ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ಪೊಲೀಸ್ ಇಲಾಖೆಯ ಕ್ರಮ ಖಂಡಿಸಿ ಹಿಂಜಾವೇ ಪ್ರತಿಭಟನೆ

ಉಡುಪಿ: ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಿಂದೂ ಸಂಘಟನೆಗಳ ಸಾಮಾಜಿಕ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಕಾನೂನು ವಿರೋಧಿ ಪೊಲೀಸ್ ಇಲಾಖೆಯ ಕ್ರಮವನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತದ ವತಿಯಿಂದ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ಸಭೆಯನ್ನು ಆಯೋಜಿಸಲಾಗಿತ್ತು. ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಹಿಂದೂ ಸಂಘಟನೆಗಳ ಕಾರ್ಯಕರ್ತರು ರಾಜ್ಯ ಕಾಂಗ್ರೆಸ್ ಸರಕಾರದ ಕ್ರಮದ ವಿರುದ್ಧ ದಿಕ್ಕಾರ ಕೂಗಿದರು.ವಿಶ್ವ ಹಿಂದೂ ಪರಿಷತ್ ಮುಖಂಡ ಸುನಿಲ್ ಕೆ.ಆರ್ ಮಾತನಾಡಿ, ಲವ್ ಜಿಹಾದ್, ಗೋಹತ್ಯೆ ನಿಷೇಧ, […]
ಮಕ್ಕಳಿಗೆ ಮೊಟ್ಟೆ ಕೊಡದ ಶಾಲೆಗಳ ವಿರುದ್ಧ ಶಿಸ್ತುಕ್ರಮಕ್ಕೆ ಮುಂದಾದ ಶಿಕ್ಷಣ ಇಲಾಖೆ! ಕೂಡಲೇ ಕ್ರಮಕ್ಕೆ ಸೂಚನೆ

ಬೆಂಗಳೂರು: ಮಧ್ಯಾಹ್ನ ಬಿಸಿಯೂಟಕ್ಕೆ ಮಕ್ಕಳಿಂದ ಮೊಟ್ಟೆಗೆ ಬೇಡಿಕೆ ಇದ್ದರೂ, ಬಾಳೆ ಹಣ್ಣು ನೀಡುತ್ತಿರುವ ರಾಜ್ಯದಲ್ಲಿನ 568 ಶಾಲೆಗಳ ಮುಖ್ಯಸ್ಥರು, ಎಸ್‌ಡಿಎಂಸಿ ಹಾಗೂ ಮೇಲ್ವಿಚಾರಣಾ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲು ಶಿಕ್ಷಣ ಇಲಾಖೆ ಮುಂದಾಗಿದೆ.ಮಧ್ಯಾಹ್ನದ ಬಿಸಿಯೂಟ ಯೋಜನೆ ಅಡಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 1ರಿಂದ 10ನೇ ತರಗತಿಯವರೆಗಿನ ಮಕ್ಕಳಿಗೆ ವಾರದ 6 ದಿನಗಳು ಮೊಟ್ಟೆ ವಿತರಿಸಲಾಗುತ್ತಿದೆ, ಮೊಟ್ಟೆ ಸೇವಿಸದ ಮಕ್ಕಳಿಗೆ ಬಾಳೆಹಣ್ಣು ನೀಡಲು ಅವಕಾಶ ಕಲ್ಪಿಸಲಾಗಿದೆ. ಆದರೆ, ಕೆಲ ಶಾಲೆಗಳಲ್ಲಿ ಅಲ್ಲಿನ ಎಸ್‌ಡಿಎಂಸಿ ಸ್ವಯಂ ನಿರ್ಧಾರ ಕೈಗೊಂಡು ಮೊಟ್ಟೆ […]
ಮೂಡುಬಿದಿರೆ:ಆಳ್ವಾಸ್‌ನ 26 ವಿದ್ಯಾರ್ಥಿಗಳು ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಉತ್ತೀರ್ಣ

ಮೂಡುಬಿದಿರೆ: 2025 ಮೇ ಯಲ್ಲಿ ನಡೆದ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಹಿರಿಯ ವಿದ್ಯಾರ್ಥಿಗಳಾದ ಸ್ನೇಹಲ್ ಜೆ, ವಿಲ್ಸನ್, ಈಶ್ವರ್, ಸುಹಾನ್ ಶಿವಯೋಗಿ, ದೀಕ್ಷಾ, ಪವನ್ ಕುಮಾರ್, ಗುರುಪ್ರಸಾದ್ ಹೆಗ್ಡೆ, ಶೆಟ್ಟಿ ನಿಶಾ, ನವೀನ್ ಪೈ, ಶ್ರೀಸಮರ್ಥ್, ಸುಪ್ರಿಯಾ, ಭಾಸ್ಕರ್ ಪೂಜಾರಿ, ಉಮಾಂಗ್ ಇನಾನಿ, ವೆಂಕಟೇಶ್ ಪ್ರಸಾದ್, ಸೃಷ್ಟಿ ಎಸ್. ಪ್ರಭು, ಮಧುರಾ, ಗೌತಮಿ, ರಕ್ಷಾ ಆರ್ ಶೆಟ್ಟಿ, ಸಂಗೀತಾ ಹೆಗ್ಡೆ, ಸೋಮನಾಥ್, ಸ್ವಾತಿ, ಚೈತನ್ಯಾ, ಆದಿತ್ಯಾ ರಾವ್, ಕೌಶಿಕ್ ಯು.ಪಿ., ಅಕ್ಷತ್ ಕೆ […]
ಕಾರ್ಕಳ ಜ್ಞಾನಸುಧಾ : ವೃತ್ತಿಪರ ಮಾರ್ಗದರ್ಶನ ವಿದ್ಯಾರ್ಥಿಗೆ ಕನಸು ಮತ್ತು ದೂರದೃಷ್ಟಿ ಬಹುಮುಖ್ಯ : ಸಿ.ಎ ಗೋಪಾಲಕೃಷ್ಣ ಭಟ್

ಕಾರ್ಕಳ : ಯೋಜನಾ ಬದ್ಧ ಅಧ್ಯಯನ,ಶಿಸ್ತುಬದ್ದ ಕಲಿಕೆಯಿಂದ ಉನ್ನತ ಗುರಿಗಳನ್ನು ತಲುಪಲು ವಾಣಿಜ್ಯ ವಿದ್ಯಾರ್ಥಿಗಳಿಗೆ ಬಹು ಅವಕಾಶಗಳಿವೆ. ಜಾಗತೀಕರಣ ಮತ್ತು ತಂತ್ರಜ್ಞಾನಗಳ ಬಳಕೆಯಿಂದ ವಾಣಿಜ್ಯ ಕ್ಷೇತ್ರದಲ್ಲಿ ಇಂದು ಉದ್ಯೋಗಾವಕಾಶಗಳು ಹೆಚ್ಚಿನ ಯುವಜನತೆಯನ್ನು ಆಕರ್ಷಿಸುತ್ತಿವೆ ಎಂದು ತ್ರಿಷಾ ಸಮೂಹ ಸಂಸ್ಥೆಗಳಸಂಸ್ಥಾಪಕರಾದ ಸಿ.ಎ ಗೋಪಾಲಕೃಷ್ಣ ಭಟ್ ಹೇಳಿದರು. ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ನಡೆದ ವೃತ್ತಿಪರ ಕೋರ್ಸುಗಳ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಿ.ಕಾಂ ಪದವಿಯ ಜೊತೆಗೆ ಸಿ.ಎ ಮಾಡಬಹುದು.ವಾಣಿಜ್ಯ ಶಾಸ್ತ್ರದ ವಿದ್ಯಾರ್ಥಿಗಳಿಗೆ […]
ಮಂಗಳೂರು: ಬಾಲಕಿಯ ಅಪಹರಣ ಪ್ರಕರಣ; ಆರೋಪಿಗಳ ಬಂಧನ.

ಉಳ್ಳಾಲ: ಬಾಲಕಿಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಪ್ರಮುಖ ಆರೋಪಿ ಮತ್ತು ಆತನಿಗೆ ಸಹಕರಿಸಿದ ಆರೋಪದಲ್ಲಿ ದಂಪತಿಯನ್ನು ಬಂಧಿಸಿದ್ದಾರೆ. 16 ವಯಸ್ಸಿನ ಮಗಳು ಮನೆಯಿಂದ ಹೊರ ಹೋದವಳು ನಂತನ ನಾಪತ್ತೆಯಾಗಿದ್ದು, ಆಕೆಯನ್ನು ಅಪಹರಿಸಿರುವುದಾಗಿ ಬಾಲಕಿಯ ತಂದೆ ಉಳ್ಳಾಲ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಉಳ್ಳಾಲ ಪೊಲೀಸರು ಬಾಲಕಿಯನ್ನು ಅಪಹರಿಸಿದ ಆರೋಪಿ ದೇರಳಕಟ್ಟೆ ಸಮೀಪದ ರೆಂಜಾಡಿ ನಿವಾಸಿ ಶಹಬಾಝ್ (27) ಹಾಗೂ ಆತನಿಗೆ ಸಹಕರಿಸಿದ ಕೊಣಾಜೆ ನಿವಾಸಿಗಳಾದ ಅಮೀರ್ ಸೊಹೈಲ್, ನಿಶಾ ದಂಪತಿಯನ್ನು […]