ಉಡುಪಿ:”ಕೋಮು ಸೌಹಾರ್ದತೆ ಕೆಡಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ”

ಉಡುಪಿ: ಕರಾವಳಿಯಲ್ಲಿ ಸೌಹಾರ್ದತೆಯನ್ನು ಮರುಸ್ಥಾಪಿಸುವ ಪ್ರಯತ್ನದ ಅಂಗವಾಗಿ ಕರಾವಳಿ ಜಿಲ್ಲೆಗಳ ವಿವಿಧ ಸಂಘಟನೆ, ಧಾರ್ಮಿಕ ಮುಖಂಡರು ಹಾಗೂ ವಿವಿಧ ವರ್ಗಗಳ ನಾಯಕರೊಂದಿಗೆ ಸಮಾಲೋಚನೆ ನಡೆಸಲು ಉಡುಪಿಗೆ ಆಗಮಿಸಿರುವ ಕೆಪಿಸಿಸಿಯಿಂದ ನಿಯೋಜಿತ ಗೊಂಡಿರುವ ನಿಯೋಗ ಬ್ರಹ್ಮಗಿರಿಯಲ್ಲಿರುವ ಉಡುಪಿ ಜಿಲ್ಲಾ ಕಾಂಗ್ರೆಸ್ ಭವನಕ್ಕೆ ಭೇಟಿ ನೀಡಿ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಿತು. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಕೋಮು ಸೌಹಾರ್ದತೆ, ಶಾಂತಿ-ನೆಮ್ಮದಿಯನ್ನು ಸ್ಥಿರಗೊಳಿಸಲು ಬೇಕಾದ ಮಾರ್ಗೋ ಪಾಯ ಕಂಡುಕೊಳ್ಳಲು ರಚಿಸಲ್ಪಟ್ಟ ಎಐಸಿಸಿ ಪ್ರಧಾನ […]
ಶ್ರೀ ಕ್ಷೇತ್ರ ಶಂಕರಪುರದಲ್ಲಿ ಶ್ರೀ ಮುಖ್ಯಪ್ರಾಣ ಭವ್ಯ ಶಿಲಾ ಮೂರ್ತಿ ಪ್ರತಿಷ್ಠಾಪನ ಸಮಿತಿ ರಚನೆ.

ಕಟಪಾಡಿ: ಶ್ರೀ ಕ್ಷೇತ್ರ ಶಂಕರಪುರ ಶ್ರೀ ದ್ವಾರಕಾಮಯಿ ಮಠ(ರಿ.) ಹಾಗೂ ಶ್ರೀ ಸಾಯಿ ಸಾಂತ್ವನ ಮಂದಿರ ಟ್ರಸ್ಟ್(ರಿ.) ವತಿಯಿಂದ ಶ್ರೀ ಮುಖ್ಯಪ್ರಾಣ ದೇವರ ಭವ್ಯ ಶಿಲಾ ಮೂರ್ತಿಯ ಪ್ರತಿಷ್ಠಾಪನೆ 2026 ಏಪ್ರಿಲ್ ತಿಂಗಳಲ್ಲಿ ಶ್ರೀ ಕ್ಷೇತ್ರದ ಆವರಣದಲ್ಲಿ ಪ್ರತಿಷ್ಠಾಪಿಸುವುದರ ಬಗ್ಗೆ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಸಂಕಲ್ಪಿಸಿದರು, ಈ ಸಂಕಲ್ಪದಲ್ಲಿ ಸಕಾರ ಗೊಳಿಸಲು ಶ್ರೀ ಕ್ಷೇತ್ರದ ಭಕ್ತರು, ಟ್ರಸ್ಟ್, ಸೇವಾದಳವನ್ನು ಒಳಗೊಂಡ ಸಮಿತಿಯನ್ನು 2025 ಜುಲೈ 01ರ ಮಂಗಳವಾರ ರಚಿಸಲಾಯಿತು. ಪ್ರದಾನ ಗೌರವ ಅಧ್ಯಕ್ಷರಾಗಿ ದಯಾನಂದ […]
ವಿಬುಧೇಶತೀರ್ಥರ ವ್ಯಕ್ತಿತ್ವದ ಒಳಮುಖಗಳು ಬನ್ನಂಜೆ ಗೋವಿಂದಾಚಾರ್ಯರು ಕಂಡಂತೆ

ದ್ವೈತಸಿದ್ಧಾಂತಿ ಪ್ರತಿಪಾದಕ ಆಚಾರ್ಯ ಮಧ್ವರ ಮಾತಿದು:ಮಹಾಪ್ರಯತ್ನ –ವರ್ಜಿತಾಃಮಹಾನುಭಾವ –ವರ್ಜಿತಾಃ |ಹರೇರನಗ್ರಹೋಜ್ಝಿತಾಃ ನರಾ ನ ಜಗ್ಮುರುನ್ನತಿಮ್ ||ನಿರಂತರ ಪ್ರಯತ್ನಶೀಲತೆ, ಮಹತ್ತನ್ನು ಸಾಧಿಸುವ ಛಲತೊಟ್ಟ ಆತ್ಮಶಕ್ತಿ ಮತ್ತು ಭಗವಂತನ ಅನುಗ್ರಹ- ಈ ಮೂರರಲ್ಲಿ ಯಾವೊಂದು ಕೊರತೆಯಾದರೂ ಮನುಷ್ಯ ಎತ್ತರಕ್ಕೇರಲಾರ. ಉಡುಪಿಯ ಶ್ರೀ ಅದಮಾರು ಮಠದ 31 ನೆಯ ಯತಿವರ್ಯರಾಗಿದ್ದ ಶ್ರೀ ವಿಬುಧೇಶತೀರ್ಥ ಶ್ರೀಪಾದರಲ್ಲಿ ಈ ಮೂರೂ ಮುಪ್ಪುರಿಗೊಂಡಿದೆ. ಸಾಮಾಜಿಕ ಜೀವನದ ಅವರ ಯಶಸ್ಸಿನ ಗುಟ್ಟು ಇದೇ ಆಗಿದೆ ಎನ್ನುತ್ತಾರೆ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು. ಮಾಧ್ವವಾಙ್ಮಯದ ಉದ್ ಗ್ರಂಥ ‘ನ್ಯಾಯಸುಧಾ’ದ ಪಾಠ […]