ಐಪಿಎಲ್‌ ಅತ್ಯಂತ ಮೌಲ್ಯಯುತ ಫ್ರಾಂಚೈಸಿಯಲ್ಲಿ RCB ತಂಡಕ್ಕೆ ಮೊದಲನೇ ಸ್ಥಾನ, ಅಗ್ರಸ್ಥಾನದಲ್ಲಿದ್ದ CSK ಮೂರನೇ ಸ್ಥಾನಕ್ಕೆ.!

ಮುಂಬೈ: 17 ವರ್ಷಗಳ ಕಾಯುವಿಕೆಯ ನಂತರ ಮೊದಲ ಬಾರಿ ಐಪಿಎಲ್‌ ಚಾಂಪಿಯನ್ ಆಗಿರುವ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಈಗ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಹಿಂದೆಹಾಕಿ ಅತ್ಯಂತ ಮೌಲ್ಯಯುತ ಫ್ರಾಂಚೈಸಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.ಇದರ ಮೌಲ್ಯ ಸುಮಾರು ₹2,304.7 ಕೋಟಿಗೆ ಏರಿದೆ ಎಂದು ವರದಿಯೊಂದು ಮಂಗಳವಾರ ತಿಳಿಸಿದೆ. ಬಿಸಿಸಿಐ ನಿರ್ವಹಣೆಯ ಐಪಿಎಲ್‌ನ ಮೌಲ್ಯ ಶೇ 13.8 ರಷ್ಟು ಹೆಚ್ಚಳ ಕಂಡಿದ್ದು ₹33,412 ಕೋಟಿಗೆ ತಲುಪಿದೆ ಇನ್‌ವೆಸ್ಟ್‌ಮೆಂಟ್‌ ಬ್ಯಾಂಕ್ ಹೂಲಿಹಾನ್‌ ಲೋಕಿ ವರದಿ ತಿಳಿಸಿದೆ. ಉದ್ಯಮವಾಗಿ ಐಪಿಎಲ್‌ […]

ಉಡುಪಿಯ ಪ್ರಸಿದ್ಧ ಬಲ್ಲಾಳ್ ಮೊಬೈಲ್ಸ್’ನಲ್ಲಿ “ಒಪ್ಪೋ ರೆನೊ 14” ಬಿಡುಗಡೆ.

ಉಡುಪಿ: ಉಡುಪಿಯ ಪ್ರಸಿದ್ಧ ಬಲ್ಲಾಳ್ ಮೊಬೈಲ್ಸ್ನಲ್ಲಿ ಒಪ್ಪೋ ರೆನೊ 14 ಸ್ಮಾರ್ಟ್ ಫೋನ್ (ಜು.9) ಇಂದು ಅದ್ದೂರಿಯಾಗಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭ ದಲ್ಲಿ ಸಂಸ್ಥೆಯ ಮಾಲಕರಾದ ಸಂದೇಶ್ ಬಲ್ಲಾಲ್ ಹಾಗೂ ಗಣ್ಯರು ಉಪಸ್ಥಿತರಿದ್ದರು. ಒಪ್ಪೋ ರೆನೋ 14 ಮತ್ತು ರೆನೋ 14 ಪ್ರೊ ವಿಶೇಷತೆಗಳು:ಭಾರತದಲ್ಲಿ ಒಪ್ಪೋ ರೆನೋ 14 ಸರಣಿ ಬಿಡುಗಡೆಯಾಗಿದೆ. ಹೊಸ ರೆನೋ ಲೈನ್ ಅಪ್ ಚೀನಾದಲ್ಲಿ ಪಾದಾರ್ಪಣೆ ಮಾಡಿತು ಮತ್ತು ಈಗ ರೆನೋ 14 ಮತ್ತು ರೆನೋ 14 ಪ್ರೊ 5G ಮಾದರಿಗಳೊಂದಿಗೆ […]

ತುಳುನಾಡಿನ ಮಹಿಳೆಯರಿಗಾಗಿ “ಮಿಸ್ ಆ್ಯಂಡ್ ಮಿಸಸ್ ಮಂಗಳೂರು ದಿವಾ ಮಿಡಲ್ ಈಸ್ಟ್- 2025” ಅಂತರಾಷ್ಟ್ರೀಯ ಸೌಂದರ್ಯ ಪ್ರದರ್ಶನ ಸ್ಪರ್ಧೆ

ಉಡುಪಿ: ಘೋಷನ್ ಇವೆಂಟ್ಸ್ ಮೀಡಿಯಾ ಮತ್ತು ಪ್ರಿಯಾ ಫ್ಯಾಶನ್ ದುಬೈ ಇದರ ಆಶ್ರಯದಲ್ಲಿ ತುಂಬೆ ಮೆಡಿ ಸಿಟಿ ಅಜ್ಮನ್ ಇದರ ಸಹಯೋಗದಲ್ಲಿ “ಮಿಸ್ ಆ್ಯಂಡ್ ಮಿಸಸ್ ಮಂಗಳೂರು ದಿವಾ ಮಿಡಲ್ ಈಸ್ಟ್- 2025” ಅಂತರಾಷ್ಟ್ರೀಯ ಸೌಂದರ್ಯ ಪ್ರದರ್ಶನ ಸ್ಪರ್ಧೆಯನ್ನು ನವೆಂಬರ್ ತಿಂಗಳಲ್ಲಿ ದುಬೈನಲ್ಲಿ ಆಯೋಜಿಸಲಾಗಿದೆ. ಈ ಸ್ಪರ್ಧೆಯ ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಘೋಷನ್ ಇವೆಂಟ್ಸ್ ಮೀಡಿಯಾದ ದೆಚಮ್ಮ ಅವರು, ತುಳುನಾಡಿನ ಮಹಿಳೆಯರಿಗೆ ವೇದಿಕೆ‌ ಒದಗಿಸುವ ನಿಟ್ಟಿನಲ್ಲಿ ಈ ಸೌಂದರ್ಯ […]

ಉಡುಪಿ:ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ : ಅರ್ಜಿ ಆಹ್ವಾನ

ಉಡುಪಿ: ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಉಡುಪಿ ತಾಲೂಕಿನ ಕಾಲೇಜುಗಳಲ್ಲಿವ್ಯಾಸಾಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅರ್ಹ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ಎಸ್.ಎಸ್.ಪಿ ವಿದ್ಯಾರ್ಥಿವೇತನ ಮಂಜೂರಾತಿಗಾಗಿ ಸಂಬಂಧಪಟ್ಟ ಕಾಲೇಜು ಪ್ರಾಂಶುಪಾಲರು ವಿದ್ಯಾರ್ಥಿಗಳ ದಾಖಲೆಗಳೊಂದಿಗೆ ನೇರವಾಗಿ ಇಲಾಖೆಯ ವೆಬ್‌ಸೈಟ್ ಪರಿಶಿಷ್ಟ ಜಾತಿ ವೆಬ್‌ಸೈಟ್ SW.KAR.NIC.IN, ಪರಿಶಿಷ್ಟ ಪಂಗಡ TW.KAR.NIC.IN ಅಥವಾ https://ssp.karnataka.gov.in ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ ಪ್ರತಿ ವಿದ್ಯಾರ್ಥಿಗಳು ಬ್ಯಾಂಕ್ ಖಾತೆಗೆ ಆಧಾರ್ ಸೀಡ್ ಹಾಗೂ […]

ಉಡುಪಿ:ವಿದ್ಯಾರ್ಥಿವೇತನ ಸೌಲಭ್ಯ : ವಿಕಲಚೇತನ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

ಉಡುಪಿ: ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿಕೇಂದ್ರ ಸರ್ಕಾರದ ‘ನ್ಯಾಷನಲ್ ಇ ಸ್ಕಾಲರ್‌ಶಿಪ್’ ಯೋಜನೆಯಡಿ ವಿದ್ಯಾರ್ಥಿವೇತನ ಸೌಲಭ್ಯ ಪಡೆಯಲು ವೆಬ್‌ಸೈಟ್:https://www.disabilityaffairs.gov.in ಅಥವಾ https://www.scholarships.gov.in ನಲ್ಲಿ ವಿಕಲಚೇತನ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರಿ-ಮೆಟ್ರಿಕ್ (9ನೇ ಮತ್ತು 10ನೇ ತರಗತಿ) ವಿದ್ಯಾರ್ಥಿಗಳು ಆಗಸ್ಟ್ 31, ಪೋಸ್ಟ್ ಮೆಟ್ರಿಕ್ (ಪ್ರಥಮ ಪಿ.ಯು.ಸಿ.ಯಿಂದ ಸ್ನಾತಕೋತ್ತರ ಪದವಿಯವರೆಗೆ) ಹಾಗೂ ಟಾಪ್ ಕ್ಲಾಸ್‌ಗಳ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನವಾಗಿದೆ. ಅರ್ಹ ವಿಕಲಚೇತನ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ […]