತ್ತದೆ. ಅದಕ್ಕೋಸ್ಕರವೇ ಉಡುಪಿಯ ಸ್ಪೀಚ್ & ಹೇರಿಂಗ್ ಕೇರ್ ಸೆಂಟರ್ ಇಂತಹ ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡುತ್ತದೆ. ಯಾವೆಲ್ಲಾ ಸಮಸ್ಯೆಗಳಿಗೆ ಪರಿಹಾರ? ಪದಗಳನ್ನು ಪುನರಾವರ್ತಿಸಲು ನೀವು ಆಗಾಗ್ಗೆ ಕೇಳುವುದುನಿಮ್ಮ ಕಿವಿಯಲ್ಲಿ ಯಾವಾಗಲೂ ಶಬ್ದವು ಧ್ವನಿಸುತ್ತಿರುವುದುನಿಮ್ಮ ಶ್ರವಣ ಸಮಸ್ಯೆಯೂ ಹೊಸ ಜನರನ್ನು ಭೇಟಿಯಾದಾಗ ನೀವು ಮುಜುಗರ ಕೊಳ್ಳಗಾಗುವಂತೆ […]
ಉಡುಪಿ: ದಲಿತರ ಭೂಮಿ, ವಸತಿ ಹಕ್ಕಿಗಾಗಿ ಆಗ್ರಹಿಸಿ ದಸಂಸ ಧರಣಿ

ಉಡುಪಿ: ದಲಿತರ ಭೂಮಿ ಮತ್ತು ವಸತಿ ಹಕ್ಕಿಗಾಗಿ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಉಡುಪಿ ಜಿಲ್ಲೆ ಇದರ ನೇತೃತ್ವದಲ್ಲಿ ಉಡುಪಿ ಜಿಲ್ಲೆಯ ಏಳು ತಾಲೂಕು ಕಚೇರಿಗಳ ಮುಂದೆ ಶುಕ್ರವಾರ ಏಕಕಾಲದಲ್ಲಿ ಧರಣಿ ನಡೆಸಲಾಯಿತು. ಉಡುಪಿ ತಾಲೂಕು ಕಚೇರಿ ಮುಂಭಾಗದಲ್ಲಿ ಜಮಾಯಿಸಿದ್ದ ನೂರಾರು ಧರಣಿನಿರತರು ರಾಜ್ಯ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಧರಣಿ ಉದ್ದೇಶಿಸಿ ಮಾತನಾಡಿದ ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಅವರು, ಲಕ್ಷಾಂತರ ಎಕರೆ ಸರಕಾರಿ ಭೂಮಿ ಇದ್ದರೂ ದಲಿತರಿಗೆ […]
ಧರ್ಮಸ್ಥಳ ಮೃತದೇಹ ಹೂತು ಹಾಕಿದ ಪ್ರಕರಣ: ತನಿಖೆಯಲ್ಲಿ ಪಿಎಐ ವಿರುದ್ದ ದುರ್ವರ್ತನೆ, ಗೌಪ್ಯತೆಯ ಉಲ್ಲಂಘನೆಯ ಆರೋಪ ಮಾಡಿದ ಅನನ್ಯಾ ಭಟ್ ತಾಯಿ

ಮಂಗಳೂರು: ಧರ್ಮಸ್ಥಳದಲ್ಲಿ ತನ್ನ ಮಗಳು ಅನನ್ಯಾ ಭಟ್ ನಿಗೂಢವಾಗಿ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ ಅನನ್ಯಾ ಭಟ್ ಅವರ ತಾಯಿ ಸುಜಾತಾ ಭಟ್, ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಹೂತು ಹಾಕಿದ ಪ್ರಕರಣದ ತನಿಖೆ ಸಂದರ್ಭ ಧರ್ಮಸ್ಥಳ ಪಿಎಸೈ ವಿರುದ್ದ ದುರ್ವರ್ತನೆ, ಗೌಪ್ಯತೆಯ ಉಲ್ಲಂಘನೆಯ ಆರೋಪ ಮಾಡಿದ್ದಾರೆ. ಈ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಗೌಪ್ಯ ಸಾಕ್ಷಿ ನೀಡಿರುವ ಹೇಳಿಕೆಯನ್ನು ಪಿಎಸ್ಐ ಅವರು ಕಾನೂನುಬಾಹಿರವಾಗಿ ಬಹಿರಂಗಪಡಿಸಿದ್ದಾರೆ. ಎಂದವರು ದೂರಿದ್ದಾರೆ. ಈ ಕುರಿತು ದೂರನ್ನು ಭಾರತದ ಮುಖ್ಯ ನ್ಯಾಯಮೂರ್ತಿ, ಮುಖ್ಯಮಂತ್ರಿ, ಗೃಹಸಚಿವರು, ಹೈಕೋರ್ಟ್ […]