ಮಾರುಕಟ್ಟೆಗೆ ಎಂಟ್ರಿ ಕೊಡ್ತು Ai+ ಸ್ಮಾರ್ಟ್‌ಫೋನ್: ಅತ್ಯಂತ ಕಡಿಮೆ ಬೆಲೆಗೆ ಭರ್ಜರಿ ಸ್ಟೊರೇಜ್, ಕ್ಯಾಮರಾ ಇರೋ ಪವರ್ ಫುಲ್ ಫೋನ್!

ನೀವೇನಾದ್ರೂ ಕಡಿಮೆ ಬೆಲೆಗೆ ಒಂದೊಳ್ಳೆ ಫೋನ್ ತಗೊಳ್ಬೇಕು ಎನ್ನುವ ಯೋಚನೆಯಲ್ಲಿದ್ದರೆ ಇನ್ನೇನ್ ಲಾಂಚ್ ಆಗ್ತಿದೆ ಒಂದು ಅದ್ಬುತ ಸ್ಮಾರ್ಟ್ ಪೋನ್. ಹೌದು ಖ್ಯಾತ ಮೊಬೈಲ್ ಕಂಪೆನಿ ರಿಯಲ್‌ಮಿಯ ಮಾಜಿ ಸಿಇಒ ಭಾರತದ ಮಾಧವ್ ಶೇಠ್ ತಮ್ಮ ಹೊಸ ಕಂಪನಿ NxtQuantum Shift Technologies ನಲ್ಲಿ ಭಾರತದ ಮೊದಲ ಸಂಪೂರ್ಣ ಸ್ಥಳೀಯ ಸ್ಮಾರ್ಟ್‌ಫೋನ್ ಅನ್ನು ಘೋಷಿಸಿದ್ದಾರೆ. ಈ ಹೊಸ ಸ್ಮಾರ್ಟ್‌ಫೋನ್‌ಗೆ Ai+ ಸ್ಮಾರ್ಟ್‌ಫೋನ್ ಎಂದು ಬ್ರ್ಯಾಂಡ್ ಮಾಡಲಾಗಿದೆ. ಇದು ದೇಶಿ ಮೊಬೈಲ್ ಫೋನ್ ಎಂದವರು ಹೇಳಿಕೊಂಡಿದ್ದಾರೆ. ಸದ್ಯ ಪಲ್ಸ್ […]
ಉಡುಪಿ:ಬೀದಿ ನಾಟಕ ಮತ್ತು ಜಾನಪದ ಸಂಗೀತ ಕಲಾ ತಂಡಗಳಿಂದ ಅರ್ಜಿ ಆಹ್ವಾನ

ಉಡುಪಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಉಡುಪಿ ಜಿಲ್ಲೆ ಇವರ ವತಿಯಿಂದ ಸರ್ಕಾರದ ಯೋಜನೆಗಳನ್ನು ಪ್ರಚುರ ಪಡಿಸುವ ಉದ್ದೇಶಕ್ಕಾಗಿ ಬೀದಿನಾಟಕ ಮತ್ತು ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಅಧೀನ ಕಚೇರಿಗಳ ಮೂಲಕ ಪ್ರಸಕ್ತ ಸಾಲಿನಲ್ಲಿ ಬೀದಿನಾಟಕ ಮತ್ತು ಜಾನಪದ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸಲು ಅನುಕೂಲವಾಗುವಂತೆ ಜಿಲ್ಲೆಯ 3 ಬೀದಿನಾಟಕ ಹಾಗೂ 3 ಜಾನಪದ ಸಂಗೀತ ಕಲಾತಂಡಗಳನ್ನು ಆಯ್ಕೆ ಮಾಡಿಕೊಳ್ಳಲಾಗುವುದು. ಪ್ರತಿ ಬೀದಿನಾಟಕ ತಂಡದಲ್ಲಿ 8 ಜನ ಕಲಾವಿದರಿದ್ದು, ಅದರಲ್ಲಿ ಕಡ್ಡಾಯವಾಗಿ ಇಬ್ಬರು […]
ಜು.12 ರಂದು ಉಡುಪಿಯಲ್ಲಿ ಹಣ್ಣು ಹಂಪಲಿನ ಗಿಡಗಳ ಉಚಿತ ವಿತರಣೆ ಮತ್ತು ಗಿಡ ನೆಡುವ ಕಾರ್ಯಕ್ರಮ

ಉಡುಪಿ: ಪ್ರಿ ಓನ್ಡ್ ವೆಹಿಕಲ್ ಡೀಲರ್ಸ್ ಅಸೋಸಿಯೇಷನ್ ಉಡುಪಿ ಇವರ ವತಿಯಿಂದ 1000ಕ್ಕೂ ಹೆಚ್ಚು ಹಣ್ಣು ಹಂಪಲಿನ ಗಿಡಗಳ ಉಚಿತ ವಿತರಣೆ ಮತ್ತು ಗಿಡ ನೆಡುವ ಕಾರ್ಯಕ್ರಮವು ದಿನಾಂಕ 12.07.2025 ರ ಶನಿವಾರ ಸಮಯ ಬೆಳಿಗ್ಗೆ 10:00 ಗಂಟೆಗೆ ಸರಿಯಾಗಿ ಭುಜಂಗ ಪಾರ್ಕ್, ಉಡುಪಿ (ಬಯಲು ರಂಗ ಮಂಟಪ)ಯಲ್ಲಿ ನಡೆಯಲಿದೆ. ಮಾಹಿತಿಗಾಗಿ ಕರೆ ಮಾಡಿ: 9448445494, 9448157882, 9880623840
ಉಡುಪಿ:ಮಹಿಳಾ ಸ್ವ-ಸಹಾಯ ಗುಂಪುಗಳಿಂದ ಕೃಷಿ ಡ್ರೋನ್ ಪಡೆಯಲು ಅರ್ಜಿ ಅಹ್ವಾನ

ಉಡುಪಿ: ಕೇಂದ್ರ ಪುರಸ್ಕೃತ ” ನಮೋ ಡ್ರೋನ್ ದೀದಿ” ಕಾರ್ಯಕ್ರಮದಡಿ ದೀನ ದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಯೋಜನೆಯಡಿಯಲ್ಲಿ ರಚಿಸಿರುವ ಮಹಿಳಾ ಸ್ವಸಹಾಯ ಸಂಘಗಳಿಗೆ ಉದ್ಯೋಗ ಸೃಜನೆಗಾಗಿ ಕೃಷಿ ಡೋನ್‌ಗಳನ್ನು ಕೃಷಿ ಉದ್ದೇಶಕ್ಕಾಗಿ ದ್ರವರೂಪದ ರಸಗೊಬ್ಬರ ಹಾಗೂ ಕೀಟನಾಶಕ ಸಿಂಪಡಣೆಗೆ ರೈತರಿಗೆ ಬಾಡಿಗೆ ಆಧಾರದಲ್ಲಿ ನೀಡಲು ಅನುವಾಗುವಂತೆ ಒದಗಿಸಲು ಉದ್ದೇಶಿಸಲಾಗಿದೆ. ಮಹಿಳಾ ಸ್ವಸಹಾಯ ಸಂಘಗಳಿಗೆ ಯೋಜನೆಯಡಿ ಶೇ. 80 ರಷ್ಟು, ಗರಿಷ್ಠ ರೂ. 8 ಲಕ್ಷ ರೂ. ವರೆಗೆ ಕೃಷಿ ಡ್ರೋನ್ ಖರೀದಿಗೆಸಹಾಯಧನ […]
ಉಡುಪಿ:ಯುವಜನತೆಯ ಉಜ್ವಲ ಭವಿಷ್ಯಕ್ಕೆ ಯುವನಿಧಿ ಯೋಜನೆ

ಉಡುಪಿ: ಯುವ ಜನತೆಯ ಉಜ್ವಲ ಭವಿಷ್ಯಕ್ಕಾಗಿ ರಾಜ್ಯ ಸರ್ಕಾರ ಯುವನಿಧಿ ಗ್ಯಾರಂಟಿ ಯೋಜನೆ ಜಾರಿಗೆ ತಂದಿದ್ದು, ಶಿಕ್ಷಣ ಪಡೆದು ಉದ್ಯೋಗ ದೊರೆಯದೇ ಇರುವಂತಹ ಪದವೀಧರರಿಗೆ ರೂ. 3000 ಹಾಗೂ ಡಿಪ್ಲೋಮಾ ಪದವೀಧರರಿಗೆ ಪ್ರತೀ ಮಾಹೆ 1500 ರೂ. ಭತ್ಯೆಯನ್ನು ಒದಗಿಸುವ ಅಭೂತಪೂರ್ವ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ನಿರುದ್ಯೋಗಿ ಯುವಕರಿಗೆ ಎರಡು ವರ್ಷಗಳವರೆಗೆ ಅಥವಾ ಎರಡು ವರ್ಷದ ಒಳಗೆ ಫಲಾನುಭವಿಗಳಿಗೆ ಉದ್ಯೋಗ ಸಿಗುವವರೆಗೆ ನಿರುದ್ಯೋಗ ಭತ್ಯೆ ಒದಗಿಸುವ ಗುರಿ ಹೊಂದಿದೆ. ಪ್ರತಿ ವರ್ಷ ಪದವಿ ಅಥವಾ ಡಿಪ್ಲೋಮಾ ಪಡೆದು ಆರು […]