ಶ್ರೀ ಶಾರದಾ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್: ಪೂರ್ವ ಪ್ರಾಥಮಿಕ ಶಿಕ್ಷಣದಲ್ಲಿ ಚಿತ್ರಕಲೆಯ ಮಹತ್ವ

ಉಡುಪಿ: ಶ್ರೀ ಶಾರದ ಟೀಚರ್ ಟ್ರೈನಿಂಗ್ ಸಂಸ್ಥೆಯ ಶಿಕ್ಷಕಿಯರಿಗೆ ಮಕ್ಕಳಲ್ಲಿನ ಕಲ್ಪನಾಲೋಕವನ್ನು ವ್ಯಕ್ತಪಡಿಸುವ ಪರಿ ಮತ್ತು ಕಲಾ ಮಹತ್ವತೆಯ ಬಗ್ಗೆ ವಿಶೇಷ ಕಲಾ ತರಬೇತಿಯನ್ನು ನೀಡಲಾಯಿತು. ತ್ರಿವರ್ಣ ಕಲಾಕೇಂದ್ರದ ಮುಖ್ಯಸ್ಥ, ಕಲಾವಿದ ಹರೀಶ್ ಸಾಗರವರು ರೇಖೆ, ಆಕಾರ, ಬಣ್ಣ, ಸಮತೋಲನ, ಸಂಯೋಜನೆಗಳಿಂದ ಕಲ್ಪನೆಯ ಚಿತ್ರವು ಸಾಕಾರಗೊಳಿಸುವಲ್ಲಿ ಕಲಾ ಶಿಕ್ಷಣ ಮುಖ್ಯ ವಾಹಿನಿಯಾಗಿದ್ದು, ಪೂರ್ವ ಪ್ರಾಥಮಿಕ ಮಕ್ಕಳಲ್ಲಿನ ಕಲಾ ಪ್ರಜ್ಞೆಯನ್ನು ಹೇಗೆ ಅವಲೋಕಿಸಬೇಕೆಂದು ತಿಳಿಯ ಪಡಿಸಿದರು. ಚಿತ್ರಕಲೆಯು ಮಕ್ಕಳ ಕಲ್ಪನೆ, ಸೃಜನಶೀಲತೆ, ಕೈ-ಕಣ್ಣಿನ ಸಮನ್ವಯ, ಆತ್ಮವಿಶ್ವಾಸ ಬೆಳೆಸುವಲ್ಲಿ ಹಾಗೂ […]

ಉಡುಪಿ: ಶ್ರೀ ಗೋಪಾಲಕೃಷ್ಣ ಸನ್ನಿಧಿ ಕಲ್ಲಮಠ ಪುತ್ತಿಗೆ: ಜೀರ್ಣೋದ್ಧಾರ ಪ್ರಕ್ರಿಯೆಗೆ ಚಾಲನೆ.

ಹಿರಿಯಡಕ: ಉಡುಪಿ ತಾಲೂಕಿನ ಶ್ರೀ ಗೋಪಾಲಕೃಷ್ಣ ಸನ್ನಿಧಿ ಕಲ್ಲಮಠ, ಪುತ್ತಿಗೆ ಇದರ 1.55 ಕೋಟಿ ರೂಪಾಯಿಯ ಅಂದಾಜು ವೆಚ್ಚದ ಜೀರ್ಣೋದ್ಧಾರ ಪ್ರಕ್ರಿಯೆಯು ಚಾಲನೆಯಲ್ಲಿದ್ದು, ಈ ಪುಣ್ಯದ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್ ಮುಖಾಂತರ ಪೂಜ್ಯರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನೀಡಿದ 5 ಲಕ್ಷ ರೂಪಾಯಿಯ ಮೊತ್ತದ ಡಿಡಿಯನ್ನು ಶ್ರೀ ಕಲ್ಲಮಠದ ಜೀರ್ಣೋದ್ಧಾರ ಸಮಿತಿಯವರಿಗೆ ಭಕ್ತಿಪೂರ್ವಕವಾಗಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿ ಹಾಗೂ ಟ್ರಸ್ಟಿನ ಪ್ರಧಾನ ಕಾರ್ಯದರ್ಶಿಯಾದ ಹರೀಶ್ ಪೂಜಾರಿ ಎಸ್. ರವರು […]

