ಉಡುಪಿಯ ಹೀರೋಶಕ್ತಿ ಮೋಟರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಉಡುಪಿಯ ಹೀರೋಶಕ್ತಿ ಮೋಟರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿನಡೆಯಲಿದೆ. ಹುದ್ದೆಗಳು: 🔹ಸೇಲ್ಸ್ (Male/Female)- 2 post🔹ಸ್ಪೇರ್ಸ್ ಮ್ಯಾನೇಜರ್ – 1 post🔹ಅಸಿಸ್ಟೆಂಟ್ PDI -1 post🔹ವಾರೆಂಟಿ ಸ್ಪೇರ್ಸ್ -1 post🔹ಮೆಕಾನಿಕ್ -3 post ಆಸಕ್ತ ಅಭ್ಯರ್ಥಿಗಳು ನಿಮ್ಮ ರೆಸ್ಯೂಮ್ ಅನ್ನು ಕೆಳಗಿನ ನಂಬರ್ ಗೆ ವಾಟ್ಸಪ್ ಅಥವಾ ಇಮೇಲ್ ಮಾಡಿ.+91 [email protected]

ಮೊಳಕೆಯೊಡೆದ ಬೆಳ್ಳುಳ್ಳಿಯನ್ನು ತಿಂದರೆ ಹೃದಯದ ಖಾಯಿಲೆಗಳು ಮಾಯ: ಬೆಳ್ಳುಳ್ಳಿಯನ್ನು ದಿನ ನಿತ್ಯ ಯಾಕೆ ಸೇವಿಸಬೇಕು?

ಈಗ ಎಲ್ಲೆಲ್ಲೂ ಹೃದಯಾಘಾತಗಳದ್ದೇ ಸುದ್ದಿ, ಹೃದಯದ ವಿವಿಧ ಖಾಯಿಲೆಗಳು ಯಾವಾಗ ಸಂಭವಿಸುತ್ತೆ ಎಂದು ಹೇಳುವುದೇ ಕಷ್ಟಕರ. ಇಂತಹ ಸಂದರ್ಭದಲ್ಲಿ ಆರೋಗ್ಯಕರ ಜೀವನಶೈಲಿಯ ಅಳವಡಿಕೆಯೇ ಒಂದು ಪರಿಹಾರ ಎನ್ನುವ ಚರ್ಚೆ ನಡೆಯುತ್ತಿದೆ. ಹಾಗಾದ್ರೆ ನೀವು ಮನೆಯಲ್ಲಿಯೇ ಸಿಂಪಲ್ಲಾಗಿ ಮಾಡಬಹುದಾದ ಆರೋಗ್ಯಕರ ಟಿಪ್ಸ್ ಒಂದು ಇಲ್ಲಿದೆ. ಬೆಳ್ಳುಳ್ಳಿ ಕೆಲವು ಅಸಾಧಾರಣ ಆರೋಗ್ಯ ಪ್ರಯೋಜನಗಳಿಂದ ತುಂಬಿದೆ. ಮೊಳಕೆಯೊಡೆದ ಬೆಳ್ಳುಳ್ಳಿ ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳು ಮತ್ತು ಆಹಾರದ ನಾರಿನಂಶದಿಂದ ಸಮೃದ್ಧವಾಗಿದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕ ಅಂಶಗಳು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. […]

ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲೇ ನೀಡಬೇಕು: ಆರ್‌ಎಸ್‌ಎಸ್

ನವದೆಹಲಿ: ಹೊಸ ಶಿಕ್ಷಣ ನೀತಿಯಲ್ಲಿ ಸೂಚಿಸಿರುವ ತ್ರಿಭಾಷಾ ನೀತಿಯ ಬಗ್ಗೆ ವಿವಾದ ಎದ್ದಿರುವ ನಡುವೆಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆಯಲ್ಲೇ ನೀಡಬೇಕು ಎಂದು ಹೇಳಿದೆ. ‘ಭಾರತದಲ್ಲಿರುವ ಎಲ್ಲಾ ಭಾಷೆಗಳು ರಾಷ್ಟ್ರೀಯ ಭಾಷೆಗಳು ಎಂದು ಆರ್‌ಎಸ್‌ಎಸ್ ಹೇಳಿದೆ. ಜನರು ತಮ್ಮ ರಾಜ್ಯಗಳಲ್ಲಿ ತಮ್ಮದೇ ಆದ ಭಾಷೆ ಮಾತನಾಡುತ್ತಾರೆ. ಪ್ರಾಥಮಿಕ ಶಿಕ್ಷಣವನ್ನು ತಮ್ಮ ರಾಜ್ಯದ ಭಾಷೆಯಲ್ಲೇ ನೀಡಬೇಕು. ಎಲ್ಲರೂ ಅದನ್ನೇ ಒತ್ತಾಯಿಸುತ್ತಿದ್ದಾರೆ. ಇದು ಈಗಾಗಲೇ ಸ್ಥಾಪಿತವಾಗಿರುವ ವಿಚಾರ’ ಎಂದು ದೆಹಲಿಯಲ್ಲಿ ನಡೆದ ಮೂರು ದಿನಗಳ ‘ಸಂಘ […]

ಮಣಿಪಾಲ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಜುಲೈ 14 ರಂದು ಶುರುವಾಗ್ತಿದೆ ‘ಹೊಲಿಗೆ’ ಕೋರ್ಸ್.

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ಪ್ರಮಾಣಪತ್ರದೊಂದಿಗೆ ಹೊಲಿಗೆ ಕೋರ್ಸ್ ಜುಲೈ 14ರಂದು ಪ್ರಾರಂಭಗೊಳ್ಳಲಿದೆ. ನೀವು ಏನು ಕಲಿಯುವಿರಿ:🔸ಸೀರೆ ಬ್ಲೌಸ್🔸ಪಲಾಝೊ ಮತ್ತು ಸಲ್ವಾರ್ ಪ್ಯಾಂಟ್ಸ್🔸ಚೂಡಿದಾರ್ ಟಾಪ್ಸ್ ಪ್ರಾರಂಭ: 14ನೇ ಜುಲೈ 2025 ಬೆಳಿಗ್ಗೆ 10:00ಅವಧಿ: 40 ಗಂಟೆಗಳುಅರ್ಹತೆ: ಹೊಲಿಗೆಯ ಮೂಲಭೂತ ಜ್ಞಾನ ವಯಸ್ಸಿನ ಮಿತಿ ಇರುವುದಿಲ್ಲ. ಆಸಕ್ತರು ಕೂಡಲೇ ಸಂಪರ್ಕಿಸಬೇಕಾಗಿ ಪ್ರಕಟಣೆ ತಿಳಿಸಿದೆ.ಹೆಚ್ಚಿನ ಮಾಹಿತಿಗಾಗಿ: 2ನೇ ಮಹಡಿ, MSDC ಕಟ್ಟಡ, ಈಶ್ವರ್ ನಗರ, ಮಣಿಪಾಲ – 576104ಮೊ: 8123163932

ಮಹಿಳೆಗೆ ಲೈಂಗಿಕ ದೌರ್ಜನ್ಯ ಆರೋಪ; ಆರ್‌ಸಿಬಿ ಆಟಗಾರ ಯಶ್ ದಯಾಳ್ ವಿರುದ್ಧ ಎಫ್‌ಐಆರ್ ದಾಖಲು.

27 ವರ್ಷದ ಯಶ್ ದಯಾಳ್ ವಿರುದ್ಧ ಗಾಜಿಯಾಬಾದ್‌ನ ಇಂದಿರಾಪುರಂ ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 69ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಐಜಿಆರ್‌ಎಸ್ ಮೂಲಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮಹಿಳೆ ದೂರು ನೀಡಿದ್ದರು. ದೂರಿನಲ್ಲಿ ಯಶ್ ಕಳೆದ ಐದು ವರ್ಷಗಳಿಂದ ತನ್ನೊಂದಿಗೆ ಸಂಬಂಧ ಹೊಂದಿದ್ದು, ಲೈಂಗಿಕ ಶೋಷಣೆಗೆ ಗುರಿಯಾಗಿದ್ದೇನೆ ಎಂದು ಆರೋಪಿಸಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಮಾಡಿರುವ ಆರೋಪ ಯಶ್ ಅವರ ಮೇಲಿದೆ. ಈ ಸಂಬಂಧ ಯಶ್ ದಯಾಳ್ ಅವರಿಂದ ಪ್ರತಿಕ್ರಿಯೆ ಬಂದಿಲ್ಲ. […]