ಗಂಗೊಳ್ಳಿ: ಮೀನುಗಾರಿಕಾ ದೋಣಿ ಮುಳುಗಿ; ಮೂವರು ಸಮುದ್ರಪಾಲು

ಉಡುಪಿ: ಕುಂದಾಪುರ ತಾಲ್ಲೂಕಿನ ಗಂಗೊಳ್ಳಿಯಲ್ಲಿ ಭೀಕರ ದುರಂತವೊಂದು ಸಂಭವಿಸಿದ್ದು, ಮೀನುಗಾರಿಕಾ ದೋಣಿ ಮುಳುಗಿ ಮೂವರು ಸಮುದ್ರಪಾಲಾಗಿದ್ದು, ಓರ್ವ ಮೀನುಗಾರ ಪಾರಾಗಿರುವ ಘಟನೆ ನಡೆದಿದೆ. ಮಂಗಳವಾರ ಮೀನುಗಾರಿಕೆಗೆಂದು ತೆರಳಿದ್ದಾಗ ದೋಣಿ ಮಗುಚಿದ್ದು ಮೂವರು ನೀರು ಪಾಲಾಗಿದ್ದು, ಓರ್ವ ಈಜಿ ದಡ ಸೇರಿದ್ದಾರೆ ಎನ್ನಲಾಗಿದೆ. ನಾಪತ್ತೆಯಾಗಿರುವ ಗಂಗೊಳ್ಳಿ ನಿವಾಸಿಗಳಾದ ಸುರೇಶ್ ಖಾರ್ವಿ (48), ಲೋಹಿತ್ ಖಾರ್ವಿ (34), ಜಗದೀಶ್ ಖಾರ್ವಿ (50) ಎಂಬ ಮೂವರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ದೋಣಿಯಲ್ಲಿದ್ದ ಇನ್ನೋರ್ವ ಮೀನುಗಾರ ಸಂತೋಷ್ ಖಾರ್ವಿ (35) ಎಂಬುವವರು ಈಜಿ […]
ಉಡುಪಿ:ಸಹಾಯಕ ಅಂಚೆ ಅಧೀಕ್ಷಕ ಕೃಷ್ಣರಾಜ ವಿಟ್ಟಲ್ ಭಟ್ ಇವರಿಗೆ ಸನ್ಮಾನ

ಉಡುಪಿ:ಉಡುಪಿ ದಕ್ಷಿಣ ಅಂಚೆ ವಿಭಾಗದ ಸಹಾಯಕ ಅಂಚೆ ಅಧೀಕ್ಷಕ ಅಂಚೆ ಇಲಾಖೆಯಲ್ಲಿ ಕರ್ನಾಟಕ ಮಹಾ ಅಂಚೆ ಪಾಲಕರಿಂದ ಇವರ ಸಾಧನೆಗೆ ಎರಡು-ಮೂರು ಪ್ರಶಸ್ತಿ ಪಡೆದು ಉಡುಪಿ ವಿಭಾಗದ ಕರ್ನಾಟಕದಲ್ಲಿ ಪ್ರಶಸ್ತಿ ಬಂದು ಉಡುಪಿ ವಿಭಾಗ ಅಂಚೆ ಅಧಿಕ್ಷಕರಿಂದ ಮೆಚ್ಚುಗೆ ಪಡೆದು ಉಡುಪಿ ದಕ್ಷಿಣ ವಿಭಾಗದ ಸಹಾಯಕ ಅಂಚೆ ಅಧಿಕ್ಷಕರಿಗೆ ಉಡುಪಿ ಡಿವಿಜನ್ ಸಿಬ್ಬಂದಿಗಳು ಹಾಗೂ ದಕ್ಷಿಣ ವಿಭಾಗದ ಅಂಚೆಪಾಲಕರು ಹಾಗೂ ಸಹಾಯಕ ಅಂಚೆಪಾಲಕರಿಂದ ಸನ್ಮಾನ ಕಾರ್ಯಕ್ರಮವು ಉಡುಪಿ ಪ್ರಧಾನ ಅಂಚೆ ಕಚೇರಿಯ ಸಭಾಂಗಣದಲ್ಲಿ ಉಡುಪಿ ವಿಭಾಗ ಅಂಚೆ […]
ದೇವನಹಳ್ಳಿ ರೈತರ ಹೋರಾಟಕ್ಕೆ ಕೊನೆಗೂ ಸಿಕ್ಕಿತು ದೊಡ್ಡ ಗೆಲುವು: ಭೂ ಸ್ವಾದೀನ ಕೈ ಬಿಟ್ಟ ರಾಜ್ಯ ಸರಕಾರ, ಸಿಎಂ ಸಿದ್ಧರಾಮಯ್ಯ ಘೋಷಣೆ

ಬೆಂಗಳೂರು: ಕೊನೆಗೂ ಎಷ್ಟೋ ತಿಂಗಳುಗಳಿಂದ ಭೂಸ್ವಾಧೀನದ ವಿರುದ್ದ ಹೋರಾಟ ನಡೆಸುತ್ತಿದ್ದ ದೇವನಹಳ್ಳಿ ರೈತರ ಹೋರಾಟಕ್ಕೆ ದೊಡ್ಡ ಜಯ ಸಿಕ್ಕಿದೆ. ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಭೂ ಸ್ವಾಧೀನ ಕೈಬಿಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ವಿಧಾನಸೌಧದಲ್ಲಿ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ರೈತರ ಜೊತೆಗಿನ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೆಐಎಡಿಬಿಯಿಂದ 13 ಗ್ರಾಮಗಳಲ್ಲಿ 1,777 ಎಕರೆ ಭೂ ಸ್ವಾಧೀನ ವಿರೋಧಿಸಿ ರೈತರು ಸುಮಾರು 1,200ಕ್ಕೂ ಹೆಚ್ಚು ದಿನಗಳಿಂದ ಹೋರಾಟ ನಡೆಸುತ್ತಿದ್ದರು. ರೈತರ ಹೋರಾಟಕ್ಕೆ ಸರಕಾರ ಮಣಿದಿದೆ. ಭೂ […]
ಉಡುಪಿ:ಕೃಷಿ ಪ್ರಶಸ್ತಿ : ಅರ್ಜಿ ಆಹ್ವಾನ

ಉಡುಪಿ: ಕೃಷಿ ಇಲಾಖೆಯ ವತಿಯಿಂದ ಕೃಷಿ ವಲಯದ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಉದ್ದೇಶದಿಂದ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕೃಷಿ ಪ್ರಶಸ್ತಿ ಯೋಜನೆಯಡಿ ಪ್ರತಿ ಹಂತದಲ್ಲಿ ಮೂರು ಬಹುಮಾನಗಳನ್ನು ನೀಡಲಾಗುತ್ತಿದೆ. ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದ ಬೆಳೆ ಸ್ಪರ್ಧೇಗೆ ಅನ್ವಯಿಸುವಂತೆ ಒಂದೇ ಅರ್ಜಿಯನ್ನು ಸ್ಫರ್ಧಿಗಳಿಂದ ಪಡೆಯಲಾಗುತ್ತಿದ್ದು, ಮುಂಗಾರು ಹಂಗಾಮಿನ ಮಳೆಯಾಶ್ರಿತ ಭತ್ತದ ಬೆಳೆಯಲ್ಲಿ ಬೆಳೆ ಸ್ಪರ್ಧೆಗೆ ರೈತರು ಹಾಗೂ ರೈತ ಮಹಿಳೆಯರು ಕೆ-ಕಿಸಾನ್ ಪೋರ್ಟಲ್‌ನಡಿ ಆರ್.ಎಸ್.ಕೆ ಅಥವಾ ಸಿಟಿಝನ್ […]
ಕಾರ್ಕಳ: ಹಾಸ್ಟೆಲ್ ಗೋಡೆಯಲ್ಲಿ ಪ್ರಚೋದನಕಾರಿ ಬರಹ: ವಿದ್ಯಾರ್ಥಿನಿ ಬಂಧನ.

ಕಾರ್ಕಳ: ಕಾರ್ಕಳದ ನಿಟ್ಟೆ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯರ ಹಾಸ್ಟೆಲ್ ನ ಶೌಚಾಲಯದ ಗೋಡೆಯಲ್ಲಿ ಪ್ರಚೋದನಕಾರಿ ಬರಹ ಬರೆದಿದ್ದ ಪ್ರಕರಣಕ್ಕೆ ಸಂಬಂಧಿಸಿ ವಿದ್ಯಾರ್ಥಿನಿಯನ್ನು ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸರು ಸೋಮವಾರ ಬಂದಿಸಿದ್ದಾರೆ. ಕಾಲೇಜಿನ ವಿದ್ಯಾರ್ಥಿನಿ ಫಾತಿಮಾ ಶಬ್ನಾ (21) ಬಂಧಿತರು. ಆರೋಪಿ ಮೇ 7 ರಂದು ಹಾಸ್ಟೆಲ್ ನ ಶೌಚಾಲಯದ ಕೊಠಡಿ ಗೋಡೆಯಲ್ಲಿ ಎರಡು ಸಮುದಾಯಗಳ ನಡುವೆ ದ್ವೇಷ ಹರಡುವ ರೀತಿಯಲ್ಲಿ ಬರಹ ಬರೆದಿರುವ ಕುರಿತು ಹಾಸ್ಟೆಲ್ ಮ್ಯಾನೇಜರ್ ಪೊಲೀಸರಿಗೆ ದೂರು ನೀಡಿದ್ದರು.