HUL’ನ ಮೊದಲ ಮಹಿಳಾ ಸಿಇಒ ಆಗಿ ಪ್ರಿಯಾ ನಾಯರ್ ನೇಮಕ.

ನವದೆಹಲಿ: ದೇಶದ ಪ್ರಮುಖ ಎಫ್‌ಎಂಸಿಜಿ ಕಂಪನಿ ಹಿಂದುಸ್ತಾನ್‌ ಯೂನಿಲಿವರ್ ಲಿಮಿಟೆಡ್‌ನ (ಎಚ್‌ಯುಎಲ್‌) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕಿಯಾಗಿ ಪ್ರಿಯಾ ನಾಯರ್ ನೇಮಕವಾಗಿದ್ದಾರೆ. ಆಗಸ್ಟ್‌ 1ರಿಂದ ನೇಮಕವು ಜಾರಿಗೆ ಬರಲಿದ್ದು, ಅಧಿಕಾರಾವಧಿ ಐದು ವರ್ಷವಾಗಿದೆ. ಈ ಹುದ್ದೆಗೆ ನೇಮಕವಾದ ಮೊದಲ ಮಹಿಳೆ ಇವರಾಗಿದ್ದಾರೆ. ರೋಹಿತ್ ಜಾವಾ ಅವರು ಜುಲೈ 31ರಂದು ಆ ಹುದ್ದೆಯನ್ನು ತೆರವುಗೊಳಿಸಲಿದ್ದಾರೆ. ಇವರ ಸ್ಥಾನಕ್ಕೆ ನಾಯರ್ ನೇಮಕಗೊಂಡಿದ್ದಾರೆ. 1995ರಲ್ಲಿ ಎಚ್‌ಯುಎಲ್‌ಗೆ ಸೇರಿದ ನಾಯರ್ ಕಂಪನಿಯ, ಮಾರುಕಟ್ಟೆ ವಿಭಾಗದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ ಎಂದು ಕಂಪನಿ […]

ಅಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಉಡುಪಿ ಜಿಲ್ಲೆ 275 ಇದರ ಪ್ರಥಮ ಉಪ ಜಿಲ್ಲಾ ಗವರ್ನರ್ ರಾಗಿ ಸುನಿಲ್ ಕುಮಾರ್ ಶೆಟ್ಟಿ ಆಯ್ಕೆ.

ಉಡುಪಿ : ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಉಡುಪಿ ಜಿಲ್ಲೆ 275 ರ ಪ್ರಥಮ ಉಪ ಜಿಲ್ಲಾ ಗವರ್ನರ್ ರಾಗಿ ಉಳ್ಳಾಲ ಬರಿಕೆ ಗುತ್ತು ಸುನಿಲ್ ಕುಮಾರ್ ಶೆಟ್ಟಿ ಯವರು ಆಯ್ಕೆ ಯಾಗಿದ್ದಾರೆ. ಕಂದಾಯ ಜಿಲ್ಲೆಗಳಾದ ಉಡುಪಿ, ಶಿವಮೊಗ್ಗ, ದಾವಣಗೆರೆ ಹಾಗೂ ಮಂಗಳೂರು ಜಿಲ್ಲೆಗಳು ಕಾರ್ಯವ್ಯಾಪ್ತಿಯಲ್ಲಿ ಬರುತ್ತವೆ. ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಸರ್ಕಾರೇತರ ಸಂಸ್ಥೆ (NGO )ಯಾಗಿದ್ದು, 2008 ರಲ್ಲಿ ಭಾರತ ದಲ್ಲಿ ಪ್ರಾರಂಭ ವಾಗಿರುತ್ತದೆ. ಈ ಸಂಸ್ಥೆ ಯಾವುದೇ ಲಾಬೋದ್ಧೇಶಇಲ್ಲದ ಸ್ವತಂತ್ರವಾಗಿರುವ […]

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಉಚಿತ ಶಿಕ್ಷಣ; ಅರ್ಜಿ ಆಹ್ವಾನ.!

