ಬಿಷ್ಣೋಯ್ ಗ್ಯಾಂಗ್ ಹೆಸರಲ್ಲಿ ಧಮ್ಕಿ ಹಾಕಿ ಒಂದು ಕೋಟಿ ಪೀಕಲು ಯತ್ನಿಸಿದ್ದ ಫ್ರೆಂಡ್ಸ್ ಗ್ಯಾಂಗ್, ಪೊಲೀಸ್ ವಶಕ್ಕೆ.!

ಬೆಂಗಳೂರು: ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೆಸರಲ್ಲಿ ಉದ್ಯಮಿಗೆ ಬೆದರಿಕೆ ಹಾಕಿದ್ದ ನಾಲ್ವರನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದಾರೆ. ಬಿಷ್ಣೋಯ್ ಗ್ಯಾಂಗ್ ಹೆಸರಲ್ಲಿ ಬೇಡಿಕೆ:ಬಂಧಿತರನ್ನು ಬೆಂಗಳೂರಿನ ಮಹಮ್ಮದ್ ರಫಿಕ್, ಉತ್ತರ ಪ್ರದೇಶದ ಶಿಶುಪಾಲ್ ಸಿಂಗ್, ವನ್ಷ್ ಸಚ್ ದೇವ್ ಮತ್ತು ಅಮಿತ್ ಚೌಧರಿ ಎಂದು ಗುರುತಿಸಲಾಗಿದೆ. ಜು.9 ರಂದು ಆರೋಪಿಗಳು ಉದ್ಯಮಿ ರಿಕಬ್ ಚಂದ್ ಸಿಂಘ್ವಿಗೆ ಬಿಷ್ಣೋಯ್ ಗ್ಯಾಂಗ್ ಹೆಸರಲ್ಲಿ ಕರೆ ಮಾಡಿ ಒಂದು ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ರೆ ನಿನ್ನ ಮಗುವನ್ನು ಅಪಹರಿಸುತ್ತೇವೆ ಎಂದು […]
ಉಡುಪಿ: ಉಡುಪಿ ಮತ್ತು ಮಂಗಳೂರಿನ ಖಾಸಗಿ ಕಂಪನಿಗಳಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಉಡುಪಿ ಮತ್ತು ಮಂಗಳೂರಿನ ಖಾಸಗಿ ಕಂಪನಿಗಳಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: 🔸ಅಕೌಂಟೆಂಟ್🔸ಬ್ರಾಂಚ್ ಮ್ಯಾನೇಜರ್🔸ಬ್ರಾಂಚ್ ಎಕ್ಸಿಕ್ಯೂಟಿವ್ 🔸ಮೆಡಿಕಲ್ ರೆಪ್ರೆಸೆಂಟೇಟಿವ್🔸ಬಿಲ್ಲಿಂಗ್ ಸ್ಟಾಫ್🔸ಸೂಪರ್ವೈಸರ್🔸 ಆಫೀಸ್ ಬಾಯ್🔸ಟೆಕ್ನಿಷಿಯನ್ ಆಸಕ್ತರು ಸಂಪರ್ಕಿಸಿ:📞 7019891796, 7975861846
ಮೂಡಬಿದ್ರೆ ಕಾಲೇಜಿನ ಉಪನ್ಯಾಸಕರಿಂದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ: ಉಪನ್ಯಾಸಕರು ಸೇರಿ ಮೂವರು ಬಂಧನ.

ಬೆಂಗಳೂರು: ವಿದ್ಯಾರ್ಥಿನಿಯನ್ನು ಬ್ಲ್ಯಾಕ್‌ಮೇಲ್ ಮಾಡಿ ಅತ್ಯಾಚಾರ ಎಸಗಿದ್ದ ಆರೋಪದಡಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಕಾಲೇಜೊಂದರ ಇಬ್ಬರು ಉಪನ್ಯಾಸಕರು ಹಾಗೂ ಅವರ ಸ್ನೇಹಿತನನ್ನು ಮಾರತ್‌ಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತರು ಕಾಲೇಜಿನ ಭೌತವಿಜ್ಞಾನ ವಿಭಾಗದ ಉಪನ್ಯಾಸಕ ನರೇಂದ್ರ, ಜೀವವಿಜ್ಞಾನ ವಿಭಾಗದ ಉಪನ್ಯಾಸಕ ಸಂದೀಪ್ ಹಾಗೂ ಅವರ ಸ್ನೇಹಿತ, ಬೆಂಗಳೂರಿನ ನಿವಾಸಿ ಅನೂಪ್. 19 ವರ್ಷದ ಸಂತ್ರಸ್ತೆ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಘಟನೆಯು ಕೆಲವು ತಿಂಗಳ ಹಿಂದೆ ನಡೆದಿತ್ತು. ಆರೋಪಿಗಳ […]
ಡಾ. ಶರತ್ ಕೆ. ರಾವ್ ಅವರಿಗೆ ಲಂಡನ್ ನ ಗೌರವಾನ್ವಿತ ಎಫ್‌ಆರ್‌ಸಿಪಿ ಪ್ರಶಸ್ತಿ

ಮಣಿಪಾಲ: ಪ್ರಸಿದ್ಧ ಆರ್ಥೋಪೆಡಿಕ್ ಶಸ್ತ್ರಚಿಕಿತ್ಸಕ ಮತ್ತು ಶೈಕ್ಷಣಿಕ ನಾಯಕ ಡಾ. ಶರತ್ ಕುಮಾರ್ ರಾವ್ ಕೆ ಅವರ, ವೈದ್ಯಕೀಯ ನಾಯಕತ್ವ ಮತ್ತು ಆರೋಗ್ಯ ನಿರ್ವಹಣೆಯಲ್ಲಿ ಅವರ ಸಾಧನೆ ಕೊಡುಗೆಗಳನ್ನು ಗುರುತಿಸಿ, ಲಂಡನ್ ನ ರಾಯಲ್ ಕಾಲೇಜ್ ಆಫ್ ಫಿಸಿಷಿಯನ್ಸ್ ಅದರ ಗೌರವ ಡಾಕ್ಟರೇಟ್ (ಎಫ್ ಆರ್ ಸಿ ಪಿ) ನೀಡಿ ಗೌರವಿಸಿದೆ. ಈ ಪ್ರಶಸ್ತಿಯನ್ನು ಜುಲೈ 8 ರಂದು ಲಂಡನ್‌ನ ರಾಯಲ್ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಡಾ. ಶರತ್ ಕೆ ರಾವ್ ಅವರಿಗೆ ಅಧಿಕೃತವಾಗಿ ಪ್ರದಾನ ಮಾಡಲಾಯಿತು. […]
ನೀವು ಚಿಕನ್ ಪ್ರಿಯರೇ? ಕೋಳಿಯ ಕಾಲು ಸವಿಯಲು ಭಾರೀ ಇಷ್ಟನಾ? ಹಾಗಾದ್ರೆ ಒಮ್ಮೆ ಈ ವಿಷ್ಯ ತಿಳ್ಕೊಳ್ಳಿ

ಕೋಳಿ ಮಾಂಸಕ್ಕೆ ನಮ್ಮಲ್ಲಿ ವರ್ಷಪೂರ್ತಿ ಬೇಡಿಕೆ ಇದ್ದೇ ಇರುತ್ತದೆ. ದಿನಾಲೂ ಚಿಕನ್ ತಿನ್ನುವ ನಾನ್ ವೆಜ್ ಪ್ರಿಯರಿಗೇನೂ ಕಡಿಮೆ ಇಲ್ಲ. ಕೋಳಿ ಮಾಂಸದಲ್ಲಿ ಪ್ರೋಟೀನ್ ಜಾಸ್ತಿ ಇದೆ ಎನ್ನುವ ಕಾರಣಕ್ಕೆ ತಿನ್ನುವವರೂ ಇದ್ದಾರೆ. ಆದರೆ ಅತೀಯಾಗಿ ಚಿಕನ್ ತಿನ್ನುವುದರಿಂದ ಹೃದಯಾಘಾತವಾಗುತ್ತದೆ ಎನ್ನುವ ವದಂತಿಯೊಂದು ಈಗ ಹರಿದಾಡುತ್ತಿದೆ. ಆದರೆ ಇದಕ್ಕೆ ಪುರಾವೆ ಏನೂ ಸಿಕ್ಕಿಲ್ಲವಾದರೂ ಅತೀಯಾದ ಚಿಕನ್ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವುದು ಬಹುತೇಕ ವೈದ್ಯರ ಅಭಿಮತ. ಆದರೆ ಫಾರಂ ಗಳಲ್ಲಿ ಕಡಿಮೆ ಸಮಯದಲ್ಲಿ ಕೋಳಿಯ ತೂಕ ಹೆಚ್ಚಿಸಲು […]