ಉಡುಪಿ: ಚಲಿಸುತ್ತಿದ್ದ ಆಟೋದಲ್ಲಿ ಹಾವು ಪ್ರತ್ಯಕ್ಷ: ಆಟೋ ಬಿಟ್ಟು ಓಡಿದ ಚಾಲಕ

ಉಡುಪಿ: ಮಳೆಗಾಲದಲ್ಲಿ ಎಲ್ಲೆಂದರಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿವೆ.ಉಡುಪಿಯಲ್ಲಿ ಆಟೋದ ಒಳಗೆ ಹಾವೊಂದು ಅವಿತು ಕುಳಿತಿದ್ದು ಆಟೋ ಚಲಾಯಿಸುತ್ತಿರುವಾಗ ಹೊರಬಂದಿದೆ. ಇದನ್ನು ಗಮನಿಸಿದ ಚಾಲಕ ಆಟೋವನ್ನು ಅಲ್ಲೇ ನಿಲ್ಲಿಸಿ ಓಡಿದ್ದು ಅಪಘಾತದಿಂದ ಪಾರಾಗಿದ್ದಾರೆ. ವಿಷಕಾರಿಯಲ್ಲದ ಈ ಹಾವು ಆಟೋ ಒಳಭಾಗದ ಡ್ಯಾಶ್ ಬೋರ್ಡ್ ಬಾಕ್ಸ್ ನಲ್ಲಿ ಅವಿತಿತ್ತು. ದಾರಿ ನಡುವೆ ಏಕಾಏಕಿ ಹೊರ ಬಂದ ಹಾವನ್ನು ನೋಡಿ ಚಾಲಕ ಹೌಹಾರಿದ್ದಾರೆ.ಕೊನೆಗೆ ಆಟೋ ನಿಲ್ಲಿಸಿ ಉರಗ ತಜ್ಞ ನಿಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಬಂದ ಉರಗ ತಜ್ಞ ಪ್ರಾಣೇಶ್‌ ಪರ್ಕಳ, ಹಾವನ್ನು […]

ಮಣಿಪಾಲ: ₹3.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಪರ್ಕಳ ಮಾರುಕಟ್ಟೆ ಸಂಕೀರ್ಣಕ್ಕೆ ಶಾಸಕ ಯಶ್ ಪಾಲ್ ಸುವರ್ಣ ಶಿಲಾನ್ಯಾಸ

ಉಡುಪಿ: ಉಡುಪಿ ನಗರಸಭೆ ವತಿಯಿಂದ ಸುಮಾರು 3.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಪರ್ಕಳ ಮಾರುಕಟ್ಟೆ ಸಂಕೀರ್ಣದ ನಿರ್ಮಾಣ ಕಾಮಗಾರಿಗೆ ಉಡುಪಿ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಶಿಲಾನ್ಯಾಸ ನೆರವೇರಿಸಿದರು.* ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಶಾಸಕ ಯಶ್ ಪಾಲ್ ಸುವರ್ಣ ಉಡುಪಿ ನಗರಸಭೆ ವತಿಯಿಂದ ಸುಮಾರು 3.5 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಪರ್ಕಳ ಮಾರುಕಟ್ಟೆ ಸಂಕೀರ್ಣದಲ್ಲಿ ತರಕಾರಿ ಮಾರುಕಟ್ಟೆ, ಮೀನು ಮಾರುಕಟ್ಟೆ, ಮಾಂಸದ ಅಂಗಡಿ, ನಿತ್ಯ ಮಾರುಕಟ್ಟೆ, ಅಂಗಡಿ ಮಳಿಗೆಗಳನ್ನು ಒಳಗೊಂಡಿದ್ದು, ಪಾರ್ಕಿಂಗ್ ವ್ಯವಸ್ಥೆಯೊಂದಿಗೆ ಸುಸಜ್ಜಿತ ಮಾರುಕಟ್ಟೆ […]

ಉಡುಪಿ: ಕೆಮ್ಮಾಲೆ ಗ್ರೂಪ್‌’ನ ಉದ್ಯಮಿ ರಾಘವೇಂದ್ರ ಕುಂದರ್ ನಿಧನ

ಉಡುಪಿ: ಕೆಮ್ಮಾಲೆ ಗ್ರೂಪ್‌ನ ಉದ್ಯಮಿ ರಾಘವೇಂದ್ರ ಕುಂದರ್ (48) ಜುಲೈ 10ರಂದು ನಿಧನ ಹೊಂದಿದರು. ಅವರು ಕೆಲಸದ ಸ್ಥಳದಲ್ಲಿ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ‌ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ. ಬಹು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಅವರು, ಉದ್ಯಮಿಯಾಗಿ ಸಾಕಷ್ಟು ಹೆಸರುವಾಸಿಯಾಗಿದ್ದರು. ಕೆಮ್ಮಾಲೆ ಗ್ರೂಪ್ ಬೇಕ್ ಸ್ಟುಡಿಯೋ, ಫಿಶ್ ಫ್ಯಾಕ್ಟರಿ (ಸೀಫುಡ್ ರೆಸ್ಟೋರೆಂಟ್) ಮತ್ತು ಕೆಮ್ಮಾಲೆ ಕನ್‌ಸ್ಟ್ರಕ್ಷನ್ಸ್ ಅಡಿಯಲ್ಲಿ ನಿರ್ಮಾಣ ಕ್ಷೇತ್ರದಲ್ಲಿನ ತನ್ನ ಜನಪ್ರಿಯ ಬ್ರ‍್ಯಾಂಡ್‌ಗಳಿಗೆ ಹೆಸರುವಾಸಿಯಾಗಿದೆ.ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಯಾವುದೇ ಕ್ರಾಂತಿ ಇಲ್ಲ, ಎಲ್ಲವೂ ಶಾಂತಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಮೈಸೂರು: ರಾಜ್ಯ ರಾಜಕೀಯದಲ್ಲಿ ಸೆಪ್ಟೆಂಬರ್ ಬಳಿಕ ಯಾವುದೇ ಕ್ರಾಂತಿ ಇರುವುದಿಲ್ಲ. ಎಲ್ಲವೂ ಶಾಂತವಾಗಿರಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಮೂರನೇ ಆಷಾಢ ಶುಕ್ರವಾರದ ಅಂಗವಾಗಿ ಕುಟುಂಬ ಸಮೇತ ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಐದು ವರ್ಷಗಳ ಕಾಲ ನಾನೇ ಸಿಎಂ ಎಂದು ಹೇಳಿದ ಮೇಲೆ ಬೇರೆ ರೀತಿಯ ಚರ್ಚೆಗೆ ಅವಕಾಶವೇ ಇಲ್ಲ. ಈ ಬಗ್ಗೆ […]

ಜುಲೈ 13ರಂದು ಉಡುಪಿ ಶಿರೂರು ಮಠದಲ್ಲಿ ಕಟ್ಟಿಗೆ ಮುಹೂರ್ತ

ಉಡುಪಿ: ಅಷ್ಟ ಮಠಗಳಲ್ಲಿ ಒಂದಾದ ಶಿರೂರು ಮಠವು ಉಡುಪಿ ಶ್ರೀಕೃಷ್ಣ ಮಠದ ಮುಂದಿನ ಪರ್ಯಾಯಕ್ಕಾಗಿ ಸಿದ್ಧತೆಯಲ್ಲಿ ತೊಡಗಿದೆ. ಶಿರೂರು ಮಠದ ಶ್ರೀ ವೇದವರ್ಧನತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಇದಾಗಿದ್ದು, ಸರ್ವಜ್ಞ ಪೀಠಾರೋಹಣದ ಹಾಗೂ ಶ್ರೀಕೃಷ್ಣನ ಪೂಜಾ ದೀಕ್ಷೆ ಸ್ವೀಕರಿಸುವ ಪೂರ್ವಭಾವಿ ಆಚರಣೆಗಳಲ್ಲಿ ಕಟ್ಟಿಗೆ ಮುಹೂರ್ತ ಪ್ರಮುಖವಾಗಿದೆ. ಈಗಾಗಲೇ ಬಾಳೆ ಮುಹೂರ್ತ, ಅಕ್ಕಿ ಮುಹೂರ್ತ ನೆರವೇರಿಸಿರುವ ಭಾವಿ ಪರ್ಯಾಯ ಶಿರೂರು ಮಠದ ಕಟ್ಟಿಗೆ ಮುಹೂರ್ತವು ಇದೇ ಜುಲೈ 13ರಂದು ನೆರವೇರಲಿದೆ. ಉಡುಪಿ ಶಿರೂರು ಮಠದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ […]