ಉಡುಪಿ:ತ್ಯಾಜ್ಯಗಳ ವೈಜ್ಞಾನಿಕ ವಿಲೇವಾರಿಗೆ ಸೂಚನೆ

ಉಡುಪಿ: ಉಡುಪಿ ನಗರಸಭಾ 35 ವಾರ್ಡುಗಳಲ್ಲಿನ ಎಲ್ಲಾ ಸಾರ್ವಜನಿಕರು ತಮ್ಮ ಮನೆ ಹಾಗೂ ವಾಣಿಜ್ಯಕಟ್ಟಡಗಳಲ್ಲಿ ಉತ್ಪತ್ತಿಯಾಗುವ ಕಟ್ಟಡ ತ್ಯಾಜ್ಯಗಳು, ತೆಂಗಿನ ಮಡಲು, ಗಿಡಗಂಟಿ, ಗಾರ್ಡನ್ ತ್ಯಾಜ್ಯ ಇತ್ಯಾದಿಗಳನ್ನು ರಸ್ತೆ ಬದಿಗೆ ಹಾಗೂ ಮಳೆ ನೀರು ಹರಿಯುವ ತೋಡಿಗೆ ಅಥವಾ ಚರಂಡಿಗೆ ಎಸೆಯುತ್ತಿರುವುದು ಕಂಡು ಬಂದಿದ್ದು, ಇದರಿಂದಾಗಿ ಮಳೆ ನೀರು ಸರಾಗವಾಗಿ ಹರಿಯಲು ಹಾಗೂ ರಸ್ತೆ ಬದಿಗೆ ಹಾಕಿರುವ ತೆಂಗಿನ ಮಡಿಲಿನಿಂದಾಗಿ ಘನತ್ಯಾಜ್ಯ ವಿಲೇವಾರಿಗೆ ತೊಂದರೆ ಉಂಟಾಗಿರುತ್ತದೆ. ಸಾರ್ವಜನಿಕ ಪ್ರದೇಶಗಳಲ್ಲಿ ಹಾಗೂ ರಸ್ತೆ ಬದಿಗಳಲ್ಲಿ ತೆಂಗಿನ ಮಡಲು ಮತ್ತು […]

ಮಣಿಪಾಲ ಜ್ಞಾನಸುಧಾ : ಸಿ.ಎ. ಫೌಂಡೇಶನ್, ಸಿ.ಎಸ್.ಇ.ಇ.ಟಿ. ಓರಿಯಂಟೇಶನ್ ಇನ್ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರಯತ್ನಶೀಲತೆ ಮೊದಲ ಗೆಲುವು: ಸಿ.ಎ. ಗೋಪಾಲ ಕೃಷ್ಣ ಭಟ್

ಉಡುಪಿ:ಎಂತಹ ಕಷ್ಟದ ದಾರಿಯಿದ್ದರೂ ಆತ್ಮವಿಶ್ವಾಸದಪ್ರಯತ್ನಶೀಲತೆ ಮೊದಲ ಗೆಲುವಿದ್ದಂತೆ, ಅರ್ಧ ಸಾಧಿಸಿದಂತೆ,ಉಳಿದರ್ಧ ಆ ಪ್ರಯತ್ನಶೀಲತೆಯೇ ನಮ್ಮನ್ನು ಸಾಧಿಸುವಂತೆಪ್ರೇರೇಪಿಸುತ್ತದೆ ಎಂದು ತ್ರಿಷಾ ಸಮೂಹ ಶಿಕ್ಷಣ ಸಂಸ್ಥಗಳಸ್ಥಾಪಕರಾದ ಸಿ.ಎ. ಗೋಪಾಲಕೃಷ್ಣ ಭಟ್ ಅಭಿಪ್ರಾಯ ಪಟ್ಟಿದ್ದಾರೆ. ಅವರು ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜುವಿದ್ಯಾನಗರ ಇಲ್ಲಿಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆಹಮ್ಮಿಕೊಂಡಿದ್ದ ಸಿ.ಎ. ಫೌಂಡೇಶನ್, ಸಿ.ಎಸ್.ಇ.ಇ.ಟಿ. ಓರಿಯಂಟೇಶನ್ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಪ್ರಸಕ್ತ ಪ್ರಪಂಚವನ್ನು ಕಾಮರ್ಸ್ ಆಳುತ್ತಿದೆ.ಇದನ್ನು ಅರ್ಥಮಾಡಿಕೊಂಡು ಮುಂದಿನ ಸ್ಪರ್ಧಾತ್ಮಕ ಜಗತ್ತಿಗೆ ಕಾಮರ್ಸ್ ವಿದ್ಯಾರ್ಥಿಗಳು ಕೌಶಲ್ಯಭರಿತರಾಗಿ ಅಣಿಯಾಗುವ ಅಗತ್ಯವಿದೆ ಎಂದರು. […]

ಉಡುಪಿ:’ಗುರು ಪೂರ್ಣಿಮೆ’ ಪ್ರಯುಕ್ತ ರಾಮ ಮಡಿವಾಳ ಹಾಗೂ ವಿಶ್ವನಾಥ ನಾಯಕ್ ಅವರಿಗೆ ಸನ್ಮಾನ.

ಉಡುಪಿ:ಇಂದು ಜುಲೈ 10, ಗುರುವಾರ ‘ಗುರು ಪೂರ್ಣಿಮೆ’ ಪ್ರಯುಕ್ತ ‘ಜ್ಞಾನದ ದೀವಿಗೆಯನ್ನು ನೀಡಿ ಬದುಕಿಗೆ ದಾರಿ ತೋರಿದ’ ಗುರುಗಳನ್ನು ಜಿಲ್ಲೆಯಾದ್ಯಂತ ಗೌರವಿಸುವ ಅಭಿಯಾನದ ಭಾಗವಾಗಿ ಹಿರೇಬೆಟ್ಟು ಗ್ರಾಮದಲ್ಲಿನ ಯಾವುದೇ ರೀತಿಯ ಧಾರ್ಮಿಕ, ದೈವ ದೇವರ ಕಾರ್ಯದಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಶ್ರೀಯುತ ರಾಮ ಮಡಿವಾಳ ಹಾಗೂ ವಿಶ್ವನಾಥ ನಾಯಕ್ ನಿವೃತ ಮುಖ್ಯೋಪಾಧ್ಯಾಯರನ್ನ ಇಂದು ಗುರು ಪೂರ್ಣಿಮೆಯ ದಿನದಂದು ಗೌರವಿಸಲಾಯಿತು. ಈ ಸಂಧರ್ಭದಲ್ಲಿ ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖರಾದ ಶ್ರೀನಿಧಿ ಹೆಗ್ಡೆ, ಜಿಲ್ಲಾ ಬಿಜೆಪಿ ರೈತ ಮೋರ್ಚಾದ […]

Apple ಸಂಸ್ಥೆಯ ನೂತನ COO ಆಗಿ ಭಾರತ ಮೂಲದ  ಸಾಬಿಹ್ ಖಾನ್!

ನವದೆಹಲಿ: ಪ್ರತಿಷ್ಠಿತ  ಐಫೋನ್ ತಯಾರಿಕಾ ಸಂಸ್ಥೆ Apple ನ ನೂತನ COO ಆಗಿ ಭಾರತ ಮೂಲದ ಸಾಬಿಹ್ ಖಾನ್ ನೇಮಕಗೊಂಡಿದ್ದಾರೆ.   ಅಮೆರಿಕದ ಆ್ಯಪಲ್ ಕಂಪನಿಯು ತನ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಗೆ (COO) ಭಾರತ ಮೂಲದ ಸಾಬಿಹ್‌ ಖಾನ್ (58) ಅವರನ್ನು ನೇಮಕ ಮಾಡಿದೆ. ಇವರು ಕಳೆದ 30 ವರ್ಷಗಳಿಂದ ಇದೇ ಸಂಸ್ಥೆಯಲ್ಲಿ ಕಾರ್ಯ ನಿರ್ಹಿಸುತ್ತಿದ್ದರು. ಸದ್ಯ  ಕಾರ್ಯನಿರ್ವಹಣಾ ವಿಭಾಗದ ಹಿರಿಯ ಉಪಾಧ್ಯಕ್ಷರಾಗಿದ್ದರು . ಇನ್ನೇನು ನಿವೃತ್ತಿಯಾಗಲಿರುವ ಸಿಒಒ ಜೆಫ್ ವಿಲಿಯಮ್ಸ್ ಅವರ ಜಾಗಕ್ಕೆ ಸಾಬಿಹ್ ಖಾನ್‌ ನೇಮಕಗೊಳ್ಳುತ್ತಿದ್ದಾರೆ.

ಉಡುಪಿ:ಕುತ್ಯಾರು ಗ್ರಾಮ ಪಂಚಾಯತ್ ಮುಂಭಾಗ ಬಿಜೆಪಿ ವಿರುದ್ಧ ಕಾಂಗ್ರೆಸ್‌ನ ಬೃಹತ್ ಪ್ರತಿಭಟನೆ.

ಉಡುಪಿ:ಕಾಂಗ್ರೆಸ್ ಸರಕಾರದ ವಿರುದ್ಧ ಹಾಗೂ ಗ್ಯಾರಂಟಿ ಯೋಜನೆಗೆ ವಿರೋಧ ಮಾಡುವ ಬಿಜೆಪಿ ಪಕ್ಷದ ವಿರುದ್ಧ ಪ್ರತಿಭಟನೆಯನ್ನು ಕುತ್ಯಾರು ಗ್ರಾಮೀಣ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ಕಳತ್ತೂರಿನಲ್ಲಿರುವ ಕುತ್ಯಾರು ಗ್ರಾಮ ಪಂಚಾಯತ್ ಕಚೇರಿ ಮುಂಭಾಗ ನಡೆಯಿತು. ಸಂಧ್ಯಾ ಸುರಕ್ಷಾ, ವಿಧವಾ ವೇತನ ಮೊದಲಾದ ಸಾಮಾಜಿಕ ಪಿಂಚಣಿ ಗಳ ಮರು ಸಮೀಕ್ಷೆ ಕಾರ್ಯ ಸರಕಾರದ ಮಟ್ಟದಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಮೂಲಕ ನಡೆಯುತ್ತಿದೆ. ಆದರೆ ಬಿಜೆಪಿಗರು ಈ ಪಟ್ಟಿಯನ್ನು ಕೈಯಲ್ಲಿ ಹಿಡಿದು […]