ಉಡುಪಿ ಬಾಲ ಮಂದಿರದ ಇಬ್ಬರು ಮಕ್ಕಳು ನಾಪತ್ತೆ

ಉಡುಪಿ: ಉಡುಪಿ ಸರಕಾರಿ ಬಾಲಕರ ಬಾಲ ಮಂದಿರದಿಂದ ಇಬ್ಬರು ಬಾಲಕರು ಓಡಿ ಹೋಗಿ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಬೆಂಗಳೂರು ಕನಕನಗರದ ದಿಲೀಪ್ (14) ಹಾಗೂ ಬೆಂಗಳೂರು ರಾಜೇಶ್ವರಿ ನಗರದ ಧನರಾಜ್(13) ನಾಪತ್ತೆಯಾದ ಬಾಲಕರು. ಇವರು ಜು.7ರಂದು ಉಡುಪಿ ಸರಕಾರಿ ಬಾಲಕರ ಬಾಲ ಮಂದಿರಕ್ಕೆ ಸ್ವಾಗತ ಕೇಂದ್ರದ ಮೂಲಕ ದಾಖಲಾಗಿದ್ದು, ಜು.13ರಂದು ಮಧ್ಯಾಹ್ನ ಇವರಿಬ್ಬರು ಸಂಸ್ಥೆಯ ಕಾರಿಡರ್‌ನ ಬಾಗಿಲಿನಿಂದ ಓಡಿ ಹೋಗಿರುವುದಾಗಿ ಮಂದಿರದ ಗೃಹಪಾಲಕ ಪ್ರಮೋದ್ ನೀಡಿದ ದೂರಿನಂತೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಬ್ಬರ ಕಣ್ಣನ್ನು ಬೆಳಗಿಸಿದ ಅಭಿನಯ ಸರಸ್ವತಿ : ತಮ್ಮ ಸಾವಿನಲ್ಲೂ ಮತ್ತೊಬ್ಬರ ಬಾಳಿಗೆ ಬೆಳಕಾದ ಬಿ ಸರೋಜಾದೇವಿ

1960-70 ಸಮಯದಲ್ಲಿ ಕನ್ನಡ, ತೆಲುಗು, ತಮಿಳು ಚಿತ್ರರಂಗದಲ್ಲಿ ಮಿಂಚಿದ ಬಹುಮುಖ ತಾರೆ ಬಿ ಸರೋಜಾದೇವಿ ಅವರೀಗ ಲೋಕ ಬಿಟ್ಟು ಹೋದರೂ, ಇಬ್ಬರ ಬಾಳಿಗೆ ಬೆಳಕಾಗಿದ್ದಾರೆ. ಹೌದು 87 ವರ್ಷದ ಬಿ ಸರೋಜಾದೇವಿ ಚಿತ್ರರಂಗ ಕಂಡಂತಹ ಶ್ರೇಷ್ಠ ನಟಿಯಾಗಿದ್ದರು. ಇದೀಗ ಈ ನಟಿಯ ಇಚ್ಛೆಯಂತೆ ಅವರ ಕುಟುಂಬಸ್ಥರು ಸರೋಜಾದೇವಿ ಅವರ ಕಣ್ಣುಗಳನ್ನು ದಾನ ಮಾಡುವ ಮೂಲಕ ಇನ್ನೊಂದು ಜೀವಕ್ಕೆ ಬೆಳಕಾಗಿದ್ದಾರೆ. ಈ ಸಂಬಂಧ ಐ ಬ್ಯಾಂಕ್ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ ಕೂಡಲೇ, ಐ ಬ್ಯಾಂಕ್‌ನ ತಂಡವು ಸರೋಜಾದೇವಿಯವರ ಮನೆಗೆ […]
ಮೂಡುಬಿದಿರೆ:ಆಳ್ವಾಸ್ ಪುನರ್ಜನ್ಮ’ ಮಾನಸಿಕ ಆರೋಗ್ಯ ಆಸ್ಪತ್ರೆ ಉದ್ಘಾಟನೆ

ಮೂಡುಬಿದಿರೆ: ಆರೋಗ್ಯ ಕ್ಷೇತ್ರದಲ್ಲಿ ಮಾನಸಿಕ ರೋಗಗಳ ಚಿಕಿತ್ಸೆಯ ವೈದ್ಯರು ಹಾಗೂ ವ್ಯಸನಮುಕ್ತ ಕೇಂದ್ರಗಳ ಅಗತ್ಯ ಬಹಳಷ್ಟಿದೆ. ನಮ್ಮ ದೇಶದಲ್ಲಿನ ಪ್ರತೀ ಜಿಲ್ಲೆಯಲ್ಲಿ 2 ಲಕ್ಷ ಜನ ಮದ್ಯವ್ಯಸನದ ಸಮಸ್ಯೆಯಿಂದ ನೇರವಾಗಿ ಅಥವಾ ಪರೋಕ್ಷವಾಗಿ ಬಳಲುತ್ತಿದ್ದಾರೆ. ಆದರೆ ಈ ಸಮಸ್ಯೆಯನ್ನು ಪರಿಹರಿಸಲು ಸೂಕ್ತ ವ್ಯವಸ್ಥೆ ನಮ್ಮಲ್ಲಿಲ್ಲ ಎಂದು ಉಡುಪಿಯ ಡಾ ಎವಿ ಬಾಳಿಗಾ ಆಸ್ಪತ್ರೆಯ ನಿರ್ದೇಶಕ ಡಾ ಪಿವಿ ಭಂಡಾರಿ ನುಡಿದರು. ಅವರು ಆಳ್ವಾಸ್ ಶಿಕ್ಷಣ ಸಂಸ್ಥೆಯಿAದ ಮಿಜಾರಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಬಹುಶಿಸ್ತೀಯ ಸಮಗ್ರ ಚಿಕಿತ್ಸೆಗಳನ್ನು ನೀಡುವ ‘ಆಳ್ವಾಸ್ […]
ಮೂಡುಬಿದಿರೆ:ಶಿಕ್ಷಕ -ಪಾಲಕ -ವಿದ್ಯಾರ್ಥಿಗಳ ಸಭೆ -2025