ಡಾ. ಮಾಲತಿ ಕೃಷ್ಣಮೂರ್ತಿಗೆ ಪೊಳಲಿ- ಎಸ್.ಆರ್.ಹೆಗ್ಡೆ ಪ್ರಶಸ್ತಿ ಪ್ರದಾನ

ಉಡುಪಿ: ಇತಿಹಾಸಕಾರರಲ್ಲಿ ಕಳೆದ ನಾಲ್ಕು ದಶಕಗಳಿಂದ ಇತಿಹಾಸವನ್ನು ನೋಡುವ ದೃಷ್ಠಿ ಬದಲಾಗುತ್ತಿದೆ. ಹೊಸ ದೃಷ್ಟಿ, ಆಕಾರ ಬಳಸಿಕೊಂಡು ಹೊಸ ವಿಧಾನಗಳ ಮೂಲಕ ಜನರಿಗೆ ಪ್ರಾದೇಶಿಕ ಇತಿಹಾಸ ಕಟ್ಟಿಕೊಡುವ ಹೊಸ ಪರಂಪರೆ ಆರಂಭವಾಗಿದೆ ಎಂದು ಪುರಾತತ್ವ ತಜ್ಞ ಹಾಗೂ ಸಂಶೋಧಕ ಡಾ. ಪುಂಡಿಕಾಯಿ ಗಣಪತಿ ಭಟ್ ಹೇಳಿದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಹಾಗೂ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಸಂಯುಕ್ತ‌ ಆಶ್ರಯದಲ್ಲಿ ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ಆಯೋಜಿಸಲಾದ ಪೊಳಲಿ […]

ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ವಿಷಯದಲ್ಲಿ ಯಾವುದೇ ರಾಜಕೀಯ ಬೇಡ: ಪ್ರಮೋದ್ ರೈ ಪಳಜೆ

ಉಡುಪಿ: ಪೆರ್ಡೂರು ಶ್ರೀಅನಂತಪದ್ಮನಾಭ ದೇವಸ್ಥಾನದ ನಗಾರಿ ಗೋಪುರದ ಪುನರ್ ನಿರ್ಮಾಣಕ್ಕೆ ಪ್ರಾರಂಭಿಕ ಹಂತದ ಶಿಲಾನ್ಯಾಸ ಕಾರ್ಯ ಕ್ರಮವನ್ನು ಜು.13ರಂದು ನಡೆಸಲು ಉದ್ದೇಶಿಸಲಾಗಿದ್ದು, ಇದರಲ್ಲಿ ಭಕ್ತಾದಿ ಗಳು ಯಾವುದೇ ರಾಜಕೀಯ ದುರುದ್ದೇಶಗಳನ್ನು ಇಟ್ಟುಕೊಳ್ಳದೇ ಪಾಲ್ಗೊಳ್ಳ ಬೇಕು ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಮೋದ್ ರೈ ಪಳಜೆ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶದಂತೆ ನಗಾರಿ ಗೋಪುರ ತೆರವು:ದೇವಸ್ಥಾನದ ನಗಾರಿ ಉಪ್ಪರಿಗೆಯು ಶಿಥಿಲಾವಸ್ಥೆಯಲ್ಲಿರುವುದನ್ನು ದೇವಳದ ವ್ಯವಸ್ಥಾಪನಾ ಸಮಿತಿಯು ಮನಗಂಡಿದ್ದು, ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅಥವಾ ಬೇರೆಯವರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಹಾಗೂ […]

ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನ:ನಾಳೆ (ಜು.13) ನಗಾರಿ ಗೋಪುರದ ಶಿಲಾನ್ಯಾಸ ಸಮಾರಂಭ

ಹೆಬ್ರಿ: ಇತಿಹಾಸ ಪ್ರಸಿದ್ಧ ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಮೊದಲ ಹಂತದ ಜೀರ್ಣೋದ್ದಾರದ ಪ್ರಯುಕ್ತ ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ಭವ್ಯವಾಗಿ ನಿರ್ಮಾಣಗೊಳ್ಳಲಿರುವ ಶ್ರೀ ದೇವಳದ ನಗಾರಿ ಗೋಪುರದ ಶಿಲಾನ್ಯಾಸ ಸಮಾರಂಭ ಜು.13ರಂದು ಬೆಳಗ್ಗೆ 9 ರಿಂದ ಕ್ಷೇತ್ರದ ತಂತ್ರಿಗಳಾದ ವಿದ್ವಾನ್ ಕೆ. ಪಿ. ಕುಮಾರಗುರು ತಂತ್ರಿಯವರ ನೇತೃತ್ವದಲ್ಲಿ ಸರದಿ ಅರ್ಚಕರಾದ ಪಿ. ಸುಧಾಕರ ಅಡಿಗರ ಉಪಸ್ಥಿತಿಯಲ್ಲಿ ನಡೆಯಲಿದೆ. ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ, ದಾರು ಮುಹೂರ್ತ, ಶಿಲಾ ಮುಹೂರ್ತ, ಭುವನೇಶ್ವರೀ ಪೂಜೆ, ನಗಾರಿ ಗೋಪುರದ […]