ಮಣಿಪಾಲ ಮತ್ತು ಮಂಗಳೂರಿನ ಸುಪ್ರಸಿದ್ಧ ಕಂಪೆನಿಯಲ್ಲಿ ಉದ್ಯೋಗವಕಾಶಗಳು

ಉಡುಪಿ:ಮಣಿಪಾಲ ಹಾಗೂ ಮಂಗಳೂರಿನ ಸುಪ್ರಸಿದ್ಧ ಪ್ರಿಂಟಿಂಗ್ ಆ್ಯಂಡ್ ಪ್ಯಾಕೇಜಿಂಗ್ ಇಂಡಸ್ಟ್ರಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: 🔸 ಮೆಕ್ಯಾನಿಕಲ್ ಇಂಜಿನಿಯರ್ – 4post🔸 ಪ್ರೊಡಕ್ಷನ್ ಸೂಪರ್ ವೈಸರ್ -6 post🔸 ಲಾಜಿಸ್ಟಿಕ್ ಎಕ್ಸಿಕ್ಯೂಟಿವ್- 2 post🔸ಗ್ರಾಫಿಕ್ ಡಿಸೈನರ್ -10 post🔸 ಕಸ್ಟಮರ್ ಸಪೋರ್ಟ್ -20 post🔸 ಸ್ಟೋರ್ & ಅಕೌಂಟ್ಸ್ ಎಕ್ಸಿಕ್ಯೂಟಿವ್ -6 post🔸QA & QC ಅಸಿಸ್ಟೆಂಟ್ – 4 post ಆಸಕ್ತರು ಸಂಪರ್ಕಿಸಿ: 7019891796, 9071275778
ಉಡುಪಿ: ಶ್ರೀದೇವಿ ಪ್ರಭುಗೆ ಪಿಎಚ್‌ಡಿ ಪದವಿ

ಶಿರ್ವ: ಮಣಿಪಾಲ ಮಾಹೆಯ ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್‌ನ ಡಿಪಾರ್ಟ್ಮೆಂಟ್ ಆಫ್ ಕಾರ್ಡಿಯೋ ವ್ಯಾಸ್ಕುಲರ್ ಟೆಕ್ನಾಲಾಜಿ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಶ್ರೀದೇವಿ ಪ್ರಭು ಇವರು ಡಾ.ಟೋಮ್ ದೇವಾಸಿಯ, ಡಾ.ಅನ್ನಪೂರ್ಣ ಮತ್ತು ಡಾ.ಕೃಷ್ಣಾನಂದ ನಾಯಕ್ ಮಾರ್ಗದರ್ಶನದಲ್ಲಿ ಹೃದಯ ವೈಫಲ್ಯ ಇರುವ ಹೃದ್ರೋಗಿಗಳಿಗೆ ನಿರಂತರ ಯೋಗಾಭ್ಯಾಸದಿಂದ ದೊರಕುವ ಪ್ರಯೋಜನದ ಕುರಿತ ಸಂಶೋಧನಾ ಪ್ರಬಂಧಕ್ಕೆ ಮಾಹೆ ವಿಶ್ವವಿದ್ಯಾಲಯ ಪಿ.ಎಚ್.ಡಿ ಪದವಿ ನೀಡಿದೆ. ಇವರು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಎಂ.ಬಿ.ಎ. ವಿಭಾಗದ ಹಿರಿಯ ಉಪನ್ಯಾಸಕ ಸಂತೋಷ್ ಪ್ರಭು ಅವರ ಪತ್ನಿ.
ಕಾರ್ಕಳ: ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಗೃಹ ಸಚಿವ ಪರಮೇಶ್ವರ್ ದಂಪತಿ ಭೇಟಿ.

ಕಾರ್ಕಳ (ಉಡುಪಿ): ಗೃಹ ಸಚಿವ ಜಿ.ಪರಮೇಶ್ವರ ಮಂಗಳವಾರ ಪತ್ನಿ ಜೊತೆ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಹಾಚಂಡಿಕಾ ಯಾಗದಲ್ಲಿ ಪಾಲ್ಗೊಂಡರು.ಕ್ಷೇತ್ರದ ಆಡಳಿತ ಮೊಕ್ತೇಸರ ಬಿ.ವಿಘ್ನೇಶ್ ಭಟ್ ಅವರ ನೇತೃತ್ವದಲ್ಲಿ ವಿಶೇಷ ಪೂಜೆ, ಮಹಾ ಚಂಡಿಕಾಯಾಗ ನಡೆಯಿತು. ಬಳಿಕ ಸಚಿವರು ಸುಬ್ರಹ್ಮಣ್ಯ ಕ್ಷೇತ್ರಕ್ಕೆ ತೆರಳಿದರು. ಇದಕ್ಕೆ ಮುನ್ನ ಸುದ್ದಿಗಾರರ ಜೊತೆಗೆ ಮಾತನಾಡುತ್ತಾ, ‘ಮಂಗಳೂರಲ್ಲಿ ಬುಧವಾರ ಶಾಂತಿ ಸಭೆ ಕರೆದಿದ್ದೇವೆ. ಅದಕ್ಕೆ ಬರುವಾಗ ಹೆಂಡತಿಯೂ ಬರುತ್ತೇನೆ ಎಂದರು. ಬೇಡ ಅನ್ನೋಕಾಗುತ್ತಾ? ದೇವಸ್ಥಾನಕ್ಕೆ ಬಂದಿದ್ದೇನೆ. ಶಾಸ್ತ್ರೋಕ್ತವಾಗಿ ಜನಕಲ್ಯಾಣ, ಲೋಕಕಲ್ಯಾಣಕ್ಕಾಗಿ ಪೂಜೆ ನಡೆಸಿದ್ದೇನೆ’ […]
ಬ್ರಹ್ಮಾವರ, ಭಟ್ಕಳ, ಕೊಲ್ಲೂರು ಇಲ್ಲಿಗೆ ಡಿಸ್ಟ್ರಿಬ್ಯೂಟರ್ಸ್ ಬೇಕಾಗಿದ್ದಾರೆ

ಉಡುಪಿ:ಬ್ರಹ್ಮಾವರ, ಭಟ್ಕಳ, ಕೊಲ್ಲೂರು ಇಲ್ಲಿ ಡಿಸ್ಟ್ರಿಬ್ಯೂಟರ್ಸ್ ಕೆಲಸಕ್ಕೆ ಜನ ಬೇಕಾಗಿದ್ದಾರೆ. ಅಗತ್ಯತೆಗಳು: 🔹200-300 sqft godown 🔹Commercial vehicle and driver 🔹Ability to create distribution channel ನೀರಿನ ಬಾಟಲ್ ಹಾಗೂ ಕ್ಯಾನ್ ಗಳ ಉತ್ಪಾದಕರಾದ ಅಕ್ವಜಲ್ (ಉದಯ ಇಂಡಸ್ಟ್ರೀಸ್) ಕಂಪನಿಯ ಉತ್ಪಾದಕಗಳನ್ನು ಬ್ರಹ್ಮಾವರ, ಭಟ್ಕಳ, ಕೊಲ್ಲೂರು ಇಲ್ಲಿ ಹಂಚಲು ಇಚ್ಛಿಸುವವರು ಕೂಡಲೇ ಸಂಪರ್ಕಿಸಿ: 📞9731621800
ಮಲ್ಪೆ-ಆಗುಂಬೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಶೀಘ್ರವೇ ಪೂರ್ಣಗೊಳಿಸಲು ಸೂಕ್ತ ಕ್ರಮ:ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ಮಲ್ಪೆಯಿಂದ ಆಗುಂಬೆಯನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169 ಎಯಲ್ಲಿ ನಡೆಯುತ್ತಿರುವ ಎಲ್ಲಾ ಕಾಮಗಾರಿಯ ಕುರಿತಂತೆ ಸ್ವತಹ ತಾನು ಪರಿಶೀಲನೆ ನಡೆಸುತಿದ್ದು, ಅಧಿಕಾರಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ಪ್ರಗತಿಯನ್ನು ಅವಲೋಕಿಸುತಿದ್ದೇನೆ. ಎಲ್ಲಾ ಕಾಮಗಾರಿಗಳನ್ನು ಆದಷ್ಟು ಶೀಘ್ರವಾಗಿ ಮುಗಿಸುವುದಕ್ಕೆ ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿರುವುದಾಗಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಈ ಕುರಿತು ಹೇಳಿಕೆಯೊಂದನ್ನು ಪತ್ರಿಕೆಗಳಿಗೆ ಬಿಡುಗಡೆಗೊಳಿಸಿರುವ ಕೋಟ ಶ್ರೀನಿವಾಸ ಪೂಜಾರಿ, ಇಂದ್ರಾಳಿಯ ಮೇಲ್ಸೇತುವೆ ಬಗ್ಗೆ ನಿರಂತರ ಪ್ರತಿಭಟನೆ, ವಿವಿಧ ರೀತಿಯ ಅಣಕಗಳ ನಡುವೆ ಇಲಾಖೆಯ […]