ಉಡುಪಿ: ರಾಜದ್ರೋಹ ಎಸಗಿರುವ ಶಾಸಕ ಸುನೀಲ್ ಕುಮಾರ್ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಲಿ- ಶುಭದ ರಾವ್

ಉಡುಪಿ: ಪರಶುರಾಮ ಮೂರ್ತಿಯ ಹೆಸರಿನಲ್ಲಿ ರಾಜದ್ರೋಹ ಎಸಗಿರುವ ಶಾಸಕ ಸುನೀಲ್ ಕುಮಾರ್ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ್ ರಾವ್ ಆಗ್ರಹಿಸಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಲೋಹ ತಜ್ಞ ಅಲ್ಲಾ ಅಂತಾರೇ, ಆದ್ರೆ ಈ ಹಿಂದೆ ಕಂಚಿನ ಪ್ರತಿಮೆ ಅಂತಾ ಹೇಳಿಕೆ ಕೊಟ್ಟಾಗ, ವಾದ ಮಾಡೋವಾಗ ಲೋಹ ತಜ್ಞರಾಗಿದ್ರ…? ನಾವು ಫೈಬರ್ ಪ್ರತಿಮೆ ಅಂತಾ ಪೂವ್ ಮಾಡ್ತಿವಿ, ನೀವು ಕಂಚಿನ ಪ್ರತಿಮೆ ಅಂತಾ ಫೂವ್ ಮಾಡೋಕೆ ವಿಫಲರಾಗಿದ್ದೀರಾ, […]
ಉಡುಪಿ: 6ನೇ ತರಗತಿ ವಿದ್ಯಾರ್ಥಿ ಹೃದಯಾಘಾತದಿಂದ ಮೃತ್ಯು

ಉಡುಪಿ: ಏಕಾಏಕಿ ಕುಸಿದು ಬಿದ್ದು 6ನೇ ತರಗತಿ ವಿದ್ಯಾರ್ಥಿಯೋರ್ವ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿಯ ಖಾಸಗಿ ಶಾಲೆಯ 6ನೇ ತರಗತಿ ಕಲಿಯುತ್ತಿದ್ದ ರ್ಯಾನ್ಸ್ ಕ್ಯಾಥಲ್ ಡಿ’ಸೋಜಾ ಮೃತ ಬಾಲಕ. ಜುಲೈ 14 ರ ಸೋಮವಾರ ರಾತ್ರಿ ಮನೆಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟೊತ್ತಿಗೆ ಬಾಲಕನ ಪ್ರಾಣಪಕ್ಷಿ ಹಾರಿಹೋಗಿತ್ತು. ಈತ ತೊಟ್ಟಂನ ಅಶ್ವಿನ್ ಮತ್ತು ಸರಿತಾ ಡಿ’ಸೋಜಾ ದಂಪತಿಯ ಪುತ್ರ. ಇತ್ತೀಚೆಗೆ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. […]
ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಐದು ದಿನಗಳ ಅಧ್ಯಾಪಕರ ಅಭಿವೃದ್ದಿ ಕಾರ್ಯಾಗಾರ

ಉಡುಪಿ,ಬಂಟಕಲ್: ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಕಯಂತ್ರ ವಿಭಾಗವು ಕೋರೆಲ್ ಟೆಕ್ನಾಲಜೀಸ್, ಬೆಂಗಳೂರು, ಕಾಲೇಜಿನ ಐಎಸ್‌ಟಿಇ ಘಟಕ ಮತ್ತು ಐಇಇಇ ಘಟಕ ಇದರ ಸಹಯೋಗದೊಂದಿಗೆ “ಎಐ ಮ್ಯಾಟ್‌ಲ್ಯಾಬ್ ಆಧಾರಿತ ಹಾರ್ಡ್ವೇರ್ಇಂಟಿಗ್ರೇಷನ್‌ನೊಂದಿಗೆ ಆಳವಾದ ಕಲಿಕೆ” ಎಂಬ ವಿಷಯದ ಕುರಿತು ಐದು ದಿನಗಳ ಅಧ್ಯಾಪಕರ ಅಭಿವೃದ್ದಿ ಕಾರ್ಯಾಗಾರವನ್ನು 14 ರಿಂದ 18 ಜುಲೈವರೆಗೆ ಆಯೋಜಿಸಲಾಗಿದೆ. ಈ ಕಾರ್ಯಾಗಾರದ ಉದ್ಘಾಟನಾ ಸಮಾರಂಭವು 14 ಜುಲೈ 2025 ರಂದು ನಡೆಯಿತು. ಕೋರೆಲ್ ಟೆಕ್ನಾಲಜೀಸ್ ಇದರ ಮ್ಯಾಥ್ಸ್ವರ್ಕ್ನ ಹಿರಿಯ ಇಂಜಿನಿಯರ್ ಶ್ರೀ […]
ಉಡುಪಿ:ಜಿಲ್ಲೆಯಲ್ಲಿ ಅತಿವೃಷ್ಠಿಯಿಂದ ಉಂಟಾದ ಹಾನಿಗಳಿಗೆ ತ್ವರಿತ ಪರಿಹಾರ ನೀಡಿ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

ಉಡುಪಿ: ಜಿಲ್ಲೆಯಲ್ಲಿ ಅತಿವೃಷ್ಠಿ, ನೈಸರ್ಗಿಕ ವಿಕೋಪಗಳು ಉಂಟಾದಾಗ ಕೂಡಲೇ ಸ್ಪಂದಿಸಿ, ಪರಿಹಾರಕಾರ್ಯಗಳನ್ನು ಕೈಗೊಂಡು ಹಾನಿಗೊಳಗಾದವರಿಗೆ ನಷ್ಟ ಪರಿಹಾರವನ್ನು ಆದಷ್ಟು ತ್ವರಿತವಾಗಿ ನೀಡಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಮಂಗಳವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಕೆಸ್ವಾನ್ ವೀಡಿಯೋ ಕಾನ್ಫ್ರೆನ್ಸ್ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಯಲ್ಲಿ ಪ್ರಸ್ತುತ ವರ್ಷದಲ್ಲಿ ಈವರೆಗೆ ವಾಡಿಕೆಗೆ 1959 ಮಿ.ಮೀ. ಮಳೆಯಾಗಬೇಕಿತ್ತು. ಆದರೆ 2803 ಮಿ.ಮೀ […]
ಗಂಗೊಳ್ಳಿ ದೋಣಿ ದುರಂತ; ಓರ್ವ ಮೀನುಗಾರನ ಮೃತದೇಹ ಪತ್ತೆ

ಉಡುಪಿ: ಗಂಗೊಳ್ಳಿ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಮೂವರು ಮೀನುಗಾರರ ಪೈಕಿ ಒಬ್ಬರ ಮೃತದೇಹ ಇಂದು ಬೆಳಗಿನ ಜಾವ ಪತ್ತೆಯಾಗಿದೆ.ಗಂಗೊಳ್ಳಿ ಬಂದರಿನಿಂದ ಜು.15 ರಂದು ಬೆಳಿಗ್ಗೆ ಮೀನುಗಾರಿಕೆಗೆ ತೆರಳಿದ್ದ ದೋಣಿಯು ಸಮುದ್ರದ ಅಲೆಯ ರಭಸಕ್ಕೆ ಸಿಲುಕಿ ಮಗುಚಿದ್ದು, ನಾಲ್ವರ ಪೈಕಿ ಓರ್ವ ಮೀನುಗಾರ ಈಜಿ ದಡ ಸೇರಿದ್ದರು, ಮೂವರು ಮೀನುಗಾರರು ನಾಪತ್ತೆಯಾಗಿದ್ದರು. ನಿರಂತರ ಶೋಧ ಕಾರ್ಯದಲ್ಲಿ ಲೋಹಿತ್ ಖಾರ್ವಿ(38) ಎಂಬವರ ಮೃತದೇಹ ಕೋಡಿ ಲೈಟ್ ಹೌಸ್ ಬಳಿಯ ಸಮುದ್ರ ತೀರದಲ್ಲಿ ಬುಧವಾರ ಬೆಳಗಿನ ಜಾವ ಪತ್ತೆಯಾಗಿದೆ. ನಾಪತ್ತೆಯಾದ ಇನ್ನಿಬ್ಬರು […]