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು (ಕೆಎಸ್‌ಒಯು) ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಉಚಿತ ಶಿಕ್ಷಣ ನೀಡಲಿದೆ. ಈ ಸಂಬಂಧ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜೊತೆ ವಿ.ವಿಯು ಬುಧವಾರ ಒಡಂಬಡಿಕೆ ಮಾಡಿಕೊಂಡಿದೆ. ‘ಇಲಾಖೆ ₹ 5.05 ಕೋಟಿ ಅನುದಾನ ನೀಡಿದೆ. ಇದನ್ನು ಬಳಸಿ ಮುಸ್ಲಿಂ, ಕ್ರೈಸ್ತ, ಬೌದ್ಧ, ಸಿಖ್‌, ಜೈನ್, ಪಾರ್ಸಿ ಸಮುದಾಯದ 4,500 ವಿದ್ಯಾರ್ಥಿಗಳವರೆಗೆ ಉಚಿತವಾಗಿ ಶಿಕ್ಷಣ ನೀಡಲಾಗುವುದು’ ಎಂದು ಕುಲಪತಿ ‍ಪ್ರೊ.ಶರಣಪ್ಪ ವಿ. ಹಲಸೆ ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ‘ಇಲಾಖೆಯೇ ಪ್ರವೇಶ […]

ಮಗಳ ಜೊತೆ ಕಾಪು ಮಾರಿಗುಡಿ ದೇಗುಲಕ್ಕೆ ಭೇಟಿ ನೀಡಿದ ಅಶ್ವಿನಿ ಪುನೀತ್ ರಾಜ್‍ಕುಮಾರ್

ಉಡುಪಿ: ತಿಂಗಳ ಹಿಂದೆಯಷ್ಟೇ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದ ಅಶ್ವಿನಿ ಪುನೀತ್ ರಾಜ್‌ಕುಮಾ‌ರ್ ಅವರು ಇಂದು ತಮ್ಮ ಮಗಳ ಜೊತೆ ಮತ್ತೆ ಕಾಪು ಹೊಸ ಮಾರಿಗುಡಿ ದೇಗುಲಕ್ಕೆ ಭೇಟಿ ನೀಡಿ ಮಾರಿಯಮ್ಮನ ದರ್ಶನ ಪಡೆದರು. ಪುತ್ರಿ ವಂದಿತಾ ಮತ್ತು ಸ್ನೇಹಿತೆಯರೊಂದಿಗೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಕ್ಷೇತ್ರದ ವತಿಯಿಂದ ಅವರನ್ನು ಗೌರವಿಸಿ ಅಮ್ಮನ ಪ್ರಸಾದವನ್ನು ನೀಡಲಾಯಿತು.ಈ ಕ್ಷೇತ್ರಕ್ಕೆ ಬಂದ್ರೆ ಏನೋ ಒಂಥರಾ ಮನಸ್ಸಿಗೆ ನೆಮ್ಮದಿ. ಹಾಗಾಗಿ ಮಗದೊಮ್ಮೆ ಭೇಟಿ ಕೊಟ್ಟೆ ಎಂದು ಅಶ್ವಿನಿ ಅವರು ಅಭಿಪ್ರಾಯವ್ಯಕ್ತಪಡಿಸಿದರು. […]

ಕಾರ್ಕಳ: ಜಲಜೀವನ್‌ ಮಿಷನ್‌ ಹಾಗೂ ವಾರಾಹಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಶಾಸಕ ವಿ.ಸುನಿಲ್‌ ಕುಮಾರ್

ಕಾರ್ಕಳ: ಕಾರ್ಕಳ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಕಾರ್ಕಳ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜಿಗೆ ಸಂಬಂಧಿಸಿದಂತೆ ಈಗಾಗಲೇ ಚಾಲ್ತಿಯಲ್ಲಿರುವ ಬಹುಗ್ರಾಮ ಕುಡಿಯುವ ನೀರು ಯೋಜನೆ ಜಲಜೀವನ್‌ ಮಿಷನ್‌ ಯೋಜನೆ ಹಾಗೂ ವಾರಾಹಿ ಯೋಜನೆ ಅನುಷ್ಠಾನದ ಕುರಿತು ಸಂಬಂದಪಟ್ಟ ಇಲಾಖಾ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವಕಾಂಕ್ಷಿ ಜಲಜೀವನ್‌ ಮಿಷನ್‌ ಯೋಜನೆಯಡಿ ಮನೆ ಮನೆಗೆ ಗಂಗೆ ಎಂಬ ಘೋಷವಾಕ್ಯದೊಂದಿಗೆ ಎಲ್ಲಾ ಕುಟುಂಬಗಳಿಗೆ ಶುದ್ದ ಕುಡಿಯುವ ನೀರು […]