ಸಾಹೇಬರಕಟ್ಟೆ–ಶಿರಿಯಾರ ಜೈಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ನೂತನ ಹವಾನಿಯಂತ್ರಿತ ಕಟ್ಟಡ ಅದ್ದೂರಿ ಲೋಕಾರ್ಪಣೆ.

ಉಡುಪಿ: ಸಹಕಾರಿ ಸಂಘಗಳಲ್ಲಿ ಆಡಳಿತ ಮಂಡಳಿಯ ಪ್ರಾಮಾಣಿಕತೆ ಬಹುಮುಖ್ಯವಾದುದು.ಈ ಪ್ರಾಮಾಣಿಕತೆಯಿಂದಲೇ ಸಂಘಗಳು ಜನರಿಗೆ ಹತ್ತಿರವಾಗುತ್ತದೆ. ಜೈಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ಕೂಡ ಜನರಿಗೆ ಪ್ರಾಮಾಣಿಕವಾದ ಸೇವೆ ನೀಡಿ ಹತ್ತಿರವಾಗಿದೆ. ಎಂದು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದ್ದಾರೆ. ಅವರು, ಸಾಹೇಬರಕಟ್ಟೆ ಶಿರಿಯಾರ ಜೈಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ನೂತನ ಹವಾನಿಯಂತ್ರಿತ ಕಟ್ಟಡ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಅತ್ತುತ್ತಮ ಮತ್ತು ಸುಸಜ್ಜಿತವಾದ ಹವಾನಿಯಂತ್ರಿತ ಕಟ್ಟಡ ನಿರ್ಮಿಸುವ ಯಶಸ್ಸಿನ ಹಿಂದೆ ಜೈಗಣೇಶ್ ಕ್ರೆಡಿಟ್ ಸೌಹಾರ್ದ […]

ಉಡುಪಿಯ ಹೀರೋಶಕ್ತಿ ಮೋಟರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಉಡುಪಿಯ ಹೀರೋಶಕ್ತಿ ಮೋಟರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: 🔹 ಸೇಲ್ಸ್ (Male/Female)- 4 post🔹ಸ್ಪೇರ್ಸ್ ಮ್ಯಾನೇಜರ್ – 1 post🔹ಅಸಿಸ್ಟೆಂಟ್ PDI -1 post🔹PDI ಮ್ಯಾನೇಜರ್ -1 post🔹ಮೆಕಾನಿಕ್ -3 post ಆಸಕ್ತ ಅಭ್ಯರ್ಥಿಗಳು ನಿಮ್ಮ ರೆಸ್ಯೂಮ್ ಅನ್ನು ಕೆಳಗಿನ ನಂಬರ್ ಗೆ ವಾಟ್ಸಪ್ ಅಥವಾ ಇಮೇಲ್ ಮಾಡಿ.+91 [email protected]

ಪ್ರಿ ಓನ್ಡ್‌ ವೆಹಿಕಲ್‌ ಅಸೋಸಿಯೇಷನ್‌: ಒಂದು ಸಾವಿರಕ್ಕೂ ಅಧಿಕ ಹಣ್ಣು ಹಂಪಲಿನ ಗಿಡಗಳ ವಿತರಣೆ

ಉಡುಪಿ: ಪ್ರಿ ಓನ್ಡ್‌ ವೆಹಿಕಲ್‌ ಅಸೋಸಿಯೇಷನ್‌ ಉಡುಪಿ ಇದರ ವತಿಯಿಂದ ಒಂದು ಸಾವಿರಕ್ಕೂ ಮಿಕ್ಕಿ ಹಣ್ಣು ಹಂಪಲಿನ ಗಿಡಗಳ ಉಚಿತ ವಿತರಣೆ ಮತ್ತು ನೆಡುವ ಕಾರ್ಯಕ್ರಮ ಶನಿವಾರ ಉಡುಪಿ ಭುಜಂಗ ಪಾರ್ಕ್‌ ನ ಬಯಲು ರಂಗಮಂಟಪದಲ್ಲಿ ನಡೆಯಿತು. ಕಾರ್ಯಕ್ರಮವನ್ನು ನಗರ ಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಈಗ ಎಲ್ಲಿ ನೋಡಿದರು ಬಿಲ್ಡಿಂಗ್‌ ಗಳು ತಲೆ ಎತ್ತಿ ನಿಂತಿದ್ದು, ಮಳೆ ನೀರು ಇಂಗುವ ಸ್ಥಳಗಳೇ ಇಲ್ಲದೇ ಮಳೆ ನೀರು ಸಮುದ್ರವನ್ನು ಸೇರುತ್ತಿದೆ. ಗಿಡ […]

ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ನಗಾರಿ ಗೋಪುರಕ್ಕೆ ಸಚಿವ ರಾಮಲಿಂಗ ರೆಡ್ಡಿ ಅವರಿಂದ ಶಿಲಾನ್ಯಾಸ.

ಉಡುಪಿ: ಇತಿಹಾಸ ಪ್ರಸಿದ್ಧ ಪುರಾತನ ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ಮೊದಲ ಹಂತದ ಜೀರ್ಣೋದ್ಧಾರದ ಪ್ರಯುಕ್ತ 7 ಕೋಟಿಗೂ ಅಧಿಕ ವೆಚ್ಚದಲ್ಲಿ ಭವ್ಯವಾಗಿ ನಿರ್ಮಾಣಗೊಳ್ಳಲಿರುವ ಶ್ರೀ ದೇಗುಲದ ನಗಾರಿ ಗೋಪುರದ ಶಿಲಾನ್ಯಾಸ ಸಮಾರಂಭವು ಭಾನುವಾರ ಅದ್ಧೂರಿಯಾಗಿ ನಡೆಯಿತು. ಬೆಳಿಗ್ಗೆಯಿಂದ ಕ್ಷೇತ್ರದ ತಂತ್ರಿಗಳಾದ ವಿದ್ವಾನ್ ಕೆ. ಪಿ. ಕುಮಾರಗುರು ತಂತ್ರಿಯವರ ನೇತೃತ್ವದಲ್ಲಿ ಸರದಿ ಅರ್ಚಕರಾದ ಪಿ. ಸುಧಾಕರ ಅಡಿಗರ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಮುಜರಾಯಿ ಹಾಗೂ ಸಾರಿಗೆ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರು ಶಿಲಾನ್ಯಾಸವನ್ನು […]