ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಎನ್‌ಐಎ ವಶಕ್ಕೆ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ತಿಳಿಸಿದೆ. ಕಳೆದೆರಡು ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಅಬ್ದುಲ್ ರಹಿಮಾನ್‌ನನ್ನು ಎನ್‌ಐಎ ವಶಕ್ಕೆ ಪಡೆದಿದೆ. ಕತಾರ್‌ನಿಂದ ಬಂದ ಆರೋಪಿಯನ್ನು ಕೇರಳದ ಕಣ್ಣೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎನ್‌ಐಎ ತಂಡ ವಶಕ್ಕೆ ಪಡೆದಿದೆ. ಬೆಳ್ಳಾರೆಯಲ್ಲಿ 2022ರ ಜುಲೈನಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿತ್ತು. ಈ ಪ್ರಕರಣದ […]
ಭಾರತೀಯ ಐಟಿ ವಲಯದಲ್ಲಿ ಅನೈತಿಕ ಬಿಕ್ಕಟ್ಟು: ಸ್ವಜನ ಪಕ್ಷಪಾತ ಮತ್ತು ಲಂಚದ ಆರೋಪಗಳು ಜಾಗತಿಕ ವರ್ಚಸ್ಸಿಗೆ ಧಕ್ಕೆ

ನವದೆಹಲಿ: ಭಾರತೀಯ ಐಟಿ ಸಂಸ್ಥೆಗಳಿಂದ ಇತ್ತೀಚಿನ ಅನೈತಿಕ ಅಭ್ಯಾಸಗಳ ಆರೋಪಗಳು ವಿಶ್ವಾಸಾರ್ಹ ಜಾಗತಿಕ ಪ್ರತಿಭಾ ಕೇಂದ್ರವಾಗಿ ಭಾರತದ ವರ್ಚಸ್ಸಿಗೆ ಗಂಭೀರ ಕಳವಳವನ್ನುಂಟುಮಾಡುತ್ತಿವೆ. ಸ್ವಜನಪಕ್ಷಪಾತ ಮತ್ತು ಆಂತರಿಕ ಕುಶಲತೆಯಿಂದ ಕೂಡಿದ ಈ ವರದಿಯಾದ ಕ್ರಮಗಳು, ಜಾಗತಿಕ ಡಿಜಿಟಲ್ ಆರ್ಥಿಕತೆಯಲ್ಲಿ ಭಾರತ ತನ್ನ ಅಸ್ತಿತ್ವವನ್ನು ವಿಸ್ತರಿಸುತ್ತಿರುವ ಸಮಯದಲ್ಲಿ ಅಂತರರಾಷ್ಟ್ರೀಯ ಪಾಲುದಾರಿಕೆಗಳನ್ನು ದುರ್ಬಲಗೊಳಿಸುವ ಅಪಾಯವನ್ನುಂಟು ಮಾಡುತ್ತವೆ. ಟಿಸಿಎಸ್‌ನಲ್ಲಿ ಉದ್ಯೋಗಕ್ಕಾಗಿ ಲಂಚ ಹಗರಣ2023 ರಲ್ಲಿ ಭಾರತದ ಅತಿದೊಡ್ಡ ಐಟಿ ಸೇವೆಗಳ ಸಂಸ್ಥೆಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ನಲ್ಲಿ ನಡೆದ ಉದ್ಯೋಗಕ್ಕಾಗಿ ಲಂಚ […]
ಉಡುಪಿಯಲ್ಲಿ ಆಟೋ ಕ್ಯಾಡ್ ಟ್ರೈನರ್ ಸಾಫ್ಟ್‌ವೇರ್ ಟೀಚಿಂಗ್ ಹುದ್ದೆಗೆ ಅಧ್ಯಾಪಕರ ನೇಮಕಾತಿ

ಉಡುಪಿ:ಉಡುಪಿಯಲ್ಲಿ ಆಟೋ ಕ್ಯಾಡ್ ಟ್ರೈನರ್ ಸಾಫ್ಟ್‌ವೇರ್ ಟೀಚಿಂಗ್ ಹುದ್ದೆಗೆ ಅಧ್ಯಾಪಕರ ನೇಮಕಾತಿ ನಡೆಯಲಿದೆ. ಅರ್ಹತೆ: ಸಿವಿಲ್ /ಮೆಕ್ಯಾನಿಕಲ್ ಇಂಜಿನಿಯರಿಂಗ್. ಆಸಕ್ತರು ನಿಮ್ಮ ರೆಸ್ಯೂಮ್ ಅನ್ನು ಕೆಳಗಿನ ವಾಟ್ಸಪ್ ನಂಬರ್ ಗೆ /ಇಮೇಲ್ ಗೆ ಕಳುಹಿಸಿ.📞 8147183603 📩[email protected] ಈಮೇ
ಹಿಮಾಚಲ ಪ್ರದೇಶ: ಭಾರೀ ಮಳೆಗೆ 37 ಮಂದಿ ಮೃತ್ಯು, ರೂ.400 ಕೋಟಿಗೂ ಹೆಚ್ಚು ನಷ್ಟ.

ಶಿಮ್ಲಾ: ರಾಜ್ಯದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಈವರೆಗೂ 37 ಮಂದಿ ಸಾವನ್ನಪ್ಪಿದ್ದು, 40ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ. ಜೊತೆಗೆ 400 ಕೋಟಿ ರೂ.ಗೂ ಹೆಚ್ಚು ಹಾನಿಯಾಗಿದೆ. ನಿರಂತರ ಮಳೆಯಿಂದಾಗಿ ಮಂಡಿ ಜಿಲ್ಲೆಯೊಂದರಲ್ಲಿಯೇ ಹನ್ನೊಂದು ಜನರು ಸಾವನ್ನಪ್ಪಿರುವುದು ಧೃಡಪಟ್ಟಿದ್ದು, 34 ಜನರು ನಾಪತ್ತೆಯಾಗಿದ್ದಾರೆ. ಜೊತೆಗೆ ಕೆಲವೆಡೆ ರಸ್ತೆಗಳು ಸಂಪರ್ಕ ಕಡಿತಗೊಂಡಿದೆ. ವಿದ್ಯುತ್, ನೀರು ಸರಬರಾಜು ಸೇರಿದಂತೆ ಅಗತ್ಯ ಸೇವೆಗಳು ಅಸ್ತವ್ಯಸ್ತಗೊಂಡಿವೆ. ರಾಜ್ಯಾದ್ಯಂತ ಸುಮಾರು 250 ರಸ್ತೆಗಳ ಸಂಪರ್ಕ ಬಂದ್ ಆಗಿದೆ. 500ಕ್ಕೂ ಹೆಚ್ಚು ವಿದ್ಯುತ್ ವಿತರಣಾ ಟ್ರಾನ್ಸ್ಫಾರ್ಮರ್‌ಗಳು ಕಾರ್ಯನಿರ್ವಹಿಸುತ್ತಿಲ್ಲ […]
ಎಂಎಲ್ಸಿ ರವಿಕುಮಾರ್ ವಿರುದ್ಧ ಪ್ರಕರಣ ದಾಖಲಿಸಿ, ಕೂಡಲೇ ಬಂಧಿಸಿ- ವೆರೋನಿಕಾ ಕರ್ನೇಲಿಯೋ ಆಗ್ರಹ

ಉಡುಪಿ:ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ವಿಧಾನ ಪರಿಷತ್ತಿನ ವಿಪಕ್ಷ ಬಿಜೆಪಿಯ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರ ವಿರುದ್ದ ಪ್ರಕರಣ ದಾಖಲಿಸಿಕೊಂಡು ಕೂಡಲೇ ಬಂಧಿಸುವಂತೆ ಕೆಪಿಸಿಸಿ ವಕ್ತಾರರಾದ ವೆರೋನಿಕಾ ಕರ್ನೆಲಿಯೋ ಆಗ್ರಹಿಸಿದ್ದಾರೆ. ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ರಾತ್ರಿಯಿಡೀ ರಾಜ್ಯ ಸರಕಾರಕ್ಕಾಗಿ ಮತ್ತು ಇಡೀ ದಿನ ಮುಖ್ಯಮಂತ್ರಿಗಾಗಿ ಕೆಲಸ ಮಾಡುತ್ತಾರೆ ಎಂದು ಬಿಜೆಪಿಯ ಎನ್.ರವಿಕುಮಾರ್ ರವರು ಹೇಳಿಕೆ ನೀಡಿರುವ ದ್ವಂದ್ವ ಮಾತುಗಳು ಆಶ್ಚರ್ಯ ಹಾಗೂ ಅಸಹನೀಯವಾಗಿದೆ. ಮಾತೆತ್ತಿದರೆ ಮಹಿಳೆಯರನ್ನು […]