ವಿಧಾನಸೌಧದ ಮುಂದೆ ಈ ವರುಷವಾದರೂ ಸ್ಥಾಪನೆಗೊಳ್ಳಲಿ ನಾರಾಯಣ ಗುರುಗಳ ಪುತ್ಥಳಿ – ಪ್ರವೀಣ್ ಪೂಜಾರಿ

ಉಡುಪಿ: ಬಿಲ್ಲವರು ಮತ್ತು ಹಿಂದುಳಿದ ವರ್ಗದವರನ್ನು ಅಸ್ಪಶ್ಯರನ್ನಾಗಿ ಕಾಣುತ್ತಿದ್ದ ಅಂದಿನ ಸಮಾಜದಲ್ಲಿ, ಎಲ್ಲರೂ ಸಮಾನರು ಎಂಬ ಸಂದೇಶ ಸಾರಿದ್ದ ಶ್ರೀ ನಾರಾಯಣ ಗುರುಗಳ ಪುತ್ಥಳಿಯನ್ನು ವಿಧಾನಸೌಧ ಮುಂದೆ ಸ್ಥಾಪಿಸುವ ಕನಸನ್ನು ಹುಟ್ಟಿಹಾಕಿದ ಸರಕಾರ ಮರೆತುಬಿಟ್ಟಿರುವುದು ವಿಪರ್ಯಾಸ ಎಂದು ಉಡುಪಿ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಪ್ರವೀಣ್ ಪೂಜಾರಿ ಪತ್ರಿಕಾ ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಂದುಳಿದ ವರ್ಗವನ್ನು ಹೀನಾಯವಾಗಿ ಕಾಣುತ್ತಿದ್ದ ಸಮಾಜದಲ್ಲಿ ಮಾನವ ಕುಲವೊಂದೇ. ಜಗದೊಳು, ಎಲ್ಲರೂ ಸಮಾನರು ಈ ಜಗದೊಳಗೆ ಮೇಲು-ಕೀಳು ಎಂಬುವುದಿಲ್ಲ ಭಗವಂತನು ಎಲ್ಲರಲ್ಲೂ ಇದ್ದಾನೆ, […]
ಕೊಡವೂರು ಶ್ರೀ ಶಂಕರ ನಾರಾಯಣ ದೇವಳದ ಪ್ರಧಾನ ಅರ್ಚಕರಾಗಿ ವಿದ್ವಾನ್ ಸೀತಾರಾಮ ಆಚಾರ್ಯ ನೇಮಕ.

ಉಡುಪಿ: ಮಹತೋಬಾರ ಕೊಡವೂರು ಶ್ರೀ ಶಂಕರನಾರಾಯಣ ದೇವಳದ ಪ್ರಧಾನ ಅರ್ಚಕರಾಗಿ ಕೊಡವೂರು ಅಗ್ರಹಾರ ನಿವಾಸಿ ವಿದ್ವಾನ್ ಸೀತಾರಾಮ ಆಚಾರ್ಯ ಅಧಿಕಾರ ಸ್ವೀಕರಿಸಿದರು. ದೇವಳದ ಪ್ರಧಾನ ತಂತ್ರಿಗಳಾದ ವೇದಮೂರ್ತಿ ಪುತ್ತೂರು ಹಯವದನ ತಂತ್ರಿ ಮತ್ತು ವೇದಮೂರ್ತಿ ಪುತ್ತೂರು ವಾದಿರಾಜ ತಂತ್ರಿ ಹಾಗು ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಪ್ರಕಾಶ್ ಜಿ ಕೊಡವೂರು ಸಮಕ್ಷಮದಲ್ಲಿ ಅಧಿಕಾರ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿಯ ಸದಸ್ಯರು, ಭಕ್ತ ವೃಂದ ಸದಸ್ಯರು, ಸೇವಾ ಸಮಿತಿ ಸದಸ್ಯರು,ಶ್ರೀದೇವಳದ ಚಾಕರಿ ವರ್ಗದವರು, ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು.
ದ್ವೇಷ ಭಾಷಣ, ನಕಲಿ ಸುದ್ದಿಗಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ: ಸಿಎಂ ಸಿದ್ದರಾಮಯ್ಯ.

ಬೆಂಗಳೂರು: ದ್ವೇಷ ಭಾಷಣ, ನಕಲಿ ಸುದ್ದಿಗಳ ದ್ವೇಷ ಭಾಷಣ, ನಕಲಿ ಸುದ್ದಿಗಳ ರಾಜ್ಯ ಸರ್ಕಾರ ಕಾನೂನು ಜಾರಿಗೆ ತರುತ್ತಿದ್ದು, ಪೊಲೀಸರು ಇಂತಹ ಬೆಳವಣಿಗೆ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಹೇಳಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿ ಮಂಗಳವಾರ ಆಯೋಜಿಸಿದ್ದ ವಿಶ್ವ ಪತ್ರಿಕಾ ದಿನಾಚರಣೆಯ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ದ್ವೇಷ ಭಾಷಣದ ವಿರುದ್ಧ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಬೇಕೆಂದು ಹೇಳಿದರು. ನಮಗೆ ದ್ವೇಷವಿಲ್ಲದ ಸಮಾಜ ಬೇಕು, ಆದರೆ, ಕೆಲವರು ಅಶಾಂತಿಯುಕ್ತ ಸಮಾಜವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. […]
ಬಂಟ್ವಾಳ ಬೆಂಜನಪದವು ತಾಲೂಕು ಕ್ರೀಡಾಂಗಣ ನಿರ್ಮಿಸಲು ಕೂಡಲೇ ಅನುದಾನ ಬಿಡುಗಡೆಗೊಳಿಸುವಂತೆ ಮಂಜುನಾಥ ಭಂಡಾರಿ ಪತ್ರ.

ಮಂಗಳೂರು: ಬಂಟ್ವಾಳ ತಾಲೂಕಿನ ಅಮ್ಮುಂಚೆ ಗ್ರಾಮದ ಬೆಂಜನಪದವು ಸರ್ಕಾರಿ ಪ್ರೌಢಶಾಲೆಯ ಹತ್ತಿರ ತಾಲ್ಲೂಕು ಕ್ರೀಡಾಂಗಣ ನಿರ್ಮಿಸಲು ಮಂಜೂರಾದ 10 ಕೋಟಿ ಅನುದಾನವನ್ನು ಬಿಡುಗಡೆ ಮಾಡುವ ಕುರಿತು ವಿಧಾನಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಅವರು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲೇನಿದೆ?:ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಬೆಂಜನಪದವು ಸರ್ಕಾರಿ ಪ್ರೌಢಶಾಲೆಯ ಹತ್ತಿರದ ಒಟ್ಟು 5.25 ಎಕರೆ ಸ್ಥಳದಲ್ಲಿ ಆಟದ ಮೈದಾನದ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರದ ಯವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಈ ಹಿಂದೆ […]
ವೈದ್ಯ, ಲೆಕ್ಕಪರಿಶೋಧಕ, ಪತ್ರಿಕಾ ದಿನಾಚರಣೆ ಗೌರವ ಪುರಸ್ಕಾರ 2025 ಪ್ರದಾನ ಸಮಾರಂಭ

ಉಡುಪಿ: ಪ್ರತಿ ದಿನ ಹೊಸತನ್ನು ತಿಳಿಯಲು, ಕಲಿಯುವ ನಿಟ್ಟಿನಲ್ಲಿ ನಾವು ಬದುಕಿನುದ್ದಕ್ಕೂ ನಾವು ನಿರಂತರ ವಿದ್ಯಾರ್ಥಿಗಳಾಗಬೇಕು. ದಾನದಿಂದ ಸಿಗುವ ತೃಪ್ತಿ ಬದುಕಿನ ಶ್ರೇಷ್ಠ ಅಂಶ ಎಂದು ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಹೇಳಿದರು. ಅವರು, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಹಯೋಗದಲ್ಲಿ ವೈದ್ಯರ ದಿನ, ಲೆಕ್ಕ ಪರಿಶೋಧಕರ ದಿನ, ಪತ್ರಿಕಾ ದಿನದಂಗವಾಗಿ ಉಡುಪಿಯ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಸಂಸ್ಥೆಯಲ್ಲಿ ಮಂಗಳವಾರ ಗೌರವ […]