ಮೂಡುಬಿದಿರೆ: ಆಳ್ವಾಸ್ ಪದವಿ ಪೂರ್ವ ಕಾಲೇಜಿನ ೨೦೨೫ರ ಶೈಕ್ಷಣಿಕ ಸಾಲಿನ ಸ್ಥಳೀಯ ವಿದ್ಯಾರ್ಥಿಗಳ ಶಿಕ್ಷಕ-ಪಾಲಕ-ವಿದ್ಯಾರ್ಥಿಗಳ ಪ್ರಥಮ ಸಭೆಯನ್ನು ವಿ.ಎಸ್. ಆಚಾರ್ಯ ವೇದಿಕೆಯಲ್ಲಿ ಆಯೋಜಿಸಲಾಗಿತ್ತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಮಾತನಾಡಿ, ಪದವಿ ಪೂರ್ವ ಶಿಕ್ಷಣ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ. ಇದು ಅವರ ಮುಂದಿನ ಉನ್ನತ ಶಿಕ್ಷಣ ಹಾಗೂ ವೃತ್ತಿಜೀವನದ ದಿಕ್ಕನ್ನು ತೀರ್ಮಾನಿಸುತ್ತದೆ. ಈ ಹಂತದಲ್ಲಿ ವಿದ್ಯಾರ್ಥಿಗಳು ತಮ್ಮ ಆಸಕ್ತಿ ಕ್ಷೇತ್ರವನ್ನು ಗುರುತಿಸಿ, ಗುರಿ ಮುಟ್ಟುವೆಡೆಗೆ ಶ್ರಮಿಸಬೇಕು. ಈ ಪ್ರಯಾಣದಲ್ಲಿ ವಿದ್ಯಾರ್ಥಿಗಳೊಂದಿಗೆ […]
ಮಂಗಳೂರು:ಜು.20ರಂದು ಪುರಭವನದಲ್ಲಿ ‘ಬೋಲಾವ ವಿಠಲ’:ಪಂಚಮ್ ನಿಶಾದ್ ಮತ್ತು ಸಂಗೀತ ಭಾರತಿ ಪ್ರತಿಷ್ಠಾನ ಪ್ರಸ್ತುತಿ

ಮಂಗಳೂರು: ಸಂಗೀತ ಭಾರತಿ ಪ್ರತಿಷ್ಠಾನವುಮುಂಬಯಿನ ಪಂಚಮ ನಿಶಾದ್‌ನ ಸಹಯೋಗದೊಂದಿಗೆ`ಬೋಲಾವ ವಿಠಲ ಎಂಬ ಸಂಗೀತ ಕಾರ‍್ಯಕ್ರಮವನ್ನು ಜುಲೈ20 ರಂದು ಸಂಜೆ 5 ರಿಂದ ಮಂಗಳೂರಿನ ಪುರಭವನದಲ್ಲಿಆಯೋಜಿಸಿದೆ. ಹಿರಿಯ ಸಂಗೀತ ದಿಗ್ಗಜ ಕಲಾವಿದ ಸಂಜಯ್ ಅಭ್ಯಂಕರ್ಹಾಗೂ ಶರಯೂ ದಾತೆ ಅವರಿಂದ ಅಭಂಗ ರೂಪದಲ್ಲಿಹಾಡುಗಾರಿಕೆ ನಡೆಯಲಿದೆ. ತಬ್ಲಾದಲ್ಲಿ ಪ್ರಸಾದ್ ಪಾದ್ಯೆ,ಪಕ್‌ವಾಜ್‌ನಲ್ಲಿ ಸುಖದ್ ಮುಂಡೆ, ರಿದಂನಲ್ಲಿ ಸೂರ್ಯಕಾಂತ್ಸುರ್ವೆ, ಹಾರ್ಮೋನಿಯಂನಲ್ಲಿ ಅಭಿಷೇಕ್ ಶಿಂಕರ್, ಕೊಳಲಿನಲ್ಲಿ ಶಡಜ್ ಗೋಡ್ಕಿಂಡಿ ಸಾಥ್ ನೀಡಲಿದ್ದಾರೆ ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೊ.ನರೇಂದ್ರ ಎಲ್.ನಾಯಕ್ ತಿಳಿಸಿದ್ದಾರೆ. ದೇಶ ವಿದೇಶದ […]