ಮಲ್ಪೆ: ಮೀನುಗಾರಿಕೆ ವೇಳೆ ದೋಣಿ ಮಗುಚಿಬಿದ್ದು ಮೀನುಗಾರ ಮೃತ್ಯು.

ಉಡುಪಿ: ನಾಡದೋಣಿ ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿ ಮಗುಚಿಬಿದ್ದು ಮೀನುಗಾರ ಮೃತಪಟ್ಟ ಘಟನೆ ಪಡುಕೆರೆಯಲ್ಲಿ ಶುಕ್ರವಾರ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಉದ್ಯಾವರ ಪಿತ್ರೋಡಿ ನಿವಾಸಿ ನೀಲಾಧರ (48) ಎಂದು ಗುರುತಿಸಲಾಗಿದೆ. ಲೀಲಾಧರ್ ಅವರು ಇತರ ಮೀನುಗಾರರೊಂದಿಗೆ ನಾಡದೋಣಿ ಮೀನುಗಾರಿಕೆಗಾಗಿ ತೆರಳಿದ್ದು ಸಮುದ್ರದಲ್ಲಿ ಬಲೆಯನ್ನು ಬೀಸುವ ಸಮಯದಲ್ಲಿ ಸಮುದ್ರದ ಅಲೆಯ ಹೊಡೆತಕ್ಕೆ ನಾಡದೋಣಿ ಮಗುಚಿಬಿದ್ದಿದ್ದು ದೋಣಿಯ ಆಡಿ, ಬಲೆಗಳ ನಡುವೆ ಸಿಲುಕಿ ನೀಲಾಧರ ಅವರು ಮೃತಪಟ್ಟಿರುತ್ತಾರೆ. ನೀಲಾಧರ್ ಅವರ ಮೃತದೇಹ ಸಮುದ್ರದಿಂದ ಮೇಲಕ್ಕೆತ್ತಿದ್ದು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಮಲ್ಪೆ […]
ಜೈಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಸಾಹೇಬರಕಟ್ಟೆ-ಶಿರಿಯಾರ: ಜು.13 ರಂದು ನೂತನ ಕಟ್ಟಡ “ಸೌಹಾರ್ದ ಸಿರಿ” ಉದ್ಘಾಟನಾ ಸಮಾರಂಭ.

ಉಡುಪಿ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕು, ಸಾಹೇಬರಕಟ್ಟೆ, ಶಿರಿಯಾರ ಗ್ರಾಮದಲ್ಲಿ ಜೈಗಣೇಶ್ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ ಇದರ ನೂತನ ಕಟ್ಟಡ “ಸೌಹಾರ್ದ ಸಿರಿ” ಉದ್ಘಾಟನಾ ಸಮಾರಂಭವು ಜುಲೈ 13ರಂದು ಆದಿತ್ಯವಾರ ಪೂರ್ವಾಹ್ನ 09-30ಕ್ಕೆ ನಡೆಯಲಿದೆ. ಕಾರ್ಯಕ್ರಮದ ವಿವರ:ಸಭಾಧ್ಯಕ್ಷತೆ:ಶ್ರೀ ಆಶೋಕ ಪ್ರಭು, ಸಾಹೇಬರಕಟ್ಟೆಅಧ್ಯಕ್ಷರು, ಜೈಗಣೇಶ್ ಕ್ರೆಡಿಟ್ ಸೌ. ಸ.ನಿ., ಸಾಹೇಬರಕಟ್ಟೆ ಪ್ರಧಾನ ಕಚೇರಿ ಉದ್ಘಾಟನೆ:ಕೋಟ ಶ್ರೀನಿವಾಸ ಪೂಜಾರಿ, ಮಾನ್ಯ ಸಂಸದರು,ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಭದ್ರತಾ ಕೊಠಡಿ ಉದ್ಘಾಟನೆ:ಶ್ರೀ ಕೆ. ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವರು […]
ಪೆರ್ಡೂರಿನಲ್ಲಿ ನೃತ್ಯ ಹಾಗೂ ಯಕ್ಷಗಾನ ತರಗತಿ ಆರಂಭ.

ಪೆರ್ಡೂರು: ಗ್ರಾಮೀಣ ಪ್ರದೇಶದಲ್ಲಿ ಆದೆಷ್ಟೋ ಪ್ರತಿಭೆಗಳು ಸೂಕ್ತ ತರಬೇತಿ ಇಲ್ಲದೆ ಅವಕಾಶ ವಂಚಿತರಾಗುತ್ತಿದ್ದಾರೆ. ಕಳೆದ 11 ವರ್ಷಗಳಿಂದ ಅಂತಹ ಪ್ರತಿಭೆಗಳನ್ನು ಗುರುತಿಸಿ ವೇದಿಕೆ ಕಲ್ಪಿಸುತ್ತಿರುವ ಚಾಣಕ್ಯ ಸಂಸ್ಥೆ ಇದೀಗ ಪೆರ್ಡೂರಿನಲ್ಲಿ ತರಬೇತಿ ನೀಡಲು ಮುಂದಾಗಿರುವುದು ಶ್ಲಾಘನೀಯ ಎಂದು ಪೆರ್ಡೂರು ಬಂಟರ ಸಂಘದ ಅಧ್ಯಕ್ಷ ಕೆ.ಶಾಂತರಾಮ ಸೂಡ ಹೇಳಿದರು. ಅವರು ಚಾಣಕ್ಯ ಶಿಕ್ಷಣ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಪೆರ್ಡೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ಪ್ರಧಾನ ಕಚೇರಿ ಕಟ್ಟಡದ ಅನಂತ ಸೌರಭ ಸಭಾಂಗಣದಲ್ಲಿ ಆರಂಭಗೊಂಡ ನೃತ್ಯ […]
ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ: ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ

ಬೆಂಗಳೂರು: ಸರ್ಕಾರಿ ಶಾಲಾ ಮಕ್ಕಳ ಉಜ್ವಲ ಭವಿಷ್ಯಕ್ಕೆ ರಾಜ್ಯ ಸರ್ಕಾರ ಮಹತ್ವದ ಘೋಷಣೆಯೊಂದನ್ನು ಹೊರಡಿಸಿದೆ. ರಾಜ್ಯಾದ್ಯಂತ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಯಿಂದ ಪಿಯುಸಿ ತನಕ ಓದುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಆರಂಭಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಮೂಲಕ ಸರ್ಕಾರಿ ಶಾಲೆಗಳ ಬಲವರ್ಧನೆಗೆ ಪ್ರಮುಖ ಒತ್ತು ನೀಡಲಾಗುತ್ತಿದೆ. ಈ ಕುರಿತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಮಕ್ಕಳಿಗೆ ಓದಲು ಅನುಕೂಲ:ಸರ್ಕಾರಿ ಶಾಲೆಯ ಮಕ್ಕಳ ಹಾಜರಾತಿ, ಗುಣಮಟ್ಟ ಹೆಚ್ಚಿಸಲು ಸರ್ಕಾರದಿಂದ ಮಹತ್ವದ […]
ಉಡುಪಿ:ವಾಹನಗಳ ಬಹಿರಂಗ ಹರಾಜು

ಉಡುಪಿ: ಮಣಿಪಾಲ ಪೊಲೀಸ್ ಠಾಣೆಯ ಪ್ರಕರಣಕ್ಕೆ ಸಂಬಂಧಪಟ್ಟ ಮತ್ತು ವಾರೀಸುದಾರರಿಲ್ಲದ ದ್ವಿಚಕ್ರವಾಹನಗಳಾದ ಕೆಎ 20ಯು-6787 ಬಜಾಜ್ ಪಲ್ಸರ್, ಕೆಎ 20 ಎಕ್ಸ್-9663 ಹೀರೋ ಹೋಂಡಾ ಸ್ಪ್ಲೆಂಡರ್, ಎಂ.ಹೆಚ್ 31 ಡಿಯು- 8379 ಯಮಾಹಾ ಎಫ್.ಝಡ್-ಎಸ್, ಎಂಜಿನ್ ನಂ. ಕೆಸಿ09ಇ204813 ಹೊಂಡಾ ಯುನಿಕಾರ್ನ್ ಮತ್ತು ಆಟೋರಿಕ್ಷಾ ಕೆಎ20 ಎ-8850 ಬಜಾಜ್ ಆರ್/ಇ 2ಸ್ಟೋಕ್ ಅನ್ನು ಜುಲೈ 15 ರಂದು ಸಂಜೆ 4 ಗಂಟೆಗೆ ಮಣಿಪಾಲ ಪೊಲೀಸ್ ಠಾಣಾ ಆವರಣದಲ್ಲಿ ನ್ಯಾಯಾಲಾಯದ ಆದೇಶದಂತೆ ಬಹಿರಂಗ ಹರಾಜು ಮಾಡಲಾಗುವುದು. ಆಸಕ್ತರು ಭಾಗವಹಿಸಬಹುದಾಗಿದೆ […]