ಜುಲೈ 13 ರಂದು ಜೈ ಗಣೇಶ್ ಸೊಸೈಟಿ ಸ್ವಂತ ಕಟ್ಟಡ “ಸೌಹಾರ್ದ ಸಿರಿ” ಲೋಕಾರ್ಪಣೆ: ಸ್ಥಾಪಕ ಅಧ್ಯಕ್ಷ ನ್ಯಾಯವಾದಿ ನೋಟರಿ ಶಿರಿಯಾರ ಪ್ರಭಾಕರ ನಾಯಕ್ ಕರೆ

ಉಡುಪಿ: ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಕೋಟ ಹೋಬಳಿ ವ್ಯಾಪ್ತಿಯ ಶಿರಿಯಾರ ಗ್ರಾಮದ ಕಲ್ಮರ್ಗಿ ಜೈ ಗಣೇಶ್ ಸೊಸೈಟಿ ಕಳೆದ 2007 ರಿಂದ ಸಹಕಾರಿ, ಸಾಮಾಜಿಕ, ಆರ್ಥಿಕ, ಧಾರ್ಮಿಕ ಹಾಗೂ ಜನಪರ ಸೇವೆಯಲ್ಲಿ ನಿರತವಾಗಿದೆ. ಇದೀಗ ಸರಕಾರದ ಯಾವುದೇ ಅನುದಾಯ ಪಡೆಯದೆ ಸುಮಾರು 2 ಕೋಟಿ ವೆಚ್ಚದಲ್ಲಿ ಶಿರಿಯಾರ ಜೈ ಗಣೇಶ ಸೊಸೈಟಿ ಸ್ವಂತ ಕಟ್ಟಡ “ಸೌಹಾರ್ದ ಸಿರಿ” ಲೋಕಾರ್ಪಣೆಯ ಜುಲೈ 13 ಭಾನುವಾರದಂದು ರಾಜ್ಯ ಹೆದ್ದಾರಿ ಸಾಹೇಬರ ಕಟ್ಟೆ -ಶಿರಿಯಾರದಲ್ಲಿ ಜರುಗಲಿರುವುದು. ಈ ಲೋಕಾರ್ಪಣೆ ಕಾರ್ಯಕ್ರಮಕ್ಕೆ […]

ಭಾರೀ ಮಳೆಯಿಂದ ಹಲವೆಡೆ ಭೂಕುಸಿತ: ಉತ್ತರಾಖಂಡದ ಚಾರ್‌ಧಾಮ್‌ ಯಾತ್ರೆ ಸ್ಥಗಿತ.!

ಲಖನೌ: ನಿರಂತರ ಮಳೆಯಿಂದ ಹಲವೆಡೆ ಭೂಕುಸಿತ ಸಂಭವಿಸಿದ್ದರಿಂದ ಉತ್ತರಾಖಂಡದ ಚಾರ್‌ಧಾಮ್‌ ಯಾತ್ರೆಯನ್ನು ಗುರುವಾರ ಸ್ಥಗಿತಗೊಳಿಸಲಾಗಿದೆ. ಮಾರ್ಗ ಮಧ್ಯದಲ್ಲಿ ಸಿಲುಕಿದ ಯಾತ್ರಾರ್ಥಿಗಳನ್ನು ಕೇಂದ್ರ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆಯ (ಎಸ್‌ಡಿಆರ್‌ಎಫ್‌) ಸಿಬ್ಬಂದಿ ಹಾಗೂ ಪೊಲೀಸರು ರಕ್ಷಿಸಿದ್ದಾರೆ. ಕೇದರನಾಥಕ್ಕೆ ತೆರಳುವ ಹೆದ್ದಾರಿಯ ಸೋನ್‌ಪ್ರಯಾಗ್‌ ಹಾಗೂ ಗೌರಿಕುಂಡದ ಮಧ್ಯೆ ಭೂಕುಸಿತ ಸಂಭವಿಸಿ ರಸ್ತೆಗೆ ಮಣ್ಣು, ಬಂಡೆಗಳು ಬಂದು ಬಿದ್ದಿವೆ. ‘ರಸ್ತೆಯು ಸಂಪೂರ್ಣವಾಗಿ ಮುಚ್ಚಿದ್ದು, ಎಸ್‌ಡಿಆರ್‌ಎಫ್‌ ಸಿಬ್ಬಂದಿ ಯಾತ್ರಾರ್ಥಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದರು. ಬಂಡೆಗಳನ್ನು ತೆರವುಗೊಳಿಸಿದ […]

ಉಡುಪಿ:ಮನೆ ನಿರ್ಮಾಣಕ್ಕೆ ಸಹಾಯಧನ : ಅರ್ಜಿ ಆಹ್ವಾನ

ಉಡುಪಿ: ಸರ್ಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) 2.0 ಯೋಜನೆಯಡಿ “ಸರ್ವರಿಗೂ ಸೂರು”ಒದಗಿಸಲು 2024 ರ ಸೆಪ್ಟಂಬರ್ 1 ರಿಂದ ಅನ್ವಯವಾಗುವಂತೆ ಯೋಜನೆಯನ್ನು ಜಾರಿಗೊಳಿಸಿದ್ದು, ಈ ಯೋಜನೆಯಡಿ ಮುಂದಿನ 05 ವರ್ಷಗಳಲ್ಲಿ ದೇಶಾದ್ಯಂತ ನಗರ ಪ್ರದೇಶಗಳಲ್ಲಿ ಒಂದು ಕೋಟಿ ಬಡವರು, ಕೊಳಚೆ ನಿವಾಸಿಗಳನ್ನು ಒಳಗೊಂಡಂತೆ ಮಧ್ಯಮ ವರ್ಗದವರಿಗೆ ಸೂರು ಒದಗಿಸಲು ಸಹಾಯಧನ ಒದಗಿಸಲಾಗುವುದು. ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ವಾಸಿಸುವ ವಸತಿ ರಹಿತರು ಮತ್ತು ನಿವೇಶನ ರಹಿತರು ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಕೇಂದ್ರ ಸರ್ಕಾರದ […]