ಯೆಮೆನ್ ನಲ್ಲಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾಗೆ ಜು.16 ರಂದು ಗಲ್ಲು ಶಿಕ್ಷೆ.!

ಯೆಮೆನ್: ಯೆಮೆನ್‌ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾಗೆ ಜುಲೈ 16 ರಂದು ಗಲ್ಲಿಗೇರಿಸಲಾಗುವುದು. ಯೆಮೆನ್ ಪ್ರಜೆಯ ಕೊಲೆ ಪ್ರಕರಣದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನರ್ಸ್ ನಿಮಿಷಾ ಪ್ರಿಯಾ ಅವರನ್ನು ಮುಂದಿನ ವಾರ ಅಂದರೆ ಜುಲೈ 16 ರಂದು ಗಲ್ಲಿಗೇರಿಸಲಾಗುತ್ತದೆ. ಕಳೆದ ವರ್ಷ, ಯೆಮೆನ್ ಅಧ್ಯಕ್ಷರು ಕೇರಳದ ನಿಮಿಷಾ ಪ್ರಿಯಾ ಅವರ ಮರಣದಂಡನೆಯನ್ನು ಅನುಮೋದಿಸಿದ್ದಾರೆ. ವಿದೇಶಾಂಗ ಸಚಿವಾಲಯದ ಮೂಲಗಳು ರಾಷ್ಟ್ರೀಯ ಖಾಸಗಿ ವಾಹಿನಿಯೊಂದಕ್ಕೆ ತಿಳಿಸಿದ್ದು, ಈ ವಿಷಯವನ್ನು ನಿಕಟವಾಗಿ ಅನುಸರಿಸುತ್ತಿದ್ದಾರೆ ಮತ್ತು ಸ್ಥಳೀಯ […]
ಜು.13 ರಂದು “ಚಿಣ್ಣರ ನಟ್ಟಿ” ಭತ್ತ ನಾಟಿ ಕಾರ್ಯಕ್ರಮ.

ಉಡುಪಿ: ಟೀಮ್ ನೇಷನ್ ಫಸ್ಟ್(ರಿ) ತಂಡವು ಪ್ರತಿ ವರ್ಷದಂತೆ ಈ ವರ್ಷವೂ “ಚಿಣ್ಣರ ನಟ್ಟಿ” ಕಾರ್ಯಕ್ರಮವನ್ನು 13 ಜುಲೈ ಭಾನುವಾರದಂದು ಕಿದಿಯೂರಿನ ಹೊಸ ವಾಟರ್ ಟ್ಯಾಂಕ್ ನ ಬಳಿ ಆಯೋಜಿಸಲಿದ್ದಾರೆ ಎಂದು ಅಧ್ಯಕ್ಷರಾದ ಸೂರಜ್ ಕಿದಿಯೂರ್ ಪ್ರಕಟಣೆಯಲ್ಲಿ ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಉಡುಪಿ ತಾಲೂಕಿನ 300- 350 ವಿದ್ಯಾರ್ಥಿಗಳು ಪಾಲುಗೊಳ್ಳರಿದ್ದಾರೆ. ಬೆಳಿಗ್ಗೆ 7:30ರಿಂದ ಸಂಜೆ 5ರವರೆಗೆ ಕಾರ್ಯಕ್ರಮ ನಡೆಯಲಿದ್ದು ಸಾರ್ವಜನಿಕರ ಪಾಲುಗೊಳ್ಳುವಿಕೆಗೂ ಅವಕಾಶ ಇದೆ ಎಂದು ತಿಳಿಸಿದ್ದಾರೆ. ವಿಶೇಷವಾಗಿ ಮಕ್ಕಳಿಗೆ ಸಾಂಪ್ರದಾಯಿಕ ಪದ್ಧತಿಯಲ್ಲಿ ಭತ್ತದ ನಾಟಿ ಮಾಡುವ […]