ಮಣಿಪಾಲ: MSDC ಓರೇನ್ ಇಂಟರ್ನ್ಯಾಷನಲ್ ನಲ್ಲಿ ಸಂಭ್ರಮದ ಅಂತರಾಷ್ಟ್ರೀಯ ಯುವ ಕೌಶಲ್ಯ ದಿನ.

ಉಡುಪಿ: ಮಣಿಪಾಲದ ಓರೇನ್ ಇಂಟರ್ನ್ಯಾಷನಲ್ ನಲ್ಲಿ ಅಂತರಾಷ್ಟ್ರೀಯ ಯುವ ಕೌಶಲ್ಯ ದಿನವನ್ನು ಜು.15 ರಂದು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಮಣಿಪಾಲದ ಆಶ್ಲೇಷ್ ಹೊಟೇಲ್’ನ ಮಾಲಿಕರು ಹಾಗೂ ಮಣಿಪಾಲ ಮಹಿಳಾ ಸಮಾಜ ಅಧ್ಯಕ್ಷೆ ಶೃತಿ ಶೆಣೈ ಮಾತನಾಡಿ, ಕೌಶಲ್ಯಗಳೇ ಈ ಕಾಲಘಟ್ಟದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದನ್ನು ಜಾಸ್ತಿ ರೂಪಿಸಿಕೊಳ್ಳಬೇಕು. ಎಲ್ಲಾ ಕೌಶಲ್ಯ ತರಬೇತಿಗಳನ್ನು ಕಲಿಯುವುದು ಅತೀ ಮುಖ್ಯವಾಗಿದೆ. ಕೌಶಲ್ಯ ತರಬೇತಿಗಳನ್ನು ನೀವು ಯಾವಾಗ ಬೇಕಾದರೂ ಉಪಯೋಗಿಸಿಕೊಳ್ಳಬಹುದು ಎಂದರು. ಎಂಎಸ್ ಡಿಸಿ ಮಣಿಪಾಲ ಇದರ ಅಧ್ಯಕ್ಷರು […]

ಉಡುಪಿ: ನಾಳೆ (ಜುಲೈ 17) ಜಿಲ್ಲೆಯ ಎಲ್ಲ ಶಾಲೆಗಳಿಗೆ ರಜೆ ಘೋಷಣೆ.

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಮಳೆಯ ತೀವ್ರತೆ ಹೆಚ್ಚಾಗುವುದರಿಂದ ಮುಂಜಾಗೃತ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜುಲೈ 17ರಂದು ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.ಉಳಿದಂತೆ ಎಲ್ಲಾ ಪದವಿಪೂರ್ವ, ಪದವಿ, ಸ್ನಾತಕೊತ್ತರ ಪದವಿ, ಡಿಪ್ಲೋಮ, ಇಂಜಿನಿಯರಿಂಗ್ ಕಾಲೇಜಿಗೆ ರಜೆ ಘೋಷಿಸಿರುವುದಿಲ್ಲ.

ಉಡುಪಿ: ನಾಳೆ (ಜುಲೈ 17) ಜಿಲ್ಲೆಯ ಎಲ್ಲ ಶಾಲೆಗಳಿಗೆ ರಜೆ ಘೋಷಣೆ

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಮಳೆಯ ತೀವ್ರತೆ ಹೆಚ್ಚಾಗುವುದರಿಂದ ಮುಂಜಾಗೃತ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜುಲೈ 17ರಂದು ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಉಳಿದಂತೆ ಎಲ್ಲಾ ಪದವಿಪೂರ್ವ, ಪದವಿ, ಸ್ನಾತಕೊತ್ತರ ಪದವಿ, ಡಿಪ್ಲೋಮ, ಇಂಜಿನಿಯರಿಂಗ್ ಕಾಲೇಜಿಗೆ ರಜೆ ಘೋಷಿಸಿರುವುದಿಲ್ಲ.

ಉಡುಪಿ: ಜುಲೈ 26-27- ಡಯಾನ ಹೋಟೆಲ್ ನಲ್ಲಿ ಫ್ಯಾಷನ್ ಮೇಳ -2025″- ಪ್ರದರ್ಶಕರಿಗೆ ಆಹ್ವಾನ

ಉಡುಪಿ: ಉಡುಪಿಯ ಹೋಟೆಲ್ ಡಯಾನ ಇಲ್ಲಿ ಜುಲೈ 26ಮತ್ತು 27ರಂದು “ಫ್ಯಾಷನ್ ಮೇಳ -2025” ಆಷಾಢ ಮಾರಾಟವು ನಡೆಯಲಿದೆ. ಪ್ರದರ್ಶಕರನ್ನು ಆಹ್ವಾನಿಸಲಾಗಿದೆ. ಈ ಮೇಳವು ಬೆಳಿಗ್ಗೆ 10.30ರಿಂದ ರಾತ್ರಿ 8.30ರ ವರೆಗೆ ಜರುಗಲಿದೆ. ಬ್ಯಾಗ್, ಗಿಫ್ಟ್ ವಿಭಾಗದಲ್ಲಿ ಈ ಪ್ರದರ್ಶನ ನಡೆಯಲಿದ್ದು, ಆಸಕ್ತರು ಮಾಹಿತಿಗಾಗಿ 96068 04212 ಸಂಪರ್ಕಿಸಬಹುದು.

ಎದೆ ಮಟ್ಟದ ನೆರೆಯ ನೀರಿನಲ್ಲೇ ಓಡಾಡುತ್ತಿದ್ದ ಕುಟುಂಬಕ್ಕೆ ತಹಶಿಲ್ದಾರ್ ಭರವಸೆ

ಉಡುಪಿ: ಜಿಲ್ಲೆಯ ಕಾಪು ತಾಲ್ಲೂಕಿನ ಎರ್ಮಾಳ್ ಗ್ರಾಮದ ಅಡ್ವೆಕೋಡಿ ಪ್ರದೇಶದ ತಾರಾನಾಥ್ ಎಂಬುವರ ಕುಟುಂಬ ನೆರೆ ನೀರಿನಲ್ಲೇ ನಡೆದುಕೊಂಡು ಬಂದು ದಿನ ನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ತಿಳಿದು ಸ್ವತಃ ತಹಶಿಲ್ದಾರ್ ಅಲ್ಲಿಗೆ ಭೇಟಿ ನೀಡಿ ಸಾಂತ್ವನ ಹೇಳಿ ಶೀಘ್ರ ಸಂಕಷ್ಟ ಪರಿಹರಿಸುವ ಭರವಸೆ ನೀಡಿದ್ದಾರೆ. ಒದ್ದೆಬಟ್ಟೆಯಲ್ಲೇ ಕಾಲೇಜಿಗೆ ಹೋಗಬೇಕಾದ ವಿದ್ಯಾರ್ಥಿಗಳು:ತಾರಾನಾಥ್ ರವರ ಮಕ್ಕಳಾದ ಪ್ರಜ್ಞಾ ಮತ್ತು ಪ್ರಜ್ವಲ್ ಕಾಲೇಜಿಗೆ ಹೋಗುವಾಗ ಈ ಎದೆ ಮಟ್ಟದ ನೆರೆ ನೀರಿನಲ್ಲೇ ತೊಯ್ದುಕೊಂಡು ಹೋಗಬೇಕು. ಪುಸ್ತಕದ ಚೀಲವನ್ನೂ ಹೊತ್ತೊಯ್ಯಬೇಕು. ಇದೇ